ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಮರಿ ಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಅವರಿಂದು ತಮ್ಮ ಪಾಲಕರಾದ ವಿ. ಶ್ರೀನಿವಾಸನ್ ಮತ್ತು ಗೀತಾ ಶ್ರೀನಿವಾಸನ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಕುಮಾರಿ ಐಶ್ವರ್ಯ ಮತ್ತು ಕುಮಾರಿ ಸೌಂದರ್ಯ “ಮೈಥ್ರೀಮ್ ಭಜಥಾ.”ವನ್ನು ಸಂಕ್ಷಿಪ್ತವಾಗಿ ಪ್ರದರ್ಶಿಸಿದರು. ಇದು ಒಂದು ಸ್ತುತಿಯಾಗಿದ್ದು, ಇದನ್ನು 1966 ರ ಅಕ್ಟೋಬರ್ ನಲ್ಲಿ ಎಂ.ಎಸ್.ಸುಬ್ಬುಲಕ್ಷ್ಮೀ ಅವರು ಸ್ವತಃ ವಿಶ್ವಸಂಸ್ಥೆಯಲ್ಲಿ ಹಾಡಿದ್ದರು.
ಈ ಸ್ತುತಿಯನ್ನು ಕಂಚಿಯ ಆಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸಂಸ್ಕೃತದಲ್ಲಿ ರಚಿಸಿದ್ದಾರೆ.
ಇದು ವಿಶ್ವಶಾಂತಿ ಮತ್ತು ಸಾರ್ವತ್ರಿಕ ಗೆಳೆತನದ ಗೀತೆಯಾಗಿದ್ದು, ಇದನ್ನು ಎಂ.ಎಸ್. ಸುಬ್ಬುಲಕ್ಷ್ಮೀ ಅವರು, ವಿಶ್ವಸಂಸ್ಥೆಯ ಸಂಗೀತ ಕಛೇರಿಯ ನಂತರದ ತಮ್ಮ ಹಲವು ಸಂಗೀತ ಕಛೇರಿಗಳಲ್ಲಿ ಹಾಡಿದ್ದರು. ಇದು “ಶ್ರೇಯೋ ಭೂಯಾತ್ ಸಕಲ ಜನನಂ” – ಎಲ್ಲ ಮಾನವ ಕುಲಕ್ಕೂ ಶ್ರೇಯಸ್ಸು ಮತ್ತು ಸಂತೋಷ ಲಭಿಸಲಿ ಎಂಬ ಪದಗಳೊಂದಿಗೆ ಇದು ಅಂತ್ಯಗೊಳ್ಳುತ್ತದೆ.
****
AKT/NT