Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬರೌನಿ, ಸಿಂಡ್ರಿ ಮತ್ತು ಗೋರಕ್ ಪುರಗಳಲ್ಲಿ ನಿಷ್ಕ್ರಿಯವಾಗಿರುವ ಗೊಬ್ಬರ ಘಟಕಗಳ ಪುನಶ್ಚೇತನಕ್ಕೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬರಾನಿ, ಸಿಂಡ್ರಿ ಮತ್ತು ಗೋರಕ್ ಪುರಗಳಲ್ಲಿ ನಿಷ್ಕ್ರಿಯವಾಗಿರುವ ಗೊಬ್ಬರ ಘಟಕಗಳ ಪುನಶ್ಚೇತನಕ್ಕೆ ತನ್ನ ಅನುಮೋದನೆ ನೀಡಿದೆ. ಇದರಲ್ಲಿ ಭಾರತೀಯ ರಸಗೊಬ್ಬರ ನಿಗಮ ನಿಯಮಿತ(ಎಫ್.ಸಿ.ಐ.ಎಲ್.)ಕ್ಕೆ ಸೇರಿದ ಮುಚ್ಚಲಾಗಿರುವ ಸಿಂಡ್ರಿ (ಜಾರ್ಖಂಡ್) ಮತ್ತು ಗೋರಕ್ ಪುರ (ಉತ್ತರ ಪ್ರದೇಶ)ದ ಎರಡು ಯೂರಿಯಾ ಘಟಕಗಳು ಮತ್ತು ಹಿಂದೂಸ್ತಾನ್ ರಸಗೊಬ್ಬರ ನಿಗಮ ನಿಯಮಿತ (ಎಚ್.ಎಫ್.ಸಿ.ಎಲ್.) ಗೆ ಸೇರಿದ ಬರೌನಿ (ಬಿಹಾರ) ಘಟಕವೂ ಸೇರಿವೆ.

ಈ ಮೂರು ರಸಗೊಬ್ಬರ ಘಟಕಗಳನ್ನು ಸಾರ್ವಜನಿಕ ವಲಯದ ಘಟಕಗಳು (ಪಿ.ಎಸ್.ಯು.) ಅಂದರೆ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್.ಟಿ.ಪಿ.ಸಿ.) ಭಾರತೀಯ ಕಲ್ಲಿದ್ದಲು ನಿಯಮಿತ (ಸಿ.ಐ.ಎಲ್.), ಭಾರತೀಯ ತೈಲ ನಿಗಮ ನಿಯಮಿತ (ಐ.ಓ.ಸಿ.ಎಲ್.) ಮತ್ತು ಎಫ್.ಸಿ.ಐ.ಎಲ್/ಎಚ್.ಎಫ್.ಸಿ.ಎಲ್.ನ ‘ನಾಮಾಂಕನ ಮಾರ್ಗ’ದ ಮೂಲಕ ವಿಶೇಷ ಉದ್ದೇಶದ ವಾಹಕ (ಎಸ್.ಪಿ.ವಿ.) ರೀತಿಯಲ್ಲಿ ಪುನಶ್ಚೇತನಗೊಳಿಸಲಾಗುತ್ತದೆ.

ಸಿಂಡ್ರಿ, ಗೋರಕ್ಪುರ ಮತ್ತು ಬರೌನಿಗಳ್ಲಲಿ ಸ್ಥಾಪಿಸಲಾಗುವ ಹೊಸ ಘಟಕಗಳು ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಾಂಗಳದಲ್ಲಿ ಹೆಚ್ಚುತ್ತಿರುವ ಯೂರಿಯಾ ಬೇಡಿಕೆಯನ್ನು ಪೂರೈಸಲಿವೆ. ಇದು ಪಶ್ಚಿಮ ಮತ್ತು ಮಧ್ಯ ವಲಯಗಳಿಂದ ದೂರದ ಮಾರ್ಗದಲ್ಲಿ ಸಾಗಣೆಯಿಂದ ರೈಲು ಮತ್ತು ರಸ್ತೆ ಮೂಲಸೌಕರ್ಯದ ಮೇಲೆ ಬೀಳುವ ಒತ್ತಡ ಕಡಿಮೆ ಮಾಡಲಿದೆ ಮತ್ತು ಸರ್ಕಾರಕ್ಕೆ ಸರಕು ಸಾಗಣೆ ಸಬ್ಸಿಡಿಯನ್ನೂ ಉಳಿಸಲಿದೆ. ಇದು ವಲಯದ ಆರ್ಥಿಕ ಅಭಿವೃದ್ಧಿಯನ್ನೂ ವೇಗಗೊಳಿಸಲಿದೆ. ಪ್ರಾದೇಶಿಕ ಆರ್ಥಿಕ ಪ್ರಗತಿಯ ಜೊತೆಗೆ ಈ ಘಟಕಗಳು 1200 ನೇರ ಮತ್ತು 4500 ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಮೆ. ಗೈಲ್ (ಇಂಡಿಯಾ) ಲಿಮಿಟೆಡ್ ಅನಿಲ ಕೊಳವೆಯನ್ನು ಜಗದೀಶ್ಪುರದಿಂದ ಹಾಲ್ಡಿಯಾವರೆಗೆ ಅಳವಡಿಸಲು ಯೋಜಿಸಿದೆ. ಈ ಘಟಕಗಳು ಈ ಕೊಳವೆ ಮಾರ್ಗಕ್ಕೆ ಖಾತ್ರಿಯ ಗ್ರಾಹಕರಾಗಿರುತ್ತಾರೆ ಮತ್ತು ಸಾಧ್ಯತೆಯನ್ನೂ ಖಾತ್ರಿಗೊಳಿಸುತ್ತದೆ. ಜಗದೀಶ್ಪುರ – ಹಾಲ್ಡಿಯಾ ಅನಿಲ ಕೊಳವೆ ಮಾರ್ಗ (ಜೆ.ಎಚ್.ಪಿ.ಎಲ್.) ಕಾರ್ಯಾರಂಭ ಪೂರ್ವ ಭಾರತದ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ್ದಾಗಿದೆ ಮತ್ತು ವಲಯದ ಆರ್ಥಿಕ ಪ್ರಗತಿಗೆ ಬಹು ಸ್ತಂಭಗಳ ಪರಿಣಾಮವನ್ನೂ ಬೀರುತ್ತದೆ.

ಸಿಸಿಇಎ ಈ ಮುನ್ನ ಯೂರಿಯಾ ವಲಯಗಳ ಅನಿಲ ಸಂಚಯನಕ್ಕೆ ಅನುಮೋದನೆ ನೀಡಿತ್ತು. ಇದು ಯೂರಿಯಾ ಘಟಕಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗಲು ಈ ಘಟಕಗಳು ಪುನಶ್ಚೇತನದ ಬಳಿಕ ಸಂಗ್ರಹಿತ ದರಕ್ಕೆ ಅನಿಲವನ್ನು ಪಡೆಯಲು ಅವಕಾಶ ನೀಡುತ್ತದೆ.

ಹಿನ್ನೆಲೆ:

1990-2002ರ ಅವಧಿಯಲ್ಲಿ ಮುಚ್ಚಲಾದ ಬಳಿಕ ಈ ಘಟಕಗಳು ನಿಷ್ಕ್ರಿಯವಾಗಿವೆ. ಆದ ಕಾರಣ, ಈ ಘಟಕಗಳು ಮತ್ತು ಇತರ ಪೂರಕ ಸೌಲಭ್ಯಗಳು ನಿರುಪಯುಕ್ತವಾಗಿ ಬಿದ್ದಿದ್ದವು. ಇಲ್ಲಿ ಮುಖ್ಯವಾಗಿ ಉಲ್ಲೇಖಿಸಬೇಕಾದದ್ದು, ದೇಶದ ಪೂರ್ವ ಭಾಗದಲ್ಲಿ ನಾಮ್ ರೂಪ್ (ಅಸ್ಸಾಂ)ನ ಎರಡು ಸಣ್ಣ ಘಟಕಗಳ ಹೊರತಾಗಿ ಯಾವುದೇ ಕಾರ್ಯನಿರ್ವಹಿಸುತ್ತಿರುವ ಯೂರಿಯಾ ಘಟಕ ಇಲ್ಲ.
ಇದಕ್ಕೂ ಮುನ್ನ 2015ರಲ್ಲಿ, ಈ ಮೂರು ಘಟಕಗಳನ್ನು ಬಿಡ್ಡಿಂಗ್ ಮಾರ್ಗದ ಮೂಲಕ ಪುನಶ್ಚೇತನಗೊಳಿಸಲು ಅನುಮೋದನೆ ನೀಡಿತ್ತು. ಆದಾಗ್ಯೂ ಎಫ್.ಸಿ.ಐ.ಎಲ್.ನ ಗೋರಕ್ ಪುರ ಮತ್ತು ಸಿಂಡ್ರಿ ಘಟಕಗಳಿಗೆ ರಿಕ್ವೆಸ್ಟ್ ಫಾರ್ ಕ್ವಾಲಿಫಿಕೇಷನ್ ಗೆ ಪ್ರತಿಯಾಗಿ ಕೇವಲ ತಲಾ ಒಂದು ಅರ್ಜಿ ಮಾತ್ರ ಸ್ವೀಕೃತವಾಗಿದ್ದ ಹಿನ್ನೆಲೆಯಲ್ಲಿ ಈ ಬಿಡ್ಡಿಂಗ್ ಪ್ರಕ್ರಿಯೆ ಮುಂದುವರೆಸಲು ಸಾಧ್ಯವಾಗಿರಲಿಲ್ಲ.

ದೇಶದಲ್ಲಿ ಯೂರಿಯಾದ ಬಳಕೆ ವಾರ್ಷಿಕ ಅಂದಾಜು 320 ಎಲ್.ಎಂ.ಟಿ ಆಗಿದೆ. ಇದರ ಪೈಕಿ 245 ಎಲ್.ಎಂ.ಟಿ. ಯನ್ನು ದೇಶೀಯವಾಗಿ ಉತ್ಪಾದಿಸಲಾಗುತ್ತಿದ್ದು ಉಳಿದದ್ದನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶೀಯವಾಗಿ ಯೂರಿಯಾ ಉತ್ಪಾದನೆ ಹೆಚ್ಚಿಸಲು, ಸರ್ಕಾರ ಎಪ್.ಸಿ.ಐ.ಎಲ್. ನ ತಾಲ್ಚೇರ್ (ಒಡಿಶಾ) ಮತ್ತು ರಾಮಗುಂಡಮ್ (ತೆಲಂಗಾಣ) ಘಟಕಗಳನ್ನು ‘ನಾಮನಿರ್ದೇಶನ ಮಾರ್ಗ’ದ ಮೂಲಕ ಪುನಶ್ಚೇತನ ಮಾಡಲು ಸಮ್ಮತಿಸಿತ್ತು.