Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಗವಾನ್ ಮಹಾವೀರ ಜಯಂತಿಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾವೀರ ಜಯಂತಿಯ ಸಂದರ್ಭದಲ್ಲಿ ಭಗವಾನ್ ಮಹಾವೀರರಿಗೆ ಗೌರವ ನಮನ ಸಲ್ಲಿಸಿದರು. ಭಗವಾನ್ ಮಹಾವೀರರು ಯಾವಾಗಲೂ ಅಹಿಂಸೆ, ಸತ್ಯ ಮತ್ತು ಸಹಾನುಭೂತಿಗೆ ಒತ್ತು ನೀಡಿದ್ದರು ಮತ್ತು ಅವರ ಆದರ್ಶಗಳು ವಿಶ್ವದಾದ್ಯಂತ ಅಸಂಖ್ಯಾತ ಜನರಿಗೆ ಶಕ್ತಿಯನ್ನು ನೀಡುತ್ತವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಕಳೆದ ವರ್ಷ ಸರ್ಕಾರವು ಪ್ರಾಕೃತ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿತು, ಈ ನಿರ್ಧಾರವು ಸಾಕಷ್ಟು ಮೆಚ್ಚುಗೆಯನ್ನು ಪಡೆಯಿತು ಎಂದು ಪ್ರಧಾನಿ ಹೇಳಿದರು.

ಈ ಸಂಬಂಧ ಎಕ್ಸ್ ಖಾತೆಯ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;

“ಅಹಿಂಸೆ, ಸತ್ಯ ಮತ್ತು ಸಹಾನುಭೂತಿಗೆ ಯಾವಾಗಲೂ ಒತ್ತು ನೀಡಿದ ಭಗವಾನ್ ಮಹಾವೀರರಿಗೆ ನಾವೆಲ್ಲರೂ ತಲೆಬಾಗುತ್ತೇವೆ. ಅವರ ಆದರ್ಶಗಳು ಪ್ರಪಂಚದಾದ್ಯಂತ ಅಸಂಖ್ಯಾತ ಜನರಿಗೆ ಶಕ್ತಿಯನ್ನು ನೀಡುತ್ತವೆ. ಅವರ ಬೋಧನೆಗಳನ್ನು ಜೈನ ಸಮುದಾಯವು ಸುಂದರವಾಗಿ ಸಂರಕ್ಷಿಸಿದೆ ಮತ್ತು ಜನಪ್ರಿಯಗೊಳಿಸಿದೆ. ಭಗವಾನ್ ಮಹಾವೀರರಿಂದ ಪ್ರೇರಿತರಾಗಿ, ಅವರು ಜೀವನದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡಿದ್ದಾರೆ.

ಭಗವಾನ್ ಮಹಾವೀರರ ದೂರದೃಷ್ಟಿಯನ್ನು ಈಡೇರಿಸಲು ನಮ್ಮ ಸರ್ಕಾರ ಯಾವಾಗಲೂ ಕೆಲಸ ಮಾಡುತ್ತದೆ. ಕಳೆದ ವರ್ಷ, ನಾವು ಪ್ರಾಕೃತಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿದ್ದೇವೆ, ಈ ನಿರ್ಧಾರವು ಸಾಕಷ್ಟು ಮೆಚ್ಚುಗೆಯನ್ನು ಪಡೆಯಿತು,’’ ಎಂದು ಹೇಳಿದ್ದಾರೆ.

 

 

*****