Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಪ್ರಧಾನಮಂತ್ರಿ ಮತ್ತು ಫ್ರಾನ್ಸ್ ಅಧ್ಯಕ್ಷರು ಜಂಟಿಯಾಗಿ ಐಟಿಇಆರ್ ಘಟಕಕ್ಕೆ ಭೇಟಿ ನೀಡಿದರು 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಜಂಟಿಯಾಗಿ ಕ್ಯಾಡರಾಚೆಯಲ್ಲಿರುವ ಅಂತಾರಾಷ್ಟ್ರೀಯ ಥರ್ಮೋನ್ಯೂಕ್ಲಿಯರ್ ಪ್ರಾಯೋಗಿಕ ರಿಯಾಕ್ಟರ್ ಗೆ (ಐಟಿಇಆರ್) ಭೇಟಿ ನೀಡಿದ್ದಾರೆ. ನಾಯಕರನ್ನು ಐಟಿಇಆರ್ ಮಹಾನಿರ್ದೇಶಕರು ಸ್ವಾಗತಿಸಿದರು. ಈ ಭೇಟಿಯು ವಿಶಿಷ್ಟವಾಗಿದ್ದು, ವಿಶ್ವದ ಅತ್ಯಂತ ಮಹತ್ವಾಕಾಂಕ್ಷೆಯ ಸಮ್ಮಿಳನ ಇಂಧನ ಯೋಜನೆಗಳಲ್ಲಿ ಒಂದಾದ ಐಟಿಇಆರ್ ಗೆ ಯಾವುದೇ ರಾಷ್ಟ್ರದ ಮುಖ್ಯಸ್ಥರು ಅಥವಾ ಸರ್ಕಾರದ ಮುಖ್ಯಸ್ಥರ ಮೊದಲ ಭೇಟಿಯಾಗಿದೆ.

ಭೇಟಿಯ ಸಮಯದಲ್ಲಿ, ವಿಶ್ವದ ಅತಿದೊಡ್ಡ ಟೋಕಾಮಾಕ್ ಜೋಡಣೆ ಸೇರಿದಂತೆ ಐಟಿಇಆರ್ ನ ಪ್ರಗತಿಯನ್ನು ಉಭಯ ನಾಯಕರು ಶ್ಲಾಘಿಸಿದ್ದಾರೆ. ಈ ಐಟಿಇಆರ್ ಘಟಕದಲ್ಲಿ ಪ್ಲಾಸ್ಮಾವನ್ನು ಒಳಗೊಂಡು ಅದನ್ನು ನಿಯಂತ್ರಿಸುವ ಮೂಲಕ 500 ಮೆಗಾವ್ಯಾಟ್ ಸಮ್ಮಿಳನ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಐಟಿಇಆರ್ ಎಂಜಿನಿಯರ್ ಗಳು ಮತ್ತು ವಿಜ್ಞಾನಿಗಳ ಸಮರ್ಪಣೆಯನ್ನು ನಾಯಕರು ಶ್ಲಾಘಿಸಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ಈ ಯೋಜನೆಗೆ ಕೊಡುಗೆ ನೀಡಿದ ಏಳು ಐಟಿಇಆರ್ ಸದಸ್ಯರಲ್ಲಿ ಭಾರತವೂ ಒಂದಾಗಿದೆ. ಸುಮಾರು 200 ಭಾರತೀಯ ವಿಜ್ಞಾನಿಗಳು ಮತ್ತು ಸಹವರ್ತಿಗಳು, ಮತ್ತು ಎಲ್ & ಟಿ, ಐನಾಕ್ಸ್ ಇಂಡಿಯಾ, ಟಿಸಿಎಸ್, ಟಿಸಿಇ, ಹೆಚ್ ಸಿ ಎಲ್ ಟೆಕ್ನಾಲಜೀಸ್ ನಂತಹ ಗಮನಾರ್ಹ ಉದ್ಯಮಗಾರರು ಐಟಿಇಆರ್ ಯೋಜನೆಯಲ್ಲಿ ತಮ್ಮ ಉದ್ಯೋಗಿಗಳನ್ನು ತೊಡಗಿಸಿಕೊಂಡಿದ್ದಾರೆ.

*****