Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೆಲ್ಜಿಯಂ ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಬೆಲ್ಜಿಯಂ ಪ್ರಧಾನ ಮಂತ್ರಿ ಶ್ರೀ ಅಲೆಕ್ಸಾಂಡರ್ ಡಿ ಕ್ರೂ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಬ್ರಸೆಲ್ಸ್‌ನಲ್ಲಿ ಇತ್ತೀಚೆಗೆ ನಡೆದ ಮೊದಲ ಪರಮಾಣು ಶಕ್ತಿ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರು ಪಿಎಂ ಅಲೆಗ್ಸಾಂಡರ್ ಡಿ ಕ್ರೂ ಅವರನ್ನು ಅಭಿನಂದಿಸಿದರು.

ಉಭಯ ನಾಯಕರು ಭಾರತ ಮತ್ತು ಬೆಲ್ಜಿಯಂ ನಡುವಿನ ಅತ್ಯುತ್ತಮ ಸಂಬಂಧಗಳ ಪರಾಮರ್ಶೆ ನಡೆಸಿದರು. ವ್ಯಾಪಾರ, ಹೂಡಿಕೆ, ಸ್ವಚ್ಛ ತಂತ್ರಜ್ಞಾನ, ಸೆಮಿಕಂಡಕ್ಟರ್, ಫಾರ್ಮಾಸ್ಯುಟಿಕಲ್ಸ್, ಹಸಿರು ಹೈಡ್ರೋಜನ್, ಐಟಿ, ರಕ್ಷಣೆ, ಬಂದರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗೋಪಾಯಗಳ ಕುರಿತು ಅವರು ಚರ್ಚಿಸಿದರು.

ಐರೋಪ್ಯ ಒಕ್ಕೂಟ ಮಂಡಳಿಗೆ ನಡೆಯುತ್ತಿರುವ ಬೆಲ್ಜಿಯಂ ಅಧ್ಯಕ್ಷತೆ ಅಡಿ, ಭಾರತ – ಐರೋಪ್ಯ ಒಕ್ಕೂಟ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ಬದ್ಧತೆಯನ್ನು ಉಭಯ ನಾಯಕರು ದೃಢಪಡಿಸಿದರು.

ಅವರು ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪಶ್ಚಿಮ ಏಷ್ಯಾ ಪ್ರದೇಶ ಮತ್ತು ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಆದಷ್ಟು ಬೇಗ ಮರುಸ್ಥಾಪಿಸಲು ಅಗತ್ಯವಾದ ಸಹಕಾರ ಮತ್ತು ಬೆಂಬಲ ಹೆಚ್ಚಿಸಲು ಇಬ್ಬರೂ ನಾಯಕರು  ಒಪ್ಪಿಕೊಂಡರು.

ನಿರಂತರ ಸಂಪರ್ಕ ಸಾಧಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.

*****