ಘನತೆವೆತ್ತ,
ಪ್ರಧಾನಮಂತ್ರಿ ಶೇಖ್ ಹಸೀನಾ ಅವರೇ,
ಮಾಧ್ಯಮದ ಸದಸ್ಯರೇ,
ಘನತೆವೆತ್ತ ಪ್ರಧಾನಮಂತ್ರಿ ಶ್ರೀಮತಿ ಶೇಖ್ ಹಸೀನಾ ಅವರನ್ನು ಭಾರತಕ್ಕೆ ಸ್ವಾಗತಿಸುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ಘನತೆವೆತ್ತರೇ,
ನಿಮ್ಮ ಭಾರತ ಭೇಟಿ ಒಂದು ಪವಿತ್ರ ಸಂದರ್ಭದಲ್ಲಿ ಆಗಿದೆ, ಇದು ಪೋಯಲಾ ಬೋಡಾಶಾಖ್ ಗೆ ತುಸು ಮೊದಲು ಆಗಿದೆ. ನಾನು ಈ ಸಂದರ್ಭದಲ್ಲಿ ತಮಗೂ ಮತ್ತು ಬಾಂಗ್ಲಾದೇಶದ ಜನತೆಗೂ ಶುಭೋ ನವಾ ವರ್ಷ ಶುಭ ಕೋರುತ್ತೇನೆ. ತಮ್ಮ ಭೇಟಿಯು ನಮ್ಮ ದೇಶ ಮತ್ತು ನಮ್ಮ ಜನತೆಯ ನಡುವಿನ ಸ್ನೇಹಕ್ಕೆ ಶೋನಾಲಿ ಅಧ್ಯಾಯ (ಸುವರ್ಣ ಅಧ್ಯಾಯ) ಬರೆದಿದೆ. ನಮ್ಮ ರಾಷ್ಟ್ರಗಳ ಬಾಂಧವ್ಯದಲ್ಲಿ ಮತ್ತು ನಮ್ಮ ಪಾಲುದಾರಿಕೆಯಲ್ಲಿ ಆಗಿರುವ ಸಾಧನೆ ಅದ್ಭುತ ಪರಿವರ್ತನೆಯಾಗಿದ್ದು, ಇದು ನಿಮ್ಮ ಬಲವಾದ ಮತ್ತು ದೃಢ ನಾಯಕತ್ವದ ಸ್ಪಷ್ಟ ಕುರುಹಾಗಿದೆ. 1971ರ ಯುದ್ಧದ ಕಾಲದಲ್ಲಿ ವಿಮೋಚನೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಭಾರತೀಯ ಯೋಧರನ್ನು ಗೌರವಿಸುವ ನಿಮ್ಮ ನಿರ್ಧಾರ, ಭಾರತದ ಜನರ ಹೃದಯ ತಟ್ಟಿದೆ. ಬಾಂಗ್ಲಾದೇಶವನ್ನು ಭಯೋತ್ಪಾದಕರಿಂದ ವಿಮುಕ್ತಿಗೊಳಿಸುವ ಸಲುವಾಗಿ ಭಾರತೀಯ ಯೋಧರು ಮತ್ತು बीरमुक्तिजोधाಒಗ್ಗೂಡಿ ಹೋರಾಡಿದನ್ನು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಯಿಂದ ತೆಗೆದುಕೊಳ್ಳುತ್ತಾರೆ.
ಸ್ನೇಹಿತರೇ,
ಇಂದು, ಘನತೆವೆತ್ತ ಶೇಖ್ ಹಸೀನಾ ಮತ್ತು ನಾನು, ನಮ್ಮ ಪಾಲುದಾರಿಕೆಯ ಪೂರ್ಣ ಶ್ರೇಣಿಯ ಕುರಿತಂತೆ ಫಲಪ್ರದ ಮತ್ತು ಸಮಗ್ರ ಮಾತುಕತೆಯನ್ನು ನಡೆಸಿದ್ದೇವೆ. ನಮ್ಮ ಸಹಕಾರದ ಕಾರ್ಯಕ್ರಮವು ಉದ್ದೇಶಪೂರ್ವಕವಾದ ಕ್ರಮಗಳ ಮೇಲೆ ಕೇಂದ್ರೀಕೃತವಾಗಿರಬೇಕು ಎಂಬುದನ್ನು ನಾವು ಒಪ್ಪಿದ್ದೇವೆ. ನಮ್ಮ ಬಾಂಧವ್ಯವನ್ನು ಮುಂದುವರಿಸಿ, ವಿಶೇಷವಾಗಿ ಹೊಸ ಮಾರ್ಗಗಳನ್ನು ಮತ್ತು ಹೊಸ ಅವಕಾಶಗಳನ್ನು ಪಡೆಯುವತ್ತ ನಾವು ನೋಡುತ್ತಿದ್ದೇವೆ. ನಾವು ಹೊಸ ಕ್ಷೇತ್ರಗಳಲ್ಲಿ ಅದರಲ್ಲೂ ನಮ್ಮ ಎರಡೂ ಸಮಾಜದ ಯುವಜನರು ಆಳವಾದ ಸಂಪರ್ಕ ಹೊಂದಿರುವ ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ನಿರ್ಮಾಣವನ್ನು ನಾವು ಬಯಸಿದ್ದೇವೆ. ಇದರಲ್ಲಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಸೈಬರ್ ಭದ್ರತೆ, ಬಾಹ್ಯಾಕಾಶ ಅವಕಾಶಗಳು, ನಾಗರಿಕ ಪರಮಾಣು ಇಂಧನ ಮತ್ತು ಇತರ ಕ್ಷೇತ್ರಗಳೂ ಸೇರಿವೆ.
ಸ್ನೇಹಿತರೆ,
ಭಾರತವು ಬಾಂಗ್ಲಾದೇಶದ ಮತ್ತು ಅದರ ಜನರ ಪ್ರಗತಿಗಾಗಿ ಸದಾ ನಿಂತಿದೆ. ನಾವು ಬಾಂಗ್ಲಾದೇಶದ ದೀರ್ಘಕಾಲದ ಮತ್ತು ವಿಶ್ವಾಸಾರ್ಹವಾದ ಅಭಿವೃದ್ಧಿ ಪಾಲುದಾರರಾಗಿದ್ದೇವೆ.ಭಾರತ ಮತ್ತು ಬಾಂಗ್ಲಾದೇಶ ನಮ್ಮ ಸಹಕಾರದ ಫಲ ನಮ್ಮ ಜನರಿಗೆ ಉಪಯುಕ್ತವಾಗಬೇಕು ಎಂದು ನಾವು ಬಯಸುತ್ತೇವೆ. ಈ ನಿಟ್ಟಿನಲ್ಲಿ, ನಾನು, ಹೊಸ ಬಾಂಗ್ಲಾದೇಶದ ಆದ್ಯತೆಯ ವಲಯದಲ್ಲಿ 4.5 ಶತಕೋಟಿ ಡಾಲರ್ ರಿಯಾಯಿತಿಯ ಹೊಸ ಲೈನ್ ಆಫ್ ಕ್ರೆಡಿಟ್ ಅನ್ನು ಪ್ರಕಟಿಸಲು ಹರ್ಷಿಸುತ್ತೇನೆ. ಇದು ಬಾಂಗ್ಲಾದೇಶಕ್ಕೆ ನಮ್ಮ ಸಂಪನ್ಮೂಲದ ಹಂಚಿಕೆಯನ್ನು ಕಳೆದ ಆರು ವರ್ಷಗಲ್ಲಿ 8 ಶತಕೋಟಿ ಡಾಲರ್ ಗಿಂತ ಹೆಚ್ಚು ಮಾಡಿದೆ. ನಮ್ಮ ಅಭಿವೃದ್ಧಿಯ ಪಾಲುದಾರಿಕೆಯಲ್ಲಿ ಇಂಧನ ಸುರಕ್ಷತೆ ಮಹತ್ವದ ಆಯಾಮವಾಗಿದೆ. ನಮ್ಮ ಇಂಧನ ಪಾಲುದಾರಿಕೆಯು ಮುಂದೆಯೂ ಬೆಳೆಯುತ್ತದೆ. ಇಂದು ನಾವು ಈಗಾಗಲೇ ಭಾರತದಿಂದ ಬಾಂಗ್ಲಾದೇಶಕ್ಕೆ ಹರಿಯುತ್ತಿರುವ 600 ಮೆಗಾ ವ್ಯಾಟ್ ಜೊತೆಗೆ 60 ಮೆಗಾ ವ್ಯಾಟ್ ವಿದ್ಯುತ್ ಅನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿದ್ದೇವೆ. ಹಾಲಿ ಇರುವ ಅಂತರ ಸಂಪರ್ಕದಲ್ಲಿ ಮತ್ತೊಂದು 500 ಮೆಗಾ ವ್ಯಾಟ್ ಸರಬರಾಜಿಗೂ ಈಗಾಗಲೇ ಒಪ್ಪಿಗೆ ನೀಡಿದ್ದೇವೆ. ನುಮಾಲಿಗರ್ ನಿಂದ ಪಾರ್ವತಿಪುರ್ ವರೆಗೆ ನಾವು ಡೀಸೆಲ್ ತೈಲ ಕೊಳವೆ ಮಾರ್ಗಕ್ಕೆ ಹಣಕಾಸು ನೆರವು ನೀಡಲು ಒಪ್ಪಿದ್ದೇವೆ. ನಮ್ಮ ಕಂಪನಿಗಳು ಬಾಂಗ್ಲಾದೇಶಕ್ಕೆ ಹೈಸ್ಪೀಡ್ ಡೀಸೆಲ್ ಪೂರೈಕೆಗೆ ದೀರ್ಘ ಕಾಲದ ಒಪ್ಪಂದವನ್ನು ಮಾಡಿಕೊಂಡಿವೆ. ಕೊಳವೆ ಮಾರ್ಗ ನಿರ್ಮಾಣವಾಗುವತನಕ ನಿಯಮಿತವಾದ ಪೂರೈಕೆಗೆ ವೇಳಾಪಟ್ಟಿಗೂ ನಾವು ಒಪ್ಪಿಗೆ ಸೂಚಿಸಿದ್ದೇವೆ. ನಾವು ಈ ಪ್ರದೇಶಕ್ಕೆ ಪ್ರವೇಶಿಸಲು ಎರಡೂ ರಾಷ್ಟ್ರಗಳು ಖಾಸಗಿ ವಲಯಕ್ಕೆ ಉತ್ತೇಜನ ನೀಡುತ್ತಿವೆ. ಬಾಂಗ್ಲಾದೇಶದ ಇಂದನ ವಲಯದಲ್ಲಿ ಹಲವು ಹೂಡಿಕೆ ಒಪ್ಪಂದಗಳಿಗೆ ಭಾರತೀಯ ಕಂಪನಿಗಳು ಮುಂಬರುವ ದಿನಗಳಲ್ಲಿ ಅಂಕಿತ ಹಾಕುವ ನಿರೀಕ್ಷೆ ಇದೆ. ಬಾಂಗ್ಲಾದೇಶದ ಇಂಧನ ಅಗತ್ಯಗಳನ್ನು ಪೂರೈಸಲು ಮತ್ತು 2021ರೊಳಗೆ ಎಲ್ಲರಿಗೂ ವಿದ್ಯುತ್ ಗುರಿಯನ್ನು ಸಾಧಿಸಲು ಭಾರತವು ಪಾಲುದಾರನಾಗಿ ಮುಂದುವರಿಯಲು ಇಚ್ಛಿಸುತ್ತದೆ.
ಸ್ನೇಹಿತರೆ,
ದ್ವಿಪಕ್ಷೀಯ ಅಭಿವೃದ್ಧಿ ಪಾಲುದಾರಿಕೆ, ಉಪ ಪ್ರಾದೇಶಿಕ ಆರ್ಥಿಕ ಯೋಜನೆ ಮತ್ತು ದೊಡ್ಡ ಪ್ರಾದೇಶಿಕ ಆರ್ಥಿಕ ಪ್ರಗತಿಯ ಯಶಸ್ಸಿಗೆ ಸಂಪರ್ಕ ಮಹತ್ವದ್ದಾಗಿದೆ. ಇಂದು, ಪಶ್ಚಿಮ ಬಂಗಾಳದ ಮಾನ್ಯ ಮುಖ್ಯಮಂತ್ರಿಯವರೊಂದಿಗೆ, ನಾವು ನಮ್ಮ ವೃದ್ಧಿಸುತ್ತಿರುವ ಸಂಪರ್ಕಕ್ಕೆ ಹಲವು ಸೇರ್ಪಡೆ ಮಾಡಿದ್ದೇವೆ. ಕೋಲ್ಕತ್ತಾ ಮತ್ತು ಕುಲ್ನಾ ನಡುವೆ ಬಸ್ ಮತ್ತು ರೈಲು ಸಂಪರ್ಕ ಮತ್ತು ರಾಧಿಕಾಪುರ್ – ಬಿರೋಲ್ ನಡುವೆ ಸಂಪರ್ಕ ಇಂದಿನಿಂದ ಪುನಾರಂಭಗೊಂಡಿದೆ. ಭೂ ಜಲ ಮಾರ್ಗದಲ್ಲಿ ಸಹ ಹೊಂದಾಣಿಕೆ ಆಗಿದೆ. ಮತ್ತು ಕರಾವಳಿ ಶಿಪ್ಪಿಂಗ್ ಒಪ್ಪಂದ ಕಾರ್ಯರೂಪಕ್ಕೆ ತರಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡೂ ಕಡೆಯಿಂದ ಸರಕುಗಳನ್ನು ಹಡಗಿನಲ್ಲಿ ಸಾಗಿಸುವ ಕುರಿತು ಆಗಿರುವ ಪ್ರಗತಿ ನಮಗೆ ಸಂತಸ ತಂದಿದೆ. ನಾವು ಬಿಬಿಐಎನ್ ಮೋಟಾರು ವಾಹನಗಳ ಒಪ್ಪಂದ ಶೀಘ್ರ ಜಾರಿಯಾಗುವುದನ್ನು ಎದಿರು ನೋಡುತ್ತಿದ್ದೇವೆ. ಇದು ಉಪ ಪ್ರಾದೇಶಿಕ ಸಮಗ್ರತೆಯಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದೆ.
ಸ್ನೇಹಿತರೆ,
ಪ್ರಧಾನಮಂತ್ರಿ ಶೇಖ ಹಸೀನಾ ಮತ್ತು ನಾನು, ನಮ್ಮ ವಾಣಿಜ್ಯ ಕಾರ್ಯಕ್ರಮಗಳನ್ನು ವೈವಿಧ್ಯಗೊಳಿಸುವ ಅಗತ್ಯವನ್ನು ಗುರುತಿಸಿದ್ದೇವೆ. ಇದು ಕೇವಲ ಎರಡು ರಾಷ್ಟ್ರಗಳ ನಡುವೆ ವ್ಯಾಪಕ ಶ್ರೇಣಿಯ ವಾಣಿಜ್ಯ ಪಾಲುದಾರಿಕೆಯಷ್ಟೇ ಅಲ್ಲ, ಜೊತೆಗೆ ದೊಡ್ಡ ಪ್ರಮಾಣದ ಪ್ರಾದೇಶಿಕ ಉಪಯೋಗಕ್ಕಾಗಿ ಕೂಡ. ಇದರಲ್ಲಿ ಬಹುದೊಡ್ಡ ಪ್ರಯತ್ನದ ಭಾಗ, ಎರಡೂ ರಾಷ್ಟ್ರಗಳ ವಾಣಿಜ್ಯ ಮತ್ತು ಕೈಗಾರಿಕೆಯಿಂದ ಬರಬೇಕಿದೆ. ಪ್ರಧಾನಮಂತ್ರಿಯವರೊಂದಿಗೆ ಉನ್ನತ ಮಟ್ಟದ ಅಧಿಕಾರದ ವಾಣಿಜ್ಯ ನಿಯೋಗವನ್ನೂ ಸ್ವಾಗತಿಸಲು ನನಗೆ ಸಂತೋಷವಾಗುತ್ತದೆ. ಹೊಸ ಗಡಿ ವಾಣಿಜ್ಯ ಕೇಂದ್ರ ತೆರೆಯುವ ನಮ್ಮ ಒಪ್ಪಂದವು ಗಡಿ ಸಮುದಾಯವನ್ನು ವಾಣಿಜ್ಯದ ಮೂಲಕ ಸಬಲೀಕರಿಸಲಿದ್ದು, ಅವರ ಜೀವನೋಪಾಯಕ್ಕೂ ಕೊಡುಗೆ ನೀಡಲಿದೆ.
ಸ್ನೇಹಿತರೇ,
ಪ್ರಧಾನಮಂತ್ರಿ ಶೇಖ್ ಹಸೀನಾ ಮತ್ತು ನಾನು, ನಮ್ಮ ಸಾಮರ್ಥ್ಯ ವರ್ಧನೆ ಮತ್ತು ತರಬೇತಿ ಉಪಕ್ರಮಗಳ ಯಶಸ್ಸನ್ನು ಪರಿಗಣಿಸಿದ್ದೇವೆ. 1500 ಬಾಂಗ್ಲಾದೇಶಿ ನಾಗರಿಕ ಸೇವಕರಿಗೆ ಭಾರತದಲ್ಲಿ ನೀಡುತ್ತಿರುವ ತರಬೇತಿ ಬಹುತೇಕ ಮುಕ್ತಾಯ ಹಂತದಲ್ಲಿದೆ. ನಾವು ಇದೇ ಸ್ವರೂಪದಲ್ಲಿ ಬಾಂಗ್ಲಾದೇಶದ 1500 ನ್ಯಾಯಿಕ ಅಧಿಕಾರಿಗಳಿಗೂ ನಮ್ಮ ನ್ಯಾಯಿಕ ಅಕಾಡಮಿಗಳಲ್ಲಿ ತರಬೇತಿ ನೀಡಲಿದ್ದೇವೆ.
ಸ್ನೇಹಿತರೆ,
ನಮ್ಮ ಪಾಲುದಾರಿಕೆಯು ನಮ್ಮ ಜನರಲ್ಲಿ ಸಮೃದ್ಧಿ ತರುತ್ತಿದೆ. ಜೊತೆಗೆ, ಅದು ಅವರನ್ನು ಮೂಲಭೂತವಾದ ಮತ್ತು ವಿಧ್ವಂಸಕತೆಯಿಂದ ರಕ್ಷಿಸಲೂ ಶ್ರಮಿಸುತ್ತಿದೆ. ಅದರ ಹಬ್ಬುವಿಕೆಯ ಭೀತಿ ಕೇವಲ ಭಾರತ ಮತ್ತು ಬಾಂಗ್ಲಾದೇಶಕ್ಕೆ ಮಾತ್ರವೇ ಅಲ್ಲ, ಇಡೀ ವಲಯಕ್ಕೆ ಭೀತಿ ಒಡ್ಡಿದೆ. ಭಯೋತ್ಪಾದನೆಯನ್ನು ಎದುರಿಸುವ ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ದೃಢ ಸಂಕಲ್ಪದ ಬಗ್ಗೆ ಬಗ್ಗೆ ನಮಗೆ ಅತ್ಯಂತ ಗೌರವವಿದೆ. ಭಯೋತ್ಪಾದನೆಯ ವಿರುದ್ಧ ಅವರ ಸರ್ಕಾರದ ಶೂನ್ಯ ಸಹಿಷ್ಣುತೆಯ ನೀತಿ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ನಾವು ನಮ್ಮ ಜನರ ಮತ್ತು ವಲಯದ ಶಾಂತಿ, ಸುರಕ್ಷತೆ ಮತ್ತು ಅಭಿವೃದ್ಧಿ ನಮ್ಮ ಕಾರ್ಯಕ್ರಮಗಳ ಕೇಂದ್ರಬಿಂದು ಎಂಬುದನ್ನು ನಾವು ಒಪ್ಪಿದ್ದೇವೆ. ಇಂದು ನಮ್ಮ ಸಶಸ್ತ್ರ ಪಡೆಗಳ ನಡುವೆ ಆಪ್ತ ಸಹಕಾರ ಕುರಿತ ಒಪ್ಪಂದಕ್ಕೆ ಅಂಕಿತ ಹಾಕುವ ಮೂಲಕ ದೀರ್ಘಕಾಲದಿಂದ ಬಾಕಿ ಇದ್ದ ಕಾರ್ಯ ಮಾಡಿದ್ದೇವೆ. ನಾನು ಬಾಂಗ್ಲಾದೇಶದ ರಕ್ಷಣ ಸಂಬಂಧಿತ ದಾಸ್ತಾನಿಗೆ ಬೆಂಬಲವಾಗಿ 500 ದಶಲಕ್ಷ ಅಮೆರಿಕನ್ ಡಾಲರ್ ಲೈನ್ ಆಫ್ ಕ್ರೆಡಿಟ್ ಪ್ರಕಟಿಸಲು ಹರ್ಷಿಸುತ್ತೇನೆ. ಈ ಲೈನ್ ಆಫ್ ಕ್ರೆಡಿಟ್ ಜಾರಿಯಲ್ಲಿ, ನಾವು ಬಾಂಗ್ಲಾದೇಶದ ಅಗತ್ಯ ಮತ್ತು ಆದ್ಯತೆಗಳಿಂದ ಮಾರ್ಗದರ್ಶಿತರಾಗಿದ್ದೇವೆ.
ಸ್ನೇಹಿತರೆ,
ನಮ್ಮ ಎರಡೂ ದೇಶಗಳು ಅತಿ ಉದ್ದದ ನೆಲ ಗಡಿಗಳಲ್ಲಿ ಒಂದನ್ನು ಹಂಚಿಕೊಂಡಿವೆ. 2015ರಲ್ಲಿ ನಾನು ಢಾಕಾಗೆ ಭೇಟಿ ನೀಡಿದಾಗ, ನಾವು ನೆಲ ಗಡಿ ಒಪ್ಪಂದವನ್ನು ಪೂರ್ಣಗೊಳಿಸಿದ್ದೆವು. ಅದರ ಜಾರಿ ಈಗ ಪ್ರಗತಿಯಲ್ಲಿದೆ. ನಮ್ಮ ಗಡಿ ಹಂಚಿಕೆಯ ಜೊತೆಗೆ ನಾವು ನದಿಗಳನ್ನೂ ಹಂಚಿಕೊಂಡಿದ್ದೇವೆ. ಅವು ನಮ್ಮ ಜನರ ಜೀವನೋಪಾಯ ಸ್ಥಿರಗೊಳಿಸಿವೆ. ಮತ್ತು ಮತ್ತೊಂದು ತೀವ್ರವಾಗಿ ಆಕರ್ಷಿಸಿರುವುದು ತೀಸ್ತಾ. ಇದು ಭಾರತಕ್ಕೂ ಮಹತ್ವದ್ದಾಗಿದೆ. ಭಾರತಕ್ಕೆ ಮತ್ತು ಬಾಂಗ್ಲಾದೇಶಕ್ಕೆ ಮತ್ತು ಬಾಂಗ್ಲಾದೇಶದ ಬಾಂಧವ್ಯಕ್ಕೆ ಇದು ಮಹತ್ವದ್ದಾಗಿದೆ. ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರು ನಮ್ಮ ಗೌರವದ ಅತಿಥಿಯಾಗಿದ್ದರು. ಬಾಂಗ್ಲಾದೇಶದೊಂದಿಗೆ ಅವರಿಗಿರುವ ಭಾವನೆಗಳು ನನಗಿರುವಷ್ಟೇ ಆತ್ಮೀಯವಾಗಿದೆ ಎಂಬುದನ್ನು ನಾನು ಬಲ್ಲೆ. ನಮ್ಮ ಬದ್ಧತೆ ಮತ್ತು ಪ್ರಯತ್ನಗಳ ಬಗ್ಗೆ ನಾನು ನಿಮಗೆ ಮತ್ತು ಬಾಂಗ್ಲಾದೇಶದ ಜನತೆಗೆ ಆಶ್ವಾಸನೆ ನೀಡುತ್ತೇನೆ, ತೀಸ್ತಾ ನೀರು ಹಂಚಿಕೆಯ ಕುರಿತಂತೆ ನನ್ನ ಸರ್ಕಾರ ಮತ್ತು ಗೌರವಾನ್ವಿತ ಹಸೀನಾ ಅವರ ನಿಮ್ಮ ಸರ್ಕಾರ ಮಾತ್ರವೇ ಶೀಘ್ರ ಪರಿಹಾರ ಒದಗಿಸಬಲ್ಲದು ಎಂದು ನಾನು ದೃಢವಾಗಿ ನಂಬಿದ್ದೇನೆ.
ಸ್ನೇಹಿತರೆ,
ಬಾಂಗ್ಲಾದೇಶದ ಭಂಗಬಂದು ಶೇಖ್ ಮುಜಿಬುರ್ ರೆಹಮಾನ್, ಅವರು ಭಾರತದ ಆತ್ಮೀಯ ಗೆಳೆಯರಾಗಿದ್ದರು. ಮತ್ತು ಮೇರು ನಾಯಕರಾಗಿದ್ದರು. ನಮ್ಮ ಗೌರವದ ಸಂಕೇತವಾಗಿ ಮತ್ತು ಬಾಂಗ್ಲಾದೇಶದ ಜನಕನ ಬಗ್ಗೆ ಇರುವ ಆಳವಾದ ಗೌರವಕ್ಕಾಗಿ ನಮ್ಮ ದೇಶದ ರಾಜಧಾನಿಯ ಪ್ರಮುಖ ರಸ್ತೆಗೆ ಅವರ ಬಳಿಕ ಅವರ ಹೆಸರು ಇಡಲಾಗಿದೆ. ನಾವು ಜಂಟಿಯಾಗಿ ಭಂಗಬಂದು ಶೇಖ್ ಮುಜಿಬುರ್ ರೆಹಮಾನ್ ಅವರ ಬದುಕು ಮತ್ತು ಕಾರ್ಯಗಳ ಮೇಲೆ ಜಂಟಿಯಾಗಿ ಚಿತ್ರವನ್ನು ನಿರ್ಮಿಸಲೂ ನಾವು ಒಪ್ಪಿಗೆ ಸೂಚಿಸಿದ್ದೇವೆ. ಇದನ್ನು ಅವರ ಜನ್ಮ ಶತಾಬ್ದಿ ವರ್ಷ 2020ರಲ್ಲಿ ಬಿಡುಗಡೆ ಮಾಡಲಾಗುವುದು. ಪ್ರಧಾನಮಂತ್ರಿ ಶೇಖ ಹಸೀನಾ ಜೀ ಅವರೊಂದಿಗೆ ನಾನು, ಕೂಡ ಭಂಗಬಂಧು ಅವರ’ಪೂರ್ಣಗೊಳಿಸದ ನೆನಪುಗಳು’ ಹಿಂದಿ ಭಾಷಾಂತರವನ್ನು ಬಿಡುಗಡೆ ಮಾಡುವ ಗೌರವ ಪಡೆದಿದ್ದೇನೆ. ಅವರ ಬದುಕು, ಹೋರಾಟ ಮತ್ತು ಬಾಂಗ್ಲಾದೇಶದ ರಚನೆಯಲ್ಲಿ ಅವರ ಕೊಡುಗೆ ಮುಂದಿನ ಪೀಳಿಗೆಯನ್ನು ಪ್ರೇರೇಪಿಸುತ್ತಲೇ ಇರುತ್ತದೆ. 2021ರಲ್ಲಿ
ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಅಂಗವಾಗಿ, ನಾವು ಬಾಂಗ್ಲಾದೇ ವಿಮೋಚನೆ ಸಂಗ್ರಾಮದ ಸಾಕ್ಷ್ಯಚಿತ್ರವನ್ನು ಜಂಟಿಯಾಗಿ ನಿರ್ಮಿಸಲೂ ಒಪ್ಪಿದ್ದೇವೆ.
ಸ್ನೇಹಿತರೆ,
ನೀವು ಭಂಗಬಂಧು ಅವರ ದೃಷ್ಟಿ ಮತ್ತು ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿದ್ದೀರಿ, ಇಂದು, ನಿಮ್ಮ ನಾಯಕತ್ವದಲ್ಲಿ ಬಾಂಗ್ಲಾದೇಶವು, ಹೆಚ್ಚಿನ ಬೆಳವಣಿಗೆ ಮತ್ತು ಅಭಿವೃದ್ಧಿಯ ಒಂದು ಪಥದಲ್ಲಿ ನಡೆಯುತ್ತಿದೆ. ನಾವು ಭಾರತದಲ್ಲಿ ಬಾಂಗ್ಲಾದೇಶದೊಂದಿಗಿನ ಬಾಂಧವ್ಯವನ್ನು ಆನಂದಿಸುತ್ತೇವೆ. ಬಾಂಧವ್ಯವು ರಕ್ತ ಮತ್ತು ತಲೆಮಾರುಗಳ ಆಪ್ತತೆಯಲ್ಲಿ ಅಂತರ್ಗತವಾಗಿದೆ. ಬಾಂಧವ್ಯವು ಉತ್ತಮ ಮತ್ತು ಸುರಕ್ಷಿತ ಭವಿಷ್ಯವನ್ನು ನಮ್ಮ ಜನತೆಗೆ ಅಪೇಕ್ಷಿಸುತ್ತದೆ. ನಾನು ಈ ಮಾತುಗಳೊಂದಿಗೆ, ಘನತೆವೆತ್ತರೇ, ನಾನು ಮತ್ತೊಮ್ಮೆ ತಮ್ಮನ್ನೂ ತಮ್ಮ ನಿಯೋಗವನ್ನು ಭಾರತಕ್ಕೆ ಸ್ವಾಗತಿಸುತ್ತೇನೆ.
ಧನ್ಯವಾದಗಳು
********
AKT/HS
It is an absolute honour to host PM Sheikh Hasina. We held fruitful & wide-ranging talks on the full spectrum of India-Bangladesh relations. pic.twitter.com/HnqdtoZhb3
— Narendra Modi (@narendramodi) April 8, 2017
PM Sheikh Hasina & I reviewed existing cooperation & discussed new avenues of extensive cooperation that will benefit our nations & region.
— Narendra Modi (@narendramodi) April 8, 2017
Collaboration in commerce, boosting connectivity, capacity building & cooperation between our armed forces were vital areas discussed.
— Narendra Modi (@narendramodi) April 8, 2017
We greatly admire Prime Minister Sheikh Hasina’s firm resolve in dealing with terrorism. Her ‘zero tolerance’ policy inspires us.
— Narendra Modi (@narendramodi) April 8, 2017
We recall the towering leader & a friend of India’s, Sheikh Mujibur Rahman. Released Hindi translation of Bangabandhu’s ‘Unfinished Memoirs’ pic.twitter.com/05xbmv0f7W
— Narendra Modi (@narendramodi) April 8, 2017
PM Sheikh Hasina’s visit marks a ‘शोनाली अध्याय’ (golden era) in the friendship between our people and our nations. https://t.co/vgxOEyJqCH
— Narendra Modi (@narendramodi) April 8, 2017