Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫ್ರಾನ್ಸ್ ಅಧ್ಯಕ್ಷರೊಂದಿಗಿನ ನಡೆದ ವರ್ಚುವಲ್ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

ಫ್ರಾನ್ಸ್ ಅಧ್ಯಕ್ಷರೊಂದಿಗಿನ ನಡೆದ ವರ್ಚುವಲ್ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ


ಗೌರವಾನ್ವಿತ, ನನ್ನ ಸ್ನೇಹಿತ, ಅಧ್ಯಕ್ಷ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್

ಶ್ರೀ ಪಿಯೂಷ್ ಗೋಯಲ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು

ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ನಾಗರಿಕ ವಿಮಾನಯಾನ ಸಚಿವರು

ಶ್ರೀ ರತನ್ ಟಾಟಾ, ಅಧ್ಯಕ್ಷರು, ಟಾಟಾ ಟ್ರಸ್ಟ್‌

ಶ್ರೀ ಎನ್. ಚಂದ್ರಶೇಖರನ್, ಅಧ್ಯಕ್ಷರು, ಟಾಟಾ ಸನ್ಸ್

ಶ್ರೀ ಕ್ಯಾಂಪ್ಬೆಲ್ ವಿಲ್ಸನ್, ಸಿ.ಇ.ಒ. ಏರ್ ಇಂಡಿಯಾ

ಶ್ರೀ ಗುಯಿಲೌಮ್ ಫೌರಿ, ಸಿ.ಇ.ಒ. ಏರ್ ಬಸ್ ,

ಗೌರವಾನ್ವಿತ, ನನ್ನ ಸ್ನೇಹಿತ, ಅಧ್ಯಕ್ಷ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್

ಶ್ರೀ ಪಿಯೂಷ್ ಗೋಯಲ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು

ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ನಾಗರಿಕ ವಿಮಾನಯಾನ ಸಚಿವರು

ಶ್ರೀ ರತನ್ ಟಾಟಾ, ಅಧ್ಯಕ್ಷರು, ಟಾಟಾ ಟ್ರಸ್ಟ್‌

ಶ್ರೀ ಎನ್. ಚಂದ್ರಶೇಖರನ್, ಅಧ್ಯಕ್ಷರು, ಟಾಟಾ ಸನ್ಸ್

ಶ್ರೀ ಕ್ಯಾಂಪ್ಬೆಲ್ ವಿಲ್ಸನ್, ಸಿ.ಇ.ಒ. ಏರ್ ಇಂಡಿಯಾ

ಶ್ರೀ ಗುಯಿಲೌಮ್  ಫೌರಿ, ಸಿ.ಇ.ಒ. ಏರ್ ಬಸ್ ,

ಮೊದಲನೆಯದಾಗಿ, ಈ ಮಹತ್ವದ ಒಪ್ಪಂದಕ್ಕಾಗಿ ನಾನು ಏರ್ ಇಂಡಿಯಾ ಮತ್ತು ಏರ್‌ ಬಸ್‌ ಸಂಸ್ಥೆಗಳನ್ನು ಅಭಿನಂದಿಸುತ್ತೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ನನ್ನ ಸ್ನೇಹಿತ ಅಧ್ಯಕ್ಷ ಶ‍್ರೀ ಮ್ಯಾಕ್ರನ್ ಅವರಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳುತ್ತೇನೆ.

ಈ ಒಪ್ಪಂದವು ಭಾರತ ಮತ್ತು ಫ್ರಾನ್ಸ್ ನಡುವಿನ ಆಳವಾದ ಸಂಬಂಧ ಮತ್ತು ಭಾರತದ ನಾಗರಿಕ ವಿಮಾನಯಾನ ಉದ್ಯಮದ ಯಶಸ್ಸು ಹಾಗೂ ಹಲವಾರು ಮಹತ್ವಾಕಾಂಕ್ಷೆಗಳಿಗೆ ಸಾಕ್ಷಿಯಾಗಿದೆ. ಇಂದು, ನಮ್ಮ ನಾಗರಿಕ ವಿಮಾನಯಾನ ಕ್ಷೇತ್ರವು ಭಾರತದ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿದೆ. ನಾಗರಿಕ ವಿಮಾನಯಾನವನ್ನು ಬಲಪಡಿಸುವುದು ನಮ್ಮ ರಾಷ್ಟ್ರೀಯ ಮೂಲಸೌಕರ್ಯ ಕಾರ್ಯತಂತ್ರದ ಪ್ರಮುಖ ಅಂಶವಾಗಿದೆ. ಕಳೆದ ಎಂಟು ವರ್ಷಗಳಲ್ಲಿ, ಭಾರತದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 147 ಕ್ಕೆ ಏರಿಕೆ ಕಂಡಿದೆ, ಇದು ದುಪ್ಪಟ್ಟಿನಷ್ಟು ಹೆಚ್ಚಳವಾಗಿದೆ. ನಮ್ಮ ಪ್ರಾದೇಶಿಕ ಸಂಪರ್ಕ ಯೋಜನೆ (ಉಡಾನ್) ಮೂಲಕ ದೇಶದ ದೂರದ ಭಾಗಗಳು ಸಹ ವಾಯುಯಾನ ಸೇವೆಯ ಸಂಪರ್ಕ ಪಡೆಯುತ್ತಿವೆ, ಇದು ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತಿದೆ.

ಭಾರತವು ಶೀಘ್ರದಲ್ಲೇ ವಿಶ್ವದಲ್ಲೇ ವಾಯುಯಾನ ಕ್ಷೇತ್ರದಲ್ಲಿ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಲಿದೆ. ಹಲವಾರು ಅಂದಾಜಿನ ಪ್ರಕಾರ, ಮುಂದಿನ 15 ವರ್ಷಗಳಲ್ಲಿ ಭಾರತದಲ್ಲಿ ಅಗತ್ಯವಿರುವ ವಿಮಾನಗಳ ಸಂಖ್ಯೆ 2000 ಕ್ಕಿಂತ ಹೆಚ್ಚಿರುತ್ತದೆ. ಇಂದಿನ ಐತಿಹಾಸಿಕ ಪ್ರಕಟಣೆಯು ಈ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ಸಹಾಯಕವಾಗಲಿದೆ. ಭಾರತದ ‘ಮೇಕ್ ಇನ್ ಇಂಡಿಯಾ – ಮೇಕ್ ಫಾರ್ ದಿ ವರ್ಲ್ಡ್’ ದೃಷ್ಟಿಯ ಅಡಿಯಲ್ಲಿ, ಏರೋಸ್ಪೇಸ್ ಉತ್ಪಾದನೆಯಲ್ಲಿ ಹಲವು ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಗ್ರೀನ್ ಫೀಲ್ಡ್ ಮತ್ತು ಬ್ರೌನ್ ಫೀಲ್ಡ್ ವಿಮಾನ ನಿಲ್ದಾಣಗಳಿಗೆ ಸ್ವಯಂಚಾಲಿತ ಮಾರ್ಗದ ಮೂಲಕ 100% ಎಫ್‌.ಡಿ.ಐ. ಅವಕಾಶವನ್ನು ಒದಗಿಸಲಾಗಿದೆ. ಅದೇ ರೀತಿ, ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆಗಳು, ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆಯಲ್ಲಿ ಅಂದರೆ ಎಂ.ಆರ್.ಒ. ವ್ಯವಸ್ಥೆಯಲ್ಲಿ 100% ಎಫ್‌.ಡಿ.ಐ. ಅವಕಾಶವನ್ನು ಅನುಮತಿಸಲಾಗಿದೆ. ಮುಂಬರುವ ದಿನಗಳಲ್ಲಿ ಇಡೀ ಭೌಗೋಳಿಕ ಪ್ರದೇಶಕ್ಕೆ ಭಾರತವು ಎಂ.ಆರ್.ಒ ಕೇಂದ್ರವಾಗಬಹುದು. ಇಂದು ಎಲ್ಲಾ ಜಾಗತಿಕ ವಿಮಾನಯಾನ ಕಂಪನಿಗಳು ಭಾರತದಲ್ಲಿವೆ. ಈ ನೂತನ ಅವಕಾಶಗಳ ಸಂಪೂರ್ಣ ಲಾಭ ಪಡೆಯಲು ನಾನು ಅವರನ್ನು ಆಹ್ವಾನಿಸುತ್ತೇನೆ.

ಸ್ನೇಹಿತರೇ,

ಏರ್ ಇಂಡಿಯಾ ಮತ್ತು ಏರ್‌ ಬಸ್ ನಡುವಿನ ಈ ಒಪ್ಪಂದವು ಭಾರತ-ಫ್ರಾನ್ಸ್ ವ್ಯೂಹಾತ್ಮಕ (ಇಂಡೋ-ಫ್ರೆಂಚ್ ಸ್ಟ್ರಾಟೆಜಿಕ್) ಪಾಲುದಾರಿಕೆಗೆ ಪ್ರಮುಖ ಮೈಲಿಗಲ್ಲಾಗಿದೆ. ಕೆಲವು ತಿಂಗಳ ಹಿಂದೆ, ಅಕ್ಟೋಬರ್ 2022 ರಲ್ಲಿ, ನಾನು ವಡೋದರಾದಲ್ಲಿ ರಕ್ಷಣಾ ಸಾರಿಗೆ ವಿಮಾನ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದೆ. 2.5 ಶತಕೋಟಿ ಯೂರೋಗಳ ಹೂಡಿಕೆಯೊಂದಿಗೆ ನಿರ್ಮಿಸಲಾದ ಈ ಯೋಜನೆಯಲ್ಲಿ ಟಾಟಾ ಮತ್ತು ಏರ್‌ಬಸ್ ಸಹ ಪಾಲುದಾರಿಕೆಯನ್ನು ಹೊಂದಿವೆ. ಫ್ರೆಂಚ್ ಕಂಪನಿ ಸಫ್ರಾನ್ ಭಾರತದಲ್ಲಿ ಏರ್‌ಕ್ರಾಫ್ಟ್ ಇಂಜಿನ್‌ಗಳನ್ನು ಪೂರೈಸಲು ಅತಿದೊಡ್ಡ ಎಂ.ಆರ್.ಒ. ಸೌಲಭ್ಯವನ್ನು ಸ್ಥಾಪಿಸುತ್ತಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ.

ಇಂದು, ಅಂತರಾಷ್ಟ್ರೀಯ ಕ್ರಮಗಳಲ್ಲಿ ಮತ್ತು ಬಹುಪಕ್ಷೀಯ ವ್ಯವಸ್ಥೆಯಲ್ಲಿ ಸ್ಥಿರತೆ ಮತ್ತು ಸಮತೋಲನವನ್ನು ಖಾತ್ರಿಪಡಿಸುವಲ್ಲಿ ಭಾರತ-ಫ್ರಾನ್ಸ್ ಪಾಲುದಾರಿಕೆಯು ನೇರ ಪಾತ್ರವನ್ನು ವಹಿಸುತ್ತಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯ ಸಮಸ್ಯೆಯಾಗಿರಲಿ, ಅಥವಾ ಜಾಗತಿಕ ಆಹಾರ ಭದ್ರತೆ ಮತ್ತು ಆರೋಗ್ಯ ಭದ್ರತೆಯ ವಿಷಯವಾಗಿರಲಿ, ಇದು ಭಾರತ ಮತ್ತು ಫ್ರಾನ್ಸ್ ಒಟ್ಟಾಗಿ ಸಕಾರಾತ್ಮಕ ಕೊಡುಗೆಗಳನ್ನು ನೀಡುವುದಕ್ಕೆ ಕಾರಣವಾಗುತ್ತದೆ.

ಅಧ್ಯಕ್ಷ ಶ್ರೀ ಮ್ಯಾಕ್ರನ್ ಅವರೇ,

ಈ ವರ್ಷ ನಮ್ಮ ದ್ವಿಪಕ್ಷೀಯ ಸಂಬಂಧಗಳು ಇನ್ನೂ ಹೆಚ್ಚಿನ ಎತ್ತರದ ಹಂತವನ್ನು ತಲಪುವ ವಿಶ್ವಾಸ ನನಗಿದೆ. ಭಾರತದ ಜಿ20 ಅಧ್ಯಕ್ಷೀಯತೆಯ ಸಂದರ್ಭದಲ್ಲಿ, ನಾವು ಒಟ್ಟಿಗೆ ಕೆಲಸ ಮಾಡಲು ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತೇವೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ಅನೇಕ ಧನ್ಯವಾದಗಳು ಮತ್ತು ಶುಭಾಶಯಗಳು