Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಿಹಾರದ ನಳಂದ ಪುರಾತನ ಅವಶೇಷಗಳ ತಾಣಗಳಿಗೆ ಪ್ರಧಾನಮಂತ್ರಿ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ನಳಂದದಲ್ಲಿರುವ ಪುರಾತನ ಅವಶೇಷಗಳ ತಾಣಗಳಿಗೆ ಭೇಟಿ ನೀಡಿದರು. ಮೂಲ ನಳಂದಾ ವಿಶ್ವವಿದ್ಯಾಲಯವು ವಿಶ್ವದ ಮೊದಲ ವಸತಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ನಳಂದದ ಪುರಾತನ ಅವಶೇಷಗಳನ್ನು 2016 ರಲ್ಲಿ ವಿಶ್ವಸಂಸ್ಥೆಯ ಪಾರಂಪರಿಕ ತಾಣ ಎಂದು ಘೋಷಿಸಲಾಗಿತ್ತು. 

ಈ ಕುರಿತು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಇಂದು ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು;

“ನಳಂದದ ಉತ್ಖನನದ ಅವಶೇಷ ತಾಣಕ್ಕೆ ಭೇಟಿ ನೀಡಿದ್ದು ವಿಶೇಷ ಅನುಭವ ನೀಡಿತು. ಪ್ರಾಚೀನ ಜಗತ್ತಿನಲ್ಲಿ ಕಲಿಕೆಯ ಶ್ರೇಷ್ಠ ಸ್ಥಾನಗಳಲ್ಲಿ ಒಂದಾಗಿರುವ ಈ ಸ್ಥಳಕ್ಕೆ ಹೋಗಿದ್ದು ಸಿಕ್ಕಿದ ಒಂದು ಉತ್ತಮ ಅವಕಾಶವಾಗಿತ್ತು. ಈ ಸ್ಥಳವು ಒಮ್ಮೆ ಇಲ್ಲಿ ಪ್ರವರ್ಧಮಾನಕ್ಕೆ ಬಂದ ಪಾಂಡಿತ್ಯಪೂರ್ಣ ಗತಕಾಲದ ಆಳವಾದ ಸುಂದರ ನೋಟವನ್ನು ನಮಗೆ ನೀಡುತ್ತದೆ. ನಮ್ಮ ರಾಷ್ಟ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಬೌದ್ಧಿಕ ಮನೋಭಾವವನ್ನು ನಳಂದ ಸೃಷ್ಟಿಮಾಡಿದೆ.” ಎಂದು ಬರೆದುಕೊಂಡಿದ್ದಾರೆ.

 

 

*****