ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬುದ್ಧ ಪೌರ್ಣಿಮೆ ಕುರಿತ ವರ್ಚುವಲ್ ವೈಶಾಖ ಜಾಗತಿಕ ಆಚರಣೆಯ ವೇಳೆ ಅಂದರೆ 2021ರ ಮೇ 26ರಂದು ಸುಮಾರು ಬೆಳಗ್ಗೆ 09.45ಕ್ಕೆ ಪ್ರಧಾನ ಭಾಷಣ ಮಾಡಲಿದ್ದಾರೆ.
ಸಂಸ್ಕೃತಿ ಸಚಿವಾಲಯವು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟ (ಐ.ಬಿ.ಸಿ.) ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ವಿಶ್ವಾದ್ಯಂತದ ಎಲ್ಲ ಬೌದ್ಧ ಸಂಘಗಳ ಸರ್ವೋನ್ನತ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ವಿಶ್ವದ 50 ಪ್ರಮುಖ ಬೌದ್ಧ ಧಾರ್ಮಿಕ ನಾಯಕರು ಈ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
***