Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರೆಜಿಲ್ ನ ಪ್ರಸಿದ್ಧ ಫುಟ್ ಬಾಲ್ ಆಟಗಾರ ಪೀಲೆ ಅವರ ನಿಧನಕ್ಕೆ ಪ್ರಧಾನಮಂತ್ರಿ ಅವರ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬ್ರೆಜಿಲ್ ನ ಪ್ರಸಿದ್ಧ ಫುಟ್ ಬಾಲ್ ಆಟಗಾರ ಪೀಲೆ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪೀಲೆ ಅವರ ನಿಧನವು ಕ್ರೀಡಾ ಜಗತ್ತಿನಲ್ಲಿ ಸರಿಪಡಿಸಲಾಗದ ಶೂನ್ಯವನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

“ಪೀಲೆ ಅವರ ನಿಧನವು ಕ್ರೀಡಾ ಜಗತ್ತಿನಲ್ಲಿ ಸರಿಪಡಿಸಲಾಗದ ಶೂನ್ಯವನ್ನು ಉಳಿಸಿದೆ. ಜಾಗತಿಕ ಫುಟ್ ಬಾಲ್ ಸೂಪರ್ ಸ್ಟಾರ್ ಆಗಿರುವ ಅವರ ಜನಪ್ರಿಯತೆ ಎಲ್ಲೆ ಮೀರಿದೆ. ಅವರ ಅಸಾಧಾರಣ ಕ್ರೀಡಾ ಪ್ರದರ್ಶನಗಳು ಮತ್ತು ಯಶಸ್ಸು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ.”

*****