ಫ್ರೆಂಚ್ ಗಣರಾಜ್ಯದ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಶ್ರೀ ಪಿಲಿಪ್ಪೆ ಎಟಿಯನ್ನೇ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಶ್ರೀ ಎಟಿಯನ್ನೇ ಅವರು ಪ್ರಧಾನಮಂತ್ರಿಯವರಿಗೆ, ರಕ್ಷಣೆ ಮತ್ತು ಭದ್ರತೆ ಸೇರಿದಂತೆ ಭಾರತ ಮತ್ತು ಫ್ರಾನ್ಸ್ ನ ನಡುವೆ ಎಲ್ಲ ವಲಯಗಳಲ್ಲಿ ಬಾಂಧವ್ಯ ವರ್ಧನೆ ಮಾಡುವ ಕುರಿತಂತೆ ವಿವರಿಸಿದರು.
ಪ್ರಧಾನಮಂತ್ರಿಯವರು 2017ರ ಜೂನ್ ತಿಂಗಳಲ್ಲಿ ತಾವು ಕೈಗೊಂಡ ಯಶಸ್ವಿ ಫ್ರಾನ್ಸ್ ಭೇಟಿಯನ್ನು ಸ್ಮರಿಸಿದರು. ರಕ್ಷಣೆ ಮತ್ತು ಭದ್ರತೆ ಎರಡೂ ಭಾರತ – ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆಯ ಮಹತ್ವದ ಸ್ತಂಭಗಳು ಎಂದು ಹೇಳಿದ ಪ್ರಧಾನಿ, ಎಲ್ಲ ವಲಯಗಳಲ್ಲಿ ವೃದ್ಧಿಸುತ್ತಿರುವ ದ್ವಿಪಕ್ಷೀಯ ಬಾಂಧವ್ಯವನ್ನು ಪ್ರಶಂಸಿಸಿದರು.
ಫ್ರಾನ್ಸ್ ಅಧ್ಯಕ್ಷ ಮೆಕ್ರಾನ್ ಅವರಿಗೆ ಅನುಕೂಲಕರವಾದ ಹತ್ತಿರದ ದಿನದಲ್ಲಿ ಅವರನ್ನು ಭಾರತದಲ್ಲಿ ಬರಮಾಡಿಕೊಳ್ಳಲು ತಾವು ಎದುರು ನೋಡುತ್ತಿರುವುದಾಗಿ ಪ್ರಧಾನಿ ತಿಳಿಸಿದರು.
**