Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಗೀರಥ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ; ತೆಲಂಗಾಣದಲ್ಲಿ ವಿವಿಧ ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ

ಭಗೀರಥ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ; ತೆಲಂಗಾಣದಲ್ಲಿ ವಿವಿಧ ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ

ಭಗೀರಥ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ; ತೆಲಂಗಾಣದಲ್ಲಿ ವಿವಿಧ ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ

ಭಗೀರಥ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ; ತೆಲಂಗಾಣದಲ್ಲಿ ವಿವಿಧ ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ತೆಲಂಗಾಣದ ಮೇಡಕ್ ಜಿಲ್ಲೆಯ ಗಜ್ವಾಲ್ ನ ಕೋಮಾಟಿಬಂಡ ಗ್ರಾಮದಲ್ಲಿ ಭಗೀರಥ ಅಭಿಯಾನಕ್ಕೆ ಚಾಲನೆ ನೀಡಿದರು. ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ರಾಜ್ಯ ಸರ್ಕಾರ ಈ ಯೋಜನೆ ಆರಂಭಿಸಿದೆ.

ಇದೇ ವೇಳೆ ಪ್ರಧಾನಮಂತ್ರಿಯವರು ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಗೆ ಶಿಲಾಫಲಕಗಳನ್ನು ಅನಾವರಣ ಮಾಡಿದರು. ಇವುಗಳಲ್ಲಿ ರಾಮಗುಂಡಂನಲ್ಲಿ ಎನ್.ಟಿ.ಪಿ.ಸಿ.ಯ 1600 ಮೆಗಾ ವ್ಯಾಟ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ; ರಾಮಗುಂಡಂನಲ್ಲಿ ರಸಗೊಬ್ಬರ ಕಾರ್ಖಾನೆಯ ಪುನಶ್ಚೇತನ; ವಾರಂಗಲ್ ನಲ್ಲಿ ಕಲೋಜಿ ನಾರಾಯಣ ರಾವ್ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ; ಮತ್ತು ಮನೋಹರಬಾದ್- ಕೋಟಪಲ್ಲಿ ರೈಲು ಮಾರ್ಗದ ಶಂಕುಸ್ಥಾಪನೆ ಸೇರಿದೆ. ಪ್ರಧಾನಿಯವರು ಅದಿಲಾಬಾದ್ ಜಿಲ್ಲೆಯ, ಜೈಪುರದಲ್ಲಿ ಸಿಂಗರೆಣಿ ಕಲ್ಲಿದ್ದಲ 1200 ಮೆ.ವ್ಯಾ. ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಜನರ ಆಶೋತ್ತರಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ಪ್ರಶಂಸಿಸಿದರು. ದೇಶದ ಅಭಿವೃದ್ಧಿಗೆ ಸಹಕಾರ ಒಕ್ಕೂಟ ವ್ಯವಸ್ಥೆಗಿಂತ ಮತ್ತೊಂದಿಲ್ಲ ಎಂದ ಪ್ರಧಾನಿ, ಈ ಉದ್ದೇಶಕ್ಕಾಗಿ ರಾಜ್ಯಗಳು ಮತ್ತು ಕೇಂದ್ರ ಒಗ್ಗೂಡಿ ದುಡಿಯುತ್ತಿವೆ ಎಂದರು.

ರಾಜ್ಯದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡಲು ಭಗೀರಥ ಅಭಿಯಾನ ಆರಂಭಿಸಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಯಾವ ಯಾವಾಗ ರಾಜ್ಯದ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ ರಾವ್ ಅವರು ತಮ್ಮನ್ನು ಭೇಟಿ ಮಾಡಿದ್ದಾರೋ ಆಗೆಲ್ಲ ರಾಜ್ಯದ ಅಭಿವೃದ್ಧಿ ಮತ್ತು ನೀರಿನ ಕುರಿತ ವಿಚಾರಗಳ ಬಗ್ಗೆ ಚರ್ಚಿಸಿದ್ದಾಗಿ ಹೇಳಿದರು. ನೀರಿನ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಿ, ಪ್ರತಿಯೊಬ್ಬ ನಾಗರಿಕರೂ ನೀರನ್ನು ಸಂರಕ್ಷಿಸಬೇಕು ಎಂದು ಹೇಳಿದರು.

ಹೊಸ ರೈಲು ಮಾರ್ಗದ ಶಂಕುಸ್ಥಾಪನೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು, ಹಲವು ದಿನಗಳಿಂದ ಬಾಕಿ ಇದ್ದ ಜನರ ಬೇಡಿಕೆ ಈಗ ಪೂರ್ಣವಾಗುತ್ತಿದೆ ಎಂದರು. ಇನ್ನು ರಸಗೊಬ್ಬರ ಕಾರ್ಖಾನೆ ರೈತರಿಗೆ ನೆರವಾಗಲಿದೆ ಎಂದರು. ಅವರು ಇಂಧನ ವಲಯದ ಸುಧಾರಣೆಗಳು, ನೀರಾವರಿ ಮತ್ತು ಆರ್ಥಿಕ ಪ್ರಗತಿಯನ್ನು ಹೇಗೆ ರೈಲು ಸಂಪರ್ಕಕ್ಕೆ ಹೊಂದಿಸಬಹುದು ಎಂಬ ಬಗ್ಗೆ ಮಾತನಾಡಿದರು.

ಪ್ರಧಾನಮಂತ್ರಿಯವರು, ನಕಲಿ ಗೋ ರಕ್ಷಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕರೆ ನೀಡಿದರು ಮತ್ತು ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಆಗ್ರಹಿದರು.

****

AD/HS