ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸೆಲರ್ ಘನತೆವೆತ್ತ ಶ್ರೀ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದ್ವಿಪಕ್ಷೀಯ ಸಭೆ ನಡೆಸಿದರು. ಭಾರತ ಮತ್ತು ಜರ್ಮನಿ ನಡುವಿನ ದ್ವೈವಾರ್ಷಿಕ ಅಂತರ ಸರ್ಕಾರಿ ಸಮಾಲೋಚನೆಗಳ (ಐ.ಜಿ.ಸಿ) ಆರನೇ ಸುತ್ತಿನ ಸಭೆಗೆ ಮುನ್ನ ಈ ದ್ವಿಪಕ್ಷೀಯ ಸಭೆ ನಡೆಯಿತು.
ಪ್ರಧಾನಮಂತ್ರಿ ಅವರಿಗೆ ಔಪಚಾರಿಕ ಗೌರವವನ್ನು ನೀಡಲಾಯಿತು ಮತ್ತು ಫೆಡರಲ್ ಚಾನ್ಸೆಲರಿಯಲ್ಲಿ ಚಾನ್ಸೆಲರ್ ಶ್ರೀ ಸ್ಕೋಲ್ಜ್ ಅವರು ಪ್ರಧಾನಮಂತ್ರಿ ಅವರನ್ನು ಬರಮಾಡಿಕೊಂಡರು. ಉಭಯ ನಾಯಕರು ನಿಯೋಗ ಹಂತದ ಮಾತುಕತೆಗಳ ನಂತರ ಒಬ್ಬರಿಗೊಬ್ಬರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು.
ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ, ಉಭಯ ದೇಶಗಳ ದ್ವಿಪಕ್ಷೀಯ ಸಹಕಾರದ ಪ್ರಮುಖ ಕ್ಷೇತ್ರಗಳು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳು ಸಭೆಯ ಪ್ರಮುಖ ಚರ್ಚಾ ವಿಷಯಗಳಲ್ಲಿ ಒಳಗೊಂಡಿವೆ.
***
Discussions continue between PM @narendramodi and Chancellor Scholz in Berlin. Both leaders are reviewing the full range of bilateral ties between India and Germany, including giving an impetus to trade as well as cultural linkages. @Bundeskanzler pic.twitter.com/Wj3M8mVQjr
— PMO India (@PMOIndia) May 2, 2022
Ich hatte mit Bundeskanzler Scholz ein ausführliches Gespräch über Handel, Wirtschaft, Innovation, Kultur und Beziehungen zwischen den Völkern geführt.