Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಿಹಾರ ದಿವಸದ ಅಂಗವಾಗಿ ಬಿಹಾರದ ಜನತೆಗೆ ಪ್ರಧಾನಮಂತ್ರಿ ಶುಭಾಶಯ


ಬಿಹಾರ ದಿವಸದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಜನರಿಗೆ ಶುಭಾಶಯ ಕೋರಿದ್ದಾರೆ. ಬಿಹಾರದ ಶ್ರೀಮಂತ ಪರಂಪರೆ, ಭಾರತೀಯ ಇತಿಹಾಸಕ್ಕೆ ಅದರ ಕೊಡುಗೆ ಮತ್ತು ರಾಜ್ಯದ ಅಭಿವೃದ್ಧಿಗೆ ಚುರುಕು ನೀಡುವಲ್ಲಿ ಅಲ್ಲಿನ ಜನರ ಪಟ್ಟುಬಿಡದ ಪರಿಶ್ರಮವನ್ನು ಶ್ರೀ ಮೋದಿ ಅವರು ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ: 

“ವೀರರು ಮತ್ತು ಮಹಾನ್ ವ್ಯಕ್ತಿಗಳ ಪುಣ್ಯಭೂಮಿ ಬಿಹಾರದಲ್ಲಿನ ಎಲ್ಲಾ ಸಹೋದರ ಸಹೋದರಿಯರಿಗೆ ಬಿಹಾರ ದಿವಸದ ಶುಭಾಶಯಗಳು. ಭಾರತದ ಇತಿಹಾಸಕ್ಕೆ ಹೆಮ್ಮೆ ತಂದಿರುವ ಈ ರಾಜ್ಯವು ಇಂದು ತನ್ನ ಅಭಿವೃದ್ಧಿ ಪಯಣದ ಪ್ರಮುಖ ಘಟ್ಟದಲ್ಲಿ ಸಾಗುತ್ತಿದೆ. ಬಿಹಾರದ ಶ್ರಮಜೀವಿಗಳು ಮತ್ತು ಪ್ರತಿಭಾವಂತರು ಈ ದಿಸೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ಬಿಂದುವಾಗಿರುವ ಈ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಲಭ್ಯ ಅವಕಾಶಗಳ ಸದುಪಯೋಗ ಪಡೆದುಕೊಳ್ಳಲಿದ್ದೇವೆ.”

 

 

*****