Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ರಾಷ್ಟ್ರಪತಿಗಳಾಗಿ ಆಯ್ಕೆಯಾದ ಶ್ರೀ ರಾಮ್ ನಾಥ್ ಕೋವಿಂದ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ರಾಷ್ಟ್ರಪತಿಗಳಾಗಿ ಆಯ್ಕೆಯಾದ ಶ್ರೀ ರಾಮ್ ನಾಥ್ ಕೋವಿಂದ್ ಅವರನ್ನು ಅಭಿನಂದಿಸಿದ್ದಾರೆ.

“ಭಾರತದ ರಾಷ್ಟ್ರಪತಿಗಳಾಗಿ ಆಯ್ಕೆಯಾದ ಶ್ರೀ ರಾಮ್ ನಾಥ್ ಕೋವಿಂದ್ ಅವರೇ ಅಭಿನಂದನೆಗಳು! ಫಲಪ್ರದ ಮತ್ತು ಸ್ಫೂರ್ತಿದಾಯಕ ಅವಧಿಗಾಗಿ ಶುಭಾಶಯಗಳು.

ವಿವಿಧ ರಾಜ್ಯಗಳಾದ್ಯಂತ ಶ್ರೀ ರಾಮ್ ನಾಥ್ ಕೋವಿಂದ್ ಅವರಿಗೆ ದೊರೆತ ವ್ಯಾಪಕ ಬೆಂಬಲದಿಂದ ಸಂತೋಷಭರಿತನಾಗಿದ್ದೇನೆ. ಮತಾಧಿಕಾರ ಹೊಂದಿದ್ದ ಎಲ್ಲ ಸದಸ್ಯರಿಗೂ ಧನ್ಯವಾದ ಅರ್ಪಿಸುತ್ತೇನೆ.

ನಾನು ಶ್ರೀಮತಿ ಮೀರಾ ಕುಮಾರ್ ಅವರಿಗೂ ಕೂಡ ಅವರ ಪ್ರಚಾರಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ, ಅದು ಪ್ರಜಾಸತ್ತಾತ್ಮಕ ತತ್ವ ಮತ್ತು ಮೌಲ್ಯಗಳ ಸ್ಫೂರ್ತಿಯಿಂದ ಕೂಡಿತ್ತು, ಈ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡುತ್ತೇವೆ ”, ಎಂದು ಪ್ರಧಾನಿ ಹೇಳಿದ್ದಾರೆ.

AKT/HS