Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಾಬು ಜಗಜ್ಜೀವನ್ ರಾಂ ಅವರನ್ನು ಅವರ ಜನ್ಮ ದಿನಾಚರಣೆಯಂದು ಸ್ಮರಿಸಿದ ಪ್ರಧಾನ ಮಂತ್ರಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಬು ಜಗಜ್ಜೀವನ್ ರಾಂ ಅವರನ್ನು ಅವರ ಜನ್ಮದಿನಾಚರಣೆಯಂದು ಸ್ಮರಿಸಿಕೊಂಡು ಗೌರವಾರ್ಪಣೆ ಮಾಡಿದರು.

“ ಅವರು ಸ್ವಯಂ ಪ್ರಯತ್ನದಿಂದ ಉನ್ನತಿಗೇರಿದವರು ಮತ್ತು ಅವರ ಕೊಡುಗೆಗಳನ್ನು ಎಂದೂ ಮರೆಯಲಾಗದು . ಓರ್ವ ಸ್ವಾತಂತ್ರ್ಯ ಹೋರಾಟಗಾರರಾಗಿ ಮತು ಹಿರಿಯ ಆಡಳಿತಗಾರರಾಗಿ , ಭಾರತಕ್ಕೆ ಅವರ ಸೇವೆ ಅನನ್ಯವಾದುದು. ಬಾಬೂಜಿ ಅವರೊಬ್ಬ ನೈಜ ಪ್ರಜಾಪ್ರಭುತ್ವವಾದಿ. ಅವರು ಸರ್ವಾಧಿಕಾರಶಾಹಿಗೆ ಮಣಿದವರಲ್ಲ. ಭಾರತ ಅವರನ್ನು ಅವರ ಜಯಂತಿಯಂದು ನೆನೆಯುತ್ತದೆ “ ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.

***