Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಸವ ಜಯಂತಿ ಮತ್ತು ಬಸವ ಸಮಿತಿಯ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಪ್ರಧಾನಮಂತ್ರಿಗಳು ಮಾಡಿದ ಭಾಷಣ.

ಬಸವ ಜಯಂತಿ ಮತ್ತು ಬಸವ ಸಮಿತಿಯ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಪ್ರಧಾನಮಂತ್ರಿಗಳು  ಮಾಡಿದ ಭಾಷಣ.


ನಿಮ್ಮೆಲ್ಲರಿಗೂಶ್ರೀಬಸವೇಶ್ವರ ಜಯಂತಿಯಅನೇಕಾನೇಕಶುಭಾಶಯಗಳು. ಬಸವಸಮಿತಿಸಹ 50 ವಸಂತಗಳನ್ನು ಪೂರೈಸಿಒಂದು ಉತ್ತಮಕಾರ್ಯದಮೂಲಕ ಶ್ರೀಬಸವೇಶ್ವರರವಚನಗಳನ್ನು ಪ್ರಚಾರಮಾಡುವಲ್ಲಿಮುಖ್ಯಪಾತ್ರವನ್ನುವಹಿಸುತ್ತಿದೆ. ಇದಕ್ಕಾಗಿ ಬಸವಸಮಿತಿಯನ್ನುಸಹ ನಾನುಹೃತ್ಪೂರ್ವಕವಾಗಿಅಭಿನಂದಿಸುತ್ತೇನೆ.

ನಮ್ಮಮಾಜಿಉಪರಾಷ್ಟ್ರಪತಿ ಶ್ರೀಬಿ.ಡಿ.ಜತ್ತಿಯವರನ್ನು ಈಸಮಯದಲ್ಲಿಬಹಳ ಆದರದಿಂದನಪಿಸಿಕೊಳ್ಳುತ್ತೇನೆ.ಅವರು ಈ ಪವಿತ್ರಕಾರ್ಯವನ್ನು ಆರಂಭಿಸಿಮುನ್ನೆಡೆಸಿದರು. ಈಸಂಪುಟಗಳ ಪ್ರಧಾನಸಂಪಾದಕರಾಗಿದ್ದಶ್ರೀ ಕಲಬುರ್ಗಿಯವರುಇಂದುನಮ್ಮೊಡನಿಲ್ಲ. ಅವರಿಗೆಸಹ ನಾನುಆದರದಿಂದನಮಿಸುತ್ತೇನೆ. ಅವರು ಈಕಾರ್ಯಕ್ಕಾಗಿತಮ್ಮ ಜೀವನವನ್ನೇಮುಡುಪಾಗಿಟ್ಟಿದ್ದರು. ಅವರು ಎಲ್ಲೇಇದ್ದರೂಬಹಳ ಸಂತೋಷಪಡುತ್ತಿದ್ದಾರೆಎಂದು ಭಾವಿಸುತ್ತೇನೆ. ಅವರುಯಾವಕೆಲಸವನ್ನು ಮಾಡಿದ್ದರೊಅದುಇಂದು ಪರಿಪೂರ್ಣತೆಯಹಂತತಲುಪಿದೆ.

ರಾಜಕೀಯವ್ಯಕ್ತಿಗಳಾದ ನಾವುಬೇರೆಬೇರೆಪಕ್ಷಗಳಲ್ಲಿಮುಳುಗಿಹೋಗಿದ್ದೇವೆ. ಕುರ್ಚಿಯಸುತ್ತ ನಮ್ಮಪ್ರಪಂಚಸುತ್ತುತ್ತಿರುತ್ತದೆ. ಸಾಮಾನ್ಯವಾಗಿ ಯಾರಾದರೂರಾಜಕೀಯಮುಖಂಡ ಅಥವಾರಾಜಕಾರಣಿನಿಧನರಾದರೆ ಅವರಿಗೆವಿದಾಯವನ್ನುಹೇಳುವಾಗ ಅವರಮಕ್ಕಳುಬಹಳ ಗಂಭೀರವದನದಿಂದಜನತೆಯ ಮುಂದೆನಮ್ಮತಂದೆಯ ಅಪೂರ್ಣಕಾರ್ಯಗಳನ್ನುಪೂರ್ಣಗೊಳಿಸುತ್ತೇನೆಎಂದುಅವರುಹೇಳುವುದನ್ನುನಾವುನೋಡಿದ್ದೇವೆ.

ರಾಜಕಾರಣಿಯಮಗಅಪೂರ್ಣ ಕೆಲಸವನ್ನುಪೂರ್ತಿಮಾಡುತ್ತೇನೆ ಎಂಬುದರಅರ್ಥವೇನೆಂದುನಿಮಗೂ ಗೊತ್ತು, ನನಗೂಗೊತ್ತು. ಅಪೂರ್ಣಕೆಲಸವನ್ನು ಪೂರ್ತಿಗೊಳಿಸುತ್ತೇನೆಎಂದು ಇವರುಹೇಳಿದ್ದರಅರ್ಥವೇನೆಂದುರಾಜಕೀಯ ವ್ಯಕ್ತಿಗಳಿಗೂಗೊತ್ತು. ಆದರೆರಾಜಕಾರಣಿಯ ಮಗನಾದಅರವಿಂದಜತ್ತಿಯವರು ನಿಜವಾದಅರ್ಥದಲ್ಲಿತನ್ನ ತಂದೆಯಅಪೂರ್ಣಕೆಲಸಗಳನ್ನು ಪೂರೈಸಿರುವುದಕ್ಕಾಗಿನಾನು ಅವರಿಗೆಅಭಿನಂದನೆಗಳನ್ನುಸಲ್ಲಿಸುತ್ತೇನೆ.ಈದೇಶದ ಉಪರಾಷ್ಟ್ರಪತಿಯಾಗಿಗೌರವಾನ್ವಿತ ಜೀವನನಡೆಸಿದಅವರನ್ನು ದೇಶವುನೆನೆಯುತ್ತದೆ. ಅವರಮಗ ತಂದೆಯಅಪೂರ್ಣಕಾರ್ಯಗಳನ್ನುಪೂರೈಸಿದ್ದಾರೆ ಅಂದರೆಬಸವೇಶ್ವರರವಚನಗಳನ್ನು ಪ್ರತಿಯೊಬ್ಬರಿಗೂತಲುಪಿಸಬೇಕೆಂಬಬಿ.ಡಿ.ಜತ್ತಿಯವರ ಆಸೆಯನ್ನುಪೂರೈಸಿದ್ದಾರೆ. ಅಂದರೆದೇಶದ ಮೂಲೆಮೂಲೆಗಳಲ್ಲ್ಲೂಬಸವ ತತ್ವಗಳನ್ನುತಲುಪಿಸುವ, ಮುಂಬರುವ ಪೀಳಿಗೆಗೆತಲುಪಿಸುವಕಾರ್ಯ ಇಂದುನೆರವೇರುತ್ತಿದೆ. ಶ್ರೀಜತ್ತಿಯವರು ಸ್ವತಃನಮಗೆನಮ್ಮ ಮುಂದೆಬಹಳಆದರ್ಶದವಿಚಾರಗಳನ್ನು ಇಟ್ಟಿದ್ದಾರೆ. ಆದರೆ ಅವರಮಗಅರವಿಂದ ಜತ್ತಿಅವರುಸಹ ಈಉತ್ತಮಕಾರ್ಯಗಳನ್ನು ಮುಂದುವರಿಸಿಕೊಂಡುಹೋಗುವ ಮೂಲಕವಿಶೇಷವಾಗಿರಾಜಕಾರಣಿಗಳ ಕುಟುಂಬಗಳಮುಂದೆಒಂದು ಉತ್ತಮಆದರ್ಶವನ್ನುಮುಂದಿಟ್ಟಿದ್ದಾರೆ. ಇದಕ್ಕಾಗಿನಾನು ಅವರನ್ನುಅಭಿನಂದಿಸುತ್ತೇನೆ.ಸಮಿತಿಯು 50 ವರ್ಷಪೂರೈಸುವಷ್ಟರಲ್ಲಿಈ ಕೆಲಸದಲ್ಲಿಎರಡೆರಡುಪೀಳಿಗೆಗಳೇ ಆಗಿಹೋಗಿದೆ. ಅನೇಕಜನರು ಇದಕ್ಕಾಗಿತಮ್ಮಸಮಯ ಮೀಸಲಿಟ್ಟಿದ್ದಾರೆ, ಶಕ್ತಿಯನ್ನು ತೊಡಗಿಸಿದ್ದಾರೆ. 50 ವರ್ಷಗಳನಡುವೆಈ ಕಾರ್ಯದಲ್ಲಿಯಾರ‍್ಯಾರು ತಮ್ಮನ್ನುತೊಡಗಿಸಿಕೊಂಡಿದ್ದರೋಅವರೆಲ್ಲರಿಗೂ ಅಭಿನಂದನೆಗಳನ್ನುಹೇಳಬಯಸುತ್ತೇನೆ.

ನನ್ನಪ್ರೀತಿಯ ಸೋದರಸೋದರಿಯರೆ, ಭಾರತದ ಇತಿಹಾಸಕೇವಲಸೋಲಿನ ಇತಿಹಾಸವಲ್ಲ, ಕೇವಲಗುಲಾಮಗಿರಿಯ ಇತಿಹಾಸವಲ್ಲ, ಕೇವಲಅತ್ಯಾಚಾರಗಳನ್ನುಸಹಿಸಿಕೊಳ್ಳುವವರಇತಿಹಾಸವಲ್ಲ. ಕೇವಲಬಡತನ, ಹಸಿವು ಮತ್ತುಅನಕ್ಷರತೆಹಾಗೂ ಕೇವಲಹಾವು-ಮುಂಗುಸಿ ಹೋರಾಟದಇತಿಹಾಸವೂಅಲ್ಲ. ಬೇರೆಬೇರೆಕಾಲಘಟ್ಟಗಳಲ್ಲಿ

ದೇಶದಲ್ಲಿಕೆಲವುಸವಾಲುಗಳು ಎದುರಾಗಿವೆ. ಕೆಲವರು ಇಲ್ಲಿಯೇಕಾಲೂರಿದರು. ಆದರೆಈ ಸಮಸ್ಯೆಗಳು, ಈಕೊರತೆಗಳು, ಈಕೆಡುಕುಗಳುನಮ್ಮ ಗುರುತಾಗಿಲ್ಲ. ಈ ಸಮಸ್ಯೆಗಳನ್ನುಎದುರಿಸುವವಿಧಾನವೇ ನಮ್ಮಹೆಗ್ಗುರುತಾಗಿದೆ. ಭಾರತವು ಇಡೀವಿಶ್ವಕ್ಕೆಮಾನವತೆಯ, ಪ್ರಜಾತಂತ್ರದಸಂದೇಶ ಸಾರಿದೆ. ಅಹಿಂಸೆಯ, ಸತ್ಯಾಗ್ರಹದಸಂದೇಶವನ್ನುನೀಡಿದ ಮಹಾನ್ದೇಶವಾಗಿದೆ. ಬೇರೆಬೇರೆ ಕಾಲಗಳಲ್ಲಿನಮ್ಮದೇಶದಲ್ಲಿ ಇಂತಹಮಹಾನ್ಆತ್ಮಗಳ ಅವತಾರವಾಗುತ್ತಿದ್ದುಅವರು ಸಂಪೂರ್ಣಮಾನವೀಯತೆಯನ್ನು, ತಮ್ಮ ವಿಚಾರಗಳಿಂದ, ತಮ್ಮಜೀವನದ ಮೂಲಕಮಾರ್ಗದರ್ಶನಮಾಡಿದ್ದಾರೆ. ಪ್ರಪಂಚದದೊಡ್ಡದೊಡ್ಡ ದೇಶಗಳುಪಶ್ಚಿಮದದೊಡ್ಡ ದೊಡ್ಡವಿದ್ವಾಂಸರುಪ್ರಜಾಪ್ರಭುತ್ವವನ್ನು, ಎಲ್ಲರಿಗೂಸಮಾನ ಹಕ್ಕುನೀಡುವುದನ್ನುಒಂದು ಹೊಸದೃಷ್ಟಿಕೋನದಿಂದನೋಡಲು ಶುರುಮಾಡಿದರು. ಆದರೆಅದಕ್ಕೂ ಕೆಲವುಶತಮಾನಗಳಮೊದಲು ಯಾವುದೇಭಾರತೀಯರುಭಾರತವು ಆಗಲೇಪ್ರಜಾಪ್ರಭುತ್ವದಈ ಮೌಲ್ಯಗಳನ್ನುತನ್ನಆಡಳಿತ ಪದ್ಧತಿಯಲ್ಲಿಅಳವಡಿಸಿಕೊಂಡಿತ್ತುಎಂದು ಹೆಮ್ಮೆಯಿಂದಹೇಳಿದ್ದಾರೆ. 12ನೆಯಶತಮಾನದಲ್ಲಿ ಶ್ರೀಬಸವಣ್ಣನವರುಒಂದು ಪ್ರಜಾಪ್ರಭುತ್ವವ್ಯವಸ್ಥೆಯನ್ನುನಿರ್ಮಾಣ ಮಾಡಿದ್ದರು. ಅವರು ಅನುಭವಮಂಟಪಸ್ಥಾಪಿಸಿ, ಎಲ್ಲರೀತಿಯವರ್ಗದವರನ್ನು ಸೇರಿಸಿಕೊಂಡಿದ್ದರು. ಬಡವರು, ದಲಿತರು, ನೊಂದವರು, , ಶೋಷಿತರು, ವಂಚಿತರುಹೀಗೆ ಎಲ್ಲತರಹದಜನರು ತಮ್ಮತಮ್ಮವಿಚಾರಗಳನ್ನು ಮುಕ್ತವಾಗಿಮಂಡಿಸುವವ್ಯವಸ್ಥೆಯನ್ನು ಮಾಡಿದ್ದರು.

ಇದು ಪ್ರಜಾಪ್ರಭುತ್ವದಅದೆಂಥಾಅದ್ಭುತ ಶಕ್ತಿಯಾಗಿತ್ತು. ಒಂದುರೀತಿಯಲ್ಲಿಇದು ನಮ್ಮದೇಶದಮೊದಲ ಸಂಸತ್ತುಆಗಿತ್ತು. ಇ್ಲಲಿಪ್ರತಿಯೊಬ್ಬರೂ ಸರಿಸಮಾನರಾಗಿದ್ದರು. ಮೇಲು, ಕೀಳುಎಂಬಭೇದಭಾವಕ್ಕೆ ಇಂದುಆಸ್ಪದವೇ ಇರಲಿಲ್ಲ. ಬಸವಣ್ಣನವರುತಮ್ಮ ವಚನಗಳಲ್ಲಿವಿಚಾರಗಳಕೊಡುಕೊಳ್ಳುವಿಕೆಇಲ್ಲದಿದ್ದರೆ, ತರ್ಕ, ಚರ್ಚೆಗಳಿಲ್ಲದೆಹೋದರೆ ಅನುಭವಮಂಟಪವೂಉಳಿಯುವುದಿಲ್ಲ, ಅಲ್ಲಿಈಶ್ವರನೂ ವಾಸಮಾಡುವುದಿಲ್ಲಎಂದು ಅವರುಹೇಳಿದ್ದರು. ಅಂದರೆ ವಿಚಾರಗಳಈಮಂಥನವನ್ನು ಈಶ್ವರನಂತೆಶಕ್ತಿಶಾಲಿಮತ್ತು ಅವಶ್ಯಕವೆಂದುಅವರುಹೇಳಿದ್ದರು. ಇದಕ್ಕಿಂತದೊಡ್ಡ ಜ್ಙಾನವನ್ನುಕಲ್ಪನೆಮಾಡಿಕೊಳ್ಳಲು ಸಾಧ್ಯವಾದರೆನೂರಾರುವರ್ಷ ಮೊದಲೇಅವರುವಿಚಾರಗಳ ಸಾಮರ್ಥ್ಯ, ಜ್ಙಾನದಸಾಮರ್ಥ್ಯವನ್ನು ಈಶ್ವರನಿಗಸಮಾನವೆಂದುಭಾವಿಸಿದ್ದರು. ಈ ಕಲ್ಪನೆಗಳುಬಹುಶಃಪ್ರಪಂಚಕ್ಕೆ ವಿಚಿತ್ರವಾಗಿಕಾಣಬಹುದು. ಅನುಭವಮಂಟಪದಲ್ಲಿ ಮಹಿಳೆಯರುಮುಕ್ತವಾಗಿತಮ್ಮ ವಿಚಾರಗಳನ್ನುಮಂಡಿಸುವುದಕ್ಕೆಸಂಪೂರ್ಣ ಸ್ವಾತಂತ್ರ್ಯವಿತ್ತು. ಈಗಪ್ರಪಂಚ ನಮಗೆಮಹಿಳಾಸಬಲೀಕರಣದ ಪಾಠಕಲಿಸುತ್ತಿದೆ. ಭಾರತವನ್ನುಕೀಳಾಗಿ ತೋರಿಸಲುಇಂತಹಕಲ್ಪನೆಯನ್ನು ವಿಶ್ವದಲ್ಲಿಪ್ರಚಾರಮಾಡಲಾಗಿದೆ. ಆದರೆನೂರಾರು ವರ್ಷಗಳಪ್ರಾಚೀನಇತಿಹಾಸದ ಉದಾಹರಣೆನಮ್ಮಮುಂದಿದೆ. ಶ್ರೀಬಸವಣ್ಣನವರು ಮಹಿಳೆಯರಸಬಲೀಕರಣ, ಸ್ತ್ರೀಯರು ಸಮಾನವಾಗಿಭಾಗವಹಿಸುವಂತಹಉತ್ತಮ ವ್ಯವಸ್ಥೆಇರಬೇಕೆಂದುಕೇವಲ ಮಾತನಾಡಲಿಲ್ಲ, ತಾವೇಆ ಹೊಸವ್ಯವಸ್ಥೆಯನ್ನುಜಾರಿಗೆ ತಂದಿದ್ದರು.

ಇಲ್ಲಿ ಸಮಾಜದಎಲ್ಲವರ್ಗಗಳಿಂದ ಬಂದಮಹಿಳೆಯವರುತಮ್ಮ ವಿಚಾರಗಳನ್ನುವ್ಯಕ್ತಪಡಿಸುತ್ತಿದ್ದರು. ಸಮಾಜದ ಕೆಡುಕುಗಳಿಗೆಒಳಗಾಗಿ, ಸಮಾಜದಿಂದ ತಿರಸ್ಕೃತಗೊಂಡಮಹಿಳೆಯರುಸಹ ಅನುಭವಮಂಟಪದಲ್ಲಿದ್ದರು. ಸಮಾಜದತಿರಸ್ಕಾರಕ್ಕೆ ಒಳಗಾಗಿದ್ದರೂಅವರನ್ನುಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು. ಮಹಿಳಾಸಬಲೀಕರಣಕ್ಕಾಗಿ ಆಕಾಲದಲ್ಲೇಎಂತಹ ದೊಡ್ಡಪ್ರಯತ್ನವಾಗಿತ್ತು. ಆಂದೋಲನನಡೆದಿತ್ತು ಎಂಬುದನ್ನುಅಂದಾಜುಮಾಡಬಹುದು. ಇದುನಮ್ಮದೇಶದ ವಿಶೇಷತೆಯಾಗಿದೆ. ಸಾವಿರಾರುವರ್ಷಗಳಪುರಾತನ ಪರಂಪರೆಯಾಗಿದೆ. ಕೆಡುಕುಗಳುಸಂಭವಿಸಿದರೆಅವುಗಳನ್ನು ಎದುರಿಸಲುಅವತಾರಪುರುಷರು ಸಹನಮ್ಮನಡುವೆ ಉದಯಿಸಿದ್ದಾರೆ. ರಾಜಾರಾಂಮೋಹನ್ರಾಯ್ ಅವರುವಿಧವಾವಿವಾಹಗಳನ್ನು ಮಾಡಿಸಲುಮುಂದಾದಾಗಅಂದಿನ ಸಮಾಜಅವರನ್ನುಅದೆಷ್ಟು ಕಟುವಾಗಿಟೀಕಿಸಿತ್ತು. ಅವರಿಗೆಅದೆಷ್ಟು ಕಷ್ಟಗಳುಎದುರಾಗಿರಬೇಕು. ಆದರೆಅವರು ಬಂಡೆಯಂತೆಅಚಲವಾಗಿದ್ದರು. ತಾಯಂದಿರು, ಸೋದರಿಯರಿಗ ಬಹಳಘೋರಅನ್ಯಾಯವಾಗುತ್ತಿದೆ. ಇದು ಸಮಾಜದದೊಡ್ಡಅಪರಾಧವಾಗಿದೆ. ಇಂತಹ ಅನಿಷ್ಟಪದ್ಧತಿತೊಲಗಬೇಕೆಂದು ನಿರ್ಧರಿಸಿದರು. ಅದನ್ನು ಮಾಡಿತೋರಿಸಿದರು.
ಈಗತ್ರಿವಳಿ ತಲಾಖ್ಕುರಿತುಇಷ್ಟು ದೊಡ್ಡಚರ್ಚೆಯಾಗುತ್ತಿದೆ. ಭಾರತದಪರಂಪರೆಯನ್ನು ನೋಡಿದಾಗನನ್ನಮನಸ್ಸಿನಲ್ಲಿ ಆಶಾಭಾವವುಜಾಗೃತವಾಗುತ್ತಿದೆ. ಈ ದೇಶದಲ್ಲಿಸಮಾಜದೊಳಗಿನಿಂದಲೇಶಕ್ತಿವಂತ ಜನರುಉದಯಿಸುತ್ತಾರೆಎಂದು ನನ್ನಮನಸ್ಸಿನಲ್ಲಿಆಶಾ ಭಾವನೆಸುಳಿಯುತ್ತದೆ.

ಹಳೆಯಕಂದಾಚಾರಗಳನ್ನು ಕಿತ್ತೊಗೆಯುತ್ತಾರೆ, ನಾಶಗೊಳಿಸುತ್ತಾರೆ. ಆಧುನಿಕ ವ್ಯವಸ್ಥೆಗಳನ್ನುವಿಕಾಸಗೊಳಿಸುತ್ತಾರೆ. ಮುಸ್ಲಿಂಸಮಾಜದಲ್ಲೂ ಇಂತಹಪ್ರಬುದ್ಧಜನರು ಉದಯಿಸಬಲ್ಲರು. ಮುಸ್ಲಿಂ ಹೆಣ್ಣುಮಕ್ಕಳಿಗಆಗುತ್ತಿರುವ ಅನ್ಯಾಯ, ಶೋಷಣೆಯನ್ನುನೋಡಿ ಅದರವಿರುದ್ಧಸ್ವತಃ ತಾವೇಹೋರಾಡಬಹುದು. ಒಂದಲ್ಲಾಒಂದು ದಾರಿಹುಡುಕಬಹುದು.

ಭಾರತದಪ್ರಬುದ್ಧ ಮುಸಲ್ಮಾನ್ಜನರುಪ್ರಪಂಚದ ಉಳಿದಮುಸ್ಲಿಂಜನತೆಗೆ ದಾರಿತೋರಿಸುವಶಕ್ತಿ ಹೊಂದಿದ್ದಾರೆ. ಯಾವ್ಯಾವುದೋ ಕಾಲಘಟ್ಟದಲ್ಲಿಮೇಲುಕೀಳು, ಸ್ಪೃಶ್ಯ ಮತ್ತುಅಸ್ಪೃಶ್ಯದಂತಹಘಟನೆಗಳು ನಡೆದಿರಬಹುದು. ಅಂತಹ ಕಾಲದಲ್ಲೂಶ್ರೀಬಸವಣ್ಣನವರು ಅನುಭವಮಂಟಪಕ್ಕೆಬಂದು ಮಹಿಳೆಯರಿಗೆಮಾತನಾಡುವಅವಕಾಶ ಮಾಡಿಕೊಟ್ಟಿದ್ದರು. ಇದು ಶತಮಾನಗಳಹಿಂದಿನಭಾರತದ ಮಣ್ಣಿನಶಕ್ತಿಯಾಗಿದೆ. ತ್ರಿವಳಿತಲಾಖ್ ನಿಂದಾಗಿಸಂಕಷ್ಟದಸ್ಥಿತಿಯಲ್ಲಿ ಬದುಕುತ್ತಿರುವನಮ್ಮತಾಯಂದಿರು, ಸೋದರಿಯರನ್ನುಕಾಪಾಡಲುಅದೇ ಸಮಾಜದಿಂದಜನರುಉದಯಿಸುತ್ತಾರೆ. ಈ ವಿಚಾರವನ್ನುರಾಜಕೀಯಗೊಳಿಸಬಾರದುಎಂದು ನಾನುಮುಸ್ಲಿಂಸಮಾಜದ ಜನರಲ್ಲಿಮನವಿಮಾಡಿಕೊಳ್ಳುತ್ತೇನೆ. ನೀವು ಮುಂದೆಬಂದುಈ ಸಮಸ್ಯೆಗೆಪರಿಹಾರಕಂಡುಹಿಡಿಯಿರಿ.

ಜೊತೆಗಾರರೆ, ಶ್ರೀ ಬಸವಣ್ಣನವರವಚನಗಳಿಂದ, ಅವರ ಶಿಕ್ಷಣಗಳಿಂದಸಿದ್ಧವಾದಸಪ್ತ ಸಿದ್ಧಾಂತಗಳು, ಕಾಮನಬಿಲ್ಲಿನಏಳು ಬಣ್ಣಗಳಂತೆಇಂದಿಗೂಈ ಜಾಗವನ್ನುಒಂದುತುದಿಯಿಂದ ಇನ್ನೊಂದುತುದಿಯವರೆಗೆಸೇರಿಸಿದೆ. ಶ್ರದ್ಧೆಎಂಬುದು ಯಾರಬಗ್ಗೆಯಾದರೂಆಗಲಿ, ಯಾರದ್ದಾದರೂಆಗಲಿಪ್ರತಿಯೊಬ್ಬರಿಗೂಗೌರವಸಿಗಬೇಕು. ಜಾತಿಪದ್ಧತಿ, ಸ್ಪೃಶ್ಯಮತ್ತುಅಸ್ಪೃಶ್ಯದಂತಹ ಕೆಟ್ಟಪದ್ಧತಿಗಳುಕಾಡಬಾರದು. ಎಲ್ಲರಿಗೂಸಮಾನ ಹಕ್ಕುಗಳುದೊರಕಬೇಕುಎಂದು ಅವರುಬಲವಾಗಿಸಮರ್ಥಿಸುತ್ತಿದ್ದರು. ಅವರು ಪ್ರತಿಯೊಬ್ಬಮನುಷ್ಯನಲ್ಲೂದೇವರನ್ನು ಕಂಡರು. ದೇಹವೇ ದೇಗುಲ, ಈದೇಗುಲದಲ್ಲಿ ಆತ್ಮವೇದೇವರು, ಸಮಾಜದಲ್ಲಿ ಮೇಲುಕೀಳುಎಂಬ ಭಾವತೊಲಗಬೇಕು. ಎಲ್ಲರಿಗೂಗೌರವ ಸಿಗಬೇಕು. ತರ್ಕ ಮತ್ತುವೈಜ್ಙಾನಿಕಆಧಾರಗಳ ಮೇಲೆಸಮಾಜದಪ್ರಗತಿಯಾಗಬೇಕು. ಇದುಪ್ರತಿಯೊಬ್ಬ ವ್ಯಕ್ತಿಯಸಬಲೀಕರಣವಾಗಬೇಕು. ಈಸಿದ್ಧಾಂತಗಳು ಪ್ರಜಾಪ್ರಭುತ್ವವ್ಯವಸ್ಥೆಯಲ್ಲಿಒಂದು ಬಲವಾದಅಡಿಪಾಯದಂತೆಇದೆ. ನೀನುಯಾವ ಜಾತಿ, ಯಾವಧರ್ಮ ಎಂದುಕೇಳಬಾರದುಎಂದು ಅವರುಹೇಳುತ್ತಿದ್ದರು.

ನಾವುಎಲ್ಲರ ನಡುವೆಇದ್ದೇವೆ. ಇದೇಅಡಿಪಾಯದ ಮೇಲೆಒಂದುಸಶಕ್ತ ರಾಷ್ಟ್ರದ ನಿರ್ಮಾಣವಾಗುತ್ತಿದೆ. ಇವೇ ಸಿದ್ಧಾಂತಗಳುಒಂದುರಾಷ್ಟ್ರದ ನೀತಿನಿರ್ದೇಶನಗಳಾಗಿಕೆಲಸ ಮಾಡುತ್ತಿವೆ. ಭಾರತದ ಮಣ್ಣಿನಲ್ಲಿ 800 ವರ್ಷಗಳಹಿಂದೆ ಶ್ರೀಬಸವಣ್ಣಅವರು ಪ್ರಜಾಪ್ರಭುತ್ವದಸಿದ್ಧಾಂತಗಳನ್ನುಅಳವಡಿಸಿಕೊಂಡಿದ್ದರುಎಂಬುದುನಮಗೆ ಅತ್ಯಂತಗೌರವದಸಂಗತಿಯಾಗಿದೆ. ಎಲ್ಲರನ್ನು ಜೊತೆಯಾಗಿಕರೆದುಕೊಂಡುಹೋಗುವುದು ಅವರವಚನಗಳಪ್ರತಿಧ್ವನಿಯಾಗಿದೆ. ಸರ್ಕಾರದ್ದುಸಹ ಎಲ್ಲರಜೊತೆಎಲ್ಲರ ಪ್ರಗತಿಎಂಬಸೂತ್ರವಾಗಿದೆ. ಯಾವುದೇರೀತಿಯ ಭೇದಭಾವವಿಲ್ಲದೆಈದೇಶದ ಪ್ರತಿಯೊಬ್ಬವ್ಯಕ್ತಿಗೂತನ್ನದೇ ಆದಸ್ವಂತಮನೆಇರಬೇಕು. ಇದರಲ್ಲಿಭೇದಭಾವಕ್ಕೆ ಅವಕಾಶವೇಇರಬಾರದು. ಯಾವುದೇ ಭೇದಭಾವವಿಲ್ಲದೆಪ್ರತಿಯೊಬ್ಬವ್ಯಕ್ತಿಗೆ 24 ಗಂಟೆವಿದ್ಯುತ್ಸಿಗಬೇಕು. ಭೇದಭಾವವಿಲ್ಲದೆಪ್ರತಿಹಳ್ಳಿಯನ್ನು ತಲುಪಲುರಸ್ತೆಇರಬೇಕು. ಯಾವುದೇಭೇದಭಾವವಿಲ್ಲದೆ ಪ್ರತಿಯೊಬ್ಬರೈತನಿಗೂಕೃಷಿ ಮಾಡಲುನೀರುಸಿಗಬೇಕು, ಗೊಬ್ಬರಸಿಗಬೇಕು, ಬೆಳೆ ವಿಮೆಸಿಗಬೇಕು. ಎಲ್ಲರಜೊತೆ ಎಲ್ಲರಪ್ರಗತಿಎಂದು ಇದಕ್ಕೇಹೇಳುವುದು.ಎಲ್ಲರನ್ನೂ ಜೊತೆಗೆಕರೆದೊಯ್ಯುವುದುಈ ದೇಶಕ್ಕೆಬಹಳಅಗತ್ಯವಾಗಿದೆ. ಎಲ್ಲರನ್ನೂಜೊತೆಗೆ ಕರೆದೊಯ್ಯುತ್ತಾಎಲ್ಲರಪ್ರಯತ್ನಗಳಿಂದ ಎಲ್ಲರಪ್ರಗತಿಯನ್ನುಮಾಡಬಹುದು.

ನೀವೆಲ್ಲರೂಭಾರತಸರ್ಕಾರದ ಮುಂದಿನಯೋಜನೆಯಬಗ್ಗೆ ಕೇಳಿರಬೇಕು. ದೇಶದ ಯುವಜನರಿಗೆಯಾವುದೇಭೇದಭಾವವಿಲ್ಲದೆ ಬ್ಯಾಂಕ್ಗ್ಯಾರಂಟಿಕೊಟ್ಟರೆ ತಮ್ಮಕಾಲುಗಳ ಮೇಲೆನಿಲ್ಲಲು, ಸ್ವಂತಉದ್ಯಮಸ್ಥಾಪಿಸಲು ಸಾಲನೀಡುವಒಂದು ಯೋಜನೆಯನ್ನುಆರಂಭಿಸಲಾಗಿದೆ. ಬ್ಯಾಂಕ್ ಗ್ಯಾರಂಟಿಇಲ್ಲದೆಯೇ ದೇಶದಮೂರೂವರೆಕೋಟಿ ಜನರಿಗೆಇದುವರೆಗೆಮೂರು ಲಕ್ಷಕೋಟಿಗಿಂತಹೆಚ್ಚ ಸಾಲನೀಡಲಾಗಿದೆ. ಈ ಯೋಜನೆಯಅಡಿಯಲ್ಲಿಸಾಲ ತೆಗೆದುಕೊಂಡಿರುವವರಲ್ಲಿಶೇ.76 ಮಹಿಳೆಯರೇಆಗಿದ್ದಾರೆಎಂದು ಕೇಳಿನಿಮಗೆಆಶ್ಚರ್ಯವಾಗಬಹುದು. 800 ವರ್ಷಗಳ ನಂತರಶ್ರೀಬಸವೇಶ್ವರ ಅವರಿಗೂಇದರಿಂದಸಂತೋಷವಾಗಿರಬಹುದು, ನಿಜವಾಗಿಹೇಳುವುದಾದರೆ ಈಯೋಜನೆಯನ್ನುಆರಂಭಿಸಿದಾಗ ಮಹಿಳೆಯರುಇಷ್ಟುದೊಡ್ಡ ಸಂಖ್ಯೆಯಲ್ಲಿಮುಂದೆಬರುತ್ತಾರೆ, ಸಾಲಪಡೆದುಸ್ವಂತ ಉದ್ಯಮಸ್ಥಾಪಿಸುತ್ತಾರೆಎಂಬ ಆಶಾಭಾವನೆನಮ್ಮೆಲ್ಲರಿಗೂಇರಲಿಲ್ಲ. ಇಂದುಈ ಯೋಜನೆಮಹಿಳಾಸಬಲೀಕರಣದಲ್ಲಿ ಒಂದುಬಹಳಮುಖ್ಯವಾದ ಪಾತ್ರವನ್ನುನಿಭಾಯಿಸುತ್ತಿದೆ. ಹಳ್ಳಿಯಲ್ಲಿಬೀದಿಬೀದಿಗಳಲ್ಲಿ, ಸಣ್ಣಸಣ್ಣ ಊರುಗಳಲ್ಲಿಮುದ್ರಾಯೋಜನೆಯು ಮಹಿಳೆಯರುಬ್ಯಾಂಕ್ಸಾಲ ಪಡೆಯಲುಸಾಲಾಗಿನಿಲ್ಲುವಂತೆ ಮಾಡಿದೆ.

ಸೋದರಸೋದರಿಯರೆ, ಬಸವೇಶ್ವರಅವರವಚನಗಳೆಂದರೆ ಕೇವಲಜೀವನದದರ್ಶನವಲ್ಲ. ಅವರಉತ್ತಮಆಡಳಿತದ ತತ್ವಗಳುರಾಜಕಾರಣಿಗಳಿಗೆಸಹ ಅಷ್ಟೇಉಪಯೋಗಿಯಾಗಿದೆ. ಜ್ಙಾನದಬಲದಿಂದ ಅಜ್ಙಾನನಶಿಸುತ್ತದೆ, ಬೆಳಕಿನ ಬಲದಿಂದಅಂಧಕಾರನಾಶವಾಗುತ್ತದೆ, ಸತ್ಯದಬಲದಿಂದ ಅಸತ್ಯದೂರವಾಗುತ್ತದೆ. ಸದಾಚಾರದ ಬಲದಿಂದಅನಾಚಾರಗಳುನಾಶವಾಗುತ್ತವೆ ಎಂದುಅವರುಹೇಳುತ್ತಿದ್ದರು. ವ್ಯವಸ್ಥೆಯಲ್ಲಿ ಅಸತ್ಯವನ್ನುದೂರಮಾಡಬೇಕಾದರೆ ಒಳ್ಳೆಯಆಡಳಿತಬೇಕು. ಅದನ್ನೇಗುಡ್ಗವರ್ನಸ್ ಎಂದುಹೇಳುವುದು. ಅಮೂಲ್ಯವಾದಸಬ್ಸಿಡಿಯು ಸರಿಯಾದಕೈಗಳಮೂಲಕ ಬಡವನಿಗೆತಲುಪಬೇಕು. ಬಡವರಿಗೆಂದೇ ಮಾಡಿರುವರೇಶನ್ಅವರಿಗಷ್ಟೇ ತಲುಪಿದರೆಯಾವುದೇಕೆಲಸಗಳಲ್ಲಿ ಶಿಫಾರಸ್ಸುಮಾಡುವುದುತಪ್ಪುತ್ತದೆ. ಭಷ್ಟಾಚಾರಮತ್ತು ಕಪ್ಪುಹಣಇಲ್ಲದಿದ್ದರೆ ಅನುಕೂಲವಾಗುತ್ತದೆ, ವ್ಯವಸ್ಥೆಯಲ್ಲಿ ಸತ್ಯದಮಾರ್ಗಮುಂದೆ ಸಾಗುತ್ತದೆ. ಇದನ್ನೇ ಶ್ರೀಬಸವೇಶ್ವರಅವರು ಹೇಳಿದ್ದಾರೆ. ಯಾವುದು ಸುಳ್ಳೋ, ಯಾವುದುತಪ್ಪೋ ಅದನ್ನುಹೊಡೆದೋಡಿಸುವುದು, ಟ್ರಾನ್ಸ್ ಪರೆನ್ಸಿಅಂದರೆಪಾರದರ್ಶಕತೆ ತರುವುದೇಉತ್ತಮಆಡಳಿತವಾಗಿದೆ.

ಮನುಷ್ಯನಜೀವನ ನಿಸ್ವಾರ್ಥಕರ್ಮಗಳಿಂದಲೇಬೆಳಗುತ್ತದೆ ಎಂದುಶ್ರೀಬಸವಣ್ಣ ಅವರುಹೇಳುತ್ತಿದ್ದರು. ಮಾನ್ಯಶಿಕ್ಷಣ ಸಚಿವರೆ, ಸಮಾಜದಲ್ಲಿನಿಸ್ವಾರ್ಥ ಕರ್ಮಯೋಗಎಷ್ಟುಹೆಚ್ಚುವುದೋ ಅಷ್ಟುಭ್ರಷ್ಟಾಚಾರಕಡಿಮೆಯಾಗುತ್ತದೆ. ಭ್ರಷ್ಟಾಚಾರವೆಂಬವ್ಯವಸ್ಥೆಯುಒಂದು ಗೆದ್ದಲಿನಂತೆ, ಇದುನಮ್ಮ ಪ್ರಜಾಪ್ರಭುತ್ವವನ್ನು, ನಮ್ಮ ಸಾಮಾಜಿಕವ್ಯವಸ್ಥೆಯನ್ನುಒಳಗಿನಿಂದಲೇ ತಿನ್ನುತ್ತದೆ. ಇದು ಮನುಷ್ಯರಸಮಾನತೆಯಹಕ್ಕನ್ನು ಕಿತ್ತುಕೊಳ್ಳುತ್ತದೆ.

ದುಡಿಯುತ್ತಾಪ್ರಾಮಾಣಿಕವಾಗಿ ಸಂಪಾದಿಸುವಒಬ್ಬವ್ಯಕ್ತಿಯು ಭ್ರಷ್ಟಾಚಾರನಡೆಸುತ್ತಾ, ಕಡಿಮೆ ಶ್ರಮದಿಂದಹೆಚ್ಚುಹೆಚ್ಚು ಸಂಪಾದಿಸಿಆರಾಮವಾಗಿಬದುಕುತ್ತಿರುವುದನ್ನುನೋಡಿತನ್ನ ದಾರಿಯೇಸರಿಯಿಲ್ಲ. ಅವರದೇಸರಿಯಿರಬಹುದೇನೋ ಎಂದುಒಂದುಕ್ಷಣ ಯೋಚಿಸಬಹುದು. ಕೆಲವೊಮ್ಮೆ ಸತ್ಯದಮಾರ್ಗವನ್ನುತೊರೆದು ಆದಾರಿತುಳಿಯಲೂ ಬಹುದು. ಭ್ರಷ್ಟಾಚಾರವನ್ನುತೊಲಗಿಸುವುದುನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದನಿಸ್ವಾರ್ಥಿಕರ್ಮಯೋಗಿಗಳಿಗಷ್ಟೇನಮ್ಮಮೊದಲ ಆದ್ಯತೆನೀಡಿರುವುದನ್ನುಈಗಿನ ನಮ್ಮಸರ್ಕಾರದನೀತಿ ನಿರೂಪಣೆಗಳಲ್ಲಿಸ್ಪಷ್ಟವಾಗಿಕಾಣಬಹುದು. ಇಂದುಬಸವೇಶ್ವರ ಅವರಈವಚನಗಳ ಪ್ರವಾಹಕರ್ನಾಟಕದಎಲ್ಲೆಗಳನ್ನು ದಾಟಿದೂರದಲಂಡನ್ ನಗರದಥೇಮ್ಸ್ನದಿಯವರೆಗೂ ಸಾಗಿರುವುದನ್ನುಕಾಣಬಹುದು.
ಸೂರ್ಯಮುಳುಗದ ಸಾಮ್ರಾಜ್ಯಎಂದುಕರೆಸಿಕೊಳ್ಳು ದೇಶದಲ್ಲಿಬಸವೇಶ್ವರರಪ್ರತಿಮೆಯನ್ನು ಅನಾವರಣಮಾಡುವಅವಕಾಶ ಸಿಕ್ಕಿದ್ದುನನ್ನಅದೃಷ್ಟವೆಂದೇ ಹೇಳಬೇಕು. ಅಲ್ಲಿನ ಸಂಪತ್ತಿನಮುಂದೆಪ್ರಜಾಪ್ರಭುತ್ವದಸಂಕಲ್ಪಮಾಡಿದ ಬಸವೇಶ್ವರರಪ್ರತಿಮೆಸ್ಥಾಪಿತವಾಗಿರುವುದುಯಾವುದೇತೀರ್ಥಕ್ಷೇತ್ರಕ್ಕಿಂತಕಡಿಮೆಯಲ್ಲ. ಬಸವೇಶ್ವರರಪ್ರತಿಮೆಯನ್ನು ಅನಾವರಣಮಾಡುವಸಂದರ್ಭ ನನಗೆಚೆನ್ನಾಗಿನೆನಪಿದೆ. ಆಗಅದೆಷ್ಟುಮಳೆಯಾಗುತ್ತಿತ್ತುಎಂದರೆಸ್ವತಃ ಮೇಘರಾಜನೇಅಮೃತವರ್ಷಿಣಿ ಮಾಡುತ್ತಿದ್ದಾನೇನೋಎಂಬಂತೆ ಭಾಸವಾಯಿತು. ತುಂಬಾ ಚಳಿಯೂಇತ್ತು. ಇಷ್ಟಾದರೂಅಲ್ಲಿನ ಜನರುಬಸವೇಶ್ವರಅವರು 800 ವರ್ಷಗಳಹಿಂದೆಯೇನಮ್ಮ ದೇಶದಲ್ಲಿಪ್ರಜಾಪ್ರಭುತ್ವ, ಮಹಿಳಾ ಸಬಲೀಕರಣ, ಸಮಾನತೆಯವಿಷಯದಲ್ಲಿಅದೆಷ್ಟು ಕೆಲಸಗಳನ್ನುಮಾಡಿದ್ದರುಎಂಬುದನ್ನು ಮನಸ್ಸಿಟ್ಟುಕೇಳಿಬಹಳ ಆಶ್ಚರ್ಯಗೊಂಡಿದ್ದರು. ಇದು ಅವರಿಗಬಹಳವಿಚಿತ್ರವಾಗಿಕಂಡಿತ್ತು ಎಂದುನಾನುಭಾವಿಸುತ್ತೇನೆ. ನಮ್ಮ ಶಿಕ್ಷಣವ್ಯವಸ್ಥೆಯದೋಷಗಳೋ ಅಥವಾನಮ್ಮಇತಿಹಾಸವನ್ನು ಮರೆಯುವದೌರ್ಬಲ್ಯವೋಎಂದುಕೊಳ್ಳಿ.

ಆದರೆಇಂದಿಗೂ ಲಕ್ಷಕೋಟಿಯುವಜನರಿಗೆ 800-900 ವರ್ಷಗಳಹಿಂದೆನಮ್ಮ ದೇಶದಲ್ಲಿಬಸವೇಶ್ವರಅವರು ಸಾಮಾಜಿಕಮೌಲ್ಯಗಳನ್ನುಮರು ಸ್ಥಾಪಿಸುವಸಲುವಾಗಿಜನಜಾಗೃತಿಯನ್ನು ಯಾವರೀತಿಮಾಡಿದರು ಎಂದುಗೊತ್ತಿಲ್ಲ. ಅದುಅದೆಂತಹ ಚಳುವಳಿಯೆಂದರೆಭಾರತದಮೂಲೆಮೂಲೆಗಳಲ್ಲಿಹೇಗೆನಡೆಯಿತು ಎಂದುಗೊತ್ತಿಲ್ಲ. ಸಮಾಜದಲ್ಲಿವ್ಯಾಪಕವಾಗಿ ಹರಡಿದ್ದಕೆಡುಕುಗಳನ್ನುನಿವಾರಿಸಲು 800 ವರ್ಷಗಳಅಂದಿನಕಾಲಘಟ್ಟದಲ್ಲಿ ನಡೆದಚಳುವಳಿಯಬಗ್ಗೆ ನಾನುಹೇಳುತ್ತಿದ್ದೇನೆ. ಗುಲಾಮಗಿರಿಯದಿನಗಳವು, ನಮ್ಮಋಷಿಮುನಿಗಳು, ಸಂತರು, ಜನಾಂದೋಲನದಒಂದುಅಡಿಪಾಯವನ್ನು ಹಾಕಿದ್ದರು. ಬಸವೇಶ್ವರ ಅವರುಈಆಂದೋಲನಕ್ಕೆ ಭಕ್ತಿಯನ್ನೂಸೇರಿಸಿದರು. ದೇವರಲ್ಲಿಭಕ್ತಿ, ಸಮಾಜದಬಗ್ಗೆಭಕ್ತಿಯು ದಕ್ಷಿಣದಿಂದಶುರುವಾಗಿಭಕ್ತಿ ಚಳುವಳಿಯುವಿಸ್ತಾರರೂಪ ಪಡೆದುಮಹಾರಾಷ್ಟ, ಗುಜರಾತ್ ತಲುಪಿಉತ್ತರಭಾರತದವರೆಗೆ ಹಬ್ಬಿತು. ಈ ಸಮಯದಲ್ಲಿಬೇರೆಬೇರೆ ಭಾಷೆಗಳಲ್ಲಿವಿಭಿನ್ನವರ್ಗಗಳ ಜನರುಚೈತನ್ಯವನ್ನುಜಾಗೃತಗೊಳಿಸುವ ಪ್ರಯತ್ನಮಾಡಿದರು. ಇವರುಸಮಾಜದ ಕನ್ನಡಿಯಾಗಿಕೆಲಸಮಾಡಿದರು. ಒಳಿತು, ಕೆಡುಕುಗಳನ್ನು ಕನ್ನಡಿಯಂತೆಜನರಮುಂದಿಟ್ಟು, ಕೆಡುಕುಗಳನ್ನುಬಿಟ್ಟುಭಕ್ತಿ ಮಾರ್ಗದಲ್ಲಿಸಾಗುವಂತೆಮಾಡಿದರು.

ಮುಕ್ತಿಯಮಾರ್ಗದಲ್ಲಿ ಭಕ್ತಿಯಮಾರ್ಗವನ್ನುತಮ್ಮದಾಗಿಸಿಕೊಂಡರು. ಭಕ್ತಿ ಮಾರ್ಗತೋರಿಸಿದಇಂತಹ ಅದೆಷ್ಟುಹೆಸರುಗಳನ್ನುಕೇಳುತ್ತೇವೆ. ರಾಮಾನುಜಾಚಾರ್ಯ, ಮಧ್ವಾಚಾರ್ಯ, ನಿಂಬಕಾಚಾರ್ಯ, ಸಂತತುಕಾರಾಂ, ಮೀರಾಬಾಯಿ, ನರಸಿಂಹಮೆಹ್ತಾ, ಕಬೀರ್‍ದಾಸ್, ಸಂತ ರೈಯದಾಸ್, ಗುರುನಾನಕ್, ಚೈತನ್ಯಮಹಾಪ್ರಭುಮುಂತಾದ ಅನೇಕಾನೇಕಮಹಾನ್ವ್ಯಕ್ತಿಗಳ ಸಂಗಮದಿಂದಭಕ್ತಿಚಳುವಳಿ ಬಲವಾಯಿತು. ಇವರ ಪ್ರಭಾವದಿಂದಲೇದೇಶದಲ್ಲಿಒಂದು ದೀರ್ಘಕಾಲದವರೆಗೆಜನರು ತಮ್ಮಚೈತನ್ಯವನ್ನುಉಳಿಸಿಕೊಂಡಿದ್ದರು. ಗುಲಾಮಗಿರಿಯ ಕಾಲದಲ್ಲಿನಾವುನಮ್ಮನ್ನು ಕಾಪಾಡಿಕೊಳ್ಳಲು, ಮುಂದೆ ಸಾಗಲುಸಾಧ್ಯವಾಯಿತು. ಅತ್ಯಂತಸರಳವಾಗಿ ಹೇಳುವುದಾದರೆಇವರಲ್ಲಿಸಮಾಜದ ಮುಂದೆತಮ್ಮಉನ್ನತ ವಿಚಾರಗಳನ್ನುತಲುಪಿಸುವಪ್ರಯತ್ನ ಮಾಡಿದರು. ಭಕ್ತಿ ಚಳುವಳಿಯಸಂದರ್ಭದಲ್ಲಿಧರ್ಮ, ದರ್ಶನ, ಸಾಹಿತ್ಯಗಳತ್ರಿವೇಣಿ ಸಂಗಮವಾಗಿಇಂದಿಗೂನಮ್ಮೆಲ್ಲರಿಗೂ ಪ್ರೇರಣೆನೀಡುತ್ತಿದೆ. ಭಕ್ತಿಕಾಲದಲ್ಲಿ ರಚಿತವಾದವಚನಗಳು, ದೋಹಾಗಳು, ಚೌಪದಿಗಳು,ಕವಿತೆಗಳು, ಗೀತೆಗಳುಇಂದಿಗೂನಮ್ಮ ಸಮಾಜಕ್ಕೆಅಷ್ಟೇಅಮೂಲ್ಯವಾಗಿವೆ. ಅವರ ದರ್ಶನಗಳು, ತತ್ಪಾದರ್ಶಗಳುಯಾವುದೇ ಕಾಲದಲ್ಲೂಅತ್ಯಂತಹೆಚ್ಚು ಪ್ರಸ್ತುತವಾಗಿವೆ. 800 ವರ್ಷಗಳ ಹಿಂದಿನಶ್ರೀಬಸವೇಶ್ವರ ಅವರುಇಂದಿಗೂಪ್ರಸ್ತುತ ಎನ್ನುವುದುಬಹಳಸಮಂಜಸವಾಗಿದೆ.
ಮಹನೀಯರೆ, ಭಕ್ತಿ ಚಳುವಳಿಯಆಭಾವಗಳನ್ನು, ಆದರ್ಶನವನ್ನುಇಡೀ ವಿಶ್ವಕ್ಕೇಪ್ರಚಾರಮಾಡುವ ಅವಶ್ಯಕತೆಯಿದೆ. 23 ಭಾಷೆಗಳಲ್ಲಿ ಬಸವೇಶ್ವರಅವರವಚನಗಳನ್ನು ಅನುವಾದಿಸುವಕಾರ್ಯಇಂದು ಸಂಪೂರ್ಣವಾಗಿರುವುದುಬಹಳ ಸಂತೋಷವಾಗಿದೆ. ಅನುವಾದ ಕಾರ್ಯದಲ್ಲಿತೊಡಗಿದಎಲ್ಲರನ್ನೂ ನಾನುಅಭಿನಂದಿಸುತ್ತೇನೆ. ನಿಮ್ಮಪ್ರಯತ್ನಗಳಿಂದ ಶ್ರೀಬಸವೇಶ್ವರಅವರ ವಚನಗಳುಇನ್ನುಮನೆಮನೆ ತಲುಪುತ್ತವೆ. ಈ ಸಂದರ್ಭದಲ್ಲಿನಾನುಬಸವ ಸಮಿತಿಯಮುಂದೆಒಂದು ಮನವಿಮಾಡಿಕೊಳ್ಳುತ್ತಿದ್ದೇನೆ. ಈವಚನಗಳ ಆಧಾರದಮೇಲೆಕೆಲವು ರಸಪ್ರಶ್ನೆಗಳನ್ನುತಯಾರಿಸಿ. ಪ್ರಶ್ನೆಮತ್ತು ಉತ್ತರಗಳುಸಂಪೂರ್ಣಡಿಜಿಟಲ್ ಆಗಿರಲಿ, ಪ್ರತಿವರ್ಷಬೇರೆಬೇರೆ ವಯಸ್ಸಿನಜನರುಸ್ಪರ್ಧೆಯಲ್ಲಿ ಭಾಗವಹಿಸಲಿ. ತಾಲೂಕು ಮಟ್ಟದಲ್ಲಿನಂತರಜಿಲ್ಲಾ ಮಟ್ಟದಲ್ಲಿ, ರಾಜ್ಯ, ಅಂತಾರಾಜ್ಯ, ಅಂತಾರಾಷ್ಟ್ರೀಯಮಟ್ಟದಸ್ಪರ್ಧೆಗಳನ್ನು ವರ್ಷವಿಡೀಆಯೋಜಿಸುತ್ತಿರಿ. ಐವತ್ತುಲಕ್ಷದಿಂದ ಒಂದುಕೋಟಿಜನರು ಬರಲಿ, ರಸಪ್ರಶ್ನೆಸ್ಪರ್ಧೆಯಲ್ಲಿ ಭಾಗವಹಿಸಲಿ,

ಹೀಗೆಭಾಗವಹಿಸುವವರೆಲ್ಲವಚನಾಮೃತವನ್ನುಒಬ್ಬ ವಿದ್ಯಾರ್ಥಿಯಂತೆಅಧ್ಯಯನಮಾಡಿ ನಂತರರಸಪ್ರಶ್ನೆಸ್ಪರ್ಧೆಯಲ್ಲಿ ಭಾಗವಹಿಸಬೇಕಾಗುತ್ತದೆ. ಶ್ರೀಅರವಿಂದ ಜತ್ತಿಅವರೆ, ನೀವು ಈಕೆಲಸವನ್ನುಖಂಡಿತ ಮಾಡುತ್ತೀರಿಎಂದುನಾನು ಭಾವಿಸುತ್ತೇನೆ. ಇಲ್ಲದಿದ್ದರೆಇವುಗಳನ್ನುನಾವು ಮರೆತುಬಿಡುತ್ತೇವೆ.

ನಾನುಅರವಿಂದ ಅವರನ್ನುಸಂಸತ್ತಿನಲ್ಲಿಕೆಲಕಾಲದ ಹಿಂದೆಭೇಟಿಯಾಗಿದ್ದೆ. ಆ ದಿನಗಳಲ್ಲಿನೋಟುಅಮಾನ್ಯೀಕರಣದ ಚರ್ಚೆನಡೆಯುತ್ತಿತ್ತು. ಮೊದಲುಜನರು ಇನ್ನೊಬ್ಬರಜೇಬಿಗೆಕೈ ಹಾಕುತ್ತಿದ್ದರು. ಈಗತಮ್ಮಜೇಬಿನಲ್ಲಿ ಕೈಹಾಕಿನಡೆಯುತ್ತಿದ್ದಾರೆ. ಆ ಸಂದರ್ಭದಲ್ಲಿಅರವಿಂದಅವರು ನನಗೆಬಸವೇಶ್ವರಅವರ ಒಂದುವಚನದಅರ್ಥವನ್ನು ಹೇಳಿದರು. ಅದು ಎಷ್ಟುಸಮಂಜಸವಾಗಿತ್ತು, ಅದು ನನಗೆ 7ನೇತಾರೀಖಿನಂದೇ ಸಿಕ್ಕಿದ್ದರೆಎಷ್ಟುಚೆನ್ನಾಗಿರುತ್ತಿತ್ತು, 8ನೇತಾರೀಖು ನಾನುಹೇಳಿದಮಾತಿನಲ್ಲಿ ಖಚಿತವಾಗಿಯೂಇದನ್ನುಉಲ್ಲೇಖಿಸಿರುತ್ತಿದ್ದೆ. ಕರ್ನಾಟಕದಲ್ಲಿ ಇನ್ನೂಏನೇನುಹೊರಬರಲಿದೆಯೋ ಎಂಬುದನ್ನುನೀವುಅಂದಾಜು ಮಾಡಬಹುದು. ಆದ್ದರಿಂದ ಈಕೆಲಸವನ್ನುಇನ್ನೂ ಮುಂದಕ್ಕೆತೆಗೆದುಕೊಂಡುಹೋಗಿ ಎಂದುಹೇಳಲುಬಯಸುತ್ತೇನೆ. ಇಂದಿನನವಪೀಳಿಗೆಗೆ ಗೂಗಲ್ಗುರುವಿದ್ದಾನೆ. ಅವರಿಗಾಗೇಆನ್ ಲೈನ್ರಸಪ್ರಶ್ನೆಸ್ಪರ್ಧೆ ಸೂಕ್ತವಾಗಿದೆ. ಇದಲ್ಲದೆ ವಚನಾಮೃತಮತ್ತುಇಂದಿನ ವಿಚಾರಧಾರೆಗಳು, ಈ ಎರಡರಸಾರ್ಥಕತೆಯಬಗ್ಗೆ ರಸಪ್ರಶ್ನೆಸ್ಪರ್ಧೆಯನ್ನುಏರ್ಪಡಿಸಬಹುದು. ಆಗ ವಿಶ್ವದಯಾವುದೇಮಹಾಪುರುಷರ ಮಾತುಗಳಿಗಿಂತಲೂಹೆಚ್ಚಿನಮೊನಚು 800 ವರ್ಷಗಳಹಿಂದೆನಮ್ಮ ಮಣ್ಣಿನಲ್ಲಿಜನಿಸಿದ್ದ ನಮ್ಮಶ್ರೀ ಬಸವೇಶ್ವರಅವರವಚನಗಳಲ್ಲಿದೆಎಂದು ಅವರಿಗೆಅರಿವಾಗಬಹುದು. ಇಲ್ಲಿ

ಸದನದಲ್ಲಿರುವವರುಮತ್ತುದೇಶವಿದೇಶಗಳಲ್ಲಿಈಕಾರ್ಯಕ್ರಮವನ್ನುವೀಕ್ಷಿಸುತ್ತಿರುವವರಿಗೂಇದೇ ರೀತಿಅನ್ನಿಸಬಹುದು.
2022ಕ್ಕೆ ನಮ್ಮದೇಶಕ್ಕೆಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತವೆ. 75 ವರ್ಷಗಳುಹೇಗೆ ಕಳೆದೆಹಾಗೆಯೇಆವರ್ಷವನ್ನು ಕಳೆಯಬೇಕೆ? ಇಲ್ಲ, ಇಂದಿನಿಂದಲೇ ನಾವುನಿರ್ಧರಿಸೋಣ. 2022 ಬರುವಷ್ಟರಲ್ಲಿಎಲ್ಲಿಗೆ ತಲುಪಬೇಕುಎಂದುಯೋಚಿಸೋಣ. ವ್ಯಕ್ತಿಯಾಗಲಿ, ಕುಟುಂಬವಾಗಲಿ, ಸಂಸ್ಥೆಯಾಗಲಿ, ತಮ್ಮ ಹಳ್ಳಿಯಾಗಲಿ, ಪಟ್ಟಣವಾಗಲಿ, ನಗರವಾಗಲಿ, ಪ್ರತಿಯೊಬ್ಬರೂಸಂಕಲ್ಪಮಾಡಬೇಕು. ದೇಶದಸ್ವಾತಂತ್ರ್ಯಯಕ್ಕಾಗಿ ಬಲಿದಾನಮಾಡಿದ್ದಾರೆ. ಜೈಲುಗಳಲ್ಲಿತಮ್ಮ ಜೀವನವನ್ನೇಕಳೆದವರಿದ್ದಾರೆ. ಅವರಕನಸುಗಳು ಅಪೂರ್ಣವಾಗಿವೆ. ಅವುಗಳನ್ನುಪೂರ್ಣಗೊಳಿಸುವುದುನ್ಮಮೆಲ್ಲರ ಹೊಣೆಯಾಗಿದೆ. 125 ಕೋಟಿ ಜನರು 2022 ಆಗುವಷ್ಟರಲ್ಲಿದೇಶದ ಒಳಿತಿಗಾಗಿನನ್ನಪ್ರಯತ್ನಗಳೊಂದಿಗೆಕೈಜೋಡಿಸಿ, ಇಲ್ಲದಿದ್ದರೆ, ಸರ್ಕಾರಇದು ಮಾಡಬೇಕು, ಇದುಮಾಡಲಾರದು ಎಂದುಸಲಹೆನೀಡುವವರು ಬಹಳಸಿಗುತ್ತಾರೆ. ಅದಲ್ಲ, ಬಸವೇಶ್ವರರು ಕನಸುಕಂಡದೇಶವಿದು.

ಇಲ್ಲಿನ 125 ಕೋಟಿ ಜನರುತಮ್ಮಶಕ್ತಿಯನ್ನು ಒಗ್ಗೂಡಿಸಿನಮ್ಮಜೊತೆಗೆ ಸಾಗಬೇಕೆಂದುನಾನುಮನವಿ ಮಾಡಿಕೊಳ್ಳುತ್ತೇನೆ. ಈಬಸವಸಮಿತಿಯ ಮೂಲಕಮಹೋನ್ನತಕಾರ್ಯ ಮಾಡಿದಎಲ್ಲಸರಸ್ವತಿ ರ್ಪುತ್ರರನ್ನುಭೇಟಿಯಾಗುವಅದೃಷ್ಟ ನನಗೆದೊರೆತಿದೆ. ಈಮಹಾನ್ ಕಾರ್ಯಗಳನ್ನುಪೂರೈಸಲುಅವರು ಹಗಲುರಾತ್ರಿಕಷ್ಟಪಟ್ಟಿದ್ದಾರೆ. ಕನ್ನಡ ಭಾಷೆಕಲಿತುಗುಜರಾತಿಗೆ ಅನುವಾದಮಾಡಿದ, ಉರ್ದು ಭಾಷೆಗೆಅನುವಾದಮಾಡಿದ, ಹೀಗೆವಿವಿಧಭಾಷೆಗಳಲ್ಲಿ ಅನುವಾದಮಾಡಿದಎಲ್ಲರನ್ನೂ ಭೇಟಿಮಾಡುವಸದವಕಾಶ ದೊರೆತಿದೆ. ನಾನುಅವರೆಲ್ಲರಿಗೂ ಬಹಳಹೃತ್ಪೂರ್ವಕವಾಗಿಅಭಿನಂದಿಸುತ್ತೇನೆ. ಈ ಕಾರ್ಯವನ್ನುಪೂರ್ಣಗೊಳಿಸಲುಅವರು ತಮ್ಮಸಮಯನೀಡಿದ್ದಾರೆ, ಶಕ್ತಿನೀಡಿದ್ದಾರೆ, ತಮ್ಮ ಜ್ಙಾನವನ್ನುಧಾರೆಯೆರೆದಿದ್ದಾರೆ.

ಈಪವಿತ್ರ ಸಮಾರಂಭದಲ್ಲಿನಿಮ್ಮೊಂದಿಗೆಕಳೆಯುವ ಸೌಭಾಗ್ಯದೊರೆತಿದೆ. ಬಸವೇಶ್ವರಅವರ ಮಹಾನ್ವಚನಗಳನ್ನುಕೇಳುವ ಅವಕಾಶದೊರೆತಿದೆಮತ್ತು ಈನೆಪದಲ್ಲಿನನ್ನ ಗುರುವತ್ತಹೋಗುವಅವಕಾಶ ಸಕ್ಕಿತು .

ಈ ಸಮಾರಂಭದಲ್ಲಿಭಾಗವಹಿಸುವಅವಕಾಶ ದೊರಕಿದ್ದಕ್ಕೆನಾನುಧನ್ಯನಾಗಿದ್ದೇನೆ. ಮತ್ತೊಮ್ಮೆ ನಾನುನಿಮಗೆಲ್ಲರಿಗೂಧನ್ಯವಾದಗಳನ್ನು ಅರ್ಪಿಸುತ್ತೇನೆ, ಶುಭಾಶಯಗಳನ್ನು ಕೋರುತ್ತೇನೆ.