Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಸಂಗೀತ ವಾದ್ಯಗಳ ರಫ್ತಿನಲ್ಲಿನ ಹೆಚ್ಚಳಕ್ಕೆ ಪ್ರಧಾನಮಂತ್ರಿ ಶ್ಲಾಘನೆ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಸಂಗೀತ ವಾದ್ಯಗಳ ರಫ್ತಿನಲ್ಲಿ ಹೆಚ್ಚಳವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 2013ರ ಇದೇ ಅವಧಿಗೆ ಹೋಲಿಸಿದರೆ, 2022 ರ ಏಪ್ರಿಲ್-ಸೆಪ್ಟೆಂಬರ್ ನಲ್ಲಿ ಭಾರತದ ಸಂಗೀತ ವಾದ್ಯಗಳ ರಫ್ತು 3.5 ಪಟ್ಟು ಹೆಚ್ಚಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಟ್ವೀಟ್ ಅನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿಯವರು, ಟ್ವೀಟ್ ನಲ್ಲಿ;

“ಇದು ಪ್ರೋತ್ಸಾಹದಾಯಕವಾಗಿದೆ. ಭಾರತೀಯ ಸಂಗೀತವು ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆಯುತ್ತಿರುವುದರಿಂದ, ಈ ಕ್ಷೇತ್ರದಲ್ಲಿ ಮತ್ತಷ್ಟು ಬೆಳೆಯಲು ಉತ್ತಮ ಅವಕಾಶವಿದೆ’ ಎಂದು ತಿಳಿಸಿದ್ದಾರೆ.

*****