Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾಚೌನಲ್ಲಿ ಪಂಪಿಂಗ್ ಕೇಂದ್ರ ಉದ್ಘಾಟಿಸಿದ ಪ್ರಧಾನಿ; ನರ್ಮದಾ ನೀರು ತಪ್ಪರ್ ಅಣೆಕಟ್ಟೆಗೆ ಬಿಡುಗಡೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ಭಾಚೌನಲ್ಲಿ ಪಂಪಿಂಗ್ ಕೇಂದ್ರವನ್ನು ಉದ್ಘಾಟಿಸಿದರು. ಇದು ನರ್ಮದಾ ನೀರನ್ನು ತಪ್ಪರ್ ಜಲಾಶಯಕ್ಕೆ ಬಿಡುಗಡೆ ಮಾಡಲು ಅವಕಾಶ ನೀಡುತ್ತದೆ.

ಈ ಸಂದರ್ಭದಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ಇಂದಿನ ಈ ಉದ್ಘಾಟನೆ ಕಚ್ ನ ಎಲ್ಲರೂ ಹೆಮ್ಮೆ ಪಡುವಂತೆ ಮಾಡಿದೆ ಎಂದರು. ಜಲ ಸಂರಕ್ಷಣೆಯ ಮಹತ್ವವನ್ನು ಪ್ರತಿಪಾದಿಸಿದ ಅವರು, ಕಚ್ ಜನರು ಇದನ್ನು ಚನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದರು.

ಗುಜರಾತ್ ನಲ್ಲಿ ಸತತವಾಗಿ ಎಲ್ಲ ಸರ್ಕಾರಗಳೂ ಜಲ ಸಂರಕ್ಷಣೆಗೆ ಒತ್ತು ನೀಡಿವೆ ಎಂದ ಅವರು, ಈಗ ನರ್ಮದಾ ನದಿ ನೀರು ಬರುತ್ತಿರುವುದರಿಂದ ವಲಯದಲ್ಲಿ ಪರಿವರ್ತನೆಯನ್ನು ಕಾಣಬಹುದು ಎಂದರು.

ಭುಜ್ ಕೂಡ ಗುಜರಾತ್ ನ ಇತರ ನಗರಗಳಂತೆ ಆಧುನಿಕ ಬಸ್ ನಿಲ್ದಾಣವನ್ನೂ ಪಡೆಯಲಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಅಭಿವೃದ್ಧಿಯ ಬಗ್ಗೆ ಮಾತ್ರವೇ ಗಮನ ಹರಿಸಲಾಗಿದ್ದು, ಧನಾತ್ಮಕವಾದ ಕಾರ್ಯ ರಾಜ್ಯವನ್ನು ಉನ್ನತ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದರು.

***

AKT/AK