ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ವಿವಿಧ ಕ್ಷೇತ್ರಗಳಲ್ಲಿ ಭಾರತದ ಗಮನಾರ್ಹ ಸಾಧನೆಗಳನ್ನು ಶ್ಲಾಘಿಸಿದರು, ಈ ಯಶಸ್ಸಿಗೆ ರಾಷ್ಟ್ರದ ಯುವಕರ ಶಕ್ತಿ ಮತ್ತು ಪ್ರತಿಭೆಯೇ ಕಾರಣ ಎಂದು ಅವರು ಹೇಳಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಭಾರತದ ಗಮನಾರ್ಹ ಸಾಧನೆಗಳ ಬಗ್ಗೆ X ಪ್ಲಾಟ್ ಫಾರ್ಮ್ ನಲ್ಲಿ MyGov ನ ನವೀಕರಣಗಳಿಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು;
“ಭಾರತವು ಪ್ರಭಲ ಪ್ರವೃತ್ತಿಯನ್ನು ಸ್ಥಾಪಿಸುತ್ತಿದ್ದು ಇದಕ್ಕೆ ನಮ್ಮ ಪ್ರತಿಭಾವಂತ ಯುವಕರು ಕಾರಣ! ಮುಂಬರುವ ದಿನಗಳಲ್ಲಿ ನಾವು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
*****
India is setting the trend and this is due to our talented youth! And, we are going to do even better in the times to come. https://t.co/mW9FL5FeLI
— Narendra Modi (@narendramodi) January 4, 2025