ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಬಹುರಾಜ್ಯ ಸಹಕಾರ ಸಂಘಗಳ (ಎಂಎಸ್ ಸಿಎಸ್) ಕಾಯಿದೆ 2002ರ ಅಡಿ ರಾಷ್ಟ್ರೀಯ ಮಟ್ಟದ ಬಹುರಾಜ್ಯ ಸಹಕಾರ ರಫ್ತು ಸಂಘವನ್ನು ಸ್ಥಾಪಿಸಿ, ಉತ್ತೇಜನ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಇದಕ್ಕೆ ಸಂಬಂಧಿತ ಸಚಿವಾಲಯಗಳು ವಿಶೇಷವಾಗಿ ವಿದೇಶಾಂಗ ವ್ಯವಹಾರ ಮತ್ತು ವಾಣಿಜ್ಯ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ‘ಸರ್ಕಾರದ ಸಂಪೂರ್ಣ ವಿಧಾನ ಅನುಸರಿಸುವ ಮೂಲಕ, ತಮ್ಮ ರಫ್ತು ಸಂಬಂಧಿತ ನೀತಿಗಳು, ಯೋಜನೆಗಳು ಮತ್ತು ಏಜೆನ್ಸಿಗಳ ಮೂಲಕ ಸಹಕಾರಿ ಸಂಸ್ಥೆಗಳು ಮತ್ತು ಸಂಬಂಧಿತ ಘಟಕಗಳು ಉತ್ಪಾದಿಸುವ ಎಲ್ಲಾ ಸರಕುಗಳು ಮತ್ತು ಸೇವೆಗಳ ರಫ್ತುಗಳನ್ನು ಕೈಗೊಳ್ಳಲು ಬೆಂಬಲ ನೀಡಲಿವೆ.
ಪ್ರಸ್ತಾವಿತ ಅಥವಾ ಉದ್ದೇಶಿತ ಸೊಸೈಟಿಯು ಸರಕು ಮತ್ತು ಸೇವೆಗಳ ರಫ್ತುಗಳನ್ನು ಕೈಗೊಳ್ಳಲು ಮತ್ತು ಉತ್ತೇಜಿಸಲು ಆಶ್ರಯ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವ ಮೂಲಕ ಸಹಕಾರಿ ವಲಯದ ರಫ್ತಿಗೆ ಒತ್ತು ನೀಡುತ್ತದೆ. ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಸಹಕಾರಿ ಸಂಸ್ಥೆಗಳ ರಫ್ತು ಸಾಮರ್ಥ್ಯವನ್ನು ಹೊರತರಲು, ಹೆಚ್ಚಿಸಲು ಸಹಾಯ ಮಾಡಲಿದೆ. ಈ ಉದ್ದೇಶಿತ ಸೊಸೈಟಿಯು ಸಹಕಾರಿಗಳಿಗೆ ವಿವಿಧ ರಫ್ತು ಸಂಬಂಧಿತ ಯೋಜನೆಗಳು ಮತ್ತು ಭಾರತ ಸರ್ಕಾರದ ವಿವಿಧ ಸಚಿವಾಲಯಗಳ ನೀತಿಗಳ ಪ್ರಯೋಜನಗಳನ್ನು ‘ಸಂಪೂರ್ಣ ಸರ್ಕಾರಿ ವಿಧಾನ’ದ ಮೂಲಕ ಎಲ್ಲರನ್ನೂ ಒಳಗೊಂಡ ಪ್ರಗತಿ ಮಾದರಿಯಲ್ಲಿ ಪಡೆಯಲು ಸಹಾಯ ಮಾಡುತ್ತದೆ. “ಸಹಕಾರ್-ಸೇ-ಸಮೃದ್ಧಿ”ಯ ಗುರಿ ಸಾಧಿಸಲು ಸಹ ಇದು ಸಹಾಯ ಮಾಡುತ್ತದೆ, ಅಲ್ಲದೆ, ಸದಸ್ಯರು ತಮ್ಮ ಸರಕು ಮತ್ತು ಸೇವೆಗಳ ರಫ್ತಿಗೆ ಉತ್ತಮ ಬೆಲೆ ಪಡೆಯುವ ಜತೆಗೆ, ಸೊಸೈಟಿಯಲ್ಲಿ ಉತ್ಪತ್ತಿಯಾಗುವ ಲಾಭಾಂಶವನ್ನು ಸಹ ಪಡೆಯುತ್ತಾರೆ.
ಪ್ರಸ್ತಾವಿತ ಸೊಸೈಟಿಯ ಮೂಲಕ ಮಾಡುವ ಹೆಚ್ಚಿನ ರಫ್ತುಗಳು ವಿವಿಧ ಹಂತಗಳಲ್ಲಿ ಸಹಕಾರಿಗಳಿಂದ ಸರಕು ಮತ್ತು ಸೇವೆಗಳ ಉತ್ಪಾದನೆ ಹೆಚ್ಚಿಸುತ್ತದೆ. ಇದರಿಂದಾಗಿ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ. ಸರಕುಗಳ ಸಂಸ್ಕರಣೆ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಹೊಂದಿಕೆಯಾಗುವ ಸೇವೆಗಳನ್ನು ಹೆಚ್ಚಿಸುವುದರಿಂದ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಸಹಕಾರಿ ಉತ್ಪನ್ನಗಳ ಹೆಚ್ಚಿನ ರಫ್ತು ವಹಿವಾಟಿನಿಂದ ಮೇಕ್ ಇನ್ ಇಂಡಿಯಾ ಉತ್ತೇಜಿಸುವ ಜತೆಗೆ, ಆತ್ಮನಿರ್ಭರ್ ಭಾರತ ಕಟ್ಟಲು ಕಾರಣವಾಗುತ್ತದೆ.
*****
The cooperatives sector plays a pivotal role in creating a stronger economy and furthering rural development. In this context, the Cabinet has taken a crucial decision which will further our vision of 'Sahakar Se Samriddhi.' https://t.co/24HwUxWUoa
— Narendra Modi (@narendramodi) January 11, 2023