ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಫಿನ್‌ಟೆಕ್’ ಕುರಿತ ಚಿಂತನೆಯ ನಾಯಕತ್ವ ವೇದಿಕೆಯಾದ ‘ಇನ್‌ಫಿನಿಟಿ ಫೋರಂ’ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕರೆನ್ಸಿಯ ಚರಿತ್ರೆಯು ಅದ್ಭುತ ವಿಕಾಸವನ್ನು ನಮ್ಮ ಕಣ್ಣ ಮುಂದಿರಿಸುತ್ತದೆ ಎಂದು ಹೇಳಿದರು. ಕಳೆದ ವರ್ಷ, ಭಾರತದಲ್ಲಿ ಮೊದಲ ಬಾರಿಗೆ ಮೊಬೈಲ್ ಪಾವತಿಯು ಎಟಿಎಂ ನಗದು ಹಿಂಪಡೆಯುವಿಕೆಯ ಮೊತ್ತವನ್ನು ಮೀರಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಯಾವುದೇ ಭೌತಿಕ ಶಾಖಾ ಕಚೇರಿಗಳಿಲ್ಲ ಸಂಪೂರ್ಣ ಡಿಜಿಟಲ್ ಬ್ಯಾಂಕುಗಳು ಈಗಾಗಲೇ ವಾಸ್ತವ ರೂಪ ತಳೆದಿವೆ ಮತ್ತು ಮುಂದಿನ ಒಂದು ದಶಕದೊಳಗೆ ಅವು ಅತಿ ಸಾಮಾನ್ಯವೆನಿಸಲಿವೆ. “ಮಾನವರು ವಿಕಸನಗೊಂಡಂತೆ, ನಮ್ಮ ವಹಿವಾಟುಗಳ ರೂಪವೂ ವಿಕಸನಗೊಂಡಿತು. ಪರಸ್ಪರ ವಿನಿಮಯ ವ್ಯವಸ್ಥೆಯಿಂದ ಲೋಹಗಳವರೆಗೆ, ನಾಣ್ಯಗಳಿಂದ ನೋಟುಗಳಿಗೆ, ಚೆಕ್‌ಗಳಿಂದ ಕಾರ್ಡ್‌ಗಳವರೆಗೆ, ಇಂದು ನಾವು ಇಲ್ಲಿಗೆ ತಲುಪಿದ್ದೇವೆ“, ಎಂದು ಅವರು ಹೇಳಿದರು.
ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಾಗ ಅಥವಾ ತಂತ್ರಜ್ಞಾನದ ನವೀಕರಣದ ವಿಚಾರದಲ್ಲಿ ತಾನು ಎಂದೂ ಇತರರಿಗಿಂತ ಹಿಂದೆ ಬಿದ್ದಿಲ್ಲ ಎಂಬುದನ್ನು ಭಾರತವು ಜಗತ್ತಿಗೆ ಸಾಬೀತುಪಡಿಸಿದೆ ಎಂದು ಪ್ರಧಾನಿ ಹೇಳಿದರು. ಡಿಜಿಟಲ್ ಇಂಡಿಯಾ ಅಡಿಯಲ್ಲಿ ಕೈಗೊಂಡ ಕ್ರಾಂತಿಕಾರಿ ಉಪಕ್ರಮಗಳು ನವೀನ ‘ಫಿನ್‌ಟೆಕ್’ ಪರಿಹಾರಗಳಿಗೆ ಕಾರಣವಾಗಿದ್ದು, ಇವುಗಳನ್ನು ಆಡಳಿತದಲ್ಲಿ ಬಳಸಲು ಅವಕಾಶ ದೊರೆತಿದೆ. ಈ ‘ಫಿನ್‌ಟೆಕ್’ ಉಪಕ್ರಮಗಳನ್ನು ‘ಫಿನ್‌ಟೆಕ್’ ಕ್ರಾಂತಿಯಾಗಿ ಪರಿವರ್ತಿಸುವ ಸಮಯ ಈಗ ಬಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. “ದೇಶದ ಪ್ರತಿಯೊಬ್ಬ ನಾಗರಿಕನ ಆರ್ಥಿಕ ಸಬಲೀಕರಣವನ್ನು ಸಾಧಿಸಲು ಸಹಾಯ ಮಾಡುವ ಕ್ರಾಂತಿ ಇದಾಗಬೇಕಿದೆ“, ಎಂದು ಅವರು ಹೇಳಿದರು.
ತಂತ್ರಜ್ಞಾನವು ಆರ್ಥಿಕ ಒಳಗೊಳ್ಳುವಿಕೆ ಸಾಧನೆಗೆ ಹೇಗೆ ಸಹಾಯಕವಾಗಿದೆ ಎಂಬುದನ್ನು ವಿವರಿಸಿದ ಶ್ರೀ ಮೋದಿ, 2014ರಲ್ಲಿ 50% ಕ್ಕಿಂತ ಕಡಿಮೆ ಭಾರತೀಯರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರು. ಕಳೆದ 7 ವರ್ಷಗಳಲ್ಲಿ 430 ದಶಲಕ್ಷ ಜನ್‌ಧನ್ ಖಾತೆಗಳನ್ನು ತೆರೆಯಲಾಗಿದ್ದು, ಈಗ ಬ್ಯಾಂಕ್ ಖಾತೆ ಸೌಲಭ್ಯ ಎಂಬುದು ಬಹುತೇಕ ಸಾರ್ವತ್ರೀಕರಣಗೊಂಡಿದೆ ಎಂದು ಗಮನ ಸೆಳೆದರು. ಅವರು ಕಳೆದ ವರ್ಷ 1.3 ಶತಕೋಟಿ ವಹಿವಾಟುಗಳಿಗೆ ಸಾಕ್ಷಿಯಾದ 690 ದಶಲಕ್ಷ ‘ರೂಪೇ ಕಾರ್ಡ್’ಗಳಂತಹ ಉಪಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು. ಕಳೆದ ತಿಂಗಳಲ್ಲಿ ಯುಪಿಐ ಮೂಲಕ ಸುಮಾರು 4.2 ಶತಕೋಟಿ ವಹಿವಾಟುಗಳನ್ನು ನಡೆಸಲಾಗಿದೆ; ಪ್ರತಿ ತಿಂಗಳು ಜಿಎಸ್‌ಟಿ ಪೋರ್ಟಲ್‌ನಲ್ಲಿ ಸುಮಾರು 300 ದಶಲಕ್ಷ ಇನ್‌ವಾಯ್ಸ್‌ಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ; ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ, ಪ್ರತಿದಿನ ಸುಮಾರು 1.5 ದಶಲಕ್ಷ ರೈಲ್ವೆ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಲಾಗುತ್ತಿದೆ; ಕಳೆದ ವರ್ಷ, 1.3 ಶತರಕೋಟಿ ವಹಿವಾಟುಗಳಿಗೆ ‘ಫಾಸ್ಟ್ಟ್ಯಾಗ್’ ಸಾಕ್ಷಿಯಾಗಿದೆ; ‘ಪ್ರಧಾನಮಂತ್ರಿ ಸ್ವಾನಿಧಿ’ ಯೋಜನೆಯು ದೇಶಾದ್ಯಂತ ಸಣ್ಣ ಮಾರಾಟಗಾರರಿಗೆ ಸಾಲ ಸೌಲಭ್ಯ ಒದಗಿಸಲು ಅನುವು ಮಾಡಿದೆ; ‘ಇ–ರೂಪಿ’ ಯುಪಿಐ ವ್ಯವಸ್ಥೆಯು ಸೋರಿಕೆಗಳಿಲ್ಲದೆ ನಿರ್ದಿಷ್ಟ ಸೇವೆಗಳನ್ನು ಉದ್ದೇಶಿತರಿಗೆ ತಲುಪಿಸಲು ಅನುವು ಮಾಡಿಕೊಟ್ಟಿದೆ ಎಂದರು.
ಹಣಕಾಸು ಒಳಗೊಳ್ಳುವಿಕೆಯು ‘ಫಿನ್‌ಟೆಕ್’ ಕ್ರಾಂತಿಯ ಚಾಲಕಶಕ್ತಿ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಬಗ್ಗೆ ಮತ್ತಷ್ಟು ವಿವರಿಸಿದ ಪ್ರಧಾನಮಂತ್ರಿಯವರು, ಆದಾಯ, ಹೂಡಿಕೆಗಳು, ವಿಮೆ ಮತ್ತು ಸಾಂಸ್ಥಿಕ ಸಾಲ ಎಂಬ 4 ಸ್ತಂಭಗಳ ಮೇಲೆ ಫಿನ್‌ಟೆಕ್’ ನಿಂತಿದೆ ಎಂದರು. ”ಆದಾಯ ಬೆಳೆದಾಗ ಹೂಡಿಕೆ ಸಾಧ್ಯ. ವಿಮಾ ರಕ್ಷಣೆಯು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಹೂಡಿಕೆಗಳನ್ನು ಪ್ರೇರೇಪಿಸುತ್ತದೆ. ಸಾಂಸ್ಥಿಕ ಸಾಲವು ವ್ಯವಹಾರದ ವಿಸ್ತರಣೆಗೆ ರೆಕ್ಕೆಗಳನ್ನು ನೀಡುತ್ತದೆ. ನಾವು ಈ ಪ್ರತಿಯೊಂದು ಸ್ತಂಭಕ್ಕೆ ಸಂಬಂಧಿಸಿದಂತೆಯೂ ಸಾಕಷ್ಟು ಕೆಲಸ ಮಾಡಿದ್ದೇವೆ. ಈ ಎಲ್ಲಾ ಅಂಶಗಳು ಒಗ್ಗೂಡಿದಾಗ, ಇದ್ದಕ್ಕಿದ್ದಂತೆ ಹಣಕಾಸು ವಲಯದಲ್ಲಿ ಇನ್ನೂ ಅನೇಕರು ಪಾಲ್ಗೊಳ್ಳುವಿಕೆಯನ್ನು ನೀವು ಕಾಣುತ್ತೀರಿ“, ಎಂದು ಪ್ರಧಾನಿ ವಿವರಿಸಿದರು.
ಈ ಆವಿಷ್ಕಾರಗಳನ್ನು ಜನಸಾಮಾನ್ಯರು ವ್ಯಾಪಕವಾಗಿ ಅಂಗೀಕರಿಸಿರುವ ಹಿನ್ನೆಲೆಯಲ್ಲಿ ‘ಫಿನ್‌ಟೆಕ್’ನಲ್ಲಿ ವಿಶ್ವಾಸ ಉಳಿಸಿಕೊಳ್ಳಬೇಕಾದ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಸಾಮಾನ್ಯ ಭಾರತೀಯರು ಡಿಜಿಟಲ್ ಪಾವತಿಗಳು ಮತ್ತು ಅಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ‘ಫಿನ್‌ಟೆಕ್’ ಪರಿಸರವ್ಯವಸ್ಥೆಯ ಮೇಲೆ ಅಪಾರ ವಿಶ್ವಾಸವನ್ನು ತೋರಿಸಿದ್ದಾರೆ. “ಈ ವಿಶ್ವಾಸವು ಒಂದು ಜವಾಬ್ದಾರಿಯಾಗಿದೆ. ವಿಶ್ವಾಸ ಎಂದರೆ ನೀವು ಜನರ ಹಿತಾಸಕ್ತಿಗಳ ಭದ್ರತೆಗೆ ನೀಡುವ ಖಾತರಿಯಾಗಿದೆ. ‘ಫಿನ್‌ಟೆಕ್’ ಕ್ಷೇತ್ರದಲ್ಲಿ ಭದ್ರತೆ ಕುರಿತ ಆವಿಷ್ಕಾರಗಳಿಲ್ಲದೆ, ‘ಫಿನ್‌ಟೆಕ್’ ನಾವಿನ್ಯತೆ ಅಪೂರ್ಣವಾಗಲಿದೆ“, ಎಂದು ಅವರು ಹೇಳಿದರು.
‘ಫಿನ್‌ಟೆಕ್’ ಕ್ಷೇತ್ರದಲ್ಲಿ ಭಾರತದ ಹೊಂದಿರುವ ವ್ಯಾಪಕ ಅನುಭವದ ಅನ್ವಯಿಕೆ ಕುರಿತು ಪ್ರಧಾನಿ ಮಾತನಾಡಿದರು. ಅನುಭವಗಳು ಮತ್ತು ಪರಿಣತಿಯನ್ನು ವಿಶ್ವದೊಂದಿಗೆ ಹಂಚಿಕೊಳ್ಳುವ ಮತ್ತು ಅವುಗಳಿಂದ ಕಲಿಯುವ ಭಾರತದ ಪ್ರವೃತ್ತಿಯನ್ನು ಅವರು ಒತ್ತಿ ಹೇಳಿದರು. “ನಮ್ಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಪರಿಹಾರಗಳು ವಿಶ್ವದಾದ್ಯಂತ ನಾಗರಿಕರ ಜೀವನವನ್ನು ಸುಧಾರಿಸಬಲ್ಲವು“, ಎಂದು ಪ್ರಧಾನಿ ಹೇಳಿದರು.
‘ಗಫ್ಟ್ ಸಿಟಿ’ಯು ಕೇವಲ ಒಂದು ಕಟ್ಟಡಗಳ ಸಂಕೀರ್ಣವಲ್ಲ, ಅದು ಭಾರತವನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇದು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳು, ಬೇಡಿಕೆ, ಜನಸಂಖ್ಯೆ ಮತ್ತು ವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಇದು ಆಲೋಚನೆಗಳು, ನಾವಿನ್ಯತೆ ಮತ್ತು ಹೂಡಿಕೆಗೆ ಭಾರತದ ಮುಕ್ತತೆಯನ್ನು ಪ್ರತಿನಿಧಿಸುತ್ತದೆ. ‘ಗಿಫ್ಟ್ ಸಿಟಿ’ಯು ಜಾಗತಿಕ ‘ಫಿನ್‌ಟೆಕ್ ’ ಜಗತ್ತಿಗೆ ಪ್ರವೇಶದ್ವಾರವಾಗಿದೆ ಎಂದರು.
“ಹಣಕಾಸು ಎಂಬುದು ಆರ್ಥಿಕತೆಯ ಜೀವಾಳವಾದರೆ ತಂತ್ರಜ್ಞಾನವು ಅದರ ವಾಹಕವಾಗಿದೆ. ಅಂತ್ಯೋದಯ ಮತ್ತು ಸರ್ವೋದಯವನ್ನು ಸಾಧಿಸಲು ಇವೆರಡೂ ಸಮಾನ ಪ್ರಾಮುಖ್ಯತೆ ಹೊಂದಿವೆ,” ಎಂದು ಹೇಳುವ ಮೂಲಕ ಪ್ರಧಾನಿ ಮಾತು ಮುಗಿಸಿದರು.
ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರವು(ಐಎಫ್‌ಎಸ್‌ಸಿಎ) ‘ಗಿಫ್ಟ್ ಸಿಟಿ’ ಮತ್ತು ‘ಬ್ಲೂಮ್ಬರ್ಗ್’ ಸಹಯೋಗದೊಂದಿಗೆ ಭಾರತ ಸರಕಾರದ ನೇತೃತ್ವದಲ್ಲಿ 2021ರ ಡಿಸೆಂಬರ್ 3 ಮತ್ತು 4ರಂದು ಈ ಕಾರ್ಯಕ್ರಮವನ್ನು ಆಯೋಜಿಸಿದೆ. ವೇದಿಕೆಯ ಮೊದಲ ಆವೃತ್ತಿಯಲ್ಲಿ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ ಪಾಲುದಾರ ರಾಷ್ಟ್ರಗಳಾಗಿವೆ.
‘ಇನ್‌ಫಿನಿಟಿ ಫೋರಂ’ ವೇದಿಕೆಯು ನೀತಿ, ವ್ಯವಹಾರ ಮತ್ತು ತಂತ್ರಜ್ಞಾನದಲ್ಲಿ ವಿಶ್ವದ ಪ್ರಮುಖ ದೇಶಗಳನ್ನು ಒಟ್ಟುಗೂಡಿಸುತ್ತದೆ. ಆ ಮೂಲಕ ಸಮಗ್ರ ಅಭಿವೃದ್ಧಿಗಾಗಿ, ಮಾನವಕುಲದ ಸೇವೆಗಾಗಿ ತಂತ್ರಜ್ಞಾನ ಮತ್ತು ನಾವಿನ್ಯತೆಯನ್ನು ‘ಫಿನ್‌ಟೆಕ್’ ಉದ್ಯಮವು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಲು ಹಾಗೂ ಕಾರ್ಯಸಾಧ್ಯವಾದ ಒಳನೋಟವನ್ನು ಹೊಂದಲು ಅವಕಾಶ ಒದಗಿಸುತ್ತದೆ.
ಈ ಬಾರಿಯ ವೇದಿಕೆಯ ಕಾರ್ಯಸೂಚಿಯಲ್ಲಿ ‘ಬಿಯಾಂಡ್‘ (ಅದಕ್ಕೂ ಮಿಗಿಲಾದದ್ದು) ಎಂಬ ವಿಷಯದ ಮೇಲೆ ಗಮನ ಕೇಂದ್ರೀಕರಿಸಲಾಗಿದೆ; ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಸರಕಾರಗಳು ಮತ್ತು ಉದ್ಯಮಗಳು ಭೌಗೋಳಿಕ ಗಡಿಗಳನ್ನು ಮೀರಿ ವ್ಯವಹರಿಸುತ್ತಿರುವ ಹಿನ್ನೆಲೆಯಲ್ಲಿ ‘ಎಲ್ಲೆಗಳನ್ನು ಮೀರಿ ಫಿನ್‌ಟೆಕ್’ ಸೇರಿದಂತೆ ಹಲವು ಉಪ–ವಿಷಯಗಳನ್ನೂ ಕಾರ್ಯಸೂಚಿ ಒಳಗೊಂಡಿದೆ. ಸುಸ್ಥಿರ ಅಭಿವೃದ್ಧಿಗೆ ಚಾಲನೆ ನೀಡಲು ‘ಸ್ಪೇಸ್ಟೆಕ್, ‘ಗ್ರೀನ್ಟೆಕ್’ ಮತ್ತು ‘ಅಗ್ರಿಟೆಕ್’ನಂತಹ ಉದಯೋನ್ಮುಖ ಕ್ಷೇತ್ರಗಳನ್ನು ಒಳಗೊಂಡ ‘ಫಿನ್‌ಟೆಕ್ ಬಿಯಾಂಡ್ ಫೈನಾನ್ಸ್’; ಭವಿಷ್ಯದಲ್ಲಿ ಫಿನ್‌ಟೆಕ್ ಉದ್ಯಮದ ಸ್ವರೂಪದ ಮೇಲೆ ‘ಕ್ವಾಂಟಮ್ ಕಂಪ್ಯೂಟಿಂಗ್’ ಹೇಗೆ ಪರಿಣಾಮ ಬೀರಬಹುದು ಹಾಗೂ ಹೊಸ ಅವಕಾಶಗಳನ್ನು ಉತ್ತೇಜಿಸಬಹುದು ಎಂಬುದರ ಮೇಲೆ ಗಮನ ಹರಿಸುವ ‘ಫಿನ್‌ಟೆಕ್ ಬಿಯಾಂಡ್ ನೆಕ್ಸ್ಟ್’ ಇವುಗಳು ಸಹ ಕಾರ್ಯಸೂಚಿಯ ಉಪ ವಿಷಯಗಳಲ್ಲಿ ಸೇರಿವೆ.
ಈ ವೇದಿಕೆಯಲ್ಲಿ 70ಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ.
***
Speaking at the InFinity Forum. Watch. https://t.co/8a53JO4pLB
— Narendra Modi (@narendramodi) December 3, 2021
The history of currency shows tremendous evolution.
— PMO India (@PMOIndia) December 3, 2021
As humans evolved, so did the form of our transactions.
From barter system to metals,
from coins to notes,
From cheques to cards,
Today we have reached here: PM @narendramodi
Last year, in India, mobile payments exceeded ATM cash withdrawals for the first time.
— PMO India (@PMOIndia) December 3, 2021
Fully digital banks, without any physical branch offices, are already a reality and may become commonplace in less than a decade: PM @narendramodi
India has proved to the world that it is second to none when it comes to adopting technology or innovating around it.
— PMO India (@PMOIndia) December 3, 2021
Transformational initiatives under Digital India have opened doors for innovative Fintech solutions to be applied in governance: PM @narendramodi
Now it is time to convert these fintech initiatives into a fintech revolution.
— PMO India (@PMOIndia) December 3, 2021
A revolution that helps to achieve financial empowerment of every single citizen of the country: PM @narendramodi
We believe in sharing our experiences and expertise with the world and learning from them as well.
— PMO India (@PMOIndia) December 3, 2021
Our Digital Public Infrastructure solutions can improve the lives of citizens around the world: PM @narendramodi
GIFT City is not merely a premise, it represents India.
— PMO India (@PMOIndia) December 3, 2021
It represents India’s democratic values, demand, demography & diversity.
It represents India’s openness to ideas, innovation & investment.
GIFT City is a gateway to the global fintech world: PM @narendramodi
India is at the forefront of adopting latest technology and the world FinTech is no exception. pic.twitter.com/4IBGzsxtP9
— Narendra Modi (@narendramodi) December 3, 2021
At the core of India’s FinTech revolution is the emphasis on financial inclusion. pic.twitter.com/tDFFXxMH4y
— Narendra Modi (@narendramodi) December 3, 2021
GIFT City in Gujarat represents India’s vibrancy, democratic ethos and diversity. pic.twitter.com/npwqhQHmUT
— Narendra Modi (@narendramodi) December 3, 2021