Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬವಾಲಿಯಾಲಿ ಧಾಮ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

ಬವಾಲಿಯಾಲಿ ಧಾಮ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ


ಗುಜರಾತ್‌ನ ಭರ್ವಾಡ್ ಸಮುದಾಯದ ಬವಲಿಯಾಲಿ ಧಾಮ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಅವರು ಮಹಾಂತ ಶ್ರೀ ರಾಮ್ ಬಾಪು ಜಿ, ಸಮುದಾಯದ ಮುಖಂಡರು ಮತ್ತು ಸಾವಿರಾರು ಭಕ್ತರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು. ಭರ್ವಾಡ್ ಸಮುದಾಯದ ಸಂಪ್ರದಾಯಗಳಿಗೆ ಮತ್ತು ಈ ಸಂಪ್ರದಾಯಗಳನ್ನು ಎತ್ತಿಹಿಡಿಯಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಪೂಜ್ಯ ಸಂತರು ಮತ್ತು ಮಹಾಂತರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ, ಐತಿಹಾಸಿಕ ಮಹಾಕುಂಭದ ಅಪಾರ ಸಂತೋಷ ಮತ್ತು ಹೆಮ್ಮೆಯನ್ನು ಪ್ರಸ್ತಾಪಿಸಿದರು. ಈ ಪವಿತ್ರ ಕಾರ್ಯಕ್ರಮದ ಸಮಯದಲ್ಲಿ ಮಹಾಂತ ಶ್ರೀ ರಾಮ್ ಬಾಪು ಜಿ ಅವರಿಗೆ ಮಹಾಮಂಡಲೇಶ್ವರ ಎಂಬ ಬಿರುದು ನೀಡಿ ಗೌರವಿಸಿದ ಮಹತ್ವದ ಸಂದರ್ಭವನ್ನು ಪ್ರಸ್ತಾಪಿಸಿದರು. ಇದು ಒಂದು ಸ್ಮರಣೀಯ ಸಾಧನೆ ಮತ್ತು ಎಲ್ಲರಿಗೂ ಅಪಾರ ಸಂತೋಷದ ಕ್ಷಣವಾಗಿದೆ. ಸಮುದಾಯದ ಕುಟುಂಬಗಳಿಗೆ ಮಹಾಂತ ಶ್ರೀ ರಾಮ್ ಬಾಪು ಜಿ ಅವರ ಕೊಡುಗೆಗಳು ಮತ್ತು ಸಾಧನೆಗಳನ್ನು ಆಚರಿಸುವ ಸಂದರ್ಭದಲ್ಲಿ ಅವರು ಶುಭಾಶಯಗಳನ್ನು ತಿಳಿಸಿದರು.

ಕಳೆದ ವಾರದಿಂದ ಭಾವನಗರದ ಭೂಮಿಯು ಶ್ರೀಕೃಷ್ಣನ ವೃಂದಾವನವಾಗಿ ರೂಪಾಂತರವಾಗಿರುವಂತೆ ಗೋಚರಿಸುತ್ತಿದೆ. ಸಮುದಾಯವು ನಡೆಸಿದ ಭಾಗವತ ಕಥಾಹಂದರವನ್ನು ಪ್ರಸ್ತಾಪಿಸಿದ ಅವರು, ಜನರು ಕೃಷ್ಣನ ಸಾರದಲ್ಲಿ ಮುಳುಗಿರುವ ವಾತಾವರಣವು ಭಕ್ತಿಯಿಂದ ತುಂಬಿದೆ. “ಬವಲಿಯಾಲಿ ಕೇವಲ ಧಾರ್ಮಿಕ ತಾಣವಲ್ಲ, ಬದಲಾಗಿ ಭರ್ವಾಡ್ ಸಮುದಾಯ ಮತ್ತು ಇತರ ಅನೇಕರಿಗೆ ನಂಬಿಕೆ, ಸಂಸ್ಕೃತಿ ಮತ್ತು ಏಕತೆಯ ಸಂಕೇತವಾಗಿದೆ” ಎಂದರು.

ನಾಗಾ ಲಖಾ ಠಾಕೂರ್ ಅವರ ಆಶೀರ್ವಾದದೊಂದಿಗೆ, ಬವಾಲಿಯಾಲಿಯ ಪವಿತ್ರ ಸ್ಥಳವು ಯಾವಾಗಲೂ ಭರ್ವಾಡ ಸಮುದಾಯಕ್ಕೆ ನಿಜವಾದ ನಿರ್ದೇಶನ ಮತ್ತು ಅಪರಿಮಿತ ಸ್ಫೂರ್ತಿಯನ್ನು ನೀಡಿದೆ. ಶ್ರೀ ನಾಗಾ ಲಖಾ ಠಾಕೂರ್ ದೇವಾಲಯದ ಪುನರ್ ಪ್ರತಿಷ್ಠಾಪನೆಯ ಸುವರ್ಣಾವಕಾಶವು ಒಂದು ಸ್ಮರಣೀಯ ಸಂದರ್ಭವಾಗಿದೆ.  ಕಳೆದ ವಾರದಲ್ಲಿ ನಡೆದ ರೋಮಾಂಚಕ ಆಚರಣೆಗಳಿಂದ ಸಮುದಾಯದ ಉತ್ಸಾಹ ಮತ್ತು ಶಕ್ತಿ ಇಮ್ಮಡಿಯಾಗಿದೆ ಎಂದು ಶ್ಲಾಘಿಸಿದರು. ಸಾವಿರಾರು ಮಹಿಳೆಯರ “ರಸ”  ಪ್ರದರ್ಶನವು ವೃಂದಾವನದ ಜೀವಂತ ಸಾಕಾರ ಮತ್ತು ನಂಬಿಕೆ, ಸಂಸ್ಕೃತಿ ಮತ್ತು ಸಂಪ್ರದಾಯದ ಸಾಮರಸ್ಯದ ಮಿಶ್ರಣ ಎಂದು ಬಣ್ಣಿಸಿದರು, ಇದು ಅಪಾರ ಸಂತೋಷ ಮತ್ತು ತೃಪ್ತಿಯ ಮೂಲವಾಗಿದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಲಾವಿದರ ಕೊಡುಗೆಗಳನ್ನು ಅವರು ಶ್ಲಾಘಿಸಿದರು. ಕಲಾವಿದರು ಕಾರ್ಯಕ್ರಮಗಳಿಗೆ ಜೀವ ತುಂಬಿದರು ಮತ್ತು ಸಮಾಜಕ್ಕೆ ಸಕಾಲಿಕ ಸಂದೇಶಗಳನ್ನು ತಲುಪಿಸಿದರು. ಭಾಗವತ ಕಥೆಯ ಮೂಲಕ ಸಮುದಾಯವು ಅಮೂಲ್ಯ ಸಂದೇಶಗಳನ್ನು ಪಡೆಯುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ಅವರ ಪ್ರಯತ್ನಗಳು ಅಪಾರ ಪ್ರಶಂಸೆಗೆ ಅರ್ಹವಾಗಿವೆ ಎಂದು ಹೇಳಿದರು.

ಈ ಶುಭ ಸಂದರ್ಭದಲ್ಲಿ ಭಾಗವಹಿಸಲು ಆಹ್ವಾನಿಸಿದ್ದಕ್ಕಾಗಿ ಮಹಾಂತ ಶ್ರೀ ರಾಮ್ ಬಾಪು ಜಿ ಮತ್ತು ಬವಲಿಯಾಲಿ ಧಾಮ್ ಕಾರ್ಯಕ್ರಮದ ಆಯೋಜಕರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ ಪ್ರಧಾನಿ, ಸಂಸತ್ತಿನ ಕಾರ್ಯಯೋಜನೆಗಳಿಂದಾಗಿ ತಾವು ಖುದ್ದಾಗಿ ಹಾಜರಾಗಲು ಸಾಧ್ಯವಾಗಲಿಲ್ಲ, ಭವಿಷ್ಯದಲ್ಲಿ ತಾವು ಭೇಟಿ ನೀಡಿ ಗೌರವ ಸಲ್ಲಿಸುವುದಾಗಿ ಅವರು ಭರವಸೆ ನೀಡಿದರು.

ಭರ್ವಾಡ ಸಮುದಾಯ ಮತ್ತು ಬವಲಿಯಾಲಿ ಧಾಮ್ ಜೊತೆಗಿನ ತಮ್ಮ ದೀರ್ಘಕಾಲದ ಸಂಪರ್ಕವನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ಸಮುದಾಯದ ಸೇವಾ ಸಮರ್ಪಣೆ, ಪ್ರಕೃತಿಯ ಮೇಲಿನ ಅವರ ಪ್ರೀತಿ ಮತ್ತು ಗೋರಕ್ಷಣೆಗೆ ಅವರ ಬದ್ಧತೆಯನ್ನು ಶ್ಲಾಘಿಸಿದರು. ಈ ಮೌಲ್ಯಗಳು ಪದಗಳಿಗೆ ಮೀರಿವೆ,  ಸಮುದಾಯದೊಳಗೆ ಆಳವಾಗಿ ಪ್ರತಿಧ್ವನಿಸುವ ಹಂಚಿಕೆಯ ಭಾವನೆ ಎದ್ದುಕಾಣುತ್ತಿದೆ ಎಂದರು.

ನಾಗಾ ಲಖಾ ಠಾಕೂರ್ ಅವರ ಆಳವಾದ ಪರಂಪರೆಗೆ ಒತ್ತು ನೀಡಿದ ಶ್ರೀ ಮೋದಿ, ಅವರ ಕೊಡುಗೆಗಳನ್ನು ಸೇವೆ ಮತ್ತು ಸ್ಫೂರ್ತಿಯ ದಾರಿದೀಪವೆಂದು ಶ್ಲಾಘಿಸಿದರು. ಶತಮಾನಗಳ ನಂತರವೂ ಸ್ಮರಣೀಯವಾಗಿರುವ ಮತ್ತು ಆಚರಿಸಲ್ಪಡುತ್ತಿರುವ ಠಾಕೂರ್ ಅವರ ಪ್ರಯತ್ನಗಳ ಶಾಶ್ವತ ಪರಿಣಾಮವನ್ನು ಅವರು ಎತ್ತಿ ತೋರಿಸಿದರು. ಗುಜರಾತ್‌ನಲ್ಲಿ ಸವಾಲಿನ ಸಮಯದಲ್ಲಿ, ವಿಶೇಷವಾಗಿ ತೀವ್ರ ಬರಗಾಲದ ಅವಧಿಯಲ್ಲಿ ಪೂಜ್ಯ ಇಸು ಬಾಪು ಅವರು ನೀಡಿದ ಗಮನಾರ್ಹ ಸೇವೆಗಳ ಬಗ್ಗೆ ಪ್ರಧಾನಿ ತಮ್ಮ ವೈಯಕ್ತಿಕ ಸಾಕ್ಷಿಗಳನ್ನು ಹಂಚಿಕೊಂಡರು. ನೀರಿನ ಕೊರತೆಯು ನಿರಂತರ ಸಮಸ್ಯೆಯಾಗಿದ್ದ ಧಂಧುಕಾ ಮತ್ತು ರಾಂಪುರ್‌ನಂತಹ ಪ್ರದೇಶಗಳಲ್ಲಿ ಜನರು ಎದುರಿಸುತ್ತಿರುವ ಅಪಾರ ಕಷ್ಟಗಳಿಗೆ ಪೂಜ್ಯ ಇಸು ಬಾಪು ಅವರು ನೀಡಿದ ನಿಸ್ವಾರ್ಥ ಸೇವೆಯನ್ನು ಅವರು ಶ್ಲಾಘಿಸಿದರು, ಇದನ್ನು ಗುಜರಾತ್‌ನಾದ್ಯಂತ ಗುರುತಿಸಲ್ಪಟ್ಟ ಮತ್ತು ಪೂಜಿಸಲ್ಪಟ್ಟ ದೈವಿಕ ಕಾರ್ಯ ಎಂದು ಬಣ್ಣಿಸಿದರು. ಸ್ಥಳಾಂತರಗೊಂಡ ಸಮುದಾಯಗಳ ಕಲ್ಯಾಣ, ಅವರ ಮಕ್ಕಳ ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಗಿರ್ ಹಸುಗಳ ಸಂರಕ್ಷಣೆಗಾಗಿ ಇಸು ಬಾಪು ಅವರ ಸಮರ್ಪಣೆಯನ್ನು ಪ್ರಧಾನಿ ಪ್ರಸ್ತಾಪಿಸಿ, ಇಸು ಬಾಪು ಅವರ ಕೆಲಸದ ಪ್ರತಿಯೊಂದು ಅಂಶವು ಸೇವೆ ಮತ್ತು ಸಹಾನುಭೂತಿಯ ಆಳವಾದ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ ಎಂದರು.

ಭರ್ವಾಡ ಸಮುದಾಯದ ಕಠಿಣ ಪರಿಶ್ರಮ ಮತ್ತು ತ್ಯಾಗದ ಅಚಲ ಬದ್ಧತೆಗಾಗಿ, ಅವರ ಸ್ಥಿರ ಪ್ರಗತಿ ಮತ್ತು ಚೇತರಿಕೆ ಕಾಣುತ್ತಿದ್ದಾರೆ. ಸಮುದಾಯದೊಂದಿಗಿನ ತಮ್ಮ ಹಿಂದಿನ ಸಂಪರ್ಕವನ್ನು ಸ್ಮರಿಸಿದ ಪ್ರಧಾನಿ, ಅಲ್ಲಿ ಅವರು ಕೋಲು ಹಿಡಿಯುವುದರಿಂದ ಹಿಡಿದು ಪೆನ್ನುಗಳನ್ನು ಅಪ್ಪಿಕೊಳ್ಳುವ ತನಕ ಪರಿವರ್ತನೆಗೊಳ್ಳಲು ಅವರನ್ನು ಪ್ರೋತ್ಸಾಹಿಸಲಾಗಿದೆ, ಇದು ಶಿಕ್ಷಣದ ಮಹತ್ವವನ್ನು ಸಂಕೇತಿಸುತ್ತದೆ. ಶಿಕ್ಷಣದ ಮೂಲಕ ಮುಂದುವರಿಯುತ್ತಿರುವ ಮಕ್ಕಳೊಂದಿಗೆ ಈ ದೃಷ್ಟಿಕೋನವನ್ನು ಅಳವಡಿಸಿಕೊಂಡ ಭರ್ವಾಡ ಸಮುದಾಯದ ಹೊಸ ಪೀಳಿಗೆಯ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದರು. ಈಗ ಸಮುದಾಯದ ಹೆಣ್ಣುಮಕ್ಕಳು ಸಹ ತಮ್ಮ ಕೈಯಲ್ಲಿ ಕಂಪ್ಯೂಟರ್‌ಗಳನ್ನು ಹಿಡಿದಿದ್ದಾರೆ. ಪ್ರಕೃತಿ ಮತ್ತು ಸಂಸ್ಕೃತಿಯ ರಕ್ಷಕರಾಗಿ ಸಮುದಾಯವು ಬಹುದೊಡ್ಡ ಪಾತ್ರ ವಹಿಸಿದೆ. “ಅತಿಥಿ ದೇವೋ ಭವ” ಸಂಪ್ರದಾಯದ ಅವರ ಸಾಕಾರ ಶ್ಲಾಘನೀಯವಾಗಿದೆ. ಜಂಟಿ ಕುಟುಂಬಗಳಲ್ಲಿ ಹಿರಿಯರನ್ನು ನೋಡಿಕೊಳ್ಳುವ, ದೈವಿಕ ಸೇವೆಗೆ ಸಮಾನವಾದ ಸೇವಾ ಮನೋಭಾವವನ್ನು ಪ್ರತಿಬಿಂಬಿಸುವ ಭರ್ವಾಡ ಸಮುದಾಯ ವಿಶಿಷ್ಟ ಮೌಲ್ಯಗಳನ್ನು ಹೊಂದಿದೆ. ಆಧುನಿಕತೆಯನ್ನು ಅಳವಡಿಸಿಕೊಳ್ಳುವಾಗ ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಸಮುದಾಯದ ಪ್ರಯತ್ನಗಳನ್ನು ಗುರುತಿಸಿದ ಶ್ರೀ ಮೋದಿ, ಸ್ಥಳಾಂತರಗೊಂಡ ಕುಟುಂಬಗಳ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸುವುದು ಮತ್ತು ಜಾಗತಿಕವಾಗಿ ಹೊಸ ಅವಕಾಶಗಳೊಂದಿಗೆ ಸಮುದಾಯವನ್ನು ಸಂಪರ್ಕಿಸುವಂತಹ ಉಪಕ್ರಮಗಳು ಶ್ಲಾಘನೀಯ ಎಂದರು. ಸಮುದಾಯದ ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ತಮ್ಮ ಬಯಕೆಯನ್ನು ಅವರು ವ್ಯಕ್ತಪಡಿಸಿದರು.  ಗುಜರಾತ್‌ನ ಖೇಲ್ ಮಹಾಕುಂಭದ ಸಮಯದಲ್ಲಿ ಅವರು ಕಂಡ ಸಾಮರ್ಥ್ಯವನ್ನು ಶ್ಲಾಘಿಸಿದರು. ಗೋವುಗಳ ಸಾಕಣೆಯಲ್ಲಿ ಸಮುದಾಯದ ಸಮರ್ಪಣೆಯನ್ನು, ವಿಶೇಷವಾಗಿ ರಾಷ್ಟ್ರಕ್ಕೆ ಹೆಮ್ಮೆ ತಂದಿರುವ ಗಿರ್ ಹಸು ತಳಿಯನ್ನು ಸಂರಕ್ಷಿಸುವಲ್ಲಿ ಅವರ ಪ್ರಯತ್ನಗಳು ಜಾಗತಿಕ ಮನ್ನಣೆ ತಂದುಕೊಟ್ಟಿವೆ. ಸಮುದಾಯವು ತಮ್ಮ ಜಾನುವಾರುಗಳಿಗೆ ನೀಡುವಂತೆಯೇ ತಮ್ಮ ಮಕ್ಕಳಿಗೂ ಅದೇ ಕಾಳಜಿ ವಿಸ್ತರಿಸಬೇಕೆಂದು ಸಲಹೆ ನೀಡಿದರು.

ಭರ್ವಾಡ ಸಮುದಾಯದೊಂದಿಗಿನ ತಮ್ಮ ಸುದೀರ್ಘ ಸಂಪರ್ಕವನ್ನು ಪ್ರಸ್ತಾಪಿಸಿದ ಅವರು, ಅವರೆಲ್ಲರೂ ತಮ್ಮ ಕುಟುಂಬ ಮತ್ತು ಪಾಲುದಾರರು ಇದ್ದಂತೆ.  ಮುಂದಿನ 25 ವರ್ಷಗಳಲ್ಲಿ ತಮ್ಮ ವಿಕಸಿತ ಭಾರತದ ದೃಷ್ಟಿಕೋನವನ್ನು ಸಮುದಾಯವು ಬೆಂಬಲಿಸುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದರು. “ಸಬ್ಕಾ ಪ್ರಾಯಸ್” ದೇಶದ ದೊಡ್ಡ ಶಕ್ತಿ ಎಂಬ ಕೆಂಪುಕೋಟೆಯಿಂದ ನೀಡಿದ ಹೇಳಿಕೆಯನ್ನು ಪುನರುಚ್ಚರಿಸಿ, ಸಾಮೂಹಿಕ ಪ್ರಯತ್ನಗಳ ಮಹತ್ವಕ್ಕೆ ಒತ್ತು ನೀಡಿದರು. ವಿಕಸಿತ ಭಾರತ ಕಟ್ಟುವ ಮೊದಲ ಹೆಜ್ಜೆಯಾಗಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಕಾಲು ಮತ್ತು ಬಾಯಿ ರೋಗವನ್ನು ಎದುರಿಸಲು ಜಾನುವಾರುಗಳಿಗೆ ಸರ್ಕಾರದ ಉಚಿತ ಲಸಿಕೆ ಕಾರ್ಯಕ್ರಮ ರೂಪಿಸಿದೆ. ಸಮುದಾಯವು ತಮ್ಮ ಜಾನುವಾರುಗಳಿಗೆ ನಿಯಮಿತವಾಗಿ ಲಸಿಕೆಗಳನ್ನು ಖಚಿತಪಡಿಸಿಕೊಳ್ಳಬೇಕು. ಈ ಉಪಕ್ರಮವು ಕರುಣೆಯ ಕ್ರಿಯೆ ಮತ್ತು ದೈವಿಕ ಆಶೀರ್ವಾದವನ್ನು ಪಡೆಯುವ ಮಾರ್ಗವಾಗಿದೆ. ಜಾನುವಾರು ಸಾಕಣೆದಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸುವ ಬಗ್ಗೆಯೂ ಶ್ರೀ ಮೋದಿ ಪ್ರಸ್ತಾಪಿಸಿದರು, ಇದು ಅವರ ವ್ಯವಹಾರಗಳನ್ನು ವಿಸ್ತರಿಸಲು ಕಡಿಮೆ ಬಡ್ಡಿದರದ ಸಾಲಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಸ್ಥಳೀಯ ಜಾನುವಾರು ತಳಿಗಳನ್ನು ಸಂರಕ್ಷಿಸಬೇಕು, ಅವುಗಳ ಸಂರಕ್ಷಣೆ ಮತ್ತು ಬೆಳವಣಿಗೆಗೆ ರಾಷ್ಟ್ರೀಯ ಗೋಕುಲ್ ಮಿಷನ್ ಪ್ರಮುಖ ಉಪಕ್ರಮವಾಗಿದೆ. ಈ ಕಾರ್ಯಕ್ರಮಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಸಮುದಾಯವನ್ನು ಒತ್ತಾಯಿಸಿದರು.

ಪ್ರಧಾನಮಂತ್ರಿ ಅವರು ಸಸಿಗಳನ್ನು ನೆಡುವ ಮಹತ್ವವನ್ನು ಪುನರುಚ್ಚರಿಸಿದರು, ಸಮುದಾಯವು ತಮ್ಮ ತಾಯಂದಿರ ಗೌರವಾರ್ಥವಾಗಿ ಸಸಿಗಳನ್ನು ನೆಡುವಂತೆ ಪ್ರೋತ್ಸಾಹಿಸಿದರು. ಅತಿಯಾದ ಶೋಷಣೆ ಮತ್ತು ರಾಸಾಯನಿಕ ಬಳಕೆಯಿಂದ ಹಾನಿಗೊಳಗಾದ ಭೂಮಿ ತಾಯಿಯ ಆರೋಗ್ಯ ಮರುಸ್ಥಾಪಿಸಲು ಇದು ಒಂದು ಮಾರ್ಗವಾಗಿದೆ. ನೈಸರ್ಗಿಕ ಕೃಷಿಯ ಮೌಲ್ಯವನ್ನು ಪ್ರಸ್ತಾಪಿಸಿದ ಅವರು, ಭೂಮಿಯನ್ನು ಪುನರುಜ್ಜೀವನಗೊಳಿಸಲು ಈ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಮುದಾಯವನ್ನು ಒತ್ತಾಯಿಸಿದರು. ಮಣ್ಣನ್ನು ಬಲಪಡಿಸಲು ಸಂಪನ್ಮೂಲವಾಗಿ ಗೋವಿನ ಸಗಣಿ ಅಪಾರ ಸಾಮರ್ಥ್ಯ ಹೊಂದಿದೆ. ಈ ವಿಷಯದಲ್ಲಿ ಭರ್ವಾಡ್ ಸಮುದಾಯದ ಸೇವಾ ಸಮರ್ಪಣೆಯನ್ನು ಮೋದಿ ಶ್ಲಾಘಿಸಿದರು. ನೈಸರ್ಗಿಕ ಕೃಷಿ ಉತ್ತೇಜಿಸುವಲ್ಲಿ ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್ ಅವರ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು, ಈ ಉದ್ದೇಶಕ್ಕಾಗಿ ಕೊಡುಗೆ ನೀಡುವಂತೆ ಸಮುದಾಯಕ್ಕೆ ಕರೆ ನೀಡಿದರು.

ಪ್ರಧಾನಮಂತ್ರಿ ಅವರು ಭರ್ವಾಡ ಸಮುದಾಯಕ್ಕೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು, ನಾಗ ಲಖಾ ಠಾಕೂರ್ ಅವರ ಆಶೀರ್ವಾದ ಎಲ್ಲರಿಗೂ ನಿರಂತರವಾಗಿ ಸಿಗಲಿ ಎಂದು ಪ್ರಾರ್ಥಿಸಿದರು. ಬವಲಿಯಾಲಿ ಧಾಮದೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ವ್ಯಕ್ತಿಗಳ ಯೋಗಕ್ಷೇಮ ಮತ್ತು ಪ್ರಗತಿಗಾಗಿ ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಶ್ರೀ ಮೋದಿ ಅವರು ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು, ಸಮುದಾಯದ ಮಕ್ಕಳು, ವಿಶೇಷವಾಗಿ ಹೆಣ್ಣು ಮಕ್ಕಳು, ಶೈಕ್ಷಣಿಕವಾಗಿ ಶ್ರೇಷ್ಠತೆ ಸಾಧಿಸಿ ಬಲವಾದ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಒತ್ತಾಯಿಸಿದರು. ಆಧುನಿಕತೆ ಮತ್ತು ಶಕ್ತಿಯ ಮೂಲಕ ಸಮುದಾಯವನ್ನು ಸಬಲೀಕರಣಗೊಳಿಸುವುದು ಮುಂದಿನ ದಾರಿಯಾಗಿದೆ. ಈ ಶುಭ ಸಂದರ್ಭದಲ್ಲಿ ಭಾಗವಹಿಸಿದ್ದಕ್ಕಾಗಿ ಸಂತೋಷ ಮತ್ತು ಕೃತಜ್ಞತೆ ವ್ಯಕ್ತಪಡಿಸುವ ಮೂಲಕ ಅವರು ತಮ್ಮ ವೈಯಕ್ತಿಕ ಉಪಸ್ಥಿತಿಯು ಅವರಿಗೆ ಇನ್ನೂ ಹೆಚ್ಚಿನ ಸಂತೋಷವನ್ನು ತರುತ್ತಿತ್ತು ಎಂದು ಒಪ್ಪಿಕೊಂಡರು.

 

 

*****