Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫಸ್ಟ್ ಸೋಲಾರ್ ಸಿ.ಇ.ಒ. ಶ್ರೀ ಮಾರ್ಕ್ ವಿಡ್ಮಾರ್ ಜೊತೆ ಪ್ರಧಾನ ಮಂತ್ರಿ ಸಭೆ

ಫಸ್ಟ್ ಸೋಲಾರ್ ಸಿ.ಇ.ಒ. ಶ್ರೀ ಮಾರ್ಕ್ ವಿಡ್ಮಾರ್ ಜೊತೆ ಪ್ರಧಾನ ಮಂತ್ರಿ ಸಭೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫಸ್ಟ್ ಸೋಲಾರ್ ಸಿ.ಇ.ಒ. ಶ್ರೀ ಮಾರ್ಕ್ ವಿಡ್ಮಾರ್ ಅವರನ್ನು ಭೇಟಿಯಾದರು.

ಅವರು ಭಾರತದ ಮರುನವೀಕೃತ ಇಂಧನ ಭೂವೈದೃಶ್ಯ, ಅದರಲ್ಲೂ ನಿರ್ದಿಷ್ಟವಾಗಿ ಸೌರ ಇಂಧನ ಸಾಮರ್ಥ್ಯ ಮತ್ತು 2030ರ ವೇಳೆಗೆ ಮರುನವೀಕೃತ ಮೂಲಗಳಿಂದ 450 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಬಗ್ಗೆ ಮಾತುಕತೆ ನಡೆಸಿದರು. ಇತ್ತೀಚೆಗೆ ಆರಂಭಿಸಲಾದ ಉತ್ಪಾದನಾ ಆಧಾರಿತ ಪ್ರೋತ್ಸಾಹ (ಪಿ.ಎಲ್.ಐ.) ಯೋಜನೆ ಅಡಿಯಲ್ಲಿ ಫಸ್ಟ್ ಸೋಲಾರ್ ಅದರ ವಿಶಿಷ್ಟ ತೆಳು ಹಾಳೆಗಳ ತಂತ್ರಜ್ಞಾನ ಬಳಸಿ ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸುವ ಅದರ ಆಸಕ್ತಿ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸಮಗ್ರಗೊಳಿಸುವ ಬಗ್ಗೆಯೂ ಮಾತುಕತೆಗಳು ನಡೆದವು.

***