Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ 


ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯಗಳು ಮತ್ತು ಶುಭಸಂದೇಶಗಳಿಗಾಗಿ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧನ್ಯವಾದಗಳನ್ನು ತಿಳಿಸಿದರು.

ನೇಪಾಳದ ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿಯವರು ಈ ರೀತಿ ಹೇಳಿದರು:

“ಪ್ರಧಾನಮಂತ್ರಿ @kpsharmaoli, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.  ಭಾರತವು ತನ್ನ ಗಣರಾಜ್ಯಕ್ಕೆ 75 ವರ್ಷಗಳನ್ನು ಪೂರೈಸುತ್ತಿರುವಾಗ, ನಮ್ಮ ಎರಡು ರಾಷ್ಟ್ರಗಳ ಪ್ರಜೆಗಳ ನಡುವಿನ ಸ್ನೇಹದ ಐತಿಹಾಸಿಕ ಬಂಧಗಳನ್ನು ನಾವು ಆಳವಾಗಿ ಪಾಲಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಇದು ಇನ್ನೂ ಎತ್ತರಕ್ಕೆ ಬೆಳೆಯುತ್ತಲೇ ಇರುತ್ತದೆ ಎಂಬ ವಿಶ್ವಾಸ ನನಗಿದೆ.”

ಎಕ್ಸ್ ತಾಣದಲ್ಲಿ ಮಾಲ್ಡೀವ್ಸ್ ಅಧ್ಯಕ್ಷರ ಸಂದೇಶಕ್ಕೆ  ಉತ್ತರಿಸಿದ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:

 “ಭಾರತದ ಗಣರಾಜ್ಯೋತ್ಸವದಂದು ತಮ್ಮ ಶುಭಾಶಯಗಳಿಗಾಗಿ ಅಧ್ಯಕ್ಷ @MMuizzu ಅವರಿಗೆ ಧನ್ಯವಾದಗಳು.  ಭಾರತ ಮತ್ತು ಮಾಲ್ಡೀವ್ಸ್ ನಡುವಿನ ದೀರ್ಘಕಾಲದ ಪಾಲುದಾರಿಕೆಗೆ ಸಂಬಂಧಿಸಿದಂತೆ ನಿಮ್ಮ ಭಾವನೆಯನ್ನು ನಾನು ಸಂಪೂರ್ಣವಾಗಿ ಹಂಚಿಕೊಳ್ಳುತ್ತೇನೆ.  ಸ್ನೇಹ ಮತ್ತು ಸಹಕಾರದ ಈ ಬಂಧಗಳನ್ನು ಗಾಢವಾಗಿಸಲು ನಾವು ಬದ್ಧರಾಗಿದ್ದೇವೆ.”

 ಎಕ್ಸ್ ನಲ್ಲಿ ಭೂತಾನ್‌ ನ ಪ್ರಧಾನಮಂತ್ರಿಯವರ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿಯವರು ಈ ರೀತಿ ಹೇಳಿದರು:

“ಭಾರತೀಯ ಗಣರಾಜ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಸ್ನೇಹಿತ ಪ್ರಧಾನಮಂತ್ರಿ @tsheringtobgay ಅವರಿಗೆ ಧನ್ಯವಾದಗಳು. ಭಾರತ ಮತ್ತು ಭೂತಾನ್ ನಡುವಿನ ಅನನ್ಯ ಮತ್ತು ವಿಶೇಷ ಪಾಲುದಾರಿಕೆಯನ್ನು ನಾವು ಬಹಳವಾಗಿ ಗೌರವಿಸುತ್ತೇವೆ.”

ಎಕ್ಸ್‌ ತಾಣದಲ್ಲಿ  ನೇಪಾಳದ ಮಾಜಿ ಪ್ರಧಾನಮಂತ್ರಿಯವರು ನೀಡಿದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:

@SherBDeuba ಅವರೇ, ಭಾರತದ 76ನೇ ಗಣರಾಜ್ಯೋತ್ಸವದಂದು ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು. ನಮ್ಮ ಜನರ ನಡುವಿನ ಹಳೆಯ ಸ್ನೇಹ ಸಂಬಂಧಗಳು ಪ್ರವರ್ಧಮಾನಕ್ಕೆ ಬರಲಿ ಮತ್ತು ಬಲವಾಗಿ ಬೆಳೆಯಲಿ. ”

 ಎಕ್ಸ್ ತಾಣದಲ್ಲಿ  ಮಾಲ್ಡೀವ್ಸ್‌ ನ ಮಾಜಿ ಅಧ್ಯಕ್ಷರ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿಯವರು  ಹೀಗೆ ಹೇಳಿದ್ದಾರೆ:

 “ಭಾರತದ ಗಣರಾಜ್ಯೋತ್ಸವದಂದು ನಿಮ್ಮ ಹೃತ್ಪೂರ್ವಕ ಶುಭಾಶಯಗಳಿಗಾಗಿ @ibusolih ಅವರಿಗೆ ಧನ್ಯವಾದಗಳು.”

 

*****