ಪ್ಯಾರಿಸ್ನ ಐಫೆಲ್ ಟವರ್ನಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಅನ್ನು ಔಪಚಾರಿಕವಾಗಿ ಪ್ರಾರಂಭಿಸಿದ್ದಕ್ಕಾಗಿ ಫ್ರಾನ್ಸ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಮತ್ತು ಸಂಬಂಧಗಳನ್ನು ಬಲಪಡಿಸುವ ಅದ್ಭುತ ಉದಾಹರಣೆ ಎಂದು ಅವರು ಹೇಳಿದರು.
ಈ ಸಂಬಂಧ ಪ್ರಧಾನ ಮಂತ್ರಿ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾರೆ:
“ಇದನ್ನು ನೋಡಲು ಅದ್ಭುತವಾಗಿದೆ- ಜಾಗತಿಕವಾಗಿ ಯುಪಿಐ ಹರಡಿಕೊಳ್ಳುವ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಮತ್ತು ಬಲವಾದ ಸಂಬಂಧಗಳನ್ನು ಬೆಳೆಸಲು ಇದು ಅದ್ಭುತ ಉದಾಹರಣೆಯಾಗಿದೆ” ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
***
Great to see this- it marks a significant step towards taking UPI global. This is a wonderful example of encouraging digital payments and fostering stronger ties. https://t.co/jf1sTf41c5
— Narendra Modi (@narendramodi) February 2, 2024