ನಮಸ್ಕಾರ,
ಸಂಪೂರ್ಣ ಬಾಂಗ್ಲಾದೇಶಕ್ಕೆ ‘ಜಾತಿರ್ ಪಿತಾ’ ಬಂಗಬಂಧು ಶೇಖ್ ಮುಜಿಬಿರ್ ರಹಮಾನ್ ಅವರ 100 ನೇ ಜನ್ಮ ಜಯಂತಿಯ ಆಚರಣೆ ಸಂದರ್ಭದಲ್ಲಿ ಭಾರತದ 130 ಕೋಟಿ ಸೋದರ ಸೋದರಿಯರ ಅನಂತ ಶುಭಾಶಯಗಳು ಮತ್ತು ಶುಭ ಕಾಮನೆಗಳು.
ಸ್ನೇಹಿತರೇ, ಶೇಖ್ ಹಸೀನಾ ಅವರು ನನ್ನನ್ನು ಖುದ್ದಾಗಿ ಈ ಐತಿಹಾಸಿಕ ಆಚರಣೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದರು. ಆದರೆ ಕೊರೋನಾ ವೈರಸ್ ನಿಂದಾಗಿ ಅದು ಸಾಧ್ಯವಾಗಲಿಲ್ಲ. ನಂತರ ಶೇಖ್ ಹಸೀನಾ ಅವರೇ ಈ ಸಾಧ್ಯತೆಯ ಕುರಿತು ಸಲಹೆ ನೀಡಿದರು ಮತ್ತು ನಾನು ಒಂದು ವಿಡಿಯೋ ಲಿಂಕ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಿದ್ದೇನೆ.
ಸ್ನೇಹಿತರೇ, ಬಂಗಬಂಧು ಶೇಖ್ ಮುಜಿಬಿರ್ ರಹಮಾನ್ ಅವರು ಕಳೆದ ಶತಮಾನದ ಮಹಾನ್ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದರು. ನಮ್ಮೆಲ್ಲರಿಗೂ ಅವರ ಸಂಪೂರ್ಣ ಜೀವನ ಒಂದು ಅದ್ಭುತ ಪ್ರೇರಣೆಯಾಗಿದೆ.
ಬಂಗಬಂಧು ಅಂದರೆ . . .
ಧೈರ್ಯಯುತ ನಾಯಕ
ನಿಶ್ಚಿತಾಭಿಪ್ರಾಯದ ವ್ಯಕ್ತಿ
ಶಾಂತಿಯ ಧೂತ
ನ್ಯಾಯ, ಸಮಾನತೆ ಮತ್ತು ಸಮ್ಮಾನದ ಹರಿಕಾರ
ಕ್ರೌರ್ಯದ ವಿರುದ್ಧ ದನಿ ಎತ್ತುವವರು ಮತ್ತು
ಶೋಷಣೆ ವಿರುದ್ಧ ಹಿಡಿದ ಗುರಾಣಿ
ಅವರ ವ್ಯಕ್ತಿತ್ವದ ಈ ಗುಣಗಳೇ ಆ ಕಾಲದ ಲಕ್ಷಾಂತರ ಯುವಕರಿಗೆ, ಬಾಂಗ್ಲಾದೇಶದ ವಿಮೋಚನೆಗಾಗಿ ಎಲ್ಲ ಸವಾಲುಗಳನ್ನು ಎದುರಿಸಲು ಒಂದು ಹೊಸ ಶಕ್ತಿಯನ್ನು ನೀಡಿತ್ತು. ಇಂದು ಬಾಂಗ್ಲಾದೇಶದ ಜನರು ಯಾವ ರೀತಿ ಹಗಲಿರುಳು ತನ್ನ ಪ್ರೀತಿಯ ದೇಶಕ್ಕಾಗಿ ಶೇಖ್ ಮುಜಿಬಿರ್ ರಹಮಾನ್ ಅವರ ಕನಸಾದ ‘ಶೋನಾರ್ ಬಾಂಗ್ಲಾ’ ನನಸಾಗಿಸಲು ದುಡಿಯುತ್ತಿರುವುದನ್ನು ನೋಡಿ ನನಗೆ ಸಂತಸವೆನಿಸುತ್ತದೆ.
ಬಂಗ್ ಬಂಧು ಅವರ ಜೀವನ ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ 21ನೇ ಶತಮಾನದ ವಿಶ್ವಕ್ಕೂ ಬಹು ದೊಡ್ಡ ಸಂದೇಶವೊಮದನ್ನು ನೀಡುತ್ತದೆ. ಸದೆಬಡೆಯುವ ಅತ್ಯಾಚಾರಿ ಶಾಸನವೊಂದು ಪ್ರಜಾಸತಾತ್ಮಕತೆಯ ಮೌಲ್ಯಗಳನ್ನು ನಿರಾಕರಿಸುವ ವ್ಯವಸ್ಥೆ ಹೇಗೆ ಬಾಂಗ್ಲಾ ಭೂಮಿಯೊಂದಿಗೆ ಅನ್ಯಾಯ ಮಾಡಿತು, ಅಲ್ಲಿಯ ಜನರನ್ನು ನಾಶಗೊಳಿಸಿತು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ.
ಆ ಕಾಲದಲ್ಲಿ ನಡೆದಂತಹ ವಿನಾಶ ಮತ್ತು ಮಾರಣ ಹೋಮದಿಂದ ಬಾಂಗ್ಲಾದೇಶವನ್ನು ಹೊರತರಲು ಮತ್ತು ಅಭಿವೃದ್ಧಿಶೀಲ ಹಾಗೂ ಸಕಾರಾತ್ಮಕ ಸಮಾಜ ನಿರ್ಮಾಣಕ್ಕಾಗಿ ಅವರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಮುಡಿಪಾಗಿಟ್ಟಿದ್ದರು. ಯಾವುದೇ ದೇಶದ ಪ್ರಗತಿಗೆ ದ್ವೇಷ ಮತ್ತು ನಕಾರಾತ್ಮಕತೆ ಬುನಾದಿಯಾಗಲಾರದು ಎಂಬುದು ಅವರಿಗೆ ಸ್ಪಷ್ಟವಾಗಿತ್ತು.
ಆದರೆ, ಅವರ ಈ ವಿಚಾರಗಳು ಮತ್ತು ಪ್ರಯತ್ನಗಳೇ ಕೆಲ ಜನರಿಗೆ ಇಷ್ಟವಾಗಲಿಲ್ಲ ಮತ್ತು ಅವರನ್ನು ನಮ್ಮಿಂದ ಕಿತ್ತುಕೊಂಡರು. ಪ್ರಧಾನ ಮಂತ್ರಿ ಶೇಖ್ ಹಸೀನಾ ಮತ್ತು ಶೇಖ್ ರೆಹಾನಾ ಅವರ ಮೇಲೆ ದೇವರ ಕೃಪೆ ಇತ್ತು ಎಂಬುದು ಬಾಂಗ್ಲಾದೇಶದ ಮತ್ತು ನಮ್ಮೆಲ್ಲರ ಸೌಭಾಗ್ಯವಾಗಿತ್ತು. ಇಲ್ಲದೇ ಹೋದಲ್ಲಿ, ಹಿಂಸೆ ಮತ್ತು ದ್ವೆಷದಿಂದ ಕೂಡಿದ ಜನರು ಯಾವುದಕ್ಕೂ ಹಿಂಜರಿಯುತ್ತಿರಲಿಲ್ಲ.
ಉಗ್ರವಾದ ಮತ್ತು ಹಿಂಸೆಯನ್ನು ರಾಜಕೀಯ ಮತ್ತು ರಾಜನೀತಿಯ ಅಸ್ತ್ರಗಳನ್ನಾಗಿಸುವುದು ಹೇಗೆ ಒಂದು ಸಮಾಜ ಮತ್ತು ಒಂದು ರಾಷ್ಟ್ರವನ್ನು ನಾಶಗೊಳಿಸುತ್ತದೆ ಎಂಬುದನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಉಗ್ರವಾದ ಮತ್ತು ಹಿಂಸೆಯ ಸಮರ್ಥಕರು ಇಂದು ಎಲ್ಲಿದ್ದಾರೆ, ಯಾವ ಪರಿಸ್ಥಿತಿಯಲ್ಲಿದ್ದಾರೆ. ಮತ್ತೊಂದೆಡೆ ಬಾಂಗ್ಲಾ ದೇಶ ಎಷ್ಟು ಎತ್ತರಕ್ಕೆ ಬೆಳೆಯುತ್ತಿದೆ ಎಂಬುದನ್ನೂ ವಿಶ್ವ ನೋಡುತ್ತಿದೆ.
ಸ್ನೇಹಿತರೇ, ಬಂಗ್ ಬಂಧು ಅವರ ಪ್ರೇರಣೆಯಿಂದಾಗಿ ಮತ್ತು ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ನೇತೃತ್ವದಲ್ಲಿ ಇಂದು ಯಾವ ರೀತಿ ಬಾಂಗ್ಲಾ ದೇಶ ಸಮಗ್ರ ಮತ್ತು ಅಭಿವೃದ್ಧಿಶೀಲ ನೀತಿಗಳೊಂದಿಗೆ ಮುಂದುವರೆಯುತ್ತಿದೆ ಎಂಬ ವಿಷಯ ನಿಜಕ್ಕೂ ಶ್ಲಾಘನೀಯ.
ಅದು ಆರ್ಥಿಕತೆಯಾಗಿರಲಿ ಅಥವಾ ಸಾಮಾಜಿಕ ಸುಧಾರಣೆ ಆಗಿರಲಿ ಅಥವಾ ಕ್ರೀಡೆಯಾಗಿರಲಿ ಇಂದು ಬಾಂಗ್ಲಾ ದೇಶ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿದೆ. ಕೌಶಲ್ಯ, ವಿದ್ಯೆ, ಆರೋಗ್ಯ, ಮಹಿಳಾ ಸಬಲೀಕರಣ, ಮೈಕ್ರೋ ಫೈನಾನ್ಸ್ ಮುಂತಾದ ಹಲವು ಕ್ಷೇತ್ರಗಳಲ್ಲಿ ಅಪಾರ ಅಭಿವೃದ್ಧಿಯನ್ನು ಸಾಧಿಸಿದೆ
ಕಳೆದ 5-6 ವರ್ಷಗಳಲ್ಲಿ ಭಾರತ ಮತ್ತು ಬಾಂಗ್ಲಾ ದೇಶ ಪರಸ್ಪರ ಸಂಬಂಧಗಳಲ್ಲೂ ಸುವರ್ಣ ಅಧ್ಯಾಯಕ್ಕೆ ನಾಂದಿ ಹಾಡಿವೆ, ತಮ್ಮ ಒಡಂಬಡಿಕೆಗಳಿಗೆ ಹೊಸ ದಿಸೆಯನ್ನು ನೀಡಿವೆ, ಹೊಸ ಆಯಾಮಗಳನ್ನು ನೀಡಿವೆ ಎಂದು ಉಲ್ಲೇಖಿಸಲು ನನಗೆ ಸಂತೋಷವಾಗುತ್ತದೆ. ಇದು ಎರಡೂ ರಾಷ್ಟ್ರಗಳ ವಿಶ್ವಾಸಾಭಿವೃದ್ಧಿಯಿಂದಾಗಿ ದಶಕಗಳಿಂದ ಪಾಲಿಸುತ್ತಾ ಬಂದಿರುವ ಭೂ ಗಡಿ ಮತ್ತು ಸಮುದ್ರ ಗಡಿಗಳ ವಿವಾದಗಳನ್ನು ಪರಸ್ಪರ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಾಗಿದೆ.
ಇಂದು ಬಾಂಗ್ಲಾ ದೇಶ ದಕ್ಷಿಣ ಏಷ್ಯಾದಲ್ಲೇ ಭಾರತದ ಅತಿ ದೊಡ್ಡ ವ್ಯಾಪಾರಿ ರಾಷ್ಟ್ರವಾಗಿದೆಯಲ್ಲದೇ ಅಭಿವೃದ್ಧಿಯ ಪಾಲುದಾರ ರಾಷ್ಟ್ರವೂ ಆಗಿದೆ. ಭಾರತದಲ್ಲಿ ಉತ್ಪತ್ತಿಯಾಗುವ ವಿದ್ಯುತ್ ನಿಂದ ಬಾಂಗ್ಲಾ ದೇಶದ ಲಕ್ಷಾಂತರ ಮನೆಗಳು ಮತ್ತು ಕಾರ್ಖಾನೆಗಳು ಬೆಳಗುತ್ತಿವೆ. ಫ್ರೆಂಡ್ ಶಿಪ್ ಪೈಪ್ಲೈನ್ ಮೂಲಕ ನಮ್ಮ ಸಂಬಂಧಗಳಿಗೆ ಹೊಸ ಆಯಾಮ ದೊರೆತಂತಾಗಿದೆ.
ಅದು ರಸ್ತೆ, ರೈಲ್ವೇ, ವಾಯು ಮಾರ್ಗ, ಜಲ ಮಾರ್ಗ ಅಥವಾ ಇಂಟರ್ನೆಟ್ ಆಗಿರಲಿ, ಹೀಗೆ ವಿವಿಧ ವಲಯಗಳಲ್ಲಿ ನಮ್ಮ ಸಹಕಾರ ಉಭಯ ರಾಷ್ಟ್ರಗಳ ಜನರ ಸಂಪರ್ಕಕ್ಕೆ ಅವಕಾಶ ಕಲ್ಪಿಸುತ್ತಿದೆ.
ಸ್ನೇಹಿತರೇ, ನಮ್ಮ ಪರಂಪರೆ, ಠಾಗೋರ್, ಖಾಜಿ ನಝ್ರುಲ್ ಇಸ್ಲಾಂ, ಉಸ್ತಾದ್ ಅಲಾಉದ್ದೀನ್ ಖಾನ್, ಲಾಲೊನ್ ಶಾಹ್, ಜಿಬಾನಂದನ್ ದಾಸ್ ಮತ್ತು ಈಶ್ವರ್ ಚಂದ್ರ ವಿದ್ಯಾ ಸಾಗರ್ ನಂತಹವರಿಂದ ಬಂದುದಾಗಿದೆ.
ನಮ್ಮ ಪರಂಪರೆಗೆ ಬಂಗಬಂಧು ಅವರ ಪ್ರೇರಣೆ ಮತ್ತಷ್ಟು ವ್ಯಾಪಕತೆಯನ್ನು ನೀಡಿದೆ. ಅವರ ಆದರ್ಶಗಳು ಮತ್ತು ಮೌಲ್ಯಗಳೊಂದಿಗೆ ಭಾರತ ಸದಾ ಜೊತೆಯಾಗಿದೆ. ಭಾರತ ಮತ್ತು ಬಾಂಗ್ಲಾದೇಶದ ಆತ್ಮೀಯ ಸಂಬಂಧ ಈ ಹಂಚಿಕೊಂಡ ಪರಂಪರೆಗೆ ಬುನಾದಿಯಾಗಿದೆ.
ನಮ್ಮ ಈ ಪರಂಪರೆ, ಆತ್ಮೀಯ ಸಂಬಂಧ, ಬಂಗ್ ಬಂಧು ಅವರು ತೋರಿದ ಮಾರ್ಗ ಈ ದಶಕದಲ್ಲೂ ಉಭಯ ರಾಷ್ಟ್ರಗಳ ಪಾಲುದಾರಿಕೆ, ಅಭಿವೃದ್ಧಿ ಮತ್ತು ಸಂಪತ್ತಿಗೆ ಗಟ್ಟಿಮುಟ್ಟಾದ ಆಧಾರವಾಗಿದೆ.
ಮುಂದಿನ ವರ್ಷ ಬಾಂಗ್ಲಾ ದೇಶ ಮುಕ್ತಗೊಂಡು 50 ವರ್ಷಗಳಾಗುತ್ತವೆ ಹಾಗೂ 2022ರಲ್ಲಿ ಭಾರತ ಸ್ವಾತಂತ್ರ್ಯಕ್ಕೆ 75 ವರ್ಷಗಳು ತುಂಬಲಿವೆ. ಈ ಎರಡೂ ಘಟ್ಟಗಳು ಭಾರತ ಮತ್ತು ಬಾಂಗ್ಲಾ ದೇಶದ ವಿಕಾಸವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದರ ಜೊತೆಗೆ ಉಭಯ ರಾಷ್ಟ್ರಗಳ ಸ್ನೇಹಕ್ಕೂ ಹೊಸ ಶಕ್ತಿಯನ್ನು ತುಂಬಲಿವೆ ಎಂಬ ವಿಶ್ವಾಸ ನನಗಿದೆ.
ಮತ್ತೊಮ್ಮೆ ಬಂಗ್ ಬಂಧು ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಸಂಪೂರ್ಣ ಬಾಂಗ್ಲಾದೇಶಕ್ಕೆ ನಾನು ಶುಭಾಷಯಗಳನ್ನು ಕೋರುತ್ತಿದ್ದೇನೆ.
ಜೈ ಬಾಂಗ್ಲಾ, ಜೈ ಹಿಂದ್!!
शेख हसीना जी ने मुझे इस ऐतिहासिक समारोह का हिस्सा बनने के लिए व्यक्तिगत तौर पर निमंत्रण दिया था।
— PMO India (@PMOIndia) March 17, 2020
लेकिन कोरोना वायरस की वजह से ये संभव नहीं हो पाया।
फिर शेख हसीना जी ने ही विकल्प दिया, और इसलिए मैं वीडियो के माध्यम से आपसे जुड़ रहा हूं: PM @narendramodi
बंगबंधु शेख मुजीबुर-रहमान पिछली सदी के महान व्यक्तित्वों में से एक थे। उनका पूरा जीवन, हम सभी के लिए बहुत बड़ी प्रेरणा है: PM @narendramodi
— PMO India (@PMOIndia) March 17, 2020
आज मुझे बहुत खुशी होती है, जब देखता हूं कि बांग्लादेश के लोग, किस तरह दिन-रात अपने प्यारे देश को शेख मुजीबुर-रहमान के सपनों का ‘शोनार-बांग्ला’ बनाने में जुटे हुए हैं: PM @narendramodi
— PMO India (@PMOIndia) March 17, 2020
एक दमनकारी, अत्याचारी शासन ने, लोकतांत्रिक मूल्यों को नकारने वाली व्यवस्था ने, किस तरह बांग्ला भूमि के साथ अन्याय किया, उसके लोगों को तबाह किया, ये हम सभी भली-भांति जानते हैं: PM @narendramodi
— PMO India (@PMOIndia) March 17, 2020
उस दौर में जो तबाही मचाई गई थी, जो Genocide हुआ, उससे बांग्लादेश को बाहर निकालने के लिए, एक Positive और Progressive Society के निर्माण के लिए उन्होंने अपना पल-पल समर्पित कर दिया था: PM @narendramodi
— PMO India (@PMOIndia) March 17, 2020
बंगबंधु की प्रेरणा से और प्रधानमंत्री शेख हसीना जी के नेतृत्व में बांग्लादेश आज जिस प्रकार Inclusive और Development Oriented Policies के साथ आगे बढ़ रहा है, वो बहुत प्रशंसनीय है: PM @narendramodi
— PMO India (@PMOIndia) March 17, 2020
मुझे इस बात की भी खुशी है कि बीते 5-6 वर्षों में भारत और बांग्लादेश ने आपसी रिश्तों का भी शोनाली अध्याय गढ़ा है, अपनी पार्टनरशिप को नई दिशा, नए आयाम दिए हैं: PM @narendramodi
— PMO India (@PMOIndia) March 17, 2020
ये हम दोनों देशों में बढ़ता हुआ विश्वास है, जिसके कारण हम दशकों से चले आ रहे Land Boundary, Maritime Boundary से जुड़े Complex मुद्दों को, शांति से सुलझाने में सफल रहे हैं: PM @narendramodi
— PMO India (@PMOIndia) March 17, 2020
बांग्लादेश आज साउथ एशिया में भारत का सबसे बड़ा ट्रेडिंग पार्टनर भी है और सबसे बड़ा डेवलपमेंट पार्टनर भी है।
— PMO India (@PMOIndia) March 17, 2020
भारत में बनी बिजली से बांग्लादेश के लाखों घर और फैक्ट्रियां रोशन हो रही है। Friendship Pipeline के माध्यम से एक नया Dimension हमारे रिश्तों में जुड़ा है: PM @narendramodi
हमारी विरासत टैगोर की है, काज़ी नज़रुल इस्लाम, उस्ताद अलाउद्दीन खान, लालॉन शाह, जीबानंदा दास और ईश्वर चंद्र विद्यासागर जैसे मनीषियों की है।
— PMO India (@PMOIndia) March 17, 2020
इस विरासत को बंगबंधु की प्रेरणा, उनकी Legacy ने और व्यापकता दी है: PM @narendramodi
भारत और बांग्लादेश के आत्मीय संबंध, इस साझा विरासत की मज़बूत नींव पर ही गढ़े गए हैं।
— PMO India (@PMOIndia) March 17, 2020
हमारी यही विरासत, हमारे आत्मीय संबंध, बंगबंधु का दिखाया मार्ग, इस दशक में भी दोनों देशों की Partnership, Progress और Prosperity का मजबूत आधार हैं: PM @narendramodi
अगले वर्ष बांग्लादेश की ‘मुक्ति’ के 50 वर्ष होंगे और उससे अगले वर्ष यानि 2022 में भारत की आज़ादी के 75 वर्ष होने वाले हैं।
— PMO India (@PMOIndia) March 17, 2020
मुझे विश्वास है कि ये दोनों पड़ाव, भारत-बांग्लादेश के विकास को नई ऊँचाई पर पहुंचाने के साथ ही, दोनों देशों की मित्रता को भी नई बुलंदी देंगे: PM @narendramodi