Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ 13ನೇ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀ ಎಂ. ವೆಂಕಯ್ಯನಾಯ್ಡು ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ 13ನೇ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀ ಎಂ. ವೆಂಕಯ್ಯನಾಯ್ಡು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

‘ಭಾರತದ ಉಪ ರಾಷ್ಟ್ರಪತಿಯವರಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು ಎಂ. ವೆಂಕಯ್ಯನಾಯ್ಡು ಅವರೇ’. ಫಲಪ್ರದ ಮತ್ತು ಪ್ರೇರೇಪಣಾತ್ಮಕ ಅವಧಿಗೆ ನನ್ನ ಶುಭಾಶಯಗಳು ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ಎಂ. ವೆಂಕಯ್ಯನಾಯ್ಡು ಅವರೊಂದಿಗೆ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಕೆಲಸ ಮಾಡಿದ ನೆನಪುಗಳು ನನ್ನ ಮನದಲ್ಲಿ ತುಂಬಿವೆ. ನಮ್ಮ ಬಾಂಧವ್ಯದ ಅಂಶಗಳನ್ನು ನಾನು ಪೋಷಿಸುತ್ತೇನೆ.

ಎಂ. ವೆಂಕಯ್ಯನಾಯ್ಡು ಅವರು ರಾಷ್ಟ್ರನಿರ್ಮಾಣದ ಗುರಿಗೆ ಬದ್ಧರಾಗಿ ಶ್ರದ್ಧೆಯಿಂದ ಮತ್ತು ಸಮರ್ಪಣಾಭಾವದ ಉಪರಾಷ್ಟ್ರಪತಿಯವರಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಎಂದು ತಿಳಿಸಿದ್ದಾರೆ.

******