Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರೆಜಿಲ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಮಾಧ್ಯಮ ಹೇಳಿಕೆ

ಬ್ರೆಜಿಲ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಮಾಧ್ಯಮ ಹೇಳಿಕೆ


ಘನತೆವೆತ್ತ ಅಧ್ಯಕ್ಷ ಮೈಖೆಲ್ ಟೆಮೆರ್ ಅವರೇ, ಮಾಧ್ಯಮದ ಸದಸ್ಯರೇ ಮತ್ತು ಗೆಳೆಯರೇ,

ನಾನು ಅಧ್ಯಕ್ಷ ಮೈಖೆಲ್ ಟೆಮೆರ್ ಅವರನ್ನು ಭಾರತಕ್ಕೆ ಸ್ವಾಗತಿಸುವ ಗೌರವ ಪಡೆದಿದ್ದೇನೆ. ಗೋವಾ ಪೋರ್ಚುಗೀಸ್ ಪರಂಪರೆಯ ಸಾಮಾನ್ಯ ಸಾಂಸ್ಕೃತಿಕತೆ ಹೊಂದಿರುವುದು ಅವರ ಪ್ರಥಮ ಭಾರತ ಭೇಟಿಯ ಭಾಗವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಬ್ರೆಜಿಲ್ ಮತ್ತು ಭಾರತ ಭೌಗೋಳಿಕವಾಗಿ ಪ್ರತ್ಯೇಕವಾಗಿದ್ದರೂ, ಪ್ರಜಾಪ್ರಭುತ್ವದ ಸಮಾನ ಮೌಲ್ಯಗಳು, ಕಾನೂನು ಆಡಳಿತ ಮತ್ತು ಅಭಿವೃದ್ಧಿಯ ವಿನಿಮಯಿತ ಆಶಯಗಳು, ಶಾಂತಿ ಮತ್ತು ಸಮೃದ್ಧಿ ಸಂಪರ್ಕಿತ ಸ್ವಾಭಾವಿಕ ಪಾಲುದಾರ ರಾಷ್ಟ್ರಗಳಾಗಿವೆ. ಎತ್ತರದ ಸಾಂವಿಧಾನಿಕ ತಜ್ಞರಾಗಿ ಅಧ್ಯಕ್ಷ ಟೆಮೆರ್ ಅವರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಶ್ಲಾಘಿಸುತ್ತಾರೆ. ಎರಡೂ ದೇಶಗಳ ನಡುವಿನ ನಮ್ಮ ದಶಕಗಳ ಕಾರ್ಯತಂತ್ರಾತ್ಮಕ ಪಾಲುದಾರಿಕೆಯಲ್ಲಿ ಈ ಭೇಟಿ ಮಹತ್ವದ ಸ್ಥಾನ ಪಡೆಯುತ್ತದೆ. ಈ ಹತ್ತು ವರ್ಷಗಳಲ್ಲಿ ಜಗತ್ತು ಬದಲಾಗಿದೆ. ಭಾರತ ಮತ್ತು ಬ್ರೆಜಿಲ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ಉತ್ತಮವಾಗಿ ಬೆಳೆದಿದೆ. ನಾವು ಎಲ್ಲ ಹಂತದಲ್ಲೂ ಮಾತುಕತೆ ಹೆಚ್ಚಿಸಿದ್ದೇವೆ. ನಾವು ನಮ್ಮ ಸಮಾನ ಅನ್ವೇಷಣೆಗಳು ಮತ್ತು ಪ್ರಯತ್ನಗಳನ್ನು ಬೆಂಬಲಿಸಲು ಅಂತಾರಾಷ್ಟ್ರೀಯ ಸ್ವರೂಪ ನೀಡಲು ಒಗ್ಗೂಡಿದ್ದೇವೆ. ನಾನು 2014ರಲ್ಲಿ ನೀಡಿದ್ದ ಬ್ರೆಜಿಲ್ ಭೇಟಿಯನ್ನು ಸ್ಮರಿಸುತ್ತೇನೆ. ನಾನು ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಏಷ್ಯಾದ ಹೊರಗೆ ಭೇಟಿ ನೀಡಿದ ಪ್ರಥಮ ರಾಷ್ಟ್ರ ಬ್ರೆಜಿಲ್. ನಾನು ಬ್ರೆಜಿಲ್ ನಲ್ಲಿ ಭಾರತದ ಬಗ್ಗೆ ಇರುವ ಸ್ನೇಹದ ಪೂರ್ಣ ಆತ್ಮೀಯತೆಯನ್ನು ಅನುಭವಿಸಿದ್ದೇನೆ. ಘನತೆವೆತ್ತರೆ, ನೀವು ನಿಮ್ಮ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡ ತರುವಾಯ ಲ್ಯಾಟಿನ್ ಅಮೇರಿಕಾದ ಹೊರಗೆ ದ್ವಿಪಕ್ಷೀಯ ಭೇಟಿಗೆ ಆಯ್ಕೆ ಮಾಡಿಕೊಂಡಿರುವ ಪ್ರಥಮ ರಾಷ್ಟ್ರವೂ ಭಾರತವಾಗಿದೆ. ನಮ್ಮ ದ್ವಿಪಕ್ಷೀಯ ಬಾಂಧವ್ಯಕ್ಕೆ ನಮ್ಮ ನೀಡುವ ಮಹತ್ವವನ್ನು ಈ ಭೇಟಿ ಪ್ರತಿಬಿಂಬಿಸುತ್ತದೆ. ಇಂದು ಬೆಳಗ್ಗೆ ನಾವು ನಡೆಸಿದ ಫಲಪ್ರದ ಮಾತುಕತೆಯಲ್ಲೂ ಇದು ಕಂಡುಬಂದಿದೆ.
ಸ್ನೇಹಿತರೆ,
ಅಧ್ಯಕ್ಷ ಟೆಮೆರ್ ಮತ್ತು ನಾನು, ನಮ್ಮ ದ್ವಿಪಕ್ಷೀಯ ಸಹಕಾರದ ಪೂರ್ಣ ಶ್ರೇಣಿಯನ್ನು ಪರಾಮರ್ಶಿಸಿದ್ದೇವೆ. ಹೆಚ್ಚು ಸಂಭಾವ್ಯ ಸೂಚ್ಯವಾಗಿ ನಾವು ನಮ್ಮ ಕಾರ್ಯಕ್ರಮಗಳನ್ನು ಚುರುಕುಗೊಳಿಸಲು ಒಪ್ಪಿಕೊಂಡಿದ್ದೇವೆ. ಇದು ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಯನ್ನು ಮರು ಜಾರಿ ಮಾಡುವ ನಮ್ಮ ಪರಸ್ಪರರ ಆಶಯದ ನಿಟ್ಟಿನಲ್ಲಿದೆ. ಲ್ಯಾಟಿನ್ ಅಮೆರಿಕಾದಲ್ಲಿ ಬ್ರೆಜಿಲ್ ನಮ್ಮ ಅತ್ಯಂತ ಮಹತ್ವದ ಆರ್ಥಿಕ ಪಾಲುದಾರ ರಾಷ್ಟ್ರವಾಗಿದೆ.  ಭಾರತ ಮತ್ತು ಬ್ರೆಜಿಲ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಆಖೈರುಗೊಳಿಸಿವೆ ಎಂದು ತಿಳಿಸಲು ನಾನು ಹರ್ಷಿಸುತ್ತೇನೆ. ಇದು ನಮ್ಮ ದ್ವಿಪಕ್ಷೀಯ ವಾಣಿಜ್ಯ ಮತ್ತು ಹೂಡಿಕೆಯ ಸಂಪರ್ಕವನ್ನು ಹೆಚ್ಚಿಸಲು ತೀರಾ ಅಗತ್ಯವಾದ ಚಾಲನೆಯನ್ನು ನೀಡುತ್ತದೆ. ಬ್ರೆಜಿಲ್ ನಲ್ಲಿ ದೇಶೀಯ ಆರ್ಥಿಕ ಕಾರ್ಯಕ್ರಮವನ್ನು ಪುನಶ್ಚೇತನಗೊಳಿಸುವ ಅಧ್ಯಕ್ಷ ಟೆಮೆರ್ ಅವರ ಆಧ್ಯತೆಯನ್ನು ನಾವು ಗುರುತಿಸಿದ್ದೇವೆ. ಈ ನಿಟ್ಟಿನಲ್ಲಿ ಭಾರತ, ಮೌಲ್ಯಯುತ ಪಾಲುದಾರವಾಗಬಲ್ಲದಾಗಿದೆ. ನಾವು ಬ್ರೆಜಿಲ್ ನ ಕಂಪನಿಗಳು ಭಾರತದಲ್ಲಿ ಬಂದು ಹೂಡಿಕೆ ಮಾಡುವಂತೆ ಮತ್ತು ದೀರ್ಘಕಾಲೀನ ವಾಣಿಜ್ಯ ಪಾಲುದಾರರಾಗುವಂತೆ ಆಹ್ವಾನಿಸುತ್ತೇನೆ. ನಾನು ಮತ್ತು ಅಧ್ಯಕ್ಷ ಟೆಮೆರ್ ಅವರು ನೇರವಾಗಿ ಅವರಿಂದಲೇ ಕೇಳಲು ಈಗಷ್ಟೇ ನಮ್ಮ ಸಿ.ಇ.ಓ.ಗಳನ್ನು ಭೇಟಿ ಮಾಡಿದ್ದೇವೆ. ಸೂಕ್ತವಾದ ಸಹಯೋಗ ಮುಂದುವರಿಸಲು ಅವರು ಕೈಗೊಂಡಿರುವ ಕ್ರಮಗಳಿಂದ ನಾನು ಉತ್ತೇಜಿತನಾಗಿದ್ದೇನೆ.

ನಾವು ಇದನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ.

ನಾನು, ಭಾರತೀಯ ಉತ್ಪನ್ನಗಳಿಗೆ ಮತ್ತು ಕಂಪನಿಗಳಿಗೆ ಹೂಡಿಕೆಯ ಅವಕಾಶ ಮತ್ತು ಹೆಚ್ಚಿನ ಮಾರುಕಟ್ಟೆ ಪ್ರವೇಶಕ್ಕಾಗಿ ಅಧ್ಯಕ್ಷ ಟೆಮೆರ್ ಅವರ ಬೆಂಬಲವನ್ನು ಕೋರಿದ್ದೇನೆ. ಅಧ್ಯಕ್ಷ ಟೆಮೆರ್ ಅವರ ಧನಾತ್ಮಕ ಪರಿಗಣನೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಭೇಟಿಯ ವೇಳೆ ಔಷಧ ನಿಯಂತ್ರಣ, ಕೃಷಿ ಸಂಶೋಧನೆ ಮತ್ತು ಸೈಬರ್ ಭದ್ರತೆ ವಿಚಾರಗಳಂಥ ಹೊಸ ಕ್ಷೇತ್ರಗಳಲ್ಲಿ ನಾವು ಪ್ರಗತಿಯನ್ನು ಸಾಧಿಸಿದ್ದೇವೆ. ಅಧ್ಯಕ್ಷ ಟೆಮೆರ್ ಮತ್ತು ನಾನು, ಪ್ರಮುಖ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ಸಮನ್ವಯ ಬಲಪಡಿಸಬೇಕೆಂದು ನಿರ್ಧರಿಸಿದ್ದೇವೆ. ಇದು ನಮ್ಮ ಸ್ಥಾನ ಮತ್ತು ನಿಲುವಿನಲ್ಲಿ ಬಹಳ ಸಮಾನವಾಗಿದೆ. ನಾವು ವಿಶ್ವಸಂಸ್ಥೆ, ಜಿ 20, ಡಬ್ಲ್ಯುಟಿಓ, ಬ್ರಿಕ್ಸ್, ಐಬಿಎಸ್ಎ ಮತ್ತು ಇತರ ಮಹತ್ವದ ವೇದಿಕೆಗಳಲ್ಲಿ ಆಪ್ತವಾಗಿ ಶ್ರಮಿಸಲಿದ್ದೇವೆ. 
ಘನತೆವೆತ್ತರೆ,
ಭಯೋತ್ಪಾದನೆ ಹತ್ತಿಕ್ಕುವ ಭಾರತದ ಕ್ರಮಕ್ಕೆ ಬ್ರೆಜಿಲ್ ನೀಡಿರುವ ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ. ಈ ಪಿಡುಗಿನ ವಿರುದ್ಧ ಹೋರಾಟ ನಡೆಸಲು ಇಡೀ ವಿಶ್ವ ಯಾವುದೇ ತಾರತಮ್ಯ ಅಥವಾ ವ್ಯತ್ಯಾಸ ತೋರದೆ ಒಗ್ಗೂಡಬೇಕು ಎಂಬುದನ್ನು ನಾವು ಒಪ್ಪಿದ್ದೇವೆ. ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆ (ಸಿಸಿಐಟಿ) ವಿರುದ್ಧ  ಶೀಘ್ರ ಸಮಗ್ರ ನಿರ್ಣಯ ಅಳವಡಿಸಿಕೊಳ್ಳಲು ನಾವು ಬ್ರೆಜಿಲ್ ಜೊತೆಯಲ್ಲಿ ಮಹತ್ವದ ಪಾಲುದಾರನಾಗಿ ಕೆಲಸ ಮಾಡುತ್ತೇವೆ. ಪರಮಾಣು ಪೂರೈಕೆ ಗುಂಪಿನಲ್ಲಿ ಸದಸ್ಯತ್ವ ಹೊಂದುವ ಭಾರತದ ಆಶಯವನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಬ್ರೆಜಿಲ್ ಗೆ ನಾವು ಧನ್ಯವಾದ ಅರ್ಪಿಸುತ್ತೇವೆ. 
ಘನತೆವೆತ್ತರೆ ಮತ್ತು ಸ್ನೇಹಿತರೇ,
ಭಾರತ ಮತ್ತು ಬ್ರೆಜಿಲ್ ನಡುವಿನ ಪಾಲುದಾರಿಕೆ ದ್ವಿಪಕ್ಷೀಯವಾಗಿ ಹಾಗೂ ಬಹುಪಕ್ಷೀಯವಾದ ಅವಕಾಶಗಳಿಂದ ತುಂಬಿದ್ದು, ನಾವು ಅದನ್ನು ಪಡೆಯಲು ಉತ್ಸುಕರಾಗಿದ್ದೇವೆ. ಅಧ್ಯಕ್ಷ ಟೆಮೆರ್ ಅವರ ಭೇಟಿ, ಇದನ್ನು ಸಾಧಿಸಲು ಒಂದು ನಕ್ಷೆ ರೂಪಿಸಲು ನಮಗೆ ಅವಕಾಶ ನೀಡಿದೆ. ಅವರು ಪೋರ್ಚುಗೀಸ್ ನಲ್ಲಿ ಹೇಳುವಂತೆ “A uniao faz a forca” – ‘ನಮ್ಮ ಒಗ್ಗಟ್ಟು ನಮ್ಮನ್ನು ಬಲಶಾಲಿಯಾಗಿ ಮಾಡುತ್ತದೆ’. 

ಧನ್ಯವಾದಗಳು

AKT/HS