Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫೆಬ್ರವರಿ 20, ನೀತಿ ಆಯೋಗದ ಆಡಳಿತ ಮಂಡಳಿಯ 6ನೇ ಸಭೆಯ ಅಧ್ಯಕ್ಷತೆ ವಹಿಸಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಫೆಬ್ರವರಿ 20ರಂದು ಬೆಳಿಗ್ಗೆ 10.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೀತಿ ಆಯೋಗದ  ಆಡಳಿತ ಮಂಡಳಿಯ 6ನೇ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.  ಕೃಷಿ, ಮೂಲಸೌಕರ್ಯ, ಉತ್ಪಾದನಾ ವಲಯ, ಮಾನವ ಸಂಪನ್ಮೂಲ ಅಭಿವೃದ್ಧಿ, ತಳಮಟ್ಟದಲ್ಲಿ ಸೇವಾ ವಿತರಣೆ, ಆರೋಗ್ಯ ಮತ್ತು ಪೌಷ್ಟಿಕಾಂಶ ಮತ್ತಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವ ಕಾರ್ಯಸೂಚಿ ನಿಗದಿಯಾಗಿದೆ.

ಆಡಳಿತ ಮಂಡಳಿ ಅಂತರವಲಯ, ಅಂತರಇಲಾಖೆ ಮತ್ತು ಒಕ್ಕೂಟ ವಿಷಯಗಳ ಬಗ್ಗೆ ಚರ್ಚೆ ನಡೆಸಲು ವೇದಿಕೆಯನ್ನು ಒದಗಿಸಲಿದೆ. ಇದು ಪ್ರಧಾನಮಂತ್ರಿ, ರಾಜ್ಯಗಳು ಮತ್ತು ಶಾಸನಸಭೆಗಳಿರುವ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್ ಗಳನ್ನು ಒಳಗೊಂಡಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾದಳಿತ ಪ್ರದೇಶದ ಜೊತೆಗೆ ಹೆಚ್ಚುವರಿಯಾಗಿ ಲಡಾಖ್ ಇದೇ ಮೊದಲ ಬಾರಿಗೆ ಸಭೆಯಲ್ಲಿ ಭಾಗವಹಿಸಲಿದೆ. ಬಾರಿಯ ಸಭೆಗೆ ಕೇಂದ್ರಾಡಳಿತ ಪ್ರದೇಶಗಳ ನೇತೃತ್ವವಹಿಸಿರುವ ಆಡಳಿತಾಧಿಕಾರಿಗಳನ್ನೂ ಸಹ ಆಹ್ವಾನಿಸಲಾಗಿದೆ. ಸಭೆಯಲ್ಲಿ ಆಡಳಿತ ಮಂಡಳಿಯ ಮಾಜಿ ಸದಸ್ಯರು, ಕೇಂದ್ರ ಸಚಿವರು, ಉಪಾಧ್ಯಕ್ಷರು, ಸದಸ್ಯರು ಮತ್ತು ನೀತಿ ಆಯೋಗದ ಸಿಒಇ ಮತ್ತು ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

***