ಸೌದಿ ಅರೇಬಿಯಾ ಸಾಮ್ರಾಜ್ಯದ ಹಜ್ ಖಾತೆ ಸಚಿವರಾದ ಮತ್ತು ಉಮ್ರಾಹ್ ಗೌರವಾನ್ವಿತ ತೌಫಿಕ್ ಬಿನ್ ಫೌಜಾನ್ ಅಲ್-ರಬಿಯಾ ಅವರೊಂದಿಗೆ ಸಹಿ ಹಾಕಲಾದ ಹಜ್ ಒಪ್ಪಂದ 2025 ನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಈ ಒಪ್ಪಂದವು ಭಾರತದ ಹಜ್ ಯಾತ್ರಿಕರಿಗೆ ಸಂತಸದ ಸುದ್ದಿಯಾಗಿದೆ ಎಂದು ಹೇಳಿದರು. “ಭಕ್ತರಿಗೆ ಉತ್ತಮ ಸೌಕರ್ಯ ಹೊಂದಿರುವ ತೀರ್ಥಯಾತ್ರೆ ಅನುಭವಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಕೇಂದ್ರ ಸಚಿವರಾದ ಕಿರಣ್ ರಿಜಿಜು ಅವರ ಎಕ್ಸ್ ಖಾತೆ ಪೋಸ್ಟ್ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಪೋಸ್ಟ್ ಮಾಡಿ:
“ಭಾರತದ ಹಜ್ ಯಾತ್ರಿಕರಿಗೆ ಇದು ಅದ್ಭುತ ಸುದ್ದಿ. ಭಕ್ತರಿಗೆ ಉತ್ತಮ ತೀರ್ಥಯಾತ್ರೆ ಅನುಭವಗಳನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಬರೆದುಕೊಂಡಿದ್ದಾರೆ.
*****
I welcome this agreement, which is wonderful news for Hajj pilgrims from India. Our Government is committed to ensuring improved pilgrimage experiences for devotees. https://t.co/oybHXdyBpK
— Narendra Modi (@narendramodi) January 13, 2025