ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಇಂದು, ಭಾರತದಲ್ಲಿ ಸುಸ್ಥಿರ, ಸ್ಥಿರ ಮತ್ತು ಕಡಿಮೆ-ಇಂಗಾಲದ ಶಾಖೋತ್ಪನ್ನ ವಿದ್ಯುತ್ ಅಭಿವೃದ್ಧಿ ಉತ್ತೇಜನಕ್ಕೆ ಭಾರತ ಮತ್ತು ಜಪಾನ್ ನಡುವಿನ ಎಂ.ಓ.ಯು.ಗೆ ಪೂರ್ವಾನ್ವಯವಾಗಿ ಅನುಮೋದನೆ ನೀಡಿದೆ.
ಈ ಎಂ.ಓ.ಯು.ಗೆ ಅಂಕಿತ ಹಾಕಿರುವುದು ಭಾರತಕ್ಕೆ ಸುಸ್ಥಿರ, ಸ್ಥಿರ ಮತ್ತು ಕಡಿಮೆ ಇಂಗಾಲದ ಉಷ್ಣ ವಿದ್ಯುತ್ ಅಭಿವೃದ್ಧಿ ಪ್ರೋತ್ಸಾಹಕ್ಕೆ ತಡೆಯಾಗಿರುವ ಅಡ್ಡಿಗಳನ್ನು ನಿವಾರಿಸಲು ನೆರವಾಗಲಿದೆ. ಇದನ್ನು ಪೂರ್ವ ಪ್ರಾರ್ಥಮಿಕ ಅಧ್ಯಯನ ಮತ್ತು ಪ್ರಸ್ತುತ ನಡೆಯುತ್ತಿರುವ ಇಂಧನ ದಕ್ಷತೆ, ನವೀಕರಣ ಮತ್ತು ಆಧುನೀಕರಣ, ಶೋಧ ಚಟುವಟಿಕೆಗೆ ಬೆಂಬಲ , ನವೀಕರಣ ಮತ್ತು ಆಧುನೀಕರಣ, ಜಾರಿ ಮಾಡುವುದೂ ಸೇರಿದಂತೆ ಹೊಸ ವಿದ್ಯುತ್ ಅಭಿವೃದ್ಧಿ, ಅನುಷ್ಠಾನ, ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಶುದ್ಧ ಕಲ್ಲಿದ್ದಲು ತಂತ್ರಜ್ಞಾನ (ಸಿಸಿಟಿ) ಜ್ಞಾನ ಮತ್ತು ತಂತ್ರಜ್ಞಾನ ವಿನಿಮಯ ಚಟುವಟಿಕೆ, ಅದೆಂದರೆ ಅಲ್ಟ್ರಾ ಸೂಪರ್ ಕ್ರಿಟಿಕಲ್ (ಯುಎಸ್ ಸಿ) ಮತ್ತು ಇತರ ಪರಿಸರ ತಂತ್ರಜ್ಞಾನದ ಮೂಲಕ ಅಡೆತಡೆ ಗುರುತಿಸಲಾಗುತ್ತದೆ. ಇದೆಲ್ಲವೂ ಒಟ್ಟಾರೆ ಭಾರತದ ವಿದ್ಯುತ್ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಜೊತೆಗೆ ಸೂಕ್ತ ನೀತಿಗಳ ಜಾರಿಗೂ ಅವಕಾಶ ನೀಡುತ್ತದೆ.
ಈ ಪ್ರಸ್ತಾವನೆಯು ಎಂಥ ಚಟುವಟಿಕೆಗಳನ್ನು ಕೈಗೊಳ್ಳುವುದನ್ನು ಒಳಗೊಂಡಿದೆ ಎಂದರೆ:
ಅ) ಭಾರತೀಯ ಇಂಧನ ವಲಯದಲ್ಲಿ ಹಾಲಿ ಮತ್ತು ಭವಿಷ್ಯದ ನೀತಿಗಳ ಪ್ರವೃತ್ತಿಯನ್ನು ಆರ್ ಮತ್ತು ಎಂನ ವ್ಯಾಪಕ ವ್ಯಾಪ್ತಿಯೊಂದಿಗೆ ಮತ್ತು ಭಾರತದಲ್ಲಿ ಹೊಸ ವಿದ್ಯುತ್ ಅಭಿವೃದ್ಧಿಗೆ ಜೀವನ ವಿಸ್ತರಣೆ (ಎಲ್.ಇ.) ಹಾಗೂ ಗುರುತಿಸಲಾದ ತಡೆಗಳನ್ನು ಪರಿಗಣಿಸಿ ಅವುಗಳನ್ನು ಪರಸ್ಪರ ಸಹಯೋಗದೊಂದಿಗೆ ನಿವಾರಿಸಲು ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿ.ಇ.ಎ) ಮತ್ತು ಜಪಾನ್ ಕಲ್ಲಿದ್ದಲು ಇಂಧನ ಕೇಂದ್ರ (ಜೆಸಿಓಎಎಲ್)ನೊಂದಿಗೆ ಶ್ರಮಿಸಲಿದೆ.
ಬಿ) ಗುರುತಿಸಲಾದ ಸಮಸ್ಯೆಗಳನ್ನು ಹಾಲಿ ಮತ್ತು ಮುಂಬರುವ ಸೌಲಭ್ಯಗಳೆರಡಕ್ಕೂ ಸಂಬಂಧಿಸಿದಂತೆ ಪರಿಹರಿಸಲು ಪ್ರಯತ್ನಿಸಲಾಗುವುದು ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆ ಅವುಗಳಲ್ಲಿ ಎರಡನ್ನು ಮಾಡಲಾಗುವುದು.
ಸಿ) ಉಳಿದ ಬದುಕಿನ ನಿರ್ಧರಣೆ (ಆರ್.ಎಲ್.ಎ) ಮತ್ತು ಷರತ್ತಿನ ನಿರ್ಧರಣೆ (ಸಿಎ) ಅಧ್ಯಯನ ಪೂರ್ಣ ಪ್ರಮಾಣದ ಶೋಧ ಮತ್ತು / ಅಥವಾ ಇತರ ಲಭ್ಯ ಮತ್ತು ಸಮರ್ಥ ಕ್ರಮಗಳ ಮೇಲೆ ಆದ್ಯತೆಗಳಿಂದ ಕೂಡದ ಅಧ್ಯಯನ, ಆದರೆ, ಪೂರ್ವ ಪ್ರಾಥಮಿಕ ಅಧ್ಯಯನ ಹಾಗೂ ಸಹಕಾರದ ಅಡಿಯಲ್ಲಿನ ಗುರಿಯಾಗಿರುವ ವಿದ್ಯುತ್ ಕೇಂದ್ರಗಳಿಗೆ ಮಾತ್ರವೇ ಇದು ಸೀಮಿತವಲ್ಲ. ಗುರಿಯಾದ ವಿದ್ಯುತ್ ಕೇಂದ್ರ(ಗಳು) /ಘಟಕ(ಗಳು) ಸಂಖ್ಯೆಯನ್ನು ಸಿಇಎ ಮತ್ತು ಜೆಸಿಒಎಎಲ್ನ ಪರಸ್ಪರ ಸಮಾಲೋಚನೆಯಿಂದ ನಿರ್ಧರಿಸಲಾಗುತ್ತದೆ.
ಡಿ) ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ತಂತ್ರಜ್ಞಾನ ಆಧಾರಿತ ವಿದ್ಯುತ್ ಅಭಿವೃದ್ಧಿಯ ವೈಯಕ್ತಿಕ ಪ್ರಕರಣಗಳಲ್ಲಿ ಹಾಲಿ ಇರುವ ಆರ್ಥಿಕ ಸಾಧನಗಳ ಮೂಲಕ ಹೂಡಿಕೆ ಮಾಡುವ ಮತ್ತು/ ಅಥವಾ ಇತರ ಲಭ್ಯ ದ್ವಿಪಕ್ಷೀಯ ಹಣಕಾಸು ಯೋಜನೆಗಳ ಸಮರ್ಥನೀಯತೆ ಮತ್ತು ಕಾರ್ಯಸಾಧ್ಯತೆಯನ್ನು ಪರಿಗಣಿಸಲಾಗುತ್ತದೆ.
ಇ) ಇಂಗಾಲದ ಕ್ರೆಡಿಟ್ ಪಡೆಯಲು ದ್ವಿಪಕ್ಷೀಯ/ಬಹುಪಕ್ಷೀಯ ಆಫ್ ಸೆಟ್ ಯೋಜನೆಗಳ ಸಾಧ್ಯತೆಗಳನ್ನು ಪರಿಗಣಿಸಲಾಗುತ್ತದೆ. ಇವು ವಿದ್ಯುತ್ ಅಭಿವೃದ್ಧಿಯ ವೈಯಕ್ತಿಕ ಪ್ರಕರಣಗಳಲ್ಲಿ ಆರ್ಥಿಕ ಭಾಗವಾಗಿ ಭವಿಷ್ಯದಲ್ಲಿ ಕಾರ್ಯಸಾಧ್ಯವಾಗುತ್ತವೆ ಎಂದು ನಿರೀಕ್ಷಿಸಲಾಗಿದೆ.
ಎಫ್.) ದ್ವಿಪಕ್ಷೀಯ ಜ್ಞಾನ ಮತ್ತು ತಂತ್ರಜ್ಞಾನ ವಿನಿಮಯಕ್ಕಾಗಿ ಭಾರತದಲ್ಲಿ ವಾರ್ಷಿಕ ಕಾರ್ಯಾಗಾರ ಮತ್ತು ಜಪಾನ್ ನಲ್ಲಿ ಸಿಸಿಟಿ ವರ್ಗಾವಣೆ ಕಾರ್ಯಕ್ರಮ ಜಾರಿ.
ಜಿ.) ಯೋಜನೆಯ ಜಾರಿಯಲ್ಲಿ ತಲೆದೋರಿರುವ ಇಲ್ಲವೇ ತಲೆದೋರಬಹುದಾದ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಎರಡೂ ಪಕ್ಷಕಾರರ ಪ್ರತಿನಿಧಿಗಳು ಭಾಗವಹಿಸುವ ಜಂಟಿ ವಾರ್ಷಿಕ ಸಭೆ ಆಯೋಜನೆ,ಇದು ಯೋಜನೆಯ ಸಾಮರ್ಥ್ಯವನ್ನು ಹೆಚ್ಚಸಲಿದೆ. ಯಾವುದೇ ಸೂಕ್ತ .ಪಕ್ಷಕಾರ/ಬಾಧ್ಯಸ್ಥ ಸಹ ಪಕ್ಷಕಾರರು ಒಪ್ಪಿದಂತೆ ಸಭೆಯಲ್ಲಿ ವಿಶೇಷ ಆಹ್ವಾನಿತನಾಗಿ ಭಾಗವಹಿಸಬಹುದು.
AKT/VBA/SH