Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರೆಜಿಲ್ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ

ಬ್ರೆಜಿಲ್ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ


ನವದೆಹಲಿಯಲ್ಲಿ 10 ಸೆಪ್ಟೆಂಬರ್ 2023 ರಂದು ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಬ್ರೆಜಿಲ್ ದೇಶದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರ ಜೊತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮೋದಿ ಅವರು ದ್ವಿಪಕ್ಷೀಯ ಸಭೆ ನಡೆಸಿದರು.

ಭಾರತದ ಜಿ20 ಅಧ್ಯಕ್ಷೀಯತೆಯ ಯಶಸ್ಸಿಗೆ ಬ್ರೆಜಿಲ್ ಅಧ್ಯಕ್ಷ ಶ್ರೀ ಲೂಲಾ ಅವರು ಪ್ರಧಾನಮಂತ್ರಿಯವರನ್ನು ಅಭಿನಂದಿಸಿದರು. ಮುಂದಿನ ವರ್ಷ ಬ್ರೆಜಿಲ್ ದೇಶವು ಜಿ20  ಅಧ್ಯಕ್ಷತೆ ವಹಿಸಲಿದ್ದು, ಇದಕ್ಕಾಗಿ ಅಧ್ಯಕ್ಷ ಶ್ರೀ ಲೂಲಾ ಅವರಿಗೆ ಪ್ರಧಾನಮಂತ್ರಿ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು ಮತ್ತು ಅವರಿಗೆ ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.

ಜೈವಿಕ ಇಂಧನಗಳು, ಔಷಧಗಳು, ಕೃಷಿ ಆಧಾರಿತ ಕೈಗಾರಿಕೆಗಳು, ಬಾಹ್ಯಾಕಾಶ ಮತ್ತು ವಾಯುಯಾನದಲ್ಲಿ ಸಹಕಾರ ಸೇರಿದಂತೆ ಭಾರತ – ಬ್ರೆಜಿಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚೆಗಳು ನಡೆದವು.

ಸಭೆಯ ಸಮಾರೋಪದಲ್ಲಿ ಜಂಟಿ ಹೇಳಿಕೆ ನೀಡಲಾಯಿತು.

***