ನನ್ನ ಮಿತ್ರ ಪ್ರಧಾನಮಂತ್ರಿ ನೇತನ್ಯಾಹು,
ನನ್ನ ಮಾಧ್ಯಮ ಮಿತ್ರರೇ, ನನ್ನನ್ನು ಅವರ ನಿವಾಸಕ್ಕೆ ಆಹ್ವಾನಿಸಿರುವ ಪ್ರಧಾನಮಂತ್ರಿ ನೇತನ್ಯಾಹು ಮತ್ತು ಶ್ರೀಮತಿ ಸರಾ ನೇತನ್ಯಾಹು ಅವರಿಗೆ ಧನ್ಯವಾದಗಳು. ಅವರ ಆಧರಣೀಯ ಆತಿಥ್ಯಕ್ಕೆ ಆಭಾರಿಯಾಗಿದ್ದೇನೆ.
ಮಿತ್ರರೇ,
ಎರಡನೇ ಮಹಾಯುದ್ಧದ ಸಂದರ್ಭದ ಹತ್ಯಾಕಾಂಡದಲ್ಲಿ ಜೀವತೆತ್ತ 60 ಲಕ್ಷ ಯಹೂದಿಗಳ ಗೌರವಕ್ಕಾಗಿ ಮತ್ತವರ ನೆನಪಿಗಾಗಿ, ಸ್ವಲ್ಪ ಹೊತ್ತಿನ ಹಿಂದೆ ಯಾದ್ ವಾಶೆಮ್ ಮ್ಯೂಸಿಯ್ಂತಗೆ ಭೇಟಿ ನೀಡಿ ಹೂವಿನ ಹಾರ ಸಮರ್ಪಿಸಿ ಬಂದೆ. ಯಾದ್ ಮ್ಯೂಸಿಯ್ ಪದಗಳಲ್ಲಿ ಹೇಳಲಾಗದ ದುಷ್ಟ ಕೃತ್ಯವನ್ನು ಸದಾ ನೆನಪಿಸುತ್ತದೆ. ಇದು, ದುರಂತದಿಂದ ಹೊರಬಂದು, ದ್ವೇಷವನ್ನು ಸಮರ್ಥವಾಗಿ ಜಯಿಸಿ, ಹೊಸ ಪ್ರಜಾತಾಂತ್ರಿಕ ದೇಶವನ್ನು ಕಟ್ಟಲು ನೀವು ಪಟ್ಟ ಶ್ರಮದ ಪ್ರತೀಕವೂ ಕೂಡ. ಮನುಷ್ಯತ್ವ ಮತ್ತು ನಾಗರಿಕ ಮೌಲ್ಯಗಳ ಮೇಲೆ ಯಾರೆಲ್ಲ ನಂಬಿಕೆ ಇರಿಸಿದ್ದಾರೋ, ಅವರೆಲ್ಲಾ ಒಗ್ಗಟ್ಟಾಗಿ ಆ ಮೌಲ್ಯಗಳನ್ನು ಉಳಿಸಿಕೊಳ್ಳುವ ಸಂಕೇತವಾಗಿಯೂ ಯಾದ್ ವಶೇಮ್ ಗೋಚರಿಸುತ್ತದೆ. ಇದರೊಟ್ಟಿಗೆ, ಇಂದು ನಮ್ಮನ್ನು ಕಾಡುತ್ತಿರುವ ತೀವ್ರಗಾಮಿತ್ವ, ಹಿಂಸೆ ಮತ್ತು ಭಯೋತ್ಪಾದನಾ ಪಿಡುಗುಗಳನ್ನು ನಾವು ವಿರೋಧಿಸಬೇಕಿದೆ.
ಮಿತ್ರರೇ,
ಭಾರತದ ನೈಋತ್ಯ ಭಾಗಕ್ಕೆ ಆಗಮಿಸಿದ ಮೊದಲ ಯಹೂದಿಯಿಂಡಿದು ನಮ್ಮ ಬಾಂಧವ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆಗಿನಿಂದಲೂ ಯಹೂದಿಗಳು ಏಳಿಗೆ ಸಾಧಿಸುತ್ತಾ ಬಂದಿದ್ದಾರೆ, ಅವರ ಸಂಸ್ಕøತಿ ಮತ್ತು ಆಚರಣೆಗಳೂ ಭಾರತದಲ್ಲಿ ಇಂದಿಗೂ ಉಳಿದಿವೆ. ಲೆಫ್ಟಿನೆಂಟ್ ಎಲ್.ಎಫ್.ಆರ್ ಜಾಕಬ್, ವೈಸ್ ಅಡ್ಮಿರಲ್ ಬೆಂಜಮಿನ್ ಸಾನ್ಸನ್, ಅತ್ಯುತ್ತಮ ವಾಸ್ತುಶಿಲ್ಪಿ ಜೋಶ್ವಾ ಬೆಂಜಮಿನ್ ಮತ್ತು ಸಿನಿಮಾ ನಟರಾದ ನಾಡಿಯಾ, ಸುಲೋಚನಾ ಹಾಗೂ ಪ್ರಮೀಣಾ ಅವರಂತಹ ಯಹೂತಿ ಕುಡಿಗಳ ಬಗೆಗೆ ನನಗೆ ಹೆಮ್ಮೆ ಎನಿಸುತ್ತದೆ. ಅವರ ಸಾಧನೆಗಳು ಭಾರತದ ಸಂಸ್ಕøತಿಯ ಎಳೆಗಳನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ. ಭಾರತದಲ್ಲಿ ಇಂದಿಗೂ ಇರುವ ಅನೇಕ ಯಹೂದಿಗಳು ಈ ಸಂಸ್ಕøತಿಯ ಬೆಸುಗೆಗೆ ಸಾಕ್ಷ್ಯ. ನನ್ನ ಇಸ್ತ್ರೇಲ್ ಭೇಟಿ ಎರಡೂ ದೇಶಗಳಲ್ಲಿರುವ ಸಮುದಾಯಗಳ ನಡುವಿನ ದೀರ್ಘ ಸಂಬಂಧದ ಸಂಭ್ರಮಕ್ಕೆ ಕಾರಣವಾಗಿದೆ. ನಾಳೆ ಇಸ್ತ್ರೇಲ್ನಿಲ್ಲಿನ ಭಾರತದ ಸಮುದಾಯದೊಂದಿಗೆ ನನಗೆ ಸಂಹವಿಸುವ ಅವಕಾಶ ದಕ್ಕಿರುವುದು ಅತೀವ ಸಂಸತ ತಂದಿದೆ.
ಮಿತ್ರರೇ,
ಇಂದಿನ ಆಧುನಿಕ ಕಾಲಘಟ್ಟದಲ್ಲಿ, ಕಳೆದ 25 ವರ್ಷಗಳಿಂದೆ ನಾವು ಸೃಷ್ಠಿಸಿದ ರಾಜತಾಂತ್ರಿಕ ಸಂಬಂಧಗಳು ನಮ್ಮ ಅಭಿವೃದ್ಧಿ ಮತ್ತು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಆರ್ಥಿಕ ಪ್ರಗತಿಗಾಗಿ, ಸಮರ್ಥ ತಂತ್ರಜ್ಞಾನಕ್ಕಾಗಿ ಮತ್ತು ಆವಿಷ್ಕಾರಕ್ಕಾಗಿ ಹಲವು ಪರಸ್ಪರ ಉದ್ದೇಶಗಳು ನಮ್ಮ ಪಾತ್ರಗಳನ್ನು ಸೂಚಿಸಲು ಸಹಕಾರಿಯಾಗುವುದರೊಂದಿಗೆ, ಒಟ್ಟಾಗಿ ಕಾರ್ಯನಿರ್ವಹಿಸುವ ಅವಕಾಶಗಳನ್ನು ಸೃಷ್ಠಿಸುತ್ತವೆ. ನಮ್ಮ ಆರ್ಥಿಕ ಪಾತ್ರವನ್ನು ತೀವ್ರವಾಗಿ ಬದಲಾಯಿಸವಂತಹ ಕಾರ್ಯಚೌಕಟ್ಟನ್ನು ನಾವು ಮುಂಬರುವ ದಿನಗಳಲ್ಲಿ ಹಾಕಿಕೊಳ್ಳಲಿದ್ದೇವೆ. ನಮ್ಮ ಅಭಿವೃದ್ಧಿ ಆದ್ಯತೆಗಳ ಸಲುವಾಗಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳೆಡೆಗೆ ಗಮನ ಹರಿಸುತಿದ್ದು, ಇಂತಹ ಪ್ರಯತ್ನಗಳು ನಮ್ಮ ಶಿಕ್ಷಣ, ವಿಜ್ಞಾನ ಮತ್ತು ಸಂಶೋಧನೆ ಮತ್ತು ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುತ್ತವೆ. ಎರಡೂ ದೇಶಗಳನ್ನೂ ಬಾಧಿಸುತ್ತಿರುವ ಭದ್ರತೆ ವಿಷಯವಾಗಿ ಮತ್ತು ನಮ್ಮ ಶಾಂತಿಯನ್ನು ಕದಡಲು ನಡೆಸುವ ಪ್ರಯತ್ನಗಳನ್ನು ಹತ್ತಿಕ್ಕಲು ವಿಸೃತವಾದ ಭದ್ರತಾ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿದೆ. ಈ ಉದ್ದೇಶಗಳನ್ನು ಜಾರಿಗೆ ತರಲು ಅವಶ್ಯಕವಾದ ಕಾರ್ಯಸೂಚಿ ರಚನೆ ಪ್ರಕ್ರಿಯೆಯಲ್ಲಿ ನಾನು ಪ್ರಧಾನ ಮಂತ್ರಿ ನೇತನ್ಯಾಹು ಅವರೊಂದಿಗೆ ಒಟ್ಟಿಗೆ ಕಾರ್ಯನಿರ್ವಹಿಸಲಿದ್ದೇನೆ.
ಧನ್ಯವಾದಗಳು
Sharing my remarks at the press meet with PM @netanyahu. https://t.co/MxUZyLo72s pic.twitter.com/34SZX8j9i1
— Narendra Modi (@narendramodi) July 4, 2017