1 |
2024 ರಿಂದ 2029 ರವರೆಗಿನ ರಷ್ಯಾದ ದೂರಪ್ರಾಚ್ಯದಲ್ಲಿ ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಹಕಾರದ ಕಾರ್ಯಕ್ರಮ ಮತ್ತು ರಷ್ಯಾದ ಒಕ್ಕೂಟದ ಆರ್ಕ್ಟಿಕ್ ವಲಯದಲ್ಲಿ ಸಹಕಾರ ತತ್ವಗಳು |
ರಷ್ಯಾದ ದೂರಪ್ರಾಚ್ಯ ಮತ್ತು ಭಾರತದ ನಡುವಿನ ವ್ಯಾಪಾರ ಮತ್ತು ಜಂಟಿ ಹೂಡಿಕೆ ಯೋಜನೆಗಳಲ್ಲಿ ಮತ್ತಷ್ಟು ಹೆಚ್ಚಳಕ್ಕೆ ಅನುಕೂಲ ಕಲ್ಪಿಸುವುದು. |
2 |
ಹವಾಮಾನ ಬದಲಾವಣೆ ಮತ್ತು ಕಡಿಮೆ ಇಂಗಾಲದ ಅಭಿವೃದ್ಧಿಯ ವಿಷಯಗಳ ಕುರಿತು ಭಾರತ ಗಣರಾಜ್ಯದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ರಷ್ಯಾ ಒಕ್ಕೂಟದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ನಡುವಿನ ತಿಳುವಳಿಕೆ ಒಪ್ಪಂದ |
ಹವಾಮಾನ ಬದಲಾವಣೆ ಮತ್ತು ಕಡಿಮೆ ಇಂಗಾಲದ ಅಭಿವೃದ್ಧಿಯ ವಿಷಯಗಳ ಕುರಿತು ಜಂಟಿ ಕಾರ್ಯಕಾರಿ ಗುಂಪಿನ ಸ್ಥಾಪನೆ. ಕಡಿಮೆ-ವೆಚ್ಚದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮಾಹಿತಿ / ಉತ್ತಮ ಅಭ್ಯಾಸಗಳ ವಿನಿಮಯ ಮತ್ತು ಸಹಯೋಗದ ಸಂಶೋಧನೆ. |
3 |
ರಷ್ಯಾ ಒಕ್ಕೂಟದ ರಾಜ್ಯ ನೋಂದಣಿ, ಕ್ಯಾಡಾಸ್ಟ್ರೆ (ಪಹಣಿ) ಮತ್ತು ಕಾರ್ಟೋಗ್ರಫಿ (ನಕ್ಷಾ ಶಾಸ್ತ್ರ) ಯಲ್ಲಿ ಸರ್ವೆ ಆಫ್ ಇಂಡಿಯಾ ಮತ್ತು ಫೆಡರಲ್ ಸೇವೆಯ ನಡುವಿನ ತಿಳುವಳಿಕೆ ಒಪ್ಪಂದ |
ಜಿಯೋಡೆಸಿ (ಮಾಪನ ವಿಜ್ಞಾನ), ಕಾರ್ಟೋಗ್ರಫಿ (ನಕ್ಷಾ ಶಾಸ್ತ್ರ) ಮತ್ತು ಪ್ರಾದೇಶಿಕ ಡೇಟಾ ಮೂಲಸೌಕರ್ಯದಲ್ಲಿ ಜ್ಞಾನ ಮತ್ತು ಅನುಭವದ ವಿನಿಮಯ; ವೃತ್ತಿಪರ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ; ವೈಜ್ಞಾನಿಕ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಕಾರ. |
4 |
ಧ್ರುವ ಮತ್ತು ಸಾಗರ ಸಂಶೋಧನೆಗಾಗಿ ರಾಷ್ಟ್ರೀಯ ಕೇಂದ್ರ, ಭೂ ವಿಜ್ಞಾನ ಸಚಿವಾಲಯ, ಭಾರತ ಸರ್ಕಾರ ಮತ್ತು ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಸಂಶೋಧನಾ ಸಂಸ್ಥೆ ನಡುವೆ ಧ್ರುವ ಪ್ರದೇಶಗಳಲ್ಲಿ ಸಂಶೋಧನೆ ಮತ್ತು ಲಾಜಿಸ್ಟಿಕ್ಸ್ ಸಹಕಾರ |
ಸಂಪನ್ಮೂಲಗಳು ಮತ್ತು ಡೇಟಾವನ್ನು ಹಂಚಿಕೊಳ್ಳುವ ಮೂಲಕ ಧ್ರುವ ಪರಿಸರಗಳು ಮತ್ತು ಅವುಗಳ ವ್ಯತ್ಯಾಸದ ಅಧ್ಯಯನದಲ್ಲಿ ಸಹಕಾರ; ಧ್ರುವ ಪ್ರದೇಶಗಳಲ್ಲಿ ಲಾಜಿಸ್ಟಿಕ್ಸ್; ಜಂಟಿ ಸಂಶೋಧನೆ; ಸಿಬ್ಬಂದಿ ವಿನಿಮಯ; ಮತ್ತು ಧ್ರುವ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಯೋಜನೆಗಳಲ್ಲಿ ಭಾಗವಹಿಸುವಿಕೆ. |
5 |
ಭಾರತದ ಪ್ರಸಾರ ಭಾರತಿ ಮತ್ತು ANO “TV-Novosti” (ರಷ್ಯಾ ಟುಡೆ ಟಿವಿ ಚಾನೆಲ್), ರಷ್ಯಾ ನಡುವಿನ ಪ್ರಸಾರದಲ್ಲಿ ಸಹಕಾರ ಮತ್ತು ಸಹಯೋಗದ ಕುರಿತು ತಿಳುವಳಿಕೆ ಒಪ್ಪಂದ |
ಕಾರ್ಯಕ್ರಮಗಳ ವಿನಿಮಯ, ಸಿಬ್ಬಂದಿ ಮತ್ತು ತರಬೇತಿ ಸೇರಿದಂತೆ ಪ್ರಸಾರ ಕ್ಷೇತ್ರದಲ್ಲಿ ಸಹಕಾರ. |
6 |
ಭಾರತೀಯ ಔಷಧೀಯ ಆಯೋಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ಮತ್ತು ರಷ್ಯಾ ಒಕ್ಕೂಟದ ಆರೋಗ್ಯ ಸಚಿವಾಲಯದ ಫೆಡರಲ್ ರಾಜ್ಯ ಬಜೆಟ್ ಸಂಸ್ಥೆ “ಔಷಧಿ ಉತ್ಪನ್ನಗಳ ತಜ್ಞರ ಮೌಲ್ಯಮಾಪನದ ವೈಜ್ಞಾನಿಕ ಕೇಂದ್ರ” ನಡುವಿನ ತಿಳುವಳಿಕೆ ಒಪ್ಪಂದ |
ಮಾಹಿತಿ ವಿನಿಮಯ ಮತ್ತು ಸಾಮರ್ಥ್ಯ ನಿರ್ಮಾಣದ ಮೂಲಕ ಮಾನವ ಬಳಕೆಗೆ ಉತ್ತಮ ಗುಣಮಟ್ಟದ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು. |
7 |
ರಷ್ಯಾ ಒಕ್ಕೂಟದ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿ ಭಾರತೀಯ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ನ್ಯಾಯಾಲಯದ ನಡುವಿನ ಸಹಕಾರ ಒಪ್ಪಂದ |
ವಾಣಿಜ್ಯ ಸ್ವರೂಪದ ನಾಗರಿಕ ಕಾನೂನು ವಿವಾದಗಳ ಇತ್ಯರ್ಥಕ್ಕೆ ಅನುಕೂಲ ಕಲ್ಪಿಸುವುದು |
8 |
ಇನ್ವೆಸ್ಟ್ ಇಂಡಿಯಾ ಮತ್ತು ಜೆ ಎಸ್ ಸಿ “ರಷ್ಯನ್ ನೇರ ಹೂಡಿಕೆ ನಿಧಿಯ ಮ್ಯಾನೇಜ್ಮೆಂಟ್ ಕಂಪನಿ” ನಡುವಿನ ಜಂಟಿ ಹೂಡಿಕೆ ಉತ್ತೇಜನಾ ಚೌಕಟ್ಟಿನ ಒಪ್ಪಂದ |
ಹೂಡಿಕೆ ಸಹಕಾರವನ್ನು ಉತ್ತೇಜಿಸುವ ಮತ್ತು ಬೆಳೆಸುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ರಷ್ಯಾದ ಕಂಪನಿಗಳಿಂದ ಹೂಡಿಕೆಗೆ ಅನುಕೂಲ ಕಲ್ಪಿಸುವುದು |
9 |
ಭಾರತದ ವ್ಯಾಪಾರ ಉತ್ತೇಜನಾ ಮಂಡಳಿ ಮತ್ತು ಆಲ್ ರಷ್ಯಾ ಸಾರ್ವಜನಿಕ ಸಂಸ್ಥೆ “ಬಿಸಿನೆಸ್ ರಷ್ಯಾ” ನಡುವಿನ ತಿಳುವಳಿಕೆ ಒಪ್ಪಂದ |
ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯ ಉತ್ತೇಜನ, B2B ಸಭೆಗಳನ್ನು ಆಯೋಜಿಸುವುದು, ವ್ಯಾಪಾರ ಪ್ರೋತ್ಸಾಹ ಕಾರ್ಯಕ್ರಮಗಳು ಮತ್ತು ವ್ಯಾಪಾರ ನಿಯೋಗಗಳ ವಿನಿಮಯ. |
ಕ್ರ.ಸಂ. | ತಿಳುವಳಿಕೆ ಒಪ್ಪಂದ/ ಒಪ್ಪಂದಗಳ ಹೆಸರು | ಉದ್ದೇಶಗಳು |
---|
*****