Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಬಂದರು ವಲಯವು ವೇಗವಾಗಿ ಬೆಳೆಯುತ್ತಿದೆ ಮತ್ತು ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿದೆ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು  ತೂತ್ತುಕುಡಿ ವಿ ಒ ಸಿ   ಬಂದರಿನ ಸಾಧನೆಗಳನ್ನು ಶ್ಲಾಘಿಸಿದ್ದಾರೆ,  ಹಿಂದಿನ ವರ್ಷಕ್ಕೆ  ಹೋಲಿಸಿದರೆ ಸಾಧನೆಗಳು 11.35% ರಷ್ಟು ಬೆಳವಣಿಗೆಯಾಗಿದೆ. ಬಂದರು 14.03.2023 ರಂತೆ 36.03  ದಶಲಕ್ಷ ಟನ್ ಸರಕುಗಳನ್ನು ನಿರ್ವಹಿಸಿದೆ ಮತ್ತು 2022-23 ರ ಹಣಕಾಸು ವರ್ಷದಲ್ಲಿ   17 ದಿನಗಳ ಮುಂಚಿತವಾಗಿ ಬಂದರು ಸಚಿವಾಲಯವು ನಿಗದಿಪಡಿಸಿದ 36 ದಶಲಕ್ಷ  ಟನ್ಗಳ ಗುರಿಯನ್ನು ಮೀರಿದೆ.

ತೂತ್ತುಕುಡಿಯಲ್ಲಿರುವ ವಿ. ಒ. ಚಿದಂಬರನಾರ್ ಬಂದರು  ಪ್ರಾಧಿಕಾರದ ಟ್ವೀಟ್ಗೆ ಪ್ರತಿಕ್ರಿಯೆಯಾಗಿ,   ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ :

“ಬಹಳ ಒಳ್ಳೆಯದು!  ಭಾರತದ ಬಂದರು ವಲಯವು ವೇಗವಾಗಿ ಬೆಳೆಯುತ್ತಿದೆ ಮತ್ತು ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿದೆ.”

 

****