Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರವಾಸೋದ್ಯಮ ಕ್ಷೇತ್ರದ ಸಹಕಾರ ವರ್ಧನೆಗಾಗಿ ಭಾರತ ಮತ್ತು ಖತಾರ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರ ವರ್ಧನೆಗಾಗಿ ಭಾರತ ಮತ್ತು ಖತಾರ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದದ ಪ್ರಮುಖ ಉದ್ದೇಶಗಳೆಂದರೆ:

a) ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪರಸ್ಪರರಿಗೆ ಲಾಭವಾಗುವ ರೀತಿಯಲ್ಲಿ ದೀರ್ಘಕಾಲೀನ ಸಹಕಾರಕ್ಕಾಗಿ ಅನುಕೂಲಕರವಾದ ವಾತಾವರಣ ನಿರ್ಮಾಣ.

b) ತಜ್ಞತೆಯ ವಿನಿಮಯ, ಪ್ರಕಟಣೆಗಳು, ಮಾಹಿತಿ/ದತ್ತಾಂಶ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅಂಕಿ ಅಂಶಗಳು.

c) ವಿನಿಮಯ ಕಾರ್ಯಕ್ರಮಗಳ ಮೂಲಕ ಸಹಕಾರಕ್ಕೆ ಉತ್ತೇಜನ, ಪ್ರಚಾರ ಮತ್ತು ಜಾಹೀರಾತು ಸಲಕರಣೆಗಳು, ಪ್ರಕಟಣೆಗಳು, ಉತ್ತೇಜನ ಹಾಗೂ ಮಾಧ್ಯಮಗಳ ಮೂಲಕ ಪ್ರವಾಸೋದ್ಯಮ ಉತ್ಪನ್ನಗಳ ಮಾರುಕಟ್ಟೆ ಇತ್ಯಾದಿ.

d)ಪ್ರವಾಸ ಆಯೋಜಕರ ವಿನಿಮಯ ಭೇಟಿ/ ಮಾಧ್ಯಮ/ ಎರಡೂ ಕಡೆಯ ಪ್ರವಾಸೋದ್ಯಮಕ್ಕೆ ಅಭಿಪ್ರಾಯ ರೂಪಕರಿಗೂ ಉತ್ತೇಜನ.

e) ಪ್ರವಾಸೋದ್ಯಮ ವಲಯದಲ್ಲಿ ಸಹಕಾರಕ್ಕೆ ಪ್ರೋತ್ಸಾಹ, ಪ್ರವಾಸ ನಿರ್ವಹಣೆದಾರರು, ಪ್ರವಾಸಿ ಏಜೆಂಟರುಗಳು ಮತ್ತು ಇತರ ಖಾಸಗಿ ವಲಯದ ಪ್ರವಾಸೋದ್ಯಮ ಸಂಸ್ಥೆಗಳು ಮತ್ತು ಎರಡೂ ರಾಷ್ಟ್ರಗಳ ಸುದ್ದಿ ಸಂಗ್ರಾಹಕ ಸಂಸ್ಥೆಗಳು.

f) ಪ್ರವಾಸೋದ್ಯಮದಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಹೂಡಿಕೆಗೆ ಉತ್ತೇಜನ.

ಖತಾರ್ ಭಾರತಕ್ಕೆ ಪ್ರವಾಸೋದ್ಯಮ ಮೂಲ ಮಾರುಕಟ್ಟೆಯಾಗಿದೆ. (2015ರ ಸಾಲಿನಲ್ಲಿ ಖತಾರ್ ನಿಂದ ಸುಮಾರು 6313 ಪ್ರವಾಸಿಗರು ಭಾರತಕ್ಕೆ ಬಂದಿದ್ದರು) ಖತಾರ್ ಕೂಡ ಭಾರತಕ್ಕೆ ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಉತ್ತಮ ಮಾರುಕಟ್ಟೆಯಾಗಿದೆ ಮತ್ತು ಭಾರತಕ್ಕೆ ಈ ಕ್ಷೇತ್ರದಲ್ಲಿ ವ್ಯಾಪಕ ಅವಕಾಶ ನೀಡಿದೆ. ಖತಾರ್ ನೊಂದಿಗೆ ಎಂ.ಓ.ಯು.ಗೆ ಅಂಕಿತ ಹಾಕುತ್ತಿರುವುದರಿಂದ ಹೊರಹೊಮ್ಮುತ್ತಿರುವ ಈ ಮಾರುಕಟ್ಟೆಯಿಂದ ಬರುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಲಿದೆ.