Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫ್ರಾನ್ಸ್ ಸೆನೆಟ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿಯವರ ಭೇಟಿ

ಫ್ರಾನ್ಸ್ ಸೆನೆಟ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿಯವರ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023ರ ಜುಲೈ 13ರಂದು ಫ್ರೆಂಚ್ ಸೆನೆಟ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ಜೆರಾರ್ಡ್ ಲಾರ್ಚರ್ ಅವರನ್ನು ಭೇಟಿ ಮಾಡಿದರು.

ಭಾರತ ಹಾಗೂ ಫ್ರಾನ್ಸ್ ಪಾಲುದಾರಿಕೆಯ ಅಡಿಪಾಯವನ್ನು ರೂಪಿಸುವ ‘ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಸಮಾನತೆಯ’ ಹಂಚಿಕೆಯ ಮೌಲ್ಯಗಳ ಮಹತ್ವವನ್ನು ಪ್ರಧಾನಿ ಮೋದಿಯವರು ಎತ್ತಿ ಹಿಡಿದರು.

ಭಾರತದ ಜಿ-20ರ ಆದ್ಯತೆಗಳು, ತಂತ್ರಜ್ಞಾನ ಬಳಕೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎರಡೂ ಮೇಲ್ಮನೆಗಳ ನಡುವಿನ ಸಹಕಾರ ಸೇರಿದಂತೆ ವ್ಯಾಪಕ ಶ್ರೇಣಿಯಲ್ಲಿ ಚರ್ಚೆಗಳು ನಡೆದವು. ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು.

****