ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಫಿನ್ ಟೆಕ್ ಕುರಿತ ಜಂಟಿ ಕಾರ್ಯ ಗುಂಪು (ಜೆಡಬ್ಲ್ಯುಜಿ) ಸ್ಥಾಪನೆಗಾಗಿ ಭಾರತ ಮತ್ತು ಸಿಂಗಾಪೂರ್ ನಡುವೆ 2018ರ ಜೂನ್ ರಂದು ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ(ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.
ಪ್ರಯೋಜನಗಳು:
ಭಾರತ ಮತ್ತು ಸಿಂಗಾಪೂರ್ ನಡುವೆ ಫಿನ್ ಟೆಕ್ ಕುರಿತ ಜಂಟಿ ಕಾರ್ಯ ಗುಂಪನ್ನು ಎರಡೂ ರಾಷ್ಟ್ರಗಳ ನಡುವೆ ಪಿನ್ ಟೆಕ್ ಕ್ಷೇತ್ರದ ಸಹಕಾರಕ್ಕಾಗಿ ಸ್ಥಾಪಿಸಲಾಗಿದೆ. ಸಿಂಗಪೂರದೊಂದಿಗೆ ಭಾರತದ ಸಹಯೋಗವು ಭಾರತ ಮತ್ತು ಸಿಂಗಾಪೂರ್ ದೇಶಗಳೆರಡಕ್ಕೂ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ಗಳು (ಎಪಿಎಲ್.ಗಳು), ಸ್ಯಾಂಡ್ಬಾಕ್ಸ್ ನಿಯಂತ್ರಣ, ಡಿಜಿಟಲ್ ಹಣ ಹರಿವು ಮತ್ತು ಪಾವತಿಯಲ್ಲಿನ ಸುರಕ್ಷತೆ, ವಿದ್ಯುನ್ಮಾನ ಹಣ ರವಾನೆಗಾಗಿ ರೂಪೇ ಜಾಲ(ಎನ್ಇಟಿಎಸ್), ಯುಪಿಐ – ತ್ವರಿತ ಪಾವತಿ ಸಂಪರ್ಕ, ಆಸಿಯಾನ್ ವಲಯದಲ್ಲಿ ಆಧಾರ್ ಸ್ಟಾಕ್ ಮತ್ತು ಇ-ಕೆವೈಸಿ ಮತ್ತು ನಿಯಂತ್ರಣಗಳ ಕುರಿತ ಸಹಕಾರ, ಹಣಕಾಸು ಮಾರುಕಟ್ಟೆಗಳು, ವಿಮಾರಂಗ ಹಾಗೂ ಸಾಂಡ್ ಬಾಕ್ಸ್ ಮಾದರಿಗಳಿಗೆ ಪರಿಹಾರಗಳ ಪ್ರಯೋಜನ ಕಲ್ಪಿಸುತ್ತದೆ.
ಜೆಡಬ್ಲ್ಯುಜಿಯ ಉಲ್ಲೇಖಿತ ನಿಯಮಗಳು:
I. ಉತ್ತಮ ರೂಢಿಗಳ ವಿನಿಮಯ
ಉತ್ತಮ ರೂಢಿಗಳನ್ನು ವಿನಿಮಯ ಮಾಡಿಕೊಳ್ಳುವ ದೃಷ್ಟಿಯಿಂದ, ನಿಯಂತ್ರಕ ಸಂಪರ್ಕವನ್ನು ಸುಧಾರಿಸಲು:
i. ಪಿನ್ ಟೆಕ್ ಗೆ ಸಂಬಂಧಿಸಿದ ನಿಯಂತ್ರಣಗಳು ಮತ್ತು ನೀತಿಗಳ ಕುರಿತ ಅನುಭವ ವಿನಿಮಯ ಉತ್ತೇಜನ;
ii. ಫಿನ್ ಟೆಕ್ ಸಂಸ್ಥೆಗಳು ಮತ್ತು ಕಾಯಗಳಿಂದ ತಾರತಮ್ಯರಹಿತ ಸ್ವರೂಪದಲ್ಲಿ ದತ್ತಾಂಶ ಬಳಕೆ ಮಾನದಂಡಗಳ ರಚನೆಗೆ ಉತ್ತೇಜನ.
iii. ಸೈಬರ್-ಭದ್ರತೆ, ಹಣಕಾಸು ವಂಚನೆ ಇತ್ಯಾದಿ ಹೊಸ ಬೆದರಿಕೆಗಳನ್ನು ಒಳಗೊಂಡ ಜಗತ್ತಿನಲ್ಲಿ ನಿಯಂತ್ರಕ ಸಂಸ್ಥೆಗಳ ಸಂಬಂಧಿತ ಅಧಿಕಾರಿಗಳ ಸಾಮರ್ಥ್ಯವರ್ಧನೆಗೆ ಕ್ರಮ.
II. ಸಹಕಾರ ಉತ್ತೇಜನ
ಭಾರತ ಮತ್ತು ಸಿಂಗಾಪೂರ್ ಗಳಲ್ಲಿ ಹಣಕಾಸು ತಂತ್ರಜ್ಞಾನ ಕೈಗಾರಿಕೆಗಳ ನಡುವೆ ಸಹಕಾರ ಉತ್ತೇಜನಕ್ಕಾಗಿ:
i. ಫಿನ್ ಟೆಕ್ ವಲಯದಲ್ಲಿ ಸಂಸ್ಥೆಗಳ ನಡುವೆ ಸಹಕಾರ ಉತ್ತೇಜನ;
ii. ವಾಣಿಜ್ಯ/ಹಣಕಾಸು ವಲಯದಲ್ಲಿ ಫಿನ್ ಟೆಕ್ ಪರಿಹಾರಗಳ ಅಭಿವೃದ್ಧಿಗೆ ಉತ್ತೇಜನ;
iii. ಎರಡೂ ರಾಷ್ಟ್ರಗಳ ಸೂಕ್ತ ನೀತಿಗಳಿಗೆ ಅನುಗುಣವಾಗಿ ಫಿನ್ ಟೆಕ್ ನಲ್ಲಿ ಭಾರತ ಮತ್ತು ಸಿಂಗಾಪೂರ್ ಗಳ ನಡುವೆ ಉದ್ಯಮಶೀಲತೆ/ನವೋದ್ಯಮ ಪ್ರತಿಭೆಗಳ ಸಹಯೋಗಕ್ಕೆ, ನಿರಂತರ ಪ್ರೋತ್ಸಾಹ.
III. ಅಂತಾರಾಷ್ಟ್ರೀಯ ಗುಣಮಟ್ಟಗಳ ಅಭಿವೃದ್ಧಿ
(a) ಭಾರತ ಮತ್ತು ಸಿಂಗಪೂರದ ಸಾರ್ವಜನಿಕ ವ್ಯವಸ್ಥೆಗಳಲ್ಲಿ ರಚಿಸಲಾದ ಎಪಿಐಗಳಿಂದ ಅಂತರ-ಕಾರ್ಯಸಾಧ್ಯವಾಗಿರುವ ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಇಂಟರ್ಫೇಸ್ ಗಳ ಅಂತಾರಾಷ್ಟ್ರೀಯ ಆವೃತ್ತಿ (ಎಪಿಐಗಳು) ಮತ್ತು ಮಾನದಂಡಗಳ ರಚನೆಗೆ ಉತ್ತೇಜನ ನೀಡಲು:
i. ಡಿಜಿಟಲ್ ಗುರುತುಗಳು ಮತ್ತು ವಿದ್ಯುನ್ಮಾನ ಬಳಸಿಕೊಂಡು ನಿವಾಸಿಗಳ ಗಡಿಯಾಚೆಗಿನ ದೃಢೀಕರಣ ಮತ್ತು -ನಿಮ್ಮ-ಗ್ರಾಹಕರನ್ನು ಅರಿಯಿರಿ (ಇ-ಕೆವೈಸಿ) ಸಕ್ರಿಯಗೊಳಿಸುವುದು;
ii. ಏಕೀಕೃತ ಪಾವತಿ ಇಂಟರ್ಫೇಸ್ (ಡಿಪಿಐ) ಮತ್ತು ತ್ವರಿತ ಮತ್ತು ಸುರಕ್ಷಿತ ವರ್ಗಾವಣೆ (ಎಫ್.ಎ.ಎಸ್.ಟಿ) ಡಿಜಿಟಲ್ ನಿಧಿಯ ವರ್ಗಾವಣೆ ವೇದಿಕೆಗಳ ನಡುವಿನ ಸಹಕಾರದ ಪಾವತಿ ಸಂಪರ್ಕಗಳನ್ನು ಸಕ್ರಿಯಗೊಳಿಸುವುದು;
iii. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್.ಪಿ.ಸಿ.ಐ.) ಮತ್ತು ವಿದ್ಯುನ್ಮಾನ ವರ್ಗಾವಣೆಗಾಗಿ ಜಾಲ (ಎನ್.ಇ.ಟಿ.ಎಸ್.) ಪಾವತಿ ಜಾಲಗಳ ನಡುವೆ ರೂಪೆ ಕೆಡಿಟ್/ಡೆಬಿಟ್ ಕಾರ್ಡ್ ಸಂಪರ್ಕದ ಮೂಲಕ ಆಚೆಯ ಕಲಿಕೆಗೆ ಅವಕಾಶ ಒದಗಿಸುವುದು;
iv. ಡಿಪಿಐ ಮತ್ತು ತ್ವರಿತ ಸ್ಪಂದನೆ (ಕ್ಯುಆರ್) ಕೋಡ್ ಆಧಾರಿತ ಪಾವತಿ ಒಪ್ಪಿಕೊಳ್ಳುವುದು; ಮತ್ತು
(a) ಗಡಿಗುಂಟಾ ಇ-ಸಹಿ ಮೂಲಕ ಡಿಜಿಟಲ್ ಸಹಿಯ ಬಳಕೆಗೆ ಅವಕಾಶ ಕಲ್ಪಿಸುವುದು.
(b) ಭಾರತ ಮತ್ತು ಸಿಂಗಾಪೂರ್ ನಡುವೆ ಈ ಕೆಳಗಿನ ಸಹಕಾರ ಉತ್ತೇಜಿಸುವುದು:
i. ಡಿಜಿಟಲ್ ಆಡಳಿತ;
ii. ಹಣಕಾಸು ಪೂರಣ; ಮತ್ತು
iii. ಆಸಿಯಾನ್ ಹಣಕಾಸು ನಾವಿನ್ಯ ಜಾಲ (ಎ.ಎಫ್.ಐ.ಎನ್.)ಕಾರ್ಯಕ್ರಮದಲ್ಲಿ ಪಾಲುದಾರಿಕೆ.
*****