Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಸವ ಜಯಂತಿ: ಜಗಜ್ಯೋತಿ ಬಸವಣ್ಣ ನವರಿಗೆ ಪ್ರಧಾನಿ ಗೌರವ ನಮನ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಜಗಜ್ಯೋತಿ ಬಸವಣ್ಣ ನವರಿಗೆ ಗೌರವ ನಮನ ಸಲ್ಲಿಸಿದರು, ಬಸವೇಶ್ವರ ಜಯಂತಿ ಅಂಗವಾಗಿ ಇಂದು ಜನತೆಗೆ ವೀಡಿಯೋ ಸಂದೇಶದ ಮೂಲಕ ಬಸವ ಜಯಂತಿಯ ಶುಭಾಶಯ ಕೋರಿದರು.

ಬಸವ ಜಯಂತಿ 12 ನೇ ಶತಮಾನದ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ವಿಶ್ವ ಗುರು ಬಸವೇಶ್ವರ ಅವರ ಜನ್ಮದಿನ ಗೌರವಾರ್ಥ ಆಚರಣೆ.

ಜಾಗತಿಕ ಬಸವ ಜಯಂತಿ -2020 ಯನ್ನು ಇಂದು ಡಿಜಿಟಲ್ ಮಾಧ್ಯಮದ ಮೂಲಕ ಭಾರತದಲ್ಲಿರುವ ಮತ್ತು ವಿದೇಶದಲ್ಲಿರುವ ಅವರ ಅನುಯಾಯಿಗಳನ್ನು ಬೆಸೆಯುವ ಮೂಲಕ ಆಚರಿಸಲಾಯಿತು.

ತಮ್ಮ ಸಂದೇಶದಲ್ಲಿ ಪ್ರಧಾನ ಮಂತ್ರಿ ಅವರು ಕೊರೊನಾವೈರಸ್ ಜಾಗತಿಕ ಸಾಂಕ್ರಾಮಿಕವನ್ನು ಸೋಲಿಸಲು ದೇಶಕ್ಕೆ ಶಕ್ತಿ ಕೊಡುವಂತೆ ಬಸವೇಶ್ವರರ ಆಶೀರ್ವಾದಗಳನ್ನು ಕೋರಿದರು.

ಪ್ರಧಾನ ಮಂತ್ರಿ ಅವರು ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ತಾವು ಬಸವೇಶ್ವರ ವಚನ ಬೋಧನೆಗಳಿಂದ ಕಲಿಯುವ ಅವಕಾಶ ಸಿಕ್ಕಿದನ್ನು ಸ್ಮರಿಸಿಕೊಂಡರು. ಅದು ಅವರ ಪವಿತ್ರ ವಚನಗಳನ್ನು 23 ಭಾಷೆಗಳಿಗೆ ಭಾಷಾಂತರ ಕಾರ್ಯಕ್ರಮ ಹಾಗು ಲಂಡನ್ನಿನಲ್ಲಿ ಬಸವೇಶ್ವರರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ತಮಗೆ ದೊರೆತ ಅವಕಾಶವನ್ನು ನೆನೆದರು.

ಬಸವಣ್ಣ ಮಹಾನ್ ಸಮಾಜ ಸುಧಾರಕ ಎಂದು ವರ್ಣಿಸಿದ ಪ್ರಧಾನ ಮಂತ್ರಿ ಅವರೊಬ್ಬ ಉತ್ತಮ ಆಡಳಿತಗಾರರು ಹಾಗು ಸುಧಾರಕರು, ಅವರು ವ್ಯಕ್ತಿಗಳು ಅಥವಾ ಸಮಾಜದಲ್ಲಿ ಸುಧಾರಣೆಗಳಾಗಬೇಕು ಎಂಬ ಆಶಯ ಹೊಂದಿದ್ದರು ಹಾಗು ತಮ್ಮ ವೈಯಕ್ತಿಕ ಜೀವನದಲ್ಲಿಯೂ ಅಳವಡಿಸಿಕೊಂಡಿದ್ದರು.

ಬಸವಣ್ಣ ನವರ ಬೋಧನೆಗಳು ಆಧ್ಯಾತ್ಮಿಕ ಜ್ಞಾನದ ಮೂಲಗಳಾಗಿವೆ ಹಾಗು ಅವು ನಮ್ಮ ಬದುಕಿಗೆ ಮಾರ್ಗದರ್ಶಿಯೂ ಆಗಿವೆ ಎಂದ ಪ್ರಧಾನ ಮಂತ್ರಿ ಅವರು ಬಸವೇಶ್ವರರ ಬೋಧನೆಗಳು ನಮಗೆ ಉತ್ತಮ ಮನುಷ್ಯನನ್ನಾಗುವುದಕ್ಕೆ ಹೇಳಿಕೊಡುತ್ತವೆ, ಮತ್ತು ನಮ್ಮ ಸಮಾಜವನ್ನು ಹೆಚ್ಚು ಉದಾರೀಕರಿಸುತ್ತವೆ ಅವರು ಸಾಮಾಜಿಕ ಮತ್ತು ಲಿಂಗ ಸಮಾನತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಮ್ಮ ಸಮಾಜಕ್ಕೆ ಹಲವಾರು ಶತಮಾನಗಳ ಹಿಂದೆಯೇ ಮಾರ್ಗದರ್ಶನ ನೀಡಿದ್ದರು ಎಂದೂ ಪ್ರಧಾನ ಮಂತ್ರಿ ವಿಶ್ಲೇಷಿಸಿದರು.

ವ್ಯಕ್ತಿಯ ಹಕ್ಕುಗಳನ್ನು ಮುಂಚೂಣಿಗೆ ತರುವ , ಸಮಾಜದ ತಳಮಟ್ಟದವರೊಂದಿಗೆ ನಿಲ್ಲುವ ಪ್ರಜಾಪ್ರಭುತ್ವಕ್ಕೆ ಶಿಲಾನ್ಯಾಸ ಮಾಡಿದರು ಎಂದು ಹೇಳಿದ ಪ್ರಧಾನ ಮಂತ್ರಿಗಳು ಬಸವಣ್ಣನವರು ಮಾನವ ಬದುಕಿನ ಪ್ರತೀ ವಿಷಯಗಳನ್ನು ಮತ್ತು ಅದನ್ನು ಸುಧಾರಿಸಲು ಪರಿಹಾರಗಳನ್ನು ಒದಗಿಸಿಕೊಟ್ಟವರು ಎಂದೂ ನುಡಿದರು.

ಬಸವಣ್ಣನವರ ಪವಿತ್ರ ವಚನಗಳ ಡಿಜಿಟಲೀಕರಣ ನಿಟ್ಟಿನಲ್ಲಿ ಸಾಗಿರುವ ವ್ಯಾಪಕವಾದ ಕೆಲಸದ ಬಗ್ಗೆ ಪ್ರಧಾನ ಮಂತ್ರಿ ಸಂತೋಷ ವ್ಯಕ್ತಪಡಿಸಿದರು. ಈ ಬಗ್ಗೆ 2017 ರಲ್ಲಿ ಪ್ರಧಾನ ಮಂತ್ರಿ ಅವರೇ ಸಲಹೆ ಮಾಡಿದ್ದರು.

ಇಂದಿನ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ಡಿಜಿಟಲ್ ಮಾಧ್ಯಮದ ಮೂಲಕ ಸಂಘಟಿಸಿರುವುದಕ್ಕೆ ಬಸವ ಸಮಿತಿಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಪ್ರಧಾನ ಮಂತ್ರಿಗಳು ಲಾಕ್ ಡೌನ್ ಮಾರ್ಗದರ್ಶಿಗಳನ್ನು ಅನುಸರಿಸಿಕೊಂಡು ಕಾರ್ಯಕ್ರಮವನ್ನು ಸಂಘಟಿಸುವುದಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿದೆ ಎಂದರು.

“ಇಂದು ಭಾರತೀಯರು ತಮ್ಮೊಂದಿಗೆ ಬದಲಾವಣೆ ಆರಂಭದ ಭಾವನೆಯಲ್ಲಿದ್ದಾರೆ. ಈ ನಂಬಿಕೆ ದೇಶಕ್ಕೆ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತಿದೆ” ಎಂದ ಪ್ರಧಾನಿಯವರು ಈ ಭರವಸೆಯ ಮತ್ತು ನಂಬಿಕೆಯ ಸಂದೇಶವನ್ನು ಬಲಪಡಿಸಿಕೊಂಡು ಮುಂದೆ ಕೊಂಡೊಯ್ಯುವಂತೆ ಮನವಿ ಮಾಡಿದರು. ಇದು ನಮಗೆ ಕಠಿಣ ದುಡಿಮೆ ಮಾಡಲು ಪ್ರೇರಣೆ ನೀಡುತ್ತದೆ ಮತ್ತು ನಮ್ಮ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದ ಅವರು ಬಸವಣ್ಣ ದೇವರ ಕೆಲಸಗಳನ್ನು ಮತ್ತು ಅವರ ಆದರ್ಶಗಳನ್ನು ವಿಶ್ವಾದ್ಯಂತ ಪ್ರಸಾರಿಸುವ ಮೂಲಕ ವಿಶ್ವವನ್ನು ಉತ್ತಮ ಸ್ಥಳವನ್ನಾಗಿಸಬೇಕು ಎಂದು ಮನವಿ ಮಾಡಿದರು.

ಜನತೆಗೆ ಬಸವ ಜಯಂತಿಯ ಶುಭಾಶಯವನ್ನು ಹೇಳುವಾಗ ಪ್ರಧಾನ ಮಂತ್ರಿ ಅವರು “ದೋ ಗಜ್ ದೂರಿ” ನಿಯಮವನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಪಾಲಿಸಿ ಎಂಬುದನ್ನು ಒತ್ತಿ ಹೇಳಿದರು.