Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೋಯಿಂಗ್‌ ಕಂಪೆನಿ ಅಧ್ಯಕ್ಷರು ಹಾಗೂ ಸಿಇಒ ಡೇವಿಡ್ ಎಲ್. ಕಾಲೌನ್ ಅವರೊಂದಿಗೆ ಪ್ರಧಾನ ಮಂತ್ರಿಗಳ ಸಭೆ

ಬೋಯಿಂಗ್‌ ಕಂಪೆನಿ ಅಧ್ಯಕ್ಷರು ಹಾಗೂ ಸಿಇಒ ಡೇವಿಡ್ ಎಲ್. ಕಾಲೌನ್ ಅವರೊಂದಿಗೆ ಪ್ರಧಾನ ಮಂತ್ರಿಗಳ ಸಭೆ


ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ ಜೂನ್ 23 ರಂದು ವಾಷಿಂಗ್ಟನ್ ಡಿಸಿಯಲ್ಲಿ ಬೋಯಿಂಗ್ ಕಂಪೆನಿ ಅಧ್ಯಕ್ಷರು ಹಾಗೂ ಸಿಇಒ ಶ್ರೀ ಡೇವಿಡ್ ಎಲ್. ಕಾಲೌನ್ ಅವರನ್ನು ಭೇಟಿಯಾದರು.

ಪ್ರಧಾನ ಮಂತ್ರಿಗಳು  ಹಾಗೂ  ಶ್ರೀ ಕಾಲೌನ್ ಅವರು  ಭಾರತದಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಬೋಯಿಂಗ್‌ ವಹಿಸಿರುವ ಪ್ರಧಾನ ಪಾತ್ರ ಜತೆಗೆ ವಿಮಾನಗಳ‌ ನಿರ್ವಹಣೆ, ದುರಸ್ತಿ ಮತ್ತು ಸಮಗ್ರ ನಿರ್ವಹಣೆ ಕುರಿತಂತೆಯೂ ಚರ್ಚಿಸಿದರು. ಇದೇ ವೇಳೆ ಪ್ರಧಾನ ಮಂತ್ರಿಗಳು ಭಾರತದಲ್ಲಿ ಬಾಹ್ಯಾಕಾಶ ಸಂಬಂಧಿ ಉತ್ಪಾದನಾ ವಲಯದಲ್ಲೂ ಹೂಡಿಕೆ ಮಾಡುವಂತೆ ಬೋಯಿಂಗ್ ಕಂಪೆನಿಗೆ ಆಹ್ವಾನ ನೀಡಿದರು.

*****