Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫೆಬ್ರವರಿ 21 ಮತ್ತು 22ರಂದು ನವದೆಹಲಿಯಲ್ಲಿ ಸೋಲ್ (ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್ ಶಿಪ್) ಲೀಡರ್ಶಿಪ್ ಕಾನ್ಕ್ಲೇವ್ ಆಯೋಜಿಸಿದ್ದಕ್ಕಾಗಿ ನಾನು ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್ಶಿಪ್ ಅನ್ನು (SOUL) ಅಭಿನಂದಿಸುತ್ತೇನೆ.  ಈ ವೇದಿಕೆಯು ನಾಯಕತ್ವಕ್ಕೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲು ಜೀವನದ ವಿವಿಧ ಸ್ತರಗಳ ಜನರನ್ನು ಒಟ್ಟುಗೂಡಿಸುತ್ತದೆ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2025ರ ಫೆಬ್ರವರಿ 21ರಂದು ನವದೆಹಲಿಯಲ್ಲಿ ನಡೆಯಲಿರುವ ಸೋಲ್ (ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್ ಶಿಪ್) ನಾಯಕತ್ವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಯಕತ್ವಕ್ಕೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲು ಈ ವೇದಿಕೆಯು ಜೀವನದ ವಿವಿಧ ಸ್ತರಗಳ ಜನರನ್ನು ಒಟ್ಟುಗೂಡಿಸುತ್ತದೆ ಎಂದು ಶ್ರೀ ಮೋದಿಯವರು ಹೇಳಿದರು. ಭಾಷಣಕಾರರು ತಮ್ಮ ಸ್ಪೂರ್ತಿದಾಯಕ ಜೀವನ ಪ್ರಯಾಣ ಮತ್ತು ಪ್ರಮುಖ ವಿಷಯಗಳ ಬಗ್ಗೆ ತಮ್ಮ ದೃಷ್ಟಿಕೋನ ಮತ್ತು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ, ಇದು ವಿಶೇಷವಾಗಿ ಯುವ ಪ್ರೇಕ್ಷಕರೊಂದಿಗೆ ನಿಕಟ ಸಂಪರ್ಕ ಸಾಧಿಸುತ್ತದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.

ಶ್ರೀ ಮೋದಿಯವರು X ನಲ್ಲಿ;

“ಫೆಬ್ರವರಿ 21 ಮತ್ತು 22ರಂದು ನವದೆಹಲಿಯಲ್ಲಿ ಸೋಲ್ ಲೀಡರ್ಶಿಪ್ ಕಾನ್ಕ್ಲೇವ್ ಆಯೋಜಿಸಿದ್ದಕ್ಕಾಗಿ ನಾನು ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್ಶಿಪ್ ಅನ್ನು ಅಭಿನಂದಿಸುತ್ತೇನೆ. ನಾಯಕತ್ವಕ್ಕೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲು ಈ ವೇದಿಕೆಯು ಜೀವನದ ವಿವಿಧ ಸ್ತರಗಳ ಜನರನ್ನು ಒಟ್ಟುಗೂಡಿಸುತ್ತದೆ. ಭಾಷಣಕಾರರು ತಮ್ಮ ಸ್ಪೂರ್ತಿದಾಯಕ ಜೀವನ ಪ್ರಯಾಣ ಮತ್ತು ಪ್ರಮುಖ ವಿಷಯಗಳ ಬಗ್ಗೆ ದೃಷ್ಟಿಕೋನ ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಾರೆ, ಇದು ವಿಶೇಷವಾಗಿ ಯುವ ಪ್ರೇಕ್ಷಕರೊಂದಿಗೆ ನೇರವಾಗಿ ಸಂಪರ್ಕಿಸುತ್ತದೆ.

ಫೆಬ್ರವರಿ 21ರ ಶುಕ್ರವಾರದಂದು ನಾನು ಕೂಡ ಸಮಾವೇಶದಲ್ಲಿ ಭಾಗವಹಿಸಲಿದ್ದೇನೆ ಎಂದು ಬರೆದಿದ್ದಾರೆ.

@LeadWithSoul”