ಫ್ರಾನ್ಸ್ ರಕ್ಷಣಾ ಸಚಿವ ಘನತೆವೆತ್ತ ಶ್ರೀ ಜೀನ್ ವೈವೆಸ್ ಲಿ ಡ್ರಿಯಾನ್ ಅವರು ದೆಹಲಿಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಸಚಿವ ಲಿ ಡ್ರಿಯಾನ್ ಅವರು 2016ರ ಸೆಪ್ಟೆಂಬರ್ 18ರಂದು ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆದ ಗಡಿಯಾಚೆಗಿನ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಬಗ್ಗೆ ಸಂತಾಪ ವ್ಯಕ್ತಪಡಿಸಿದರು ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ದ್ವಿಪಕ್ಷೀಯ ಸಹಕಾರ ಬಲಪಡಿಸುವುದಾಗಿ ತಿಳಿಸಿದರು. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಫ್ರಾನ್ಸ್ ಭಾರತದೊಂದಿಗೆ ನಿಲ್ಲುತ್ತದೆ ಎಂದೂ ಅವರು ತಿಳಿಸಿದರು.
ಸಚಿವ ಲೀ ಡ್ರಿಯಾನ್ ಅವರು ಪ್ರಧಾನಮಂತ್ರಿಯವರಿಗೆ ದ್ವಿಪಕ್ಷೀಯ ರಕ್ಷಣಾ ಸಹಕಾರದ ಪ್ರಸಕ್ತ ಸ್ಥಿತಿಯ ಬಗ್ಗೆ ವಿವರಿಸಿದರು.
ಪ್ರಧಾನಮಂತ್ರಿಯವರು ಇಂದು ಬೆಳಗ್ಗೆ 36 ರಾಫಲ್ ವಿಮಾನಗಳ ಖರೀದಿಗಾಗಿ ಅಂತರ ಸರ್ಕಾರದ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು ಮತ್ತು ತ್ವರಿತ ಮತ್ತು ಕಾಲಮಿತಿಯೊಳಗೆ ಇದರ ಜಾರಿಗೆ ಕರೆ ನೀಡಿದರು.
AKT/AK