Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫಲಪ್ರದ ಕಾರ್ಯಯೋಜನೆಗಳ ಪಟ್ಟಿ: ಪ್ರಧಾನಮಂತ್ರಿಯವರ ಥೈಲ್ಯಾಂಡ್‌ ಭೇಟಿ


1. ಭಾರತ-ಥೈಲ್ಯಾಂಡ್‌ ದೇಶಗಳ ನಡುವಿನ ಕಾರ್ಯತಂತ್ರದ ಹಾಗೂ ಸಹಭಾಗಿತ್ವ ಪ್ರಾರಂಭ  ಕುರಿತು ಜಂಟಿ ಘೋಷಣೆ

2. ಡಿಜಿಟಲ್ ಟೆಕ್ನಾಲಜಿ ಕ್ಷೇತ್ರದಲ್ಲಿ ಸಹಕಾರದ ಕುರಿತು ಥೈಯ್ಲೆಂಡ್ ಸಾಮ್ರಾಜ್ಯದ ಡಿಜಿಟಲ್ ಆರ್ಥಿಕತೆ ಮತ್ತು ಸೊಸೈಟಿ ಹಾಗೂ ಭಾರತ  ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಡುವಿನ ತಿಳುವಳಿಕಾ ಒಪ್ಪಂದ

3. ಭಾರತ ಸರ್ಕಾರದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಸಾಗರಮಾಲಾ ಯೋಜನೆ ಮತ್ತು ಥೈಲ್ಯಾಂಡ್ ಸಾಮ್ರಾಜ್ಯದ ಸಂಸ್ಕೃತಿ ಸಚಿವಾಲಯದ ಲಲಿತಕಲಾ ಇಲಾಖೆಗಳ ನಡುವಿನ ಒಪ್ಪಂದ ಮೂಲಕ ಗುಜರಾತ್‌ ನ ಲೋಥಾಲ್‌ ನಲ್ಲಿ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ (ಎನ್.ಎಂ.ಹೆಚ್.ಸಿ) ಅಭಿವೃದ್ಧಿ ಕಾರ್ಯ 

4. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಸರ್ಕಾರದ ನ್ಯಾಶನಲ್ ಸ್ಮಾಲ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್ (ಎನ್.ಎಸ್.ಐ.ಸಿ), ಮತ್ತು ಆಫೀಸ್ ಆಫ್ ಸ್ಮಾಲ್ ಮತ್ತು ಮಧ್ಯಮ ಉದ್ಯಮಗಳ ಪ್ರಚಾರ (ಓಸ್ಮೇಪ್) ಸಂಸ್ಥೆಗಳು  ಜಂಟಿಯಾಗಿ ಥೈಲ್ಯಾಂಡ್ ಸಾಮ್ರಾಜ್ಯದ ನಡುವೆ ತಿಳುವಳಿಕಾ ಒಪ್ಪಂದ

5. ಭಾರತ ಗಣರಾಜ್ಯದ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ಮತ್ತು ಥೈಲ್ಯಾಂಡ್ ಸಾಮ್ರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಡುವೆ ತಿಳುವಳಿಕಾ ಒಪ್ಪಂದ

6. ಭಾರತ ಗಣರಾಜ್ಯದ ಈಶಾನ್ಯ ಕರಕುಶಲ ಮತ್ತು ಕೈಮಗ್ಗಗಳ ಅಭಿವೃದ್ಧಿ ನಿಗಮ ಲಿಮಿಟೆಡ್ ಸಂಸ್ಥೆ ಮತ್ತು ಥೈಲ್ಯಾಂಡ್ ಸಾಮ್ರಾಜ್ಯದ ಸರ್ಕಾರದ ಸೃಜನಶೀಲ ಆರ್ಥಿಕ ಸಂಸ್ಥೆಗಳ ನಡುವೆ ತಿಳುವಳಿಕಾ ಒಪ್ಪಂದ.

 

*****