Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಾಂಗ್ಲಾದೇಶದ ಪ್ರಧಾನ ಮಂತ್ರಿಯವರ ಭಾರತ ಭೇಟಿಯ ಸಂದರ್ಭದಲ್ಲಿ ಭಾರತ-ಬಾಂಗ್ಲಾದೇಶ ಜಂಟಿ ಹೇಳಿಕೆ


1. ಭಾರತ ಗಣರಾಜ್ಯದ ಪ್ರಧಾನಿಗಳಾದ ಗೌರವಾನ್ವಿತ ಶ್ರೀ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಬಾಂಗ್ಲಾದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಅಕ್ಟೋಬರ್ 05, 2019 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದರು. ನವದೆಹಲಿಯಲ್ಲಿ ಅವರ ಅಧಿಕೃತ ಕಾರ್ಯಕ್ರಮಗಳ ಹೊರತಾಗಿ, ಪ್ರಧಾನಿ ಶೇಖ್ ಹಸೀನಾ ಅವರನ್ನು ವಿಶ್ವ ಆರ್ಥಿಕ ವೇದಿಕೆಯು ಅಕ್ಟೋಬರ್ 03-04, 2019 ರಂದು ಆಯೋಜಿಸಲಾಗಿದ್ದ ಭಾರತ ಆರ್ಥಿಕ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಆಹ್ವಾನಿಸಲಾಗಿತ್ತು.

2. ಇಬ್ಬರೂ ಪ್ರಧಾನ ಮಂತ್ರಿಗಳು ಸೌಹಾರ್ದ ಮತ್ತು ಆತ್ಮೀಯ ವಾತಾವರಣದಲ್ಲಿ ವಿವರವಾದ ಚರ್ಚೆಗಳನ್ನು ನಡೆಸಿದರು. ನಂತರ, ಇಬ್ಬರೂ ಪ್ರಧಾನಮಂತ್ರಿಗಳು ಭೇಟಿಯ ಸಮಯದಲ್ಲಿ ಸಹಿ ಮಾಡಿದ ದ್ವಿಪಕ್ಷೀಯ ಒಪ್ಪಂದಗಳು / ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳುವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಮತ್ತು ವಿಡಿಯೋಲಿಂಕ್ ಮೂಲಕ ಮೂರು ದ್ವಿಪಕ್ಷೀಯ ಯೋಜನೆಗಳನ್ನು ಉದ್ಘಾಟಿಸಿದರು. ಸಭೆಯಲ್ಲಿ, ಉಭಯ ನಾಯಕರು ಗಾಢವಾದ ಐತಿಹಾಸಿಕ ಮತ್ತು ಭ್ರಾತೃತ್ವದ ಸಂಬಂಧಗಳನ್ನು ಆಧರಿಸಿದ, ಸಾರ್ವಭೌಮತ್ವ, ಸಮಾನತೆ, ನಂಬಿಕೆ ಮತ್ತು ಕಾರ್ಯತಂತ್ರದ ಸಹಭಾಗಿತ್ವವನ್ನು ಮೀರಿದ ತಿಳುವಳಿಕೆಯ ಆಧಾರದ ಮೇಲೆ ಎಲ್ಲರನ್ನೂ ಒಳಗೊಂಡ ದ್ವಿಪಕ್ಷೀಯ ಸಹಭಾಗಿತ್ವವನ್ನು ಪ್ರತಿಬಿಂಬಿಸುವ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಅವರು ಫಲದಾಯಕ ಮತ್ತು ಸಮಗ್ರ ಚರ್ಚೆಗಳನ್ನು ನಡೆಸಿದರು. ಈ ಸಮಯದಲ್ಲಿ ಅವರು ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ಅಂಶಗಳನ್ನು ಪರಿಶೀಲಿಸಿದರು ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಎರಡೂ ಕ್ಷೇತ್ರಗಳಲ್ಲಿ ಪರಸ್ಪರ ಲಾಭದಾಯಕ ಪಾಲುದಾರಿಕೆಯನ್ನು ಮುಂದುವರಿಸಲು ವಿವಿಧ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ಈ ಬದಲಾಯಿಸಲಾಗದ

ಸಹಭಾಗಿತ್ವವು ಬಾಂಗ್ಲಾದೇಶದ ವಿಮೋಚನೆಯ ಮಹಾ ಯುದ್ಧದೊಂದಿಗೆ ಪ್ರಾರಂಭವಾದ ಪರಂಪರೆಯನ್ನು ಹೆಚ್ಚಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.

ಭಾರತ ಮತ್ತು ಬಾಂಗ್ಲಾದೇಶ – ಕಾರ್ಯತಂತ್ರದ ಸಂಬಂಧವನ್ನು ಮೀರಿದ ಅನುಬಂಧ

3. ಇಬ್ಬರೂ ಪ್ರಧಾನ ಮಂತ್ರಿಗಳು ಇತಿಹಾಸ, ಸಂಸ್ಕೃತಿ, ಭಾಷೆ, ಜಾತ್ಯತೀತತೆ ಮತ್ತು ಪಾಲುದಾರಿಕೆಯನ್ನು ನಿರೂಪಿಸುವ ಇತರ ವಿಶಿಷ್ಟ ಸಮಾನತೆಗಳ ಹಂಚಿಕೆಯ ಬಂಧಗಳನ್ನು ನೆನಪಿಸಿಕೊಂಡರು. 1971 ರ ವಿಮೋಚನಾ ಯುದ್ಧದಲ್ಲಿ ವಿಮೋಚನಾ ಯುದ್ಧದ ಹುತಾತ್ಮರು, ಮುಕ್ತಿ ಯೋಧರು, ಯುದ್ಧದಲ್ಲಿ ಹೋರಾಡಿದ ಭಾರತೀಯ ಸೈನಿಕರು ಮತ್ತು ಬಾಂಗ್ಲಾದೇಶದ ನಾಗರಿಕರಿಗೆ ಅವರು ಮಾಡಿದ ದೊಡ್ಡ ತ್ಯಾಗ ಮತ್ತು ಪ್ರಜಾಪ್ರಭುತ್ವ ಮತ್ತು ಸಮಾನತೆಯ ಮೌಲ್ಯಗಳಿಗೆ ಬಾಂಗ್ಲಾದೇಶ ನಾಯಕತ್ವದ ಬದ್ಧತೆಗೆ ಅವರು ವಿಧ್ಯುಕ್ತ ಗೌರವ ಸಲ್ಲಿಸಿದರು. ಬಾಂಗ್ಲಾದೇಶ ರಾಷ್ಟ್ರದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಕನಸಿಗೆ ಅನುಗುಣವಾಗಿ ಈ ಮೌಲ್ಯಗಳನ್ನು ಎತ್ತಿ ಹಿಡಿಯುವುದಾಗಿ ಉಭಯ ನಾಯಕರು ಪ್ರತಿಜ್ಞೆ ಮಾಡಿದರು. ಸಮೃದ್ಧ, ಶಾಂತಿಯುತ ಮತ್ತು ಅಭಿವೃದ್ಧಿ ಹೊಂದಿದ ಬಾಂಗ್ಲಾದೇಶವನ್ನು ಖಚಿತಪಡಿಸುವ ಪ್ರಧಾನಿ ಶೇಖ್ ಹಸೀನಾ ಅವರ ದೂರದೃಷ್ಟಿಯ ಸಾಕ್ಷಾತ್ಕಾರಕ್ಕೆ ಭಾರತದ ಸಂಪೂರ್ಣ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.

 

ಗಡಿ ಭದ್ರತೆ ಮತ್ತು ನಿರ್ವಹಣೆ

 

4. ಭಯೋತ್ಪಾದನೆ ವಿರುದ್ಧ ಬಾಂಗ್ಲಾದೇಶ ಸರ್ಕಾರದ ಶೂನ್ಯ ಸಹಿಷ್ಣು ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು ಮತ್ತು ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವ ದೃಢ ನಿಶ್ಚಯದ ಪ್ರಯತ್ನಗಳಿಗಾಗಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪ್ರಶಂಸಿಸಿದರು. ಭಯೋತ್ಪಾದನೆಯು ಎರಡೂ ದೇಶಗಳು ಮತ್ತು ಈ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ಅತ್ಯಂತ ಮಹತ್ವದ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಮನಗಂಡ ಉಭಯ ಪ್ರಧಾನ ಮಂತ್ರಿಗಳು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ ಎಂದು ಒತ್ತಿ ಹೇಳಿದರು. ಆಗಸ್ಟ್ 2019 ರಲ್ಲಿ ಬಾಂಗ್ಲಾದೇಶದ ಗೃಹ ಸಚಿವರ ಭಾರತ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ಗೃಹ ಸಚಿವರ ನಡುವಿನ ಯಶಸ್ವಿ ಚರ್ಚೆಯನ್ನು ಉಭಯ ನಾಯಕರು ಉಲ್ಲೇಖಿಸಿದರು ಮತ್ತು ಉಗ್ರಗಾಮಿಗಳು ಮತ್ತು ಮೂಲಭೂತವಾದಿ ಗುಂಪುಗಳು, ಭಯೋತ್ಪಾದಕರು, ಕಳ್ಳಸಾಗಾಣಿಕೆದಾರರು, ನಕಲಿ ಕರೆನ್ಸಿಯ ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧವು ಪ್ರಮುಖ ಆದ್ಯತೆಯಾಗಿದೆ ಎಂದು ಒಪ್ಪಿಕೊಂಡರು.

5. ಉಭಯ ದೇಶಗಳ ನಡುವೆ ಜನರ-ಜನರ ಒಡನಾಟವನ್ನು ಸರಳೀಕರಿಸಲು ಎರಡೂ ಕಡೆಯವರು ಒತ್ತು ನೀಡಿದರು. ರಸ್ತೆ ಅಥವಾ ರೈಲು ಮೂಲಕ ಭಾರತಕ್ಕೆ ಪ್ರಯಾಣಿಸುವ ಬಾಂಗ್ಲಾದೇಶ ಪ್ರಜೆಗಳಿಗೆ ಪ್ರಯಾಣದ ಅವಶ್ಯಕತೆಗಳನ್ನು ಸರಳಗೊಳಿಸುವ ಭಾರತದ ಬದ್ಧತೆಗೆ ಪ್ರಧಾನಿ ಶೇಖ್ ಹಸೀನಾ ಧನ್ಯವಾದ ಅರ್ಪಿಸಿದರು. ಪರಸ್ಪರ ಸಂಬಂಧದ ಉತ್ಸಾಹದಲ್ಲಿ, ಅಸ್ತಿತ್ವದಲ್ಲಿರುವ ಭೂ ಬಂದರುಗಳನ್ನು ಬಳಸುವ ಬಾಂಗ್ಲಾದೇಶದ ಪ್ರಯಾಣಿಕರಿಗೆ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಬೇಕೆಂದು ಕೇಳಿಕೊಂಡರು. ಅಖೌರಾ (ತ್ರಿಪುರ) ಮತ್ತು ಘೋಜದಂಗ (ಪಶ್ಚಿಮ ಬಂಗಾಳ) ದ ಚೆಕ್‌ಪೋಸ್ಟ್‌ಗಳಿಂದ ಪ್ರಾರಂಭಿಸಿ, ಸಮಂಜಸ ದಾಖಲೆಗಳೊಂದಿಗೆ ಪ್ರಯಾಣಿಸುವ ಬಾಂಗ್ಲಾದೇಶದ ನಾಗರಿಕರಿಗೆ ಭಾರತದಲ್ಲಿನ ಭೂ ಬಂದರುಗಳಿಂದ ಪ್ರವೇಶ / ನಿರ್ಗಮನಕ್ಕೆ ಉಳಿದಿರುವ ನಿರ್ಬಂಧಗಳನ್ನು ಹಂತಹಂತವಾಗಿ ತೆಗೆದುಹಾಕಲಾಗುವುದು ಎಂದು ಎರಡೂ ಕಡೆಯವರು ಒಪ್ಪಿಕೊಂಡರು.

6. ನಿರಾತಂಕವಾದ, ಸ್ಥಿರವಾದ ಮತ್ತು ಅಪರಾಧ ಮುಕ್ತ ಗಡಿಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಗಡಿ ನಿರ್ವಹಣೆಯ ಮಹತ್ವವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಈ ಗುರಿ ಸಾಧನೆಗಾಗಿ, ಎರಡೂ ದೇಶಗಳ ನಡುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಎಲ್ಲಾ ವಲಯಗಳಲ್ಲಿ ಬಾಕಿ ಇರುವ ಗಡಿ ಬೇಲಿಯನ್ನು ಅನ್ನು ಪೂರ್ಣಗೊಳಿಸಲು ನಾಯಕರು ತಮ್ಮ ಗಡಿ ಭದ್ರತಾ ಪಡೆಗಳಿಗೆ ನಿರ್ದೇಶಿಸಿದರು. ಗಡಿಯಲ್ಲಿ ನಾಗರಿಕರ ಪ್ರಾಣಹಾನಿ ಕಳವಳಕಾರಿಯಾಗಿದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು ಮತ್ತು ಅಂತಹ ಗಡಿ ಘಟನೆಗಳನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಲು ಸಂಘಟಿತ ಕ್ರಮಗಳನ್ನು ಹೆಚ್ಚಿಸಲು ಸಂಬಂಧಪಟ್ಟ ಗಡಿ ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಿದರು.

7. ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಇಬ್ಬರೂ ನಾಯಕರು ಒಪ್ಪಿದರು. ವಿಪತ್ತು ನಿರ್ವಹಣಾ ಸಹಕಾರ ಕ್ಷೇತ್ರದಲ್ಲಿ ಒಪ್ಪಂದವೊಂದನ್ನು ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯವನ್ನು ಅವರು ಸ್ವಾಗತಿಸಿದರು.

 

ಪರಸ್ಪರ ಗೆಲುವಿನ ವ್ಯಾಪಾರ ಸಹಭಾಗಿತ್ವದ ಕಡೆಗೆ

 

8. ಎಲ್ಡಿಸಿ ಸ್ಥಾನಮಾನದಿಂದ ಬಾಂಗ್ಲಾದೇಶದ ಸನ್ನಿಹಿತ ಪದವಿಯನ್ನು ಸ್ವಾಗತಿಸುತ್ತಾ, ಭಾರತವು ಬಾಂಗ್ಲಾದೇಶಕ್ಕೆ ತನ್ನ ಆತ್ಮೀಯ ಶುಭಾಶಯಗಳನ್ನು ಕೋರಿತು. ಈ ಸನ್ನಿವೇಶದಲ್ಲಿ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ದ್ವಿಪಕ್ಷೀಯ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ (ಸಿಇಪಿಎ) ಪ್ರವೇಶಿಸುವ ಸಾಧ್ಯತೆಗಳ ಜಂಟಿ ಅಧ್ಯಯನಕ್ಕೆ ಎರಡೂ ಕಡೆಯವರು ಒಪ್ಪಿಕೊಂಡರು.

9. ಅಖೌರಾ-ಅಗರ್ತಲಾ ಬಂದರಿನ ಮೂಲಕ ವಹಿವಾಟು ನಡೆಸುತ್ತಿರುವ ಉತ್ಪನ್ನಗಳ ಮೇಲಿನ ಬಂದರು ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವ ಭಾರತದ ಮನವಿಗೆ ಪ್ರತಿಕ್ರಿಯೆಯಾಗಿ, ಬಾಂಗ್ಲಾದೇಶ ಕಡೆಯವರು ಮುಂದಿನ ದಿನಗಳಲ್ಲಿ ನಿಯಮಿತ ವ್ಯಾಪಾರದ ಹೆಚ್ಚಿನ ವಸ್ತುಗಳ ಮೇಲೆ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ಮಾಹಿತಿ ನೀಡಿದರು.

10. ಸೆಣಬಿನ ಉತ್ಪನ್ನಗಳು ಸೇರಿದಂತೆ ಬಾಂಗ್ಲಾದೇಶದಿಂದ ಭಾರತಕ್ಕೆ ರಫ್ತು ಮಾಡುವ ಅನೇಕ ಉತ್ಪನ್ನಗಳ ಮೇಲೆ ವಿಧಿಸಲಾಗಿರುವ ಡಂಪಿಂಗ್ ವಿರೋಧಿ / ತಪ್ಪಿಸಿಕೊಳ್ಳುವಿಕೆ ಸುಂಕದ ಸಮಸ್ಯೆಯನ್ನು ಬಗೆಹರಿಸಲು ಬಾಂಗ್ಲಾದೇಶ ಕಡೆಯವರು ಭಾರತೀಯ ಅಧಿಕಾರಿಗಳನ್ನು ಕೋರಿದರು. ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ಅನುಸಾರವಾಗಿ ವ್ಯಾಪಾರ ಪರಿಹಾರದ ತನಿಖೆ ನಡೆಸಲಾಗುತ್ತದೆ ಎಂದು ಭಾರತದ ಕಡೆಯವರು ಉಲ್ಲೇಖಿಸಿದರು. ಈ ಪ್ರದೇಶದಲ್ಲಿ ಸಹಕಾರ ಮತ್ತು ಸಾಮರ್ಥ್ಯ ವೃದ್ಧಿಗಾಗಿ ವ್ಯಾಪಾರ ಪರಿಹಾರ ಕ್ರಮಗಳ ಕ್ಷೇತ್ರದಲ್ಲಿ ಸಹಕಾರದ ಚೌಕಟ್ಟಿನ ಸ್ಥಾಪನೆಯನ್ನು ತ್ವರಿತಗೊಳಿಸುವಂತೆ ಉಭಯ ನಾಯಕರು ತಮ್ಮ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

11. ದೂರದ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರ ಬದುಕು ಮತ್ತು ಹೊಟ್ಟೆಪಾಡಿನ ಮೇಲೆ ಗಡಿ ಹಾತ್ ಗಳ ಸಕಾರಾತ್ಮಕ ಪರಿಣಾಮವನ್ನು ಶ್ಲಾಘಿಸಿದ ನಾಯಕರು, ಉಭಯ ದೇಶಗಳು ಒಪ್ಪಿಕೊಂಡಿರುವ ಹನ್ನೆರಡು ಗಡಿ ಹಾತ್ ಗಳ ಸ್ಥಾಪನೆಯನ್ನು ತ್ವರಿತಗೊಳಿಸುವಂತೆ ತಮ್ಮ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

12. ಬಾಂಗ್ಲಾದೇಶದ ಮಾನದಂಡಗಳು ಮತ್ತು ಪರೀಕ್ಷಾ ಸಂಸ್ಥೆ (ಬಿಎಸ್‌ಟಿಐ) ಮತ್ತು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಡುವಿನ ಒಪ್ಪಂದದ ನವೀಕರಣವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಈ ಒಪ್ಪಂದವು ಉಭಯ ದೇಶಗಳ ನಡುವೆ ಸರಕುಗಳ ವ್ಯಾಪಾರವನ್ನು ಸಮತೋಲಿತ ರೀತಿಯಲ್ಲಿ ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಅವರು ಒಪ್ಪಿಕೊಂಡರು. ಎರಡೂ ದೇಶಗಳು ಏಷ್ಯಾ ಪೆಸಿಫಿಕ್ ಲ್ಯಾಬೊರೇಟರಿ ಅಕ್ರೆಡಿಟೇಶನ್ ಕೋಆಪರೇಷನ್ ನ ಸಾಮಾನ್ಯ ಸದಸ್ಯರಾಗಿರುವುದರಿಂದ ಮತ್ತು ಬಿಎಎಸ್‌ಟಿಐ ಎನ್‌ಎಬಿಎಲ್ ಮಾನದಂಡಗಳಿಗೆ ಹೊಂದಿಕೆಯಾಗುವ ಕೆಲವು ಸೌಲಭ್ಯಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿರುವುದರಿಂದ ಬಿಎಬಿ ಮತ್ತು ಎನ್‌ಎಬಿಎಲ್‌ನ ಪ್ರಮಾಣೀಕರಣಗಳನ್ನು ಪರಸ್ಪರ ಪರಿಗಣಿಸಲು ಎರಡೂ ಕಡೆಯವರು ಒಪ್ಪಿಕೊಂಡರು.

13. ಭಾರತೀಯ ಮಾರುಕಟ್ಟೆಗೆ ಸುಂಕ ಮುಕ್ತ ಮತ್ತು ಕೋಟಾ ಮುಕ್ತ ಪ್ರವೇಶವನ್ನು ಬಾಂಗ್ಲಾದೇಶದ ರಫ್ತಿಗೆ ವಿಸ್ತರಿಸಲು ಭಾರತದ ಸಿದ್ಧತೆಯನ್ನು ಪ್ರಧಾನಿ ಶೇಖ್ ಹಸೀನಾ ಶ್ಲಾಘಿಸಿದರು. ಬಾಂಗ್ಲಾದೇಶದಿಂದ ಭಾರತಕ್ಕಾಗುವ ರಫ್ತು 2019 ರಲ್ಲಿ ಮೊದಲ ಬಾರಿಗೆ ಒಂದು ಶತಕೋಟಿ ಡಾಲರ್ ಗಡಿ ದಾಟಿದೆ. ಇದು ರಫ್ತಿನಲ್ಲಿ ವರ್ಷಕ್ಕೆ ಶೇ. 52ರಷ್ಟು ಬೆಳವಣಿಗೆಯಾಗಿದೆ. ಇದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

14. ಉಭಯ ದೇಶಗಳ ಜವಳಿ ಮತ್ತು ಸೆಣಬಿನ ಕ್ಷೇತ್ರಗಳ ನಡುವಿನ ಸಹಯೋಗವನ್ನು ಉತ್ತೇಜಿಸುವ ಒಂದು ಹೆಜ್ಜೆಯಾಗಿ, ಬಾಂಗ್ಲಾದೇಶ ಸರ್ಕಾರದ ಜವಳಿ ಸಚಿವಾಲಯ, ಭಾರತ ಸರ್ಕಾರದ ಮತ್ತು ಜವಳಿ ಮತ್ತು ಸೆಣಬಿನ ಸಚಿವಾಲಯದ ನಡುವಿನ ಒಪ್ಪಂದವನ್ನು ಶೀಘ್ರವಾಗಿ ಅಂತಿಮಗೊಳಿಸುವಂತೆ ಪ್ರಧಾನಮಂತ್ರಿಗಳು ಒತ್ತಾಯಿಸಿದರು.

 

ಭೂಮಿ, ನೀರು ಮತ್ತು ವಾಯು ಮಾರ್ಗದಲ್ಲಿ ಸಂಪರ್ಕವನ್ನು ಹೆಚ್ಚಿಸುವುದು

 

15. ವಾಯು, ಜಲ, ರೈಲು, ರಸ್ತೆ ಮೂಲಕ ಸಂಪರ್ಕವನ್ನು ಹೆಚ್ಚಿಸುವುದರಿಂದ ಬಾಂಗ್ಲಾದೇಶ ಮತ್ತು ಭಾರತದ ಈಶಾನ್ಯ ರಾಜ್ಯಗಳ ನಡುವೆ ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಪರಸ್ಪರ ಲಾಭದಾಯಕ ಅವಕಾಶವನ್ನು ನೀಡುತ್ತದೆ ಎಂದು ಎರಡೂ ಕಡೆಯವರು ಗುರುತಿಸಿದ್ದಾರೆ. ಭಾರತಕ್ಕೆ ಮತ್ತು ಅದರಲ್ಲೂ, ವಿಶೇಷವಾಗಿ ಭಾರತದ ಈಶಾನ್ಯಕ್ಕೆ ಮತ್ತು ಸರಕುಗಳ ಸಾಗಣೆಗೆ ಚಟ್ಟೋಗ್ರಾಮ್ ಮತ್ತು ಮೊಂಗ್ಲಾ ಬಂದರುಗಳ ಬಳಕೆಗಾಗಿ ಸಾಮಾನ್ಯ ನಿರ್ವಹಣಾ ಕಾರ್ಯವಿಧಾನಗಳ ತೀರ್ಮಾನವನ್ನು ನಾಯಕರು ಸ್ವಾಗತಿಸಿದರು, ಇದು ಎರಡೂ ಆರ್ಥಿಕತೆಗಳಿಗೆ ಪರಸ್ಪರ ಗೆಲುವಿನ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.

16. ಒಳನಾಡು ಜಲಸಾರಿಗೆ ಮತ್ತು ಕರಾವಳಿ ಹಡಗು ವ್ಯಾಪಾರವನ್ನು ಬಳಸಿಕೊಂಡು ಸರಕುಗಳ ಚಲನೆಯ ಅಪಾರ ಸಾಮರ್ಥ್ಯವನ್ನು ಇಬ್ಬರೂ ನಾಯಕರು ಒತ್ತಿಹೇಳಿದರು. ಈ ನಿಟ್ಟಿನಲ್ಲಿ, ಅವರು ಧುಲಿಯನ್-ಗಡಗರಿ-ರಾಜಶಾಹಿ-ದೌಲತ್ಡಿಯಾ-ಅರಿಚಾ ಮಾರ್ಗವನ್ನು (ಎರಡೂ ಕಡೆಯಿಂದ) ಕಾರ್ಯಗತಗೊಳಿಸುವ ಮತ್ತು ಒಳನಾಡು ಜಲ ಸಾರಿಗೆ ಮತ್ತು ವ್ಯಾಪಾರದ ಕುರಿತಾದ ಪ್ರೋಟೋಕಾಲ್ ಅಡಿಯಲ್ಲಿ ದೌಡ್ಕಂಡಿ-ಸೋನಮುರಾ ಮಾರ್ಗವನ್ನು (ಎರಡೂ ಕಡೆಯಿಂದ) ಸೇರಿಸುವ ನಿರ್ಧಾರವನ್ನು ಸ್ವಾಗತಿಸಿದರು

17. ತಮ್ಮ ತಮ್ಮ ರಫ್ತು ಸರಕುಗಳನ್ನು ಸಾಗಿಸಲು ಪರಸ್ಪರರ ಬಂದರುಗಳನ್ನು ಹೆಚ್ಚು ಬಳಸುವುದರಿಂದ ಎರಡೂ ಆರ್ಥಿಕತೆಗಳಿಗೆ ಆಗಬಹುದಾದ ಪ್ರಯೋಜನಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅಗತ್ಯವಾದ ವಿಧಾನಗಳ ಕುರಿತು ತ್ವರಿತ ಚರ್ಚೆಗಳಿಗೆ ಎರಡೂ ಕಡೆಯವರು ಒಪ್ಪಿಕೊಂಡರು.

18. ಉತ್ತಮ ಸಂಪರ್ಕವನ್ನು ಸುಲಭಗೊಳಿಸಲು ಮತ್ತು ಎರಡೂ ದೇಶಗಳ ನಡುವೆ ಪ್ರಯಾಣಿಕರು ಮತ್ತು ಸರಕುಗಳ ಚಲನೆಯನ್ನು ಸರಳೀಕರಿಸಲು, ಇಬ್ಬರೂ ನಾಯಕರು ಬಿಬಿಐಎನ್ ಮೋಟಾರು ವಾಹನಗಳ ಒಪ್ಪಂದದ ತ್ವರಿತ ಕಾರ್ಯಾಚರಣೆಗೆ ಒಪ್ಪಿಕೊಂಡರು

19. ಎರಡೂ ದೇಶಗಳ ನಡುವೆ ರಸ್ತೆ ಸಂಪರ್ಕವನ್ನು ಹೆಚ್ಚಿಸುವ ಮುಂದಿನ ಹೆಜ್ಜೆಯಾಗಿ, ಢಾಕಾ-ಸಿಲಿಗುರಿ ಬಸ್ ಸೇವೆಯನ್ನು ಪ್ರಾರಂಭಿಸುವ ಯೋಜನೆಗಳನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

20. ಎರಡೂ ದೇಶಗಳ ಜಲಸಂಪನ್ಮೂಲ ಕಾರ್ಯದರ್ಶಿಗಳ ನಡುವೆ 2019 ರ ಆಗಸ್ಟ್‌ನಲ್ಲಿ ಢಾಕಾದಲ್ಲಿ ನಡೆದ ಚರ್ಚೆಗಳು ಮತ್ತು ನಂತರದ ಜಂಟಿ ತಾಂತ್ರಿಕ ಸಮಿತಿಯ ರಚನೆ ಮತ್ತು ಪ್ರಸ್ತಾವಿತ ಕಾರ್ಯಸಾಧ್ಯತಾ ಅಧ್ಯಯನದ ಬಗ್ಗೆ ಹಾಗೂ 1996 ರ ಗಂಗಾ ನೀರು ಹಂಚಿಕೆ ಒಪ್ಪಂದ ಪ್ರಕಾರ ಬಾಂಗ್ಲಾದೇಶವು ಪಡೆದ ನೀರನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಬಾಂಗ್ಲಾದೇಶದಲ್ಲಿ ಉದ್ದೇಶಿತ ಗಂಗಾ-ಪದ್ಮ ಬ್ಯಾರೇಜ್ ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಉಲ್ಲೇಖದ ನಿಯಮಗಳನ್ನು ರೂಪಿಸುವುದರ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು.

21. ದತ್ತಾಂಶ ಮತ್ತು ಮಾಹಿತಿಯನ್ನು ತ್ವರಿತವಾಗಿ ವಿನಿಮಯ ಮಾಡಿಕೊಳ್ಳಲು ಮತ್ತು ಆರು

ನದಿಗಳಾದ ಮನು, ಮುಹುರಿ, ಖೋವಾಯ್, ಗುಮ್ತಿ, ಧರ್ಲಾ ಮತ್ತು ದುಧ್‌ಕುಮರ್ ಗಳಿಗೆ ಮಧ್ಯಂತರ ಹಂಚಿಕೆ ಒಪ್ಪಂದಗಳ ಕರಡನ್ನು ಸಿದ್ಧಪಡಿಸುವಂತೆ ಮತ್ತು ಫೆನಿ ನದಿಯ ಮಧ್ಯಂತರ ಹಂಚಿಕೆ ಒಪ್ಪಂದದ ಕರಡುನ್ನು ದೃಢೀಕರಿಸುವಂತೆ ನದಿಗಳ ಜಂಟಿ ಆಯೋಗದ ತಾಂತ್ರಿಕ ಮಟ್ಟದ ಸಮಿತಿಗೆ ಉಭಯ ನಾಯಕರು ನಿರ್ದೇಶನ ನೀಡಿದರು.

22. 2011 ರಲ್ಲಿ ಉಭಯ ಸರ್ಕಾರಗಳು ಒಪ್ಪಿದಂತೆ ತೀಸ್ತಾ ನೀರನ್ನು ಹಂಚಿಕೊಳ್ಳಲು ಮಧ್ಯಂತರ ಒಪ್ಪಂದಕ್ಕೆ ಶೀಘ್ರವಾಗಿ ಸಹಿ ಮಾಡಲು ಮತ್ತು ಅನುಷ್ಠಾನಗೊಳಿಸಲು ಬಾಂಗ್ಲಾದೇಶದ ಜನರು ಕಾಯುತ್ತಿದ್ದಾರೆ ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದರು. ಒಪ್ಪಂದವನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ತಮ್ಮ ಸರ್ಕಾರವು ಭಾರತದ ಎಲ್ಲಾ ಪಾಲುದಾರರೊಂದಿಗೆ ಕೆಲಸ ಮಾಡುತ್ತಿರುವುದಾಗಿ ಪ್ರಧಾನಿ ಮೋದಿ ಎಂದು ಮಾಹಿತಿ ನೀಡಿದರು.

23. ತ್ರಿಪುರದ ಸಬ್ರೂಮ್ ಪಟ್ಟಣದ ಜನರ ಕುಡಿಯುವ ಉದ್ದೇಶಕ್ಕಾಗಿ ಫೆನಿ ನದಿಯಿಂದ 1.82 ಕ್ಯೂಸೆಕ್ ನೀರನ್ನು ಪಡೆದುಕೊಳ್ಳುವ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭಿಸಲು ಢಾಕಾದಲ್ಲಿ ನಡೆದ ಜಲಸಂಪನ್ಮೂಲ ಕಾರ್ಯದರ್ಶಿ ಮಟ್ಟದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಉಭಯ ನಾಯಕರು ಶ್ಲಾಘಿಸಿದರು.

24. ರೈಲ್ವೆ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸಹಕಾರದ ಅಪಾರ ಸಾಮರ್ಥ್ಯವನ್ನು ಎರಡೂ ನಾಯಕರು ಗುರುತಿಸಿದ್ದಾರೆ. ಆಗಸ್ಟ್ 2019 ರಲ್ಲಿ ಉಭಯ ದೇಶಗಳ ರೈಲ್ವೆ ಮಂತ್ರಿಗಳ ನಡುವಿನ ರಚನಾತ್ಮಕ ಚರ್ಚೆಗಳ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.

25. ಜನರು-ಜನರ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಅಗತ್ಯವನ್ನು ಉಭಯ ನಾಯಕರು ಒತ್ತಿ ಹೇಳಿದರು. ಇದರ ಮುಂದುವರಿದ ಹೆಜ್ಜೆಯಂತೆ, ಮೈತ್ರಿ ಎಕ್ಸ್‌ಪ್ರೆಸ್‌ ಸಂಚಾರವನ್ನುವಾರದಲ್ಲಿ 4 ರಿಂದ 5 ಬಾರಿ ಮತ್ತು ಬಂಧನ್ ಎಕ್ಸ್‌ಪ್ರೆಸ್ ವಾರದಲ್ಲಿ 1 ರಿಂದ 2 ಬಾರಿಗೆ ಹೆಚ್ಚಳವನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಸ್ವಾಗತಿಸಿದರು.

26. ಭಾರತದಿಂದ ಬಾಂಗ್ಲಾದೇಶಕ್ಕೆ ರೈಲ್ವೆ ರೋಲಿಂಗ್ ಸ್ಟಾಕ್ ಸರಬರಾಜುಗಳನ್ನು ಒದಗಿಸಲು ಮತ್ತು ಬಾಂಗ್ಲಾದೇಶದ ಸೈದ್ಪುರ ಕಾರ್ಯಾಗಾರದ ಆಧುನೀಕರಣದ ಕ್ರಮಗಳನ್ನು ಪೂರ್ಣಗೊಳಿಸುವಂತೆ ಉಭಯ ನಾಯಕರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

27. ಅನುದಾನದ ಆಧಾರದ ಮೇಲೆ ಬಾಂಗ್ಲಾದೇಶಕ್ಕೆ ಹಲವಾರು ಬ್ರಾಡ್ ಗೇಜ್ ಮತ್ತು ಮೀಟರ್ ಗೇಜ್ ಲೋಕೋಮೋಟಿವ್‌ಗಳನ್ನು ಪೂರೈಸಲು ಪರಿಗಣಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಪ್ರಧಾನಿ ಶೇಖ್ ಹಸೀನಾ ಧನ್ಯವಾದ ಅರ್ಪಿಸಿದರು. ಇದು ಎರಡೂ ದೇಶಗಳ ನಡುವೆ ವ್ಯಾಪಾರ ವೃದ್ಧಿಗೆ ಸಹಾಯ ಮಾಡುತ್ತದೆ.

28. 2019 ರ ಬೇಸಿಗೆಯಿಂದ ಜಾರಿಗೆ ಬರುವಂತೆ ವಾಯು ಸೇವೆಗಳಲ್ಲಿನ ಸೇವೆಯನ್ನು ವಾರಕ್ಕೆ ಅಸ್ತಿತ್ವದಲ್ಲಿರುವ 61 ಸೇವೆಗಳಿಂದ 91 ಸೇವೆಗಳಿಗೆ ಹೆಚ್ಚಿಸುವ ಮತ್ತು 2020 ರ ಚಳಿಗಾಲದಿಂದ ಇದನ್ನು ವಾರಕ್ಕೆ 120 ಸೇವೆಗಳಿಗೆ ಹೆಚ್ಚಿಸುವ ನಿರ್ಧಾರವನ್ನು ಉಭಯ ನಾಯಕರು ಸ್ವಾಗತಿಸಿದರು .

 

ರಕ್ಷಣಾ ಸಹಕಾರವನ್ನು ಸಜ್ಜುಗೊಳಿಸುವುದು

 

29. ಡಿಸೆಂಬರ್ 1971 ರಲ್ಲಿ ಬಾಂಗ್ಲಾದೇಶದ ಮಹಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಎರಡೂ ಪಡೆಗಳ ಜಂಟಿ ಕಾರ್ಯಾಚರಣೆಯ ಸಹಕಾರದ ಇತಿಹಾಸವನ್ನು ಗಣನೆಗೆ ತೆಗೆದುಕೊಂಡು, ಹೆಚ್ಚು ಸಮಗ್ರ ಮತ್ತು ಸುರಕ್ಷಿತ ನೆರೆಹೊರೆಗಾಗಿ ರಕ್ಷಣೆಯಲ್ಲಿ ಹೆಚ್ಚಿನ ಸಹಕಾರದ ಅಗತ್ಯವನ್ನು ಉಭಯ ನಾಯಕರು ಗುರುತಿಸಿದರು.

30. ಉಭಯ ಪ್ರಧಾನ ಮಂತ್ರಿಗಳು ಕಡಲ ಭದ್ರತಾ ಸಹಭಾಗಿತ್ವದ ಅಭಿವೃದ್ಧಿಯ ಉಪಕ್ರಮಗಳನ್ನು ಸ್ವಾಗತಿಸಿದರು. ಬಾಂಗ್ಲಾದೇಶದಲ್ಲಿ ಕರಾವಳಿ ಕಣ್ಗಾವಲು ರಾಡಾರ್ ವ್ಯವಸ್ಥೆಯನ್ನು ಸ್ಥಾಪಿಸುವ ಬಗ್ಗೆ ಒಂದು ಒಪ್ಪಂದವನ್ನು ಅಂತಿಮಗೊಳಿಸುವಲ್ಲಿ ಆಗಿರುವ ಪ್ರಗತಿಯನ್ನು ಗಮನಿಸಿದ ಅವರು ಒಪ್ಪಂದಕ್ಕೆ ಶೀಘ್ರದಲ್ಲಿ ಸಹಿ ಹಾಕಲು ಎರಡೂ ಕಡೆಯವರನ್ನು ಪ್ರೋತ್ಸಾಹಿಸಿದರು.

 

31. ಭಾರತವು ಬಾಂಗ್ಲಾದೇಶಕ್ಕೆ ವಿಸ್ತರಿಸಿರುವ 500 ಮಿಲಿಯನ್ ಅಮೆರಿಕನ್ ಡಾಲರ್ ರಕ್ಷಣಾ ಸಾಲವನ್ನು ಪಡೆಯುವ ಕೆಲಸವನ್ನು ತ್ವರಿತಗೊಳಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಇದಕ್ಕಾಗಿ 2019 ರ ಏಪ್ರಿಲ್ ನಲ್ಲಿ ಅನುಷ್ಠಾನ ವ್ಯವಸ್ಥೆಗಳನ್ನು ಅಂತಿಮಗೊಳಿಸಲಾಗಿದೆ.

 

ಅಭಿವೃದ್ಧಿ ಸಹಕಾರವನ್ನು ಬಲಪಡಿಸುವುದು

 

32. ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಬಾಂಗ್ಲಾದೇಶದ ತಳಮಟ್ಟಕ್ಕೆ ಕೊಂಡೊಯ್ಯುವ ಕೊಡುಗೆಯಾಗಿ, ಬಾಂಗ್ಲಾದೇಶದಲ್ಲಿ ವಿವಿಧ ತೀವ್ರ ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು (ಎಚ್‌ಐಸಿಡಿಪಿ) ಅನುದಾನ-ನೆರವು ಯೋಜನೆಗಳಾಗಿ ಕೈಗೊಂಡಿದ್ದಕ್ಕಾಗಿ ಪ್ರಧಾನಿ ಹಸೀನಾ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

33. ಮೂರು ಸಾಲಗಳ ಬಳಕೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಇಬ್ಬರು ಪ್ರಧಾನ ಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು ಮತ್ತು ಈ ನಿಯಂತ್ರಣಗಳ ಅಡಿಯಲ್ಲಿ ಪ್ರಾರಂಭಿಸಲಾದ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವಂತೆ ಎರಡೂ ಕಡೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

34. ಢಾಕಾದಲ್ಲಿನ ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾದ ಪ್ರತಿನಿಧಿ ಕಚೇರಿಯ ಕೆಲಸಕ್ಕೆ ಅನುಕೂಲವಾಗುವಂತೆ ಬಾಂಗ್ಲಾದೇಶಕ್ಕೆ ವಿಸ್ತರಿಸಿರುವ ಭಾರತ ಸರ್ಕಾರದ ನಿಯಂತ್ರಣ ನಿಯಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದು ಒಪ್ಪಂದಕ್ಕೆ ಸಹಿ ಹಾಕಿದ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು.

35. ಅಕ್ಟೋಬರ್ 5 ರಂದು ಉಭಯ ನಾಯಕರು ವಿಡಿಯೋ-ಲಿಂಕ್ ಮೂಲಕ ಮೂರು ದ್ವಿಪಕ್ಷೀಯ ಅಭಿವೃದ್ಧಿ ಪಾಲುದಾರಿಕೆ ಯೋಜನೆಗಳ ಉದ್ಘಾಟಿಸಿದರು, ಅವುಗಳೆಂದರೆ:

ಎ) ಬಾಂಗ್ಲಾದೇಶದಿಂದ ಬೃಹತ್ ಎಲ್ಪಿಜಿ ಆಮದು

ಬಿ) ಢಾಕಾದ ರಾಮಕೃಷ್ಣ ಮಿಷನ್‌ನಲ್ಲಿ ವಿವೇಕಾನಂದ ಭವನ (ವಿದ್ಯಾರ್ಥಿಗಳ ಹಾಸ್ಟೆಲ್) ಉದ್ಘಾಟನೆ

ಸಿ) ಖುಲ್ನಾದ ಇನ್ಸ್ಟಿಟ್ಯೂಷನ್ ಆಫ್ ಡಿಪ್ಲೊಮಾ ಎಂಜಿನಿಯರ್ಸ್ ಬಾಂಗ್ಲಾದೇಶ (ಐಡಿಇಬಿ) ನಲ್ಲಿ ಬಾಂಗ್ಲಾದೇಶ-ಇಂಡಿಯಾ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ (ಬಿಐಪಿಎಸ್ಡಿಐ) ಉದ್ಘಾಟನೆ

36. ಬಾಂಗ್ಲಾದೇಶದ ನಾಗರೀಕ ಸೇವೆಗಳ ಸಾಮರ್ಥ್ಯ ವೃದ್ಧಿಯಲ್ಲಿ ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರದ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು. ನ್ಯಾಯಶಾಸ್ತ್ರದ ಸಾಮಾನ್ಯ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಭವಿಷ್ಯಕ್ಕಾಗಿ ಬಾಂಗ್ಲಾದೇಶದ ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.

 

ಗಡಿಯಾಚೆಗಿನ ಇಂಧನ ಸಹಕಾರ

 

37. ಬಾಂಗ್ಲಾದೇಶದ ಟ್ರಕ್‌ಗಳನ್ನು ಮೂಲಕ ಬಾಂಗ್ಲಾದೇಶದಿಂದ ತ್ರಿಪುರಕ್ಕೆ ಬೃಹತ್ ಎಲ್‌ಪಿಜಿಯನ್ನು ಸೋರ್ಸಿಂಗ್ ಮಾಡುವ ಯೋಜನೆಯನ್ನು ಉಭಯ ಪ್ರಧಾನಮಂತ್ರಿಗಳು ಉದ್ಘಾಟಿಸಿದರು ಮತ್ತು ಇಂತಹ ಇಂಧನ ಸಂಪರ್ಕಗಳು ಗಡಿಯಾಚೆಗಿನ ಇಂಧನ ವ್ಯಾಪಾರವನ್ನು ಹೆಚ್ಚಿಸುತ್ತವೆ ಎಂದು ಆಶಿಸಿದರು.

38. ಢಾಕಾದಲ್ಲಿ ಇತ್ತೀಚೆಗೆ ನಡೆದ ವಿದ್ಯುತ್ ವಲಯದಲ್ಲಿ ಇಂಡೋ-ಬಾಂಗ್ಲಾದೇಶದ ಸಹಕಾರ ಕುರಿತು 17 ನೇ ಜೆಎಸ್‌ಸಿ ಸಭೆಯಲ್ಲಿ ಕತಿಹಾರ್ (ಭಾರತ), ಪರ್ಬೊಟಿಪುರ (ಬಾಂಗ್ಲಾದೇಶ) ಮತ್ತು ಬೊರ್ನಾಗರ್ (ಭಾರತ) ನಡುವಿನ 765 ಕೆವಿ ಡಬಲ್ ಸರ್ಕ್ಯೂಟ್ ಗಡಿಯಾಚೆಗಿನ ವಿದ್ಯುತ್ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಆದ ಒಪ್ಪಂದವನ್ನು ಎರಡೂ ಕಡೆಯವರು ಸ್ವಾಗತಿಸಿದರು. ಇದರ ಅನುಷ್ಠಾನ ವಿಧಾನಗಳನ್ನು ಅಂತಿಮಗೊಳಿಸಲಾಗುವುದು, ಈ ಹೆಚ್ಚುವರಿ ಸಾಮರ್ಥ್ಯವು ಭಾರತ, ನೇಪಾಳ ಮತ್ತು ಭೂತಾನ್‌ನಲ್ಲಿನ ಜಲ ವಿದ್ಯುಚ್ಚಕ್ತಿ ಯೋಜನೆಗಳಿಂದ ಉತ್ಪತ್ತಿಯಾಗುವ ಸ್ಪರ್ಧಾತ್ಮಕವಾಗಿ ಬೆಲೆಯ ವಿದ್ಯುತ್ ಸೇರಿದಂತೆ ಹೆಚ್ಚಿನ ಅಂತರ-ಪ್ರಾದೇಶಿಕ ವಿದ್ಯುತ್ ವ್ಯಾಪಾರವನ್ನು ಶಕ್ತಗೊಳಿಸುತ್ತದೆ ಎಂದು ನಾಯಕರು ಗಮನಿಸಿದರು.

 

ಶಿಕ್ಷಣ ಮತ್ತು ಯುವ ವಿನಿಮಯ

 

39. ಭವಿಷ್ಯದಲ್ಲಿ ಹೂಡಿಕೆಯಾಗಿ ಎರಡೂ ದೇಶಗಳ ಯುವಕರ ನಡುವೆ ವರ್ಧಿತ ಸಹಕಾರದ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಈ ದಿಕ್ಕಿನನೆಡೆಗೆ ಒಂದು ಹೆಜ್ಜೆಯಾಗಿ ಯುವ ವ್ಯವಹಾರಗಳಲ್ಲಿ ಸಹಕಾರ ಕುರಿತು ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಅವರು ಉಲ್ಲೇಖಿಸಿದ್ದಾರೆ. ಬಾಂಗ್ಲಾದೇಶಕ್ಕೆ ಸೂಕ್ತವಾದ ರಚನಾತ್ಮಕ ತರಬೇತಿ ಕಾರ್ಯಕ್ರಮಗಳು ಇನ್ನಷ್ಟು ಉತ್ಪಾದಕವಾಗಲಿದೆ ಎಂದು ಉಭಯ ನಾಯಕರು ಗುರುತಿಸಿದರು.

40. ಶೈಕ್ಷಣಿಕ ಅರ್ಹತೆಗಳ ಪರಸ್ಪರ ಗುರುತಿಸುವಿಕೆ ಕುರಿತು ಒಪ್ಪಂದದ ಶೀಘ್ರ ತೀರ್ಮಾನಕ್ಕೆ ಉಭಯ ನಾಯಕರು ಎರಡೂ ದೇಶಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 

ಸಾಂಸ್ಕೃತಿಕ ಸಹಕಾರ- ಮಹಾತ್ಮ ಗಾಂಧಿಯವರ 150ನೇ ಜಯಂತಿ (2019), ಬಂಗಬಂಧುವಿನ ಜನ್ಮ ಶತಮಾನೋತ್ಸವ (2020) ಮತ್ತು ಬಾಂಗ್ಲಾದೇಶದ ವಿಮೋಚನಾ ಯುದ್ಧದ 50 ನೇ ವರ್ಷ (2021)

 

41. ಎರಡು ಪ್ರಮುಖ ವಾರ್ಷಿಕೋತ್ಸವದ ವರ್ಷಗಳನ್ನು ಸ್ಮರಿಸಲು ಹೆಚ್ಚಿನ ಸಹಕಾರದ ಅಗತ್ಯವನ್ನು ಎರಡೂ ನಾಯಕರು ಒತ್ತಿ ಹೇಳಿದರು: 2020 ರಲ್ಲಿ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ ಮತ್ತು 2021 ರಲ್ಲಿ ಬಾಂಗ್ಲಾದೇಶದ ವಿಮೋಚನಾ ಯುದ್ಧ ಹಾಗೂ ಭಾರತ-ಬಾಂಗ್ಲಾದೇಶದ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50 ನೇ ವರ್ಷ ಈ ಎರಡು ಐತಿಹಾಸಿಕ ವರ್ಷಗಳ ನೆನಪಿಗಾಗಿ, ಇಬ್ಬರೂ ನಾಯಕರು ಎರಡೂ ದೇಶಗಳ ನಡುವೆ ಸಾಂಸ್ಕೃತಿಕ ಸಂವಹನಗಳನ್ನು ಹೆಚ್ಚಿಸಲು ಒಪ್ಪಿಕೊಂಡರು. 2019-2020ರ ಅವಧಿಯಲ್ಲಿ ಪರಸ್ಪರ ಅನುಕೂಲಕರ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಭಾರತದ ಉತ್ಸವವನ್ನು ಆಯೋಜಿಸುವ ಪ್ರಸ್ತಾಪಕ್ಕೆ ಬಾಂಗ್ಲಾದೇಶ ಪ್ರಧಾನಿ ಭಾರತೀಯ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.

42. ಈ ಭೇಟಿಯ ಸಮಯದಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಒಪ್ಪಂದದ ನವೀಕರಣವನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಸ್ವಾಗತಿಸಿದರು.

43. 2020 ರಲ್ಲಿ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿ ಅವರ ಚಲನಚಿತ್ರದ ಸಹ-ನಿರ್ಮಾಣಕ್ಕಾಗಿ ಎನ್ ಎಫ್ ಡಿ ಸಿ ಮತ್ತು ಬಿ ಎಫ್ ಡಿ ಸಿ ನಡುವಿನ ಒಪ್ಪಂದದ ಕೆಲಸವನ್ನು ತ್ವರಿತಗೊಳಿಸುವಂತೆ ಇಬ್ಬರೂ ಪ್ರಧಾನ ಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

44. ವಸಾಹತುಶಾಹಿ ಮತ್ತು ಅಸಮಾನತೆಯ ವಿರುದ್ಧದ ಅಹಿಂಸಾತ್ಮಕ ಹೋರಾಟಕ್ಕಾಗಿ ವಿಶ್ವದಾದ್ಯಂತ ಆಚರಿಸಲಾಗುವ ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಸಂದರ್ಭದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಲು ಒಪ್ಪಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

45. ರಾಷ್ಟ್ರೀಯ ವಸ್ತುಸಂಗ್ರಹಾಲಯ (ಭಾರತ) ಮತ್ತು ಬಂಗಬಂಧು ವಸ್ತುಸಂಗ್ರಹಾಲಯ (ಬಾಂಗ್ಲಾದೇಶ) ನಡುವಿನ ಸಹಕಾರ ಕುರಿತ ಒಪ್ಪಂದಕ್ಕೆ ಉಭಯ ನಾಯಕರು ಸಮ್ಮತಿಸಿದರು ಮತ್ತು ಒಪ್ಪಂದವನ್ನು ಆದಷ್ಟು ಬೇಗನೆ ಅಂತಿಮಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 

ಮ್ಯಾನ್ಮಾರ್‌ನ ರಾಖೈನ್ ರಾಜ್ಯದಿಂದ ನಿರಾಶ್ರಿತರಾದವರು

 

46. ಮ್ಯಾನ್ಮಾರ್‌ನ ರಾಖೈನ್ ರಾಜ್ಯದಿಂದ ಬಲವಂತವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಆಶ್ರಯ ನೀಡುವ ಮತ್ತು ಮಾನವೀಯ ನೆರವು ನೀಡುವಲ್ಲಿ ಬಾಂಗ್ಲಾದೇಶದ ಔದಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಕಾಕ್ಸ್ ಬಜಾರ್‌ನಲ್ಲಿನ ತಾತ್ಕಾಲಿಕ ಶಿಬಿರಗಳಲ್ಲಿ ರೋಹಿಂಗ್ಯಾಗಳಿಗೆ ಆಶ್ರಯ ಕಲ್ಪಿಸಿರುವ ಬಾಂಗ್ಲಾದೇಶ ಸರ್ಕಾರದ ಮಾನವೀಯ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಐದನೇ ಹಂತದ ಮಾನವೀಯ ನೆರವು ನೀಡಲಿದೆ. ಮ್ಯಾನ್ಮಾರ್‌ನಿಂದ ಬಲವಂತವಾಗಿ ಸ್ಥಳಾಂತರಗೊಂಡ ಮಹಿಳೆಯರ ಕೌಶಲ್ಯ ಅಭಿವೃದ್ಧಿಗಾಗಿ ಡೇರೆಗಳು, ಪರಿಹಾರ ಸಾಮಗ್ರಿಗಳು ಮತ್ತು ಒಂದು ಸಾವಿರ ಹೊಲಿಗೆ ಯಂತ್ರಗಳನ್ನು ಈ ನೆರವು ಒಳಗೊಂಡಿರುತ್ತದೆ. ಇದಲ್ಲದೆ, ಮ್ಯಾನ್ಮಾರ್‌ನ ರಾಖೈನ್ ರಾಜ್ಯದಲ್ಲಿ 250 ಮನೆಗಳನ್ನು ನಿರ್ಮಿಸುವ ಮೊದಲ ಯೋಜನೆಯನ್ನು ಭಾರತ ಪೂರ್ಣಗೊಳಿಸಿದೆ, ಈಗ ಈ ಪ್ರದೇಶದಲ್ಲಿ ಮತ್ತಷ್ಟು ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.

47. ಮ್ಯಾನ್ಮಾರ್‌ನಿಂದ ಸ್ಥಳಾಂತರಗೊಂಡ ವ್ಯಕ್ತಿಗಳ ಅಗತ್ಯತೆಗಳನ್ನು ಪೂರೈಸಲು ಸಹಾಯ ಮಾಡಲು 2017 ರ ಸೆಪ್ಟೆಂಬರ್‌ನಿಂದ ಭಾರತ ಒದಗಿಸಿದ ಮಾನವೀಯ ನೆರವಿಗಾಗಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶ ಸರ್ಕಾರದ ಕೃತಜ್ಞತೆಯನ್ನು ಸಲ್ಲಿಸಿದರು. ಮ್ಯಾನ್ಮಾರ್‌ನ ರಾಖೈನ್ ರಾಜ್ಯದಿಮದ ಸ್ಥಳಾಂತರಗೊಂಡ ವ್ಯಕ್ತಿಗಳನ್ನು ತಮ್ಮ ಮನೆಗಳಿಗೆ ಸುರಕ್ಷಿತವಾಗಿ, ತ್ವರಿತವಾಗಿ ಮತ್ತು ಸುಸ್ಥಿರವಾಗಿ ವಾಪಸಾಗಿಸುವ ಅಗತ್ಯವನ್ನು ಇಬ್ಬರು ಪ್ರಧಾನ ಮಂತ್ರಿಗಳು ಒಪ್ಪಿದರು. ಮ್ಯಾನ್ಮಾರ್‌ನ ರಾಖೈನ್ ರಾಜ್ಯದಲ್ಲಿ ಭದ್ರತಾ ಪರಿಸ್ಥಿತಿ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವ ಮೂಲಕ ಅವರ ಮರಳುವಿಕೆಗೆ ಅನುಕೂಲವಾಗುವಂತಹ ಹೆಚ್ಚಿನ ಪ್ರಯತ್ನಗಳ ಅಗತ್ಯವನ್ನು ಅವರು ಒಪ್ಪಿಕೊಂಡರು.

 

ಪ್ರಾದೇಶಿಕ ಮತ್ತು ಜಾಗತಿಕ ಪಾಲುದಾರರು

 

48. ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ಸಂಸ್ಥೆಗಳಲ್ಲಿ ನಿಕಟವಾಗಿ ಕೆಲಸ ಮಾಡುವ ಬದ್ಧತೆಯನ್ನುಇಬ್ಬರೂ ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು. 2030 ರ ಅಜೆಂಡಾದಲ್ಲಿ ಪ್ರತಿಪಾದಿಸಿರುವಂತೆ ಅನುಷ್ಠಾನದ ವಿಧಾನಗಳ ಬಗ್ಗೆ ತಮ್ಮ ಬದ್ಧತೆಗಳನ್ನು ಪೂರೈಸಲು ಅಭಿವೃದ್ಧಿ ಹೊಂದಿದ ದೇಶಗಳಿಗೆ ಕರೆ ನೀಡಲು, ವಿಶೇಷವಾಗಿ ಅಂತರರಾಷ್ಟ್ರೀಯ ರಂಗದಲ್ಲಿ ಒಟ್ಟಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

49. ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಸಹಕಾರವು ಉಭಯ ದೇಶಗಳಿಗೆ ಆದ್ಯತೆಯ ಕ್ಷೇತ್ರವಾಗಿದೆ ಎಂದು ಉಭಯ ನಾಯಕರು ಒಪ್ಪಿಕೊಂಡರು. ಈ ಗುರಿಯತ್ತ, ಎಲ್ಲಾ ಸದಸ್ಯ ರಾಷ್ಟ್ರಗಳ ಸಾಮೂಹಿಕ ಸಮೃದ್ಧಿಯ ಗುರಿಯನ್ನು ಸಾಧಿಸಲು ಉಪ-ಪ್ರಾದೇಶಿಕ ಸಹಕಾರಕ್ಕಾಗಿ ಪರಿಣಾಮಕಾರಿ ಸಾಧನವನ್ನಾಗಿ ಮಾಡಲು BIMSTECನ ಚಟುವಟಿಕೆಗಳನ್ನು ಸುಗಮಗೊಳಿಸಲು ಅವರು ಒಪ್ಪಿಕೊಂಡರು.

50. ಭೇಟಿಯ ಸಮಯದಲ್ಲಿ ಈ ಕೆಳಗಿನ ದ್ವಿಪಕ್ಷೀಯ ದಾಖಲೆಗಳಿಗೆ ಸಹಿ, ವಿನಿಮಯ, ಸ್ವೀಕಾರ ಮತ್ತು ಹಸ್ತಾಂತರ ನಡೆಯಿತು.

. ಕರಾವಳಿ ಕಣ್ಗಾವಲು ವ್ಯವಸ್ಥೆಯನ್ನು ಒದಗಿಸುವ ಒಪ್ಪಂದ.

. ಭಾರತಕ್ಕೆ ಮತ್ತು ಹೊರಗಿನ ಸರಕುಗಳ ಸಾಗಣೆಗೆ ಚಟ್ಟೋಗ್ರಾಮ್ ಮತ್ತು ಮೊಂಗ್ಲಾ ಬಂದರುಗಳ ಬಳಕೆಯ ಕುರಿತು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP).

. ತ್ರಿಪುರದ ಸಬ್ರೂಮ್ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಗಾಗಿ ಫೆನಿ ನದಿಯಿಂದ 1.82 ಕ್ಯೂಸೆಕ್ ನೀರನ್ನು ಭಾರತ ಪಡೆದುಕೊಳ್ಳುವ ಬಗ್ಗೆ ಒಪ್ಪಂದ.

. ಭಾರತವು ಬಾಂಗ್ಲಾದೇಶಕ್ಕೆ ಬದ್ಧವಾಗಿರುವ ಸಾಲಗಳ (ಎಲ್‌ಒಸಿ) ಅನುಷ್ಠಾನಕ್ಕೆ ಸಂಬಂಧಿಸಿದ ಒಪ್ಪಂದ.

. ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಢಾಕಾವಿಶ್ವವಿದ್ಯಾಲಯದ ನಡುವಿನ ಒಪ್ಪಂದ

. ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ನವೀಕರಣ

. ಯುವ ವ್ಯವಹಾರಗಳಲ್ಲಿ ಸಹಕಾರ ಕುರಿತು ಒಪ್ಪಂದ

51. ಚೆನ್ನೈನಲ್ಲಿ ಬಾಂಗ್ಲಾದೇಶದ ಉಪ ಹೈಕಮಿಷನ್ ಕಚೇರಿ ತೆರೆಯುವ ಬಾಂಗ್ಲಾದೇಶದ ಮನವಿಗೆ ಸಮ್ಮತಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಶೇಖ್ ಹಸೀನಾ ಧನ್ಯವಾದ ತಿಳಿಸಿದರು.

ಉನ್ನತ ಮಟ್ಟದ ಭೇಟಿಗಳ ಮೂಲಕ ಆವೇಗವನ್ನು ಕಾಪಾಡಿಕೊಳ್ಳುವುದು

52. ಭಾರತದಲ್ಲಿ ತಮಗೆ ಮತ್ತು ತಮ್ಮ ನಿಯೋಗದ ಸದಸ್ಯರಿಗೆ ನೀಡಿದ ಆತಿಥ್ಯ ತೋರಿಸಿದ ಆತ್ಮೀಯತೆ ಮತ್ತು ಸೌಹಾರ್ದತೆಗಾಗಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

53. ಬಾಂಗ್ಲಾದೇಶಕ್ಕೆ ಭೇಟಿ ನೀಡುವಂತೆ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನವನ್ನು ನೀಡಿದರು. ಆಹ್ವಾನವನ್ನು ಸ್ವೀಕರಿಸಲಾಗಿದ್ದು ಭೇಟಿಯ ದಿನಾಂಕಗಳನ್ನು ರಾಜತಾಂತ್ರಿಕವಾಗಿ ಅಂತಿಮಗೊಳಿಸಲು ಸಮ್ಮತಿಸಲಾಯಿತು.