ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಾದೇಶಿಕ ವಾಯುಯಾನ ಪಾಲುದಾರಿಕೆ ನಿಗಮ ಕುರಿತಂತೆ ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಅಂದರೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಮುಖ್ಯಾಂಶಗಳು:
ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಸಾಂಸ್ಥಿಕ ಚೌಕಟ್ಟು ರೂಪಿಸುವುದರಿಂದ ಬ್ರಿಕ್ಸ್ ದೇಶಗಳು ಪ್ರಯೋಜನ ಪಡೆಯಬೇಕೆಂಬುದು ಇದರ ಉದ್ದೇಶವಾಗಿದೆ. ಸಹಕಾರದ ಕ್ಷೇತ್ರಗಳ ಪೈಕಿ, ಈ ಕೆಳಗಿನ ಕ್ಷೇತ್ರಗಳನ್ನು ಗುರುತಿಸಲಾಗಿದೆ:
ಪ್ರಾದೇಶಿಕ ಸೇವೆಯಲ್ಲಿ ಉತ್ತಮ ರೂಢಿಗಳು ಮತ್ತು ಸಾರ್ವಜನಿಕ ನೀತಿಗಳು;
ಪ್ರಾದೇಶಿಕ ವಿಮಾನ ನಿಲ್ದಾಣಗಳು;
ವಿಮಾನ ನಿಲ್ದಾಣ ಮೂಲಸೌಕರ್ಯ ವ್ಯವಸ್ಥಾಪನೆ ಮತ್ತು ವಾಯು ಪಥದರ್ಶಕ ಸೇವೆಗಳು;
ನಿಯಂತ್ರಣ ಸಂಸ್ಥೆಗಳ ನಡುವೆ ತಾಂತ್ರಿಕ ಸಹಕಾರ;
ನಾವಿನ್ಯತೆ;
ಜಾಗತಿಕ ಉಪಕ್ರಮಗಳ ವಿವೇಚನೆಯೂ ಸೇರಿದಂತೆ ಪರಿಸರ ಸುಸ್ಥಿರತೆ;
ಅರ್ಹತೆ ಮತ್ತು ತರಬೇತಿ
ಪರಸ್ಪರರು ನಿರ್ಧರಿಸುವ ಇತರ ಯಾವುದೇ ಕ್ಷೇತ್ರ
c
ಪರಿಣಾಮ:
ಈ ತಿಳಿವಳಿಕೆ ಒಪ್ಪಂದವು, ಭಾರತ ಮತ್ತು ಇತರ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ನಾಗರಿಕ ವಾಯುಯಾನ ಸಂಬಂಧದಲ್ಲಿ ಮೈಲಿಗಲ್ಲಿನ ಮಹತ್ವ ಪ್ರತಿಪಾದಿಸುತ್ತದೆ ಮತ್ತು ಬ್ರಿಕ್ಸ್ ರಾಷ್ಟ್ರಗಳ ನಡುವೆ ಹೆಚ್ಚಿನ ವ್ಯಾಪಾರ, ಹೂಡಿಕೆ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.