Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ 18 ನೇ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಧಾನಿಯವರಿಗೆ ವಿಶ್ವ ನಾಯಕರಿಂದ ಅಭಿನಂದನಾ ಸಂದೇಶಗಳು


ಭಾರತದಲ್ಲಿ ನಡೆದ 18ನೇ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಅಭಿನಂದನಾ ಸಂದೇಶಗಳನ್ನು ಕಳುಹಿಸಿದ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಾದ ‘X’ ನಲ್ಲಿ ವಿಶ್ವ ನಾಯಕರ ಸಂದೇಶಗಳಿಗೆ ಶ್ರೀ ಮೋದಿ ಪ್ರತಿಕ್ರಿಯಿಸಿದ್ದಾರೆ.

ಮಾರಿಷಸ್ ಗಣರಾಜ್ಯದ ಪ್ರಧಾನ ಮಂತ್ರಿ ಶ್ರೀ ಪ್ರವಿಂದ್ ಕುಮಾರ್ ಜುಗ್ನೌತ್ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿಯವರು;

“ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಜೀ ನಿಮ್ಮ ಹೃತ್ಪೂರ್ವಕ ಸಂದೇಶಕ್ಕಾಗಿ ಧನ್ಯವಾದಗಳು. ಮಾರಿಷಸ್ ನಮ್ಮ ನೆರೆಹೊರೆಯವರು ಮೊದಲು ನೀತಿ, ವಿಷನ್ ಸಾಗರ್ ಮತ್ತು ಜಾಗತಿಕ ದಕ್ಷಿಣಕ್ಕಾಗಿ ನಮ್ಮ ಬದ್ಧತೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನಮ್ಮ ವಿಶೇಷ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ.” ಎಂದು ಹೇಳಿದ್ದಾರೆ.

 

ಭೂತಾನ್‌ ಪ್ರಧಾನ ಮಂತ್ರಿ ಶ್ರೀ ತ್ಸೆರಿಂಗ್ ಟೋಬ್‌ಗೇ ಅವರ ಪೋಸ್ಟ್‌ ಗೆ ಉತ್ತರಿಸಿದ ಪ್ರಧಾನ ಮಂತ್ರಿಯವರು;

“ಹಾರ್ದಿಕ ಶುಭಾಶಯಗಳಿಗಾಗಿ ನನ್ನ ಸ್ನೇಹಿತ ಪ್ರಧಾನಿ ತ್ಶೆರಿಂಗ್ ಟೋಬ್ಗೇ ಅವರಿಗೆ ಧನ್ಯವಾದಗಳು. ಭಾರತ-ಭೂತಾನ್ ಸಂಬಂಧಗಳು ಮತ್ತಷ್ಟು ಬಲವಾಗಿ ಬೆಳೆಯುತ್ತಲೇ ಇರುತ್ತವೆ.” ಎಂದು ಹೇಳಿದ್ದಾರೆ.

 

ನೇಪಾಳದ ಪ್ರಧಾನಿ ಕಾಮ್ರೇಡ್ ಪ್ರಚಂಡ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿಯವರು

“ಪ್ರಧಾನಿ ಕಾಮ್ರೇಡ್ ಪ್ರಚಂಡ ಜೀ ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು. ಭಾರತ-ನೇಪಾಳ ಸ್ನೇಹವನ್ನು ಬಲಪಡಿಸಲು ನಿರಂತರ ಸಹಕಾರವನ್ನು ಎದುರುನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

 

ಶ್ರೀಲಂಕಾದ ಅಧ್ಯಕ್ಷ ಶ್ರೀ ರನಿಲ್ ವಿಕ್ರಮಸಿಂಘೆ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಪ್ರಧಾನಿಯವರು;

“ಧನ್ಯವಾದಗಳು, ಶ್ರೀ ರನಿಲ್ ವಿಕ್ರಮಸಿಂಘೆಯವರೇ. ಭಾರತ-ಶ್ರೀಲಂಕಾ ಆರ್ಥಿಕ ಪಾಲುದಾರಿಕೆಯಲ್ಲಿ ನಮ್ಮ ನಿರಂತರ ಸಹಕಾರಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ.” ಎಂದು ತಿಳಿಸಿದ್ದಾರೆ.

 

ಶ್ರೀಲಂಕಾದ ಕಾರ್ಯಕಾರಿ ಅಧ್ಯಕ್ಷ ಶ್ರೀ ಮಹಿಂದಾ ರಾಜಪಕ್ಸೆ ಅವರ ಪೋಸ್ಟ್‌ ಗೆ ಪ್ರತಿಕ್ರಿಯೆಯಾಗಿ ಪ್ರಧಾನಿಯವರು;

“ನನ್ನ ಸ್ನೇಹಿತರಾದ ಮಹಿಂದ ರಾಜಪಕ್ಸೆಯವರೇ, ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು. ಭಾರತ-ಶ್ರೀಲಂಕಾ ಸಹಭಾಗಿತ್ವವು ಹೊಸ ಗಡಿಗಳನ್ನು ತಲುಪುತ್ತಿರುವುದರಿಂದ, ನಿಮ್ಮ ನಿರಂತರ ಬೆಂಬಲವನ್ನು ಎದುರುನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

 

ಶ್ರೀಲಂಕಾದ ಫೀಲ್ಡ್ ಮಾರ್ಷಲ್ ಶ್ರೀ ಶರತ್ ಫೊನ್ಸೆಕಾ ಅವರ ಪೋಸ್ಟ್‌ ಗೆ ಪ್ರತಿಕ್ರಿಯೆಯಾಗಿ “ಧನ್ಯವಾದಗಳು ಶ್ರೀ ಶರತ್ ಫೋನ್ಸೆಕಾ ಅವರೇ;

ಶ್ರೀಲಂಕಾದೊಂದಿಗೆ ನಮ್ಮ ಬಾಂಧವ್ಯ ವಿಶೇಷವಾಗಿದೆ. ನಮ್ಮ ಸಂಬಂಧವನ್ನು ಇನ್ನಷ್ಟು ಆಳಗೊಳಿಸಲು ಮತ್ತು ಬಲಪಡಿಸಲು ನಾವು ಅದರ ಶ್ರೀಲಂಕಾ ಜನರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.” ಎಂದು ಪ್ರಧಾನಿ ತಿಳಿಸಿದ್ದಾರೆ.

 

ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಶ್ರೀ ಸಜಿತ್ ಪ್ರೇಮದಾಸ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿರುವ ಪ್ರಧಾನಿಯವರು;

“ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು ಸಜಿತ್ ಪ್ರೇಮದಾಸ ಅವರೇ! ಶ್ರೀಲಂಕಾದೊಂದಿಗಿನ ನಮ್ಮ ಸಂಬಂಧಗಳು ವಿಶೇಷ ಮತ್ತು ಅನನ್ಯವಾದ ಭ್ರಾತೃತ್ವವನ್ನು ಹೊಂದಿವೆ. ನಮ್ಮ ನೆರೆಹೊರೆ ಮೊದಲು ನೀತಿಗೆ ಅನುಗುಣವಾಗಿ ನಮ್ಮ ಮುರಿಯಲಾಗದ ಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ!” ಎಂದು ಹೇಳಿದ್ದಾರೆ.

 

ಇಟಲಿಯ ಪ್ರಧಾನ ಮಂತ್ರಿ ಶ್ರೀಮತಿ ಜಾರ್ಜಿಯಾ ಮೆಲೋನಿ ಅವರ ಪೋಸ್ಟ್‌ ಗೆ ಉತ್ತರಿಸಿದ ಪ್ರಧಾನಿಯವರು;

“ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು ಪ್ರಧಾನಿ ಜಾರ್ಜಿಯಾ ಮೆಲೋನಿ. ಪರಸ್ಪರ ಹಂಚಿಕೆಯ ಮೌಲ್ಯಗಳು ಮತ್ತು ಆಸಕ್ತಿಗಳಿಂದ ಬೆಂಬಲಿತವಾಗಿರುವ ಭಾರತ-ಇಟಲಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸಲು ನಾವು ಬದ್ಧರಾಗಿದ್ದೇವೆ. ಜಾಗತಿಕ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.” ಎಂದು ಹೇಳಿದ್ದಾರೆ.

 

ಮಾಲ್ಡೀವ್ಸ್ ಅಧ್ಯಕ್ಷ ಡಾ ಮೊಹಮ್ಮದ್ ಮುಯಿಝು ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿಯವರು;

“ಧನ್ಯವಾದಗಳು ಅಧ್ಯಕ್ಷ ಮೊಹಮ್ಮದ್ ಮುಯಿಝು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮಾಲ್ಡೀವ್ಸ್ ನಮ್ಮ ಮೌಲ್ಯಯುತ ಪಾಲುದಾರ ಮತ್ತು ನೆರೆಯ ದೇಶವಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾನು ಸಹ ನಿಕಟ ಸಹಕಾರವನ್ನು ಎದುರು ನೋಡುತ್ತಿದ್ದೇನೆ.” ಎಂದು ಹೇಳಿದ್ದಾರೆ.

 

ಮಾಲ್ಡೀವ್ಸ್‌ ಉಪಾಧ್ಯಕ್ಷ ಶ್ರೀ ಹುಸೇನ್ ಮೊಹಮ್ಮದ್ ಲತೀಫ್ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿಯವರು;

“ಉಪಾಧ್ಯಕ್ಷ ಸೆಂಬೆಯವರೆ, ನಿಮ್ಮ ಸ್ನೇಹಮಯ ಸಂದೇಶವನ್ನು ಶ್ಲಾಘಿಸುತ್ತೇನೆ. ದ್ವಿಪಕ್ಷೀಯ ಪಾಲುದಾರಿಕೆಯನ್ನು ಗಾಢವಾಗಿಸಲು ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.” ಎಂದು ಹೇಳಿದ್ದಾರೆ.

 

ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಶ್ರೀ ಮೊಹಮ್ಮದ್ ನಶೀದ್ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿಯವರು;

“ನಿಮ್ಮ ಶುಭ ಹಾರೈಕೆಗಳಿಗಾಗಿ ಧನ್ಯವಾದಗಳು. ಮೊಹಮ್ಮದ್ ನಶೀದ್. ಭಾರತ-ಮಾಲ್ಡೀವ್ಸ್ ಸಂಬಂಧದ ವರ್ಧನೆಗಾಗಿ ನಿಮ್ಮ ನಿರಂತರ ಬೆಂಬಲವನ್ನು ನಾವು ಗೌರವಿಸುತ್ತೇವೆ.” ಎಂದು ತಿಳಿಸಿದ್ದಾರೆ.

 

ಮಾಲ್ಡೀವ್ಸ್ ರಾಜಕಾರಣಿ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಾಜಿ ಅಧ್ಯಕ್ಷ ಶ್ರೀ ಅಬ್ದುಲ್ಲಾ ಶಾಹಿದ್ ಅವರ ಪೋಸ್ಟ್‌ಗೆ ಪ್ರತಿಕ್ರಿ‌ ಯಿಸಿದ ಪ್ರಧಾನ ಮಂತ್ರಿಯವರು;

“ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು ಅಬ್ದುಲ್ಲಾ ಶಾಹಿದ್. ಮಾಲ್ಡೀವ್ಸ್‌ ನೊಂದಿಗಿನ ನಮ್ಮ ಸಂಬಂಧವು ಹೊಸ ಎತ್ತರವನ್ನು ಸಾಧಿಸುವ ನಿಮ್ಮ ಆಶಯವನ್ನು ನಾವು ಹಂಚಿಕೊಳ್ಳುತ್ತೇವೆ.” ಎಂದು ಹೇಳಿದ್ದಾರೆ.

 

ಜಮೈಕಾದ ಪ್ರಧಾನ ಮಂತ್ರಿ ಶ್ರೀ ಆಂಡ್ರ್ಯೂ ಹೋಲ್ನೆಸ್ ಅವರ ಪೋಸ್ಟ್‌ ಗೆ ಪ್ರತಿಕ್ರಿಯೆಯಾಗಿ, “ಧನ್ಯವಾದಗಳು ಪ್ರಧಾನ ಮಂತ್ರಿ ಆಂಡ್ರ್ಯೂ ಹೋಲ್ನೆಸ್.

ಭಾರತ-ಜಮೈಕಾ ಸಂಬಂಧಗಳು ಶತಮಾನಗಳಷ್ಟು ಹಳೆಯದಾದ ಜನರು-ಜನರ ನಡುವಿನ ಸಂಬಂಧಗಳಿಂದ ಗುರುತಿಸಲ್ಪಟ್ಟಿವೆ. ನಮ್ಮ ಜನರ ಕಲ್ಯಾಣಕ್ಕಾಗಿ ನಿಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ.” ಎಂದು ಹೇಳಿದ್ದಾರೆ.

 

ಬಾರ್ಬಡೋಸ್‌ ಪ್ರಧಾನ ಮಂತ್ರಿ ಶ್ರೀಮತಿ ಮಿಯಾ ಅಮೋರ್ ಮೊಟ್ಲಿ ಅವರ ಪೋಸ್ಟ್‌ ಗೆ ಉತ್ತರಿಸಿದ ಪ್ರಧಾನ ಮಂತ್ರಿಯವರು;

ಧನ್ಯವಾದಗಳು ಪ್ರಧಾನಿ ಮಿಯಾ ಅಮೋರ್ ಮೊಟ್ಲಿ ಅವರೇ. ನಮ್ಮ ಜನರ ಕಲ್ಯಾಣಕ್ಕಾಗಿ ಭಾರತ ಮತ್ತು ಬಾರ್ಬಡೋಸ್ ನಡುವೆ ಬಲವಾದ ಪಾಲುದಾರಿಕೆಯಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ.” ಎಂದು ತಿಳಿಸಿದ್ದಾರೆ.

 

ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಶ್ರೀ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರ ಪೋಸ್ಟ್‌ ಗೆ ಉತ್ತರಿಸಿರುವ ಪ್ರಧಾನಮಂತ್ರಿಯವರು;

“ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರೇ, ನಿಮ್ಮ ಶುಭ ಹಾರೈಕೆಗಳಿಗಾಗಿ ಧನ್ಯವಾದಗಳು. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ವಿಶೇಷ ಸಂಬಂಧವು ಇತ್ತೀಚಿನ ವರ್ಷಗಳಲ್ಲಿ ಸರ್ವತೋಮುಖ ಪ್ರಗತಿಗೆ ಸಾಕ್ಷಿಯಾಗಿದೆ ಮತ್ತು ಅದರ ವರ್ಧನೆಗಾಗಿ ನಿಮ್ಮ ನಿರಂತರ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ.” ಎಂದು ಹೇಳಿದ್ದಾರೆ.

 

ಸಿಂಗಾಪುರದ ಪ್ರಧಾನ ಮಂತ್ರಿ ಶ್ರೀ ಲಾರೆನ್ಸ್ ವಾಂಗ್ ಅವರ ಪೋಸ್ಟ್‌ ಗೆ ಪ್ರತಿಕ್ರಿಯೆಯಾಗಿ

“ಪ್ರಧಾನಿ ಲಾರೆನ್ಸ್ ವಾಂಗ್ ಅವರೇ ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು. ನಮ್ಮ ಬಹುಮುಖಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ.” ಎಂದು ಪ್ರಧಾನಿ ತಿಳಿಸಿದ್ದಾರೆ.

 

ನೇಪಾಳದ ಮಾಜಿ ಪ್ರಧಾನಿ ಶ್ರೀ ಶೇರ್ ಬಹದ್ದೂರ್ ದೇವುಬಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿಯವರು;

“ಧನ್ಯವಾದಗಳು ಶೇರ್ ಬಹದ್ದೂರ್ ದೇವುಬಾ. ನಾವು ಭಾರತ ಮತ್ತು ನೇಪಾಳದ ನಡುವಿನ ಅನನ್ಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದನ್ನು ಮುಂದುವರಿಸುತ್ತೇವೆ.” ಎಂದು ಹೇಳಿದ್ದಾರೆ.

 

ಮಲೇಷ್ಯಾ ಪ್ರಧಾನಿ ಶ್ರೀ ಅನ್ವರ್ ಇಬ್ರಾಹಿಂ ಅವರ ಪೋಸ್ಟ್‌ ಗೆ ಉತ್ತರಿಸಿರುವ ಪ್ರಧಾನಿಯವರು;

“ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೇ, ನಿಮ್ಮ ಆತ್ಮೀಯ ಅಭಿನಂದನೆಗಳಿಗೆ ಧನ್ಯವಾದಗಳು. ಭಾರತ-ಮಲೇಷ್ಯಾ ವರ್ಧಿತ ಕಾರ್ಯತಂತ್ರದ ಸಹಭಾಗಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಒಟ್ಟಾಗಿ ಕೆಲಸ ಮಾಡಲು ಎದುರುನೋಡುತ್ತಿದ್ದೇನೆ.” ಎಂದು ಹೇಳಿದ್ದಾರೆ.

 

ಉಕ್ರೇನ್ ಅಧ್ಯಕ್ಷ ಶ್ರೀ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಪೋಸ್ಟ್‌ ಗೆ ಪ್ರತಿಕ್ರಿಯೆಯಾಗಿ ಪ್ರಧಾನಿಯವರು;

“ಧನ್ಯವಾದಗಳು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ. ಭಾರತವು ಈ ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಶಾಂತಿ, ಭದ್ರತೆ ಮತ್ತು ಸಮೃದ್ಧಿಗೆ ನೆರವಾಗುವುದನ್ನು ಮುಂದುವರಿಸುತ್ತದೆ.” ಎಂದು ಹೇಳಿದ್ದಾರೆ.

 

ಸ್ಪೇನ್‌ ಪ್ರಧಾನ ಮಂತ್ರಿ ಶ್ರೀ ಪೆಡ್ರೊ ಸ್ಯಾಂಚೆಜ್ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಪ್ರಧಾನಿಯವರು,

“ಪ್ರಧಾನ ಮಂತ್ರಿ ಪೆಡ್ರೊ ಸ್ಯಾಂಚೆಝ್ ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು. ಸ್ಪೇನ್ ಜೊತೆಗಿನ ನಮ್ಮ ವಿಶೇಷ ಪಾಲುದಾರಿಕೆಯನ್ನು ನಾವು ಬಹಳವಾಗಿ ಗೌರವಿಸುತ್ತೇವೆ. ಹೊಸ ಚೈತನ್ಯ ಮತ್ತು ಶಕ್ತಿಯೊಂದಿಗೆ ನಮ್ಮ ಸಂಬಂಧವನ್ನು ಮುಂದುವರಿಸಲು ಎದುರುನೋಡುತ್ತಿದ್ದೇವೆ.” ಎಂದು ಹೇಳಿದ್ದಾರೆ.

 

ಇಸ್ರೇಲ್ ಪ್ರಧಾನಿ ಶ್ರೀ ಬೆಂಜಮಿನ್ ನೆತನ್ಯಾಹು ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿರುವ ಪ್ರಧಾನಿಯವರು;

“ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು. ಶಾಂತಿ, ಭದ್ರತೆ ಮತ್ತು ಸಮೃದ್ಧಿಯ ಹಿತಾಸಕ್ತಿಯಲ್ಲಿ ಭಾರತ-ಇಸ್ರೇಲ್ ಸ್ನೇಹ ಮತ್ತು ಪ್ರಾದೇಶಿಕ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಎದುರುನೋಡುತ್ತಿದ್ದೇವೆ. ತೋಡಾ ರಬಾ!” ಹೇಳಿದ್ದಾರೆ.

 

ನೈಜೀರಿಯಾದ ಅಧ್ಯಕ್ಷ ಶ್ರೀ ಬೋಲಾ ಅಹ್ಮದ್ ಟಿನುಬು ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿರುವ ಪ್ರಧಾನಿಯವರು;

“ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರೇ, ನಿಮ್ಮ ಆತ್ಮೀಯ ಸಂದೇಶಕ್ಕಾಗಿ ಧನ್ಯವಾದಗಳು. ಕಳೆದ ವರ್ಷ ಭಾರತ ಆಯೋಜಿಸಿದ್ದ ಜಿ20 ಶೃಂಗಸಭೆಯಲ್ಲಿ ನೈಜೀರಿಯಾ ಭಾಗವಹಿಸಿದ್ದು ಮಹತ್ವದ ಸಂದರ್ಭವಾಗಿತ್ತು. ನಮ್ಮ ಜನರು ಮತ್ತು ಪ್ರದೇಶದ ಅನುಕೂಲಕ್ಕಾಗಿ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸಲು ಎದುರುನೋಡುತ್ತೇವೆ.” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

 

ಸರ್ಬಿಯಾ ಅಧ್ಯಕ್ಷ ಶ್ರೀ ಅಲೆಕ್ಸಾಂಡರ್ ವುಸಿಕ್ ಅವರ ಪೋಸ್ಟ್‌ ಗೆ ಉತ್ತರಿಸಿರುವ ಪ್ರಧಾನಿಯವರು; 

“ಪ್ರೀತಿಯ ಶುಭಾಶಯಗಳಿಗಾಗಿ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಅವರಿಗೆ ಧನ್ಯವಾದಗಳು. ಮುಂಬರುವ ವರ್ಷಗಳಲ್ಲಿ ಭಾರತ ಮತ್ತು ಸೆರ್ಬಿಯಾ ಸಂಬಂಧಗಳು ಬಲಗೊಳ್ಳಲಿವೆ.” ಎಂದು ತಿಳಿಸಿದ್ದಾರೆ.

 

ಜೆಕ್ ಗಣರಾಜ್ಯದ ಪ್ರಧಾನ ಮಂತ್ರಿ ಶ್ರೀ ಪೆಟ್ರ್ ಫಿಯಾಲಾ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿಯವರು;

“ನನ್ನ ಸ್ನೇಹಿತರಾದ ಪ್ರಧಾನಿ ಪೆಟ್ರ್ ಫಿಯಾಲಾ ಅವರಿಗೆ ಧನ್ಯವಾದಗಳು. ಈ ವರ್ಷದ ಆರಂಭದಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆಯ ಸಂದರ್ಭದಲ್ಲಿನ ನಮ್ಮ ಭೇಟಿಯನ್ನು ನಾನು ಸ್ಮರಿಸಿಕೊಳ್ಳುತ್ತೇನೆ. ಮುಂಬರುವ ವರ್ಷಗಳಲ್ಲಿ ನಮ್ಮ ಸಂಬಂಧಗಳನ್ನು ಮುಂದುವರಿಸಲು ಎದುರುನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

 

ಇರಾನ್‌ ನ ಹಂಗಾಮಿ ಅಧ್ಯಕ್ಷ ಮತ್ತು ಮೊದಲ ಉಪಾಧ್ಯಕ್ಷ ಶ್ರೀ ಮೊಹಮ್ಮದ್ ಮೊಖ್ಬರ್ ಅವರ ಪೋಸ್ಟ್‌ ಗೆ ಪ್ರತಿಕ್ರಿಯೆಯಾಗಿ ಪ್ರಧಾನ ಮಂತ್ರಿಯವರು;

“ಗೌರವಾನ್ವಿತ ಮೊಹಮ್ಮದ್ ಮೊಖ್ಬರ್ ಅವರೇ, ನಿಮ್ಮ ಸಂದೇಶಕ್ಕಾಗಿ ಧನ್ಯವಾದಗಳು. ಭಾರತ ಮತ್ತು ಇರಾನ್ ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರೆಸಲು ಮತ್ತು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ.” ಎಂದು ಹೇಳಿದ್ದಾರೆ.

 

ಕೀನ್ಯಾದ ಅಧ್ಯಕ್ಷ ಡಾ ವಿಲಿಯಂ ಸಮೋಯಿ ರುಟೊ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಪ್ರಧಾನಿಯವರು;

“ಅಧ್ಯಕ್ಷ ವಿಲಿಯಮ್ಸ್ ರುಟೊ ಅವರೇ, ನಿಮ್ಮ ಆತ್ಮೀಯ ಸಂದೇಶಕ್ಕಾಗಿ ಧನ್ಯವಾದಗಳು. ಭಾರತ-ಕೀನ್ಯಾ ದ್ವಿಪಕ್ಷೀಯ ಸಹಕಾರಕ್ಕೆ ಹಲವು ಹೊಸ ಆಯಾಮಗಳನ್ನು ಸೇರಿಸಿದ ಕಳೆದ ವರ್ಷದ ನಿಮ್ಮ ಭಾರತ ಭೇಟಿಯನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ನಮ್ಮ ನಿರಂತರ ತೊಡಗಿಸಿಕೊಳ್ಳುವಿಕೆಗಾಗಿ ನಾನು ಎದುರು ನೋಡುತ್ತಿದ್ದೇನೆ. ” ಎಂದು ಹೇಳಿದ್ದಾರೆ.

 

ಲಿಥುವೇನಿಯಾ ಗಣರಾಜ್ಯದ ಅಧ್ಯಕ್ಷ ಶ್ರೀ ಗಿಟಾನಾಸ್ ನೌಸೆಡಾ ಅವರ ಪೋಸ್ಟ್‌ ಗೆ ಉತ್ತರಿಸಿದ ಪ್ರಧಾನಿಯವರು;

“ಧನ್ಯವಾದಗಳು ಅಧ್ಯಕ್ಷ ಗಿಟಾನಾಸ್ ನೌಸೆಡಾ. ಭಾರತ-ಲಿಥುವೇನಿಯಾ ಸ್ನೇಹವನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ.” ಎಂದು ತಿಳಿಸಿದ್ದಾರೆ.

 

ಕೊಮೊರೊಸ್ ಒಕ್ಕೂಟದ ಅಧ್ಯಕ್ಷ ಶ್ರೀ ಅಜಲಿ ಅಸ್ಸೌಮಾನಿ ಅವರ ಪೋಸ್ಟ್‌ ಗೆ ಪ್ರತಿಕ್ರಿಯೆಯಾಗಿ ಪ್ರಧಾನಿಯವರು; 

“ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು ಅಧ್ಯಕ್ಷ ಅಝಲಿ ಅಸ್ಸೌಮಾನಿ. ಭಾರತ- ಕೊಮೊರೊಸ್ ಪಾಲುದಾರಿಕೆಯನ್ನು ಗಾಢವಾಗಿಸಲು ನಾವು ಬದ್ಧರಾಗಿದ್ದೇವೆ. ಕೊಮೊರೊಸ್ ನಮ್ಮ ದೃಷ್ಟಿಕೋನವಾದ SAGAR ಮತ್ತು ಆಫ್ರಿಕಾ ಒಕ್ಕೂಟದಲ್ಲಿ ಪ್ರಮುಖ ಪಾಲುದಾರನಾಗಿದೆ.” ಎಂದು ಹೇಳಿದ್ದಾರೆ.

 

ಚೀನಾ ಗಣರಾಜ್ಯದ ಅಧ್ಯಕ್ಷ ಶ್ರೀ ಲಾಯ್ ಚಿಂಗ್ ತೆ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಪ್ರಧಾನಿಯವರು; 

“ನಿಮ್ಮ ಆತ್ಮೀಯ ಸಂದೇಶಕ್ಕಾಗಿ ಧನ್ಯವಾದಗಳು ಲಾಯ್ ಚಿಂಗ್ ತೆ. ನಾವು ಪರಸ್ಪರ ಲಾಭದಾಯಕ ಆರ್ಥಿಕ ಮತ್ತು ತಾಂತ್ರಿಕ ಪಾಲುದಾರಿಕೆಗಾಗಿ ನಾನು ನಿಕಟ ಸಂಬಂಧಗಳನ್ನು ಎದುರು ನೋಡುತ್ತಿದ್ದೇನೆ.” ಎಂದು ಹೇಳಿದ್ದಾರೆ.

 

*****