ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಂಸತ್ತಿನಲ್ಲಿ ಹೈಕೋರ್ಟ್ ಗಳ (ಹೆಸರು ಬದಲಾವಣೆ) ಮಸೂದೆ 2016ನ್ನು ಮಂಡಿಸಲು ತನ್ನ ಅನುಮೋದನೆ ನೀಡಿದೆ.
ಹೈಕೋರ್ಟ್ ಗಳ (ಹೆಸರು ಬದಲಾವಣೆ) ಮಸೂದೆ 2016, ಬಾಂಬೆ ಹೈಕೋರ್ಟ್ ಹೆಸರನ್ನು ಮುಂಬೈ ಹೈಕೋರ್ಟ್ ಎಂದು ಮತ್ತು ಮದ್ರಾಸ್ ಹೈಕೋರ್ಟ್ ಹೆಸರನ್ನು ಚೆನ್ನೈ ಹೈಕೋರ್ಟ್ ಎಂದು ಅನುಕ್ರಮವಾಗಿ ಬದಲಾವಣೆ ಮಾಡಲು ಅವಕಾಶ ನೀಡುತ್ತದೆ.
ಹಿನ್ನೆಲೆ:
ಬಾಂಬೆ ಮತ್ತು ಮದ್ರಾಸ್ ಹೈಕೋರ್ಟ್ ಗಳಿಗೆ ಅವುಗಳು ಇರುವ ನಗರದ ಹೆಸರನ್ನೇ ಇಡಲಾಗಿತ್ತು. ತದನಂತರ ಈ ನಗರಗಳ ಹೆಸರು ಬದಲಾವಣೆ ಮಾಡಿದ ಬಳಿಕ, ಈ ಹೈಕೋರ್ಟ್ ಗಳ ಹೆಸರುಗಳನ್ನೂ ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಬಂದಿತ್ತು. ಈ ಹೈಕೋರ್ಟ್ ಗಳ ಹೆಸರುಗಳ ಬದಲಾವಣೆ ಸಮಸ್ಯೆಯನ್ನು ಪರಿಹರಿಸಲು ಪ್ರಸ್ತುತ ಯಾವುದೇ ಕೇಂದ್ರ ಕಾನೂನು ಇಲ್ಲ. ಈ ಉದ್ದೇಶಿತ ಶಾಸನ ಈ ಅಗತ್ಯ ಪೂರೈಸಲಿದೆ. ಈ ವಿಧೇಯಕವು ಬಾಂಬೆಯಲ್ಲಿ ನ್ಯಾಯ ನಿರ್ಣಯ ಮಾಡುವ ಹೈಕೋರ್ಟ್ ಹೆಸರನ್ನು ಮುಂಬೈ ನ್ಯಾಯನಿರ್ಣಯದ ಹೈಕೋರ್ಟ್ ಎಂದೂ ಮತ್ತು ಮದ್ರಾಸ್ ನಲ್ಲಿ ನ್ಯಾಯ ನಿರ್ಣಯ ಮಾಡುವ ಹೈಕೋರ್ಟ್ ಹೆಸರನ್ನು ಚೆನ್ನೈ ನ್ಯಾಯ ನಿರ್ಣಾಯಕ ಹೈಕೋರ್ಟ್ ಆಗಿ ಬದಲಾವಣೆ ಮಾಡಲು ದಾರಿ ಮಾಡಿಕೊಡಲಿದೆ.
ಈ ನಗರಗಳ ಹೆಸರುಗಳು ಬದಲಾವಣೆ ಆಗಿರುವ ಹಿನ್ನೆಲೆಯಲ್ಲಿ ಈ ಹೈಕೋರ್ಟ್ ಗಳ ಹೆಸರುಗಳನ್ನು ಬದಲಾಯಿಸುವುದು ಕೂಡ ತಾರ್ಕಿಕ ಮತ್ತು ಸೂಕ್ತವಾಗಿದೆ. ಇದು ರಾಜ್ಯ ಸರ್ಕಾರಗಳ ಹಾಗೂ ಜನರ ಆಶಯವನ್ನು ಈಡೇರಿಸಲಿದೆ.