ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬಾಕಿ ವೇತನ/ಕೂಲಿ ಮತ್ತು ನೌಕರರ ಇತರೆ ಬಾಕಿ ಪಾವತಿಗಾಗಿ ಎಚ್.ಎಂ.ಟಿ. ಲಿಮಿಟೆಡ್ ಗೆ ಆಯವ್ಯಯ ಬೆಂಬಲ ನೀಡಲು ತನ್ನ ಅನುಮೋದನೆ ನೀಡಿದೆ. 2007ರ ರಾಷ್ಟ್ರೀಯ ವೇತನ ಶ್ರೇಣಿಯಲ್ಲಿ ಆಕರ್ಷಕ ವಿಆರ್.ಎಸ್./ವಿ.ಎಸ್.ಎಸ್. ನೀಡುವ ಮೂಲಕ ಟ್ರ್ಯಾಕ್ಟರ್ ವಿಭಾಗವನ್ನು ಮುಚ್ಚಲು ಸಹ ತನ್ನ ಸಮ್ಮತಿ ಸೂಚಿಸಿದೆ.
ಬಾಕಿ ಸಂಬಳ, ವೇತನ ಮತ್ತು ಇತರ ಶಾಸನಾತ್ಮಕ ಬಾಕಿ, ವಿ.ಆರ್.ಎಸ್./ವಿ.ಎಸ್.ಎಸ್. ಎಕ್ಸ್ ಗ್ರೇಷಿಯಾ ಪಾವತಿ ಮತ್ತು ಸಾಲ ನೀಡಿದವರಿಗೆ ಮತ್ತು ಬ್ಯಾಂಕ್ ಇತ್ಯಾದಿಗಳಿಗೆ ಟ್ರ್ಯಾಕ್ಟರ್ ವಿಭಾಗದ ಋಣ ಪಾವತಿಗಾಗಿ 718.72 ಕೋಟಿ ರೂಪಾಯಿಗಳ ಹಣಕಾಸಿನ ಹೊರೆ ಇದರಿಂದ ಆಗಲಿದೆ.
ಅದೇ ರೀತಿ ಸಂಪುಟವು ಬೆಂಗಳೂರು ಮತ್ತು ಕೊಚ್ಚಿಯಲ್ಲಿರುವ ಎಚ್.ಎಂ.ಟಿ.ಗೆ ಸೇರಿದ ಆಯ್ದ ತುಂಡು ಭೂಮಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಳಕೆ ಮಾಡಲು ಇತರ ಸರ್ಕಾರಿ ಕಾಯಗಳಿಗೆ ವರ್ಗಾಯಿಸಲೂ ತನ್ನ ಅನುಮೋದನೆ ನೀಡಿದೆ.
ಹಿನ್ನೆಲೆ:
ಭಾರತ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವಾಲಯದ ಅಡಿಯಲ್ಲಿ ಎಚ್.ಎಂ.ಟಿ. ಲಿಮಿಟೆಡ್ ಅನ್ನುದೇಶದ ಕೈಗಾರಿಕಾ ಭವನ ನಿರ್ಮಾಣಕ್ಕಾಗಿ ಅಗತ್ಯವಾದ ಯಂತ್ರೋಪಕರಣಗಳ ಉತ್ಪಾದಿಸುವ ಗುರಿಯೊಂದಿಗೆ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಯಾಗಿ ಬೆಂಗಳೂರಿನಲ್ಲಿ 1953ರಲ್ಲಿ ಸ್ಥಾಪಿಸಲಾಯಿತು. ಎಚ್ಎಂಟಿ ದೇಶದಲ್ಲಿ ಎಂಜಿನಿಯರಿಂಗ್ ಮತ್ತು ಉತ್ಪಾದನಾ ಸೌಕರ್ಯಗಳ ವಿಕಾಸ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿತ್ತು. 1971ರಲ್ಲಿ ಹರಿಯಾಣದ ಪಿಂಜೋರೆಯಲ್ಲಿ ಎಚ್.ಎಂ.ಟಿ. ಟ್ರ್ಯಾಕ್ಟರ್ ತಯಾರಿಕೆ ಮಾಡುವ ಸಲುವಾಗಿ ಎಚ್.ಎಂ.ಟಿ.ಯ ಟ್ರ್ಯಾಕ್ಟರ್ ವಿಭಾಗ ಸ್ಥಾಪಿಸಲಾಯಿತು. ಉದಾರೀಕರಣದ ನಂತರದ ಆರ್ಥಿಕ ಪರಿಸರದಲ್ಲಿ, ಹೆಚ್ಚಿನ ವೆಚ್ಚ,ಅಂತಾರಾಷ್ಟ್ರೀಯ ಉತ್ಪಾದಕರ ಕಠಿಣ ಸ್ಪರ್ಧೆಯಿಂದಾಗಿ ಮತ್ತು ಆಮದು ಸಾಮಗ್ರಿಗಳು ಕಡಿಮೆ ದರಕ್ಕೆ ದೊರಕುವಂತಾದ ಹಿನ್ನೆಲೆಯಲ್ಲಿ ಕಂಪನಿಯ ಪ್ರದರ್ಶನ 90ರಿಂದ ಕುಸಿಯಲು ಆರಂಭಿಸಿತು. ಕುಸಿತದ ಪ್ರವೃತ್ತಿಯನ್ನು ತಡೆಗಟ್ಟಲು ಹಲವು ಪ್ರಯತ್ನಗಳನ್ನು ಮಾಡಲಾಯಿತು ಆದರೆ, ಅದನ್ನು ಬದಲಾವಣೆ ಮಾಡಲು ಸಾಧ್ಯವಾಗಲಿಲ್ಲ. ಎಚ್.ಎಂ.ಟಿ.ಎಲ್.ನಲಾಭದಲ್ಲಿದ್ದ ಟ್ರಾಕ್ಟರ್ ಉದ್ಯಮ, ಕಳಪೆ ಸರಬರಾಜು, ಸಾಮರ್ಥ್ಯದ ಬಳಕೆಯಲ್ಲಿನ ಕೊರತೆ ಮತ್ತು ಕಾರ್ಯ ಬಂಡವಾಳದ ಸಂಕಷ್ಟಇತ್ಯಾದಿ ಪರಿಣಾಮದಿಂದಾಗಿ ಬಾಧಿತವಾಯಿತು. ಈ ವಲಯದ ಮಾರುಕಟ್ಟೆಯಲ್ಲಿ ತನ್ನ ಅತ್ಯಲ್ಪ ಪಾಲಿನಿಂದ ಸುಸ್ಥಿರವಾದ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾಗುವಂತೆ ಮುಂದುವರಿಯುವ ಅವಕಾಶಎಚ್.ಎಂ.ಟಿ. ಲಿಮಿಟೆಡ್ ಗೆ ಇರಲಿಲ್ಲ ಎಂಬುದನ್ನು ಮನಗಾಣಲಾಯಿತು ಮತ್ತು ಹೀಗಾಗಿ ಟ್ರ್ಯಾಕ್ಟರ್ ಘಟಕ ಮುಚ್ಚುವುದು ಸೂಕ್ತ ಹಾಗೂ ಇತರ ಪ್ರಮುಖ ಯಂತ್ರ ಸಾಧನ ಘಟಕಗಳ ಮೇಲೆ ಗಮನ ಹರಿಸುವುದು ಸೂಕ್ತ ಎಂದು ಅಭಿಪ್ರಾಯಪಡಲಾಯಿತು.
ಟ್ರ್ಯಾಕ್ಟರ್ ವಿಭಾಗವು ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿದೆ ಮತ್ತು ತನ್ನ ಉದ್ಯೋಗಿಗಳಿಗೆ ಸಂಬಳ ಮತ್ತು ಇತರ ಶಾಸನಾತ್ಮಕ ಬಾಕಿಯನ್ನು ನೀಡಲೂ ಅಸಮರ್ಥವಾಗಿದೆ. ಪಿಂಜೋರೆಯಲ್ಲಿರುವ ಟ್ರ್ಯಾಕ್ಟರ್ ವಿಭಾಗದ ಸಿಬ್ಬಂದಿಗೆ 2014ರ ಜುಲೈ ತಿಂಗಳಿನಿಂದಲೂ ಸಂಬಳ ನೀಡಲಾಗಿಲ್ಲ ಮತ್ತು 2013ರ ನವೆಂಬರ್ ನಿಂದ ಇತರ ಶಾಸನಾತ್ಮಕ ಬಾಕಿಗಳೂ ಇವೆ. ಈ ಶಾಸನಾತ್ಮಕ ಬಾಕಿಗಳಲ್ಲಿ (ಟರ್ಮಿನಲ್ ಪ್ರಯೋಜನಗಳು, ಪಿ.ಎಫ್., ಗ್ರಾಚ್ಯುಯಿಟಿ, ರಜೆ ನಗದೀಕರಮ ಇತ್ಯಾದಿ) ಎಚ್.ಎಂ.ಟಿ.ಎಲ್.ನ ಇತರ ವಿಭಾಗಗಳ ನೌಕರರಿಗೂ ಬಾಕಿ ಇದೆ.[ಸಾಂಸ್ಥಿಕ ಪ್ರಧಾನ ಕಚೇರಿ (ಸಿಎಚ್ಓ), ಸಾಮಾನ್ಯ ಸೇವಾ ವಿಭಾಗ (ಸಿ.ಎಸ್.ಡಿ.) ಮತ್ತು ಆಹಾರ ಸಂಸ್ಕರಣ ಯಂತ್ರೋಪಕರಣ ಘಟಕ, ಔರಂಗಾಬಾದ್ (ಎಫ್.ಪಿ.ಎ)]ಸೇರಿದೆ. ಕಂಪನಿಯ ಈ ಕುಸಿತವನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಂಬಳ/ವೇತನ ಮತ್ತು ಇತರ ನಿವೃತ್ತಿ ಬಾಕಿಗಳನ್ನು ನೀಡದ ಕಾರಣ ನೌಕರರು ಅನುಭವಿಸುತ್ತಿರುವ ತೊಂದರೆಯನ್ನು ಪರಿಗಣಿಸಿ, ಎಚ್.ಎಂ.ಟಿ. ಲಿಮಿಟೆಡ್ ನ ಟ್ರ್ಯಾಕ್ಟರ್ ವಿಭಾಗವನ್ನು ನೌಕರರಿಗೆ ಆಕರ್ಷಕ ವಿ.ಆರ್.ಎಸ್./ವಿಎಸ್ಎಸ್ ನೀಡುವ ಮೂಲಕ ಮತ್ತು ಬಾಕಿ ಚುಕ್ತಾ ಮಾಡಿ ಮುಚ್ಚಲು ನಿರ್ಧರಿಸಲಾಗಿದೆ.
AKT/VBA/SH