Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರೂನಿಯಲ್ಲಿ ಭಾರತೀಯ ಹೈಕಮಿಷನ್ ನ ಹೊಸ ಚಾನ್ಸರಿ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

ಬ್ರೂನಿಯಲ್ಲಿ ಭಾರತೀಯ ಹೈಕಮಿಷನ್ ನ ಹೊಸ ಚಾನ್ಸರಿ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬ್ರೂನಿಯಲ್ಲಿ ಭಾರತೀಯ ಹೈಕಮಿಷನ್ ನ ಹೊಸ ಚಾನ್ಸರಿ ಕಟ್ಟಡವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ದೀಪ ಬೆಳಗಿಸಿ, ಫಲಕ ಅನಾವರಣ ಮಾಡಿದರು.

ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ಉಭಯ ದೇಶಗಳ ನಡುವಿನ ಜೀವಂತ ಸೇತುವೆಯಾಗಿ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಭಾರತೀಯ ಸಮುದಾಯದ ಕೊಡುಗೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಬ್ರೂನಿಗೆ ಆಗಮಿಸಿದ ಭಾರತೀಯರ ಮೊದಲ ತಂಡವು 1920ರ ದಶಕದಲ್ಲಿ ತೈಲದ ಆವಿಷ್ಕಾರವನ್ನು ಪ್ರಾರಂಭಿಸಿತು. ಪ್ರಸ್ತುತ, ಸುಮಾರು 14,000 ಭಾರತೀಯರು ಬ್ರೂನಿಯಲ್ಲಿ ವಾಸಿಸುತ್ತಿದ್ದಾರೆ. ಬ್ರೂನಿಯ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಕ್ಷೇತ್ರಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಭಾರತೀಯ ವೈದ್ಯರು ಮತ್ತು ಶಿಕ್ಷಕರ ಕೊಡುಗೆಯನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು.

ಚಾನ್ಸರಿ ಕಟ್ಟಡ ಸಂಕೀರ್ಣವು ಭಾರತೀಯತೆಯ ಆಳವಾದ ಪ್ರಜ್ಞೆಯನ್ನು ಸಾಕಾರಗೊಳಿಸುತ್ತದೆ, ಸಾಂಪ್ರದಾಯಿಕ ಲಕ್ಷಣಗಳು ಮತ್ತು ಸೊಂಪಾದ ಮರಗಳನ್ನು ಅದ್ಭುತವಾಗಿ ಇಲ್ಲಿ ಬೆಳೆಸಲಾಗಿದೆ. ಸೊಗಸಾದ ಕ್ಲಾಡಿಂಗ್ ಗಳು ಮತ್ತು ಬಾಳಿಕೆ ಬರುವ ಕೋಟಾ ಕಲ್ಲುಗಳ ಬಳಕೆಯು ಉತ್ಕೃಷ್ಟ ಮತ್ತು ಸಮಕಾಲೀನ ಅಂಶಗಳನ್ನು ಸಾಮರಸ್ಯದಿಂದ ಬೆರೆಸುವ ಮೂಲಕ ಅದರ ಸೌಂದರ್ಯದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ವಿನ್ಯಾಸವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಗೌರವ ಸಲ್ಲಿಸುವುದಲ್ಲದೆ ಶಾಂತಿಯುತ ಮತ್ತು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತದೆ.

 

*****